Tomato: ಕೆಜಿಗೆ 90 ಅಲ್ಲ, 80 ರೂಗೆ ಟೊಮೆಟೋ; ಇಂದಿನಿಂದಲೇ ಸರ್ಕಾರದಿಂದ ಮಾರಾಟ

|

Updated on: Jul 16, 2023 | 3:19 PM

Government Selling Tomatoes For Rs 80: ಟೊಮೆಟೋ ಬೆಲೆ ವಿಪರೀತ ಏರುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಜುಲೈ 16ರಿಂದ ಕಿಲೋಗೆ 80 ರುಪಾಯಿಯಂತೆ ಮಾರಾಟ ನಡೆಸುತ್ತಿದೆ. ಕಳೆದ ಎರಡು ದಿನಗಳಿಂದ ಟೊಮೆಟೋವನ್ನು 90 ರುಪಾಯಿಗೆ ಮಾರಲಾಗುತ್ತಿತ್ತು.

Tomato: ಕೆಜಿಗೆ 90 ಅಲ್ಲ, 80 ರೂಗೆ ಟೊಮೆಟೋ; ಇಂದಿನಿಂದಲೇ ಸರ್ಕಾರದಿಂದ ಮಾರಾಟ
ಟೊಮೆಟೋ
Follow us on

ನವದೆಹಲಿ: ಟೊಮೆಟೋ ಹಣ್ಣುಗಳನ್ನು (Tomato) ಕಿಲೋಗೆ 80 ರುಪಾಯಿಗೆ ಸರ್ಕಾರ ಮಾರಾಟ ಆರಂಭಿಸಿದೆ. ಈ ಮೊದಲು 90 ರುಪಾಯಿಗೆ ಟೊಮೆಟೋ ಮಾರಲು ನಿರ್ಧರಿಸಿತ್ತು. ಈಗ ಇನ್ನಷ್ಟು ಕಡಿಮೆ ಬೆಲೆಗೆ ಟೊಮೆಟೋ ಮಾರುತ್ತಿದೆ. ಇಂದಿನಿಂದಲೇ (ಜುಲೈ 16) ಸರ್ಕಾರದಿಂದ ಅಗ್ಗದ ಬೆಲೆಗೆ ಟೊಮೆಟೋ ಮಾರಾಟವಾಗಲಿದೆ. ಟೊಮೆಟೋ ಬೆಲೆ ಏರಿಕೆಯಿಂದ ತತ್ತರಿಸಿರುವ ಸಾರ್ವಜನಿಕರಿಗೆ ಇದರಿಂದ ಒಂದಷ್ಟು ರಿಲೀಫ್ ಸಿಕ್ಕಂತಾಗುತ್ತದೆ.

ಜುಲೈ 14, ಮೊನ್ನೆಯಿಂದ ಕೇಂದ್ರ ಸರ್ಕಾರ ದೆಹಲಿ ಎನ್​ಸಿಆರ್ ಪ್ರದೇಶಗಳಲ್ಲಿ ವಾಹನಗಳ ಟೊಮೆಟೋ ಹಣ್ಣುಗಳನ್ನು ಸಾರ್ವಜನಿಕರಿಗೆ ಮಾರಲು ಆರಂಭಿಸಿತು. ಕಿಲೋಗೆ 90 ರೂನಂತೆ ಟೊಮೆಟೋ ಹಣ್ಣು ಮಾರಲಾಗುತ್ತಿತ್ತು. ಇದೀಗ ಟೊಮೆಟೋ ಹಣ್ಣಿನ ಬೆಲೆ 80 ರುಪಾಯಿಗೆ ತಗ್ಗಿಸಿ ಮಾರಾಟ ಮಾಡುತ್ತಿದೆ. ಜುಲೈ 15ರಿಂದ ದೇಶದ ವಿವಿಧ ನಗರಗಳಿಗೆ ಸರ್ಕಾರದಿಂದ ಟೊಮೆಟೋ ಹಣ್ಣಿನ ಮಾರಾಟ ವಿಸ್ತರಣೆ ಆಗಿದೆ. ಇದರಿಂದ ಒಟ್ಟಾರೆ ಟೊಮೆಟೋದ ಸಗಟು ಬೆಲೆಯೂ ಕಡಿಮೆ ಆಗಿದೆ.

ಇದನ್ನೂ ಓದಿIndian Economy: ಕಳೆದ 10 ವರ್ಷಗಳಲ್ಲಿ ಭಾರತದಲ್ಲಿ ಆದ ಸುಧಾರಣೆಗಳು; ಮುಂದಿನ ಆರ್ಥಿಕ ವೇಗಕ್ಕೆ ಕಾರಣವಾಗುವ ಸಂಗತಿಗಳು: ಕ್ಯಾಪಿಟಲ್ ಗ್ರೂಪ್ ವಿಶ್ಲೇಷಣೆ

‘ಟೊಮೆಟೋ ಬೆಲೆ ಅತೀ ಹೆಚ್ಚು ಇರುವ ಹಲವು ಪ್ರದೇಶಗಳಲ್ಲಿ ಸರ್ಕಾರ 90 ರು ಬೆಲೆಗೆ ಟೊಮೆಟೋ ಮಾರಲು ಆರಂಭಿಸಿದ್ದರಿಂದ ಅದರ ಸಗಟು ಮಾರಾಟ ದರ ಬಹಳ ಕಡಿಮೆ ಆಗಿದೆ.

‘ದೇಶದ 500ಕ್ಕೂ ಹೆಚ್ಚು ಸ್ಥಳಗಳಲ್ಲಿ ಪರಿಸ್ಥಿತಿಯನ್ನು ಮರು ಅವಲೋಕಿಸಿದ ಬಳಿಕ ಭಾನುವಾರದಿಂದ (ಜುಲೈ 16) ಟೊಮೆಟೋವನ್ನು ಕಿಲೋಗೆ 80 ರೂನಂತೆ ಮಾರಲು ನಿರ್ಧರಿಸಲಾಯಿತು’ ಎಂದು ಅಧಿಕೃತ ಪ್ರಕಟಣೆಯೊಂದರಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿTax Exemption Limit: 7 ಲಕ್ಷ ಅಲ್ಲ 7.27 ಲಕ್ಷ ರೂವರೆಗಿನ ವಾರ್ಷಿಕ ಆದಾಯಕ್ಕೆ ತೆರಿಗೆ ವಿನಾಯಿತಿ ಇರುತ್ತದೆ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸ್ಪಷ್ಟನೆ

ಈ ಸೀಸನ್​ನಲ್ಲಿ ಇಡೀ ದೇಶಕ್ಕೆ ಟೊಮೆಟೋ ಹಣ್ಣಿನ ಪೂರೈಕೆ ಆಗುವುದು ಬಹುತೇಕ ಹಿಮಾಚಲ ಪ್ರದೇಶ ಮತ್ತು ಕರ್ನಾಟಕದಿಂದ. ಹಿಮಾಚಲದಲ್ಲಿ ಅತಿವೃಷ್ಟಿ ಮತ್ತು ಪ್ರವಾಹದಿಂದಾಗಿ ಟೊಮೆಟೋ ಪೂರೈಕೆಯಲ್ಲಿ ವ್ಯತ್ಯಯವಾಗಿ. ಕರ್ನಾಟಕದಲ್ಲಿ ಹೆಚ್ಚಾಗಿ ಟೊಮೆಟೋ ಬೆಳೆಯುವುದು ಕೋಲಾರದಲ್ಲಿ. ಹೀಗಾಗಿ, ಬೇಡಿಕೆಗಿಂತ ಸರಬರಾಜು ಕಡಿಮೆ ಇರುವುದರಿಂದ ಟೊಮೆಟೋ ಬೆಲೆ ಗಗನಕ್ಕೇರಿದೆ. ರಾಜ್ಯದಲ್ಲೇ ಟೊಮೆಟೋ ಬೆಲೆ 100 ರೂ ಮೇಲೆಯೇ ಇದೆ. ದೇಶದ ಕೆಲವೆಡೆ ಟೊಮೆಟೋ ಬೆಲೆ 200 ರೂ ಗಡಿ ದಾಟಿ ಹೋಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 3:19 pm, Sun, 16 July 23