India GDP: 2024-25ಕ್ಕೆ ಭಾರತದ ಜಿಡಿಪಿ 4 ಟ್ರಿಲಿಯನ್; ತಲಾದಾಯ 2,800 ಡಾಲರ್: ಪಿಎಚ್​ಡಿ ಚೇಂಬರ್ ಅಂದಾಜು

PHDCCI Report: ಭಾರತದ ಆರ್ಥಿಕತೆ 2024-25ರ ಹಣಕಾಸು ವರ್ಷಕ್ಕೆ 4 ಟ್ರಿಲಿಯನ್ ಡಾಲರ್ ಗಡಿ ದಾಟಲಿದೆ. ನಾಮಿನಲ್ ಜಿಡಿಪಿಯ ತಲಾದಾಯ 2,800 ಡಾಲರ್​ಗೆ ಏರಲಿದೆ ಎಂದು ಪಿಎಚ್​ಡಿ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ ಸಂಸ್ಥೆ ಹೇಳಿದೆ.

India GDP: 2024-25ಕ್ಕೆ ಭಾರತದ ಜಿಡಿಪಿ 4 ಟ್ರಿಲಿಯನ್; ತಲಾದಾಯ 2,800 ಡಾಲರ್: ಪಿಎಚ್​ಡಿ ಚೇಂಬರ್ ಅಂದಾಜು
ಜಿಡಿಪಿ
Follow us
|

Updated on: Jul 16, 2023 | 12:53 PM

ನವದೆಹಲಿ: ಎರಡು ವರ್ಷದ ಹಿಂದೆ ಮೊದಲ ಬಾರಿಗೆ 3 ಟ್ರಿಲಿಯನ್ ಡಾಲರ್ ಮೈಲಿಗಲ್ಲು ಮುಟ್ಟಿದ್ದ ಭಾರತದ ಜಿಡಿಪಿ ಇನ್ನೆರಡು ವರ್ಷದಲ್ಲಿ 4 ಟ್ರಿಲಿಯನ್ ಡಾಲರ್ ಗಡಿ ದಾಟಲಿದೆ ಎಂದು ಉದ್ಯಮ ಸಂಘಟನೆ ಪಿಎಚ್​ಡಿ ವಾಣಿಜ್ಯ ಮತ್ತು ಉದ್ಯಮ ಮಂಡಳಿ (PHDCCI- Progress, Harmony, Development Chamber of Commerce and Industry) ಭವಿಷ್ಯ ನುಡಿದಿದೆ. 2024-25ರ ಹಣಕಾಸು ವರ್ಷದಷ್ಟರಲ್ಲಿ ಭಾರತ 4 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಿ ಬೆಳೆಯಲಿದೆ. ಅಲ್ಲದೇ ಜಿಡಿಪಿ ತಲಾದಾಯ ಪ್ರಮಾಣವು (Per Capita Income for Nominal GDP) 2,800 ಡಾಲರ್​ಗೆ ಏರಬಹುದು ಎಂದು ಅಂದಾಜು ಮಾಡಲಾಗಿದೆ. ಅಂದರೆ ಸರಾಸರಿ ತಲಾದಾಯವು 2.29 ಲಕ್ಷ ರುಪಾಯಿ ಆಗಲಿದೆ. 2022ರ ಮಾರ್ಚ್​ನಲ್ಲಿ ತಲಾದಾಯ 2,301 ಡಾಲರ್ ಇದೆ. ಪಿಎಚ್​ಡಿ ಚೇಂಬರ್ ಇತ್ತೀಚೆಗೆ (ಜುಲೈ 13) ನಡೆಸಿದ ಸೆಮಿನಾರ್​ವೊಂದರಲ್ಲಿ ಈ ಬಗ್ಗೆ ವರದಿಯೊಂದನ್ನು ಮಂಡಿಸಿತ್ತು.

ಕಳೆದ 3 ವರ್ಷಗಳಲ್ಲಿ ಸರಕಾರ ತೆಗೆದುಕೊಂಡ ಹಲವು ರಚನಾತ್ಮಕ ಸುಧಾರಣೆಗಳ ದೆಸೆಯಿಂದಾಗಿ ಆರ್ಥಿಕ ಚಟುವಟಿಕೆಯ ವೇಗ ಹೆಚ್ಚಲಿದೆ ಎಂದು ಪ್ರೋಗ್ರೆಸ್, ಹಾರ್ಮೋನಿ, ಡೆವಲಪ್ಮೆಂಟ್ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ ಸಂಸ್ಥೆ ಹೇಳಿದೆ.

ಇದನ್ನೂ ಓದಿIndian Economy: ಕಳೆದ 10 ವರ್ಷಗಳಲ್ಲಿ ಭಾರತದಲ್ಲಿ ಆದ ಸುಧಾರಣೆಗಳು; ಮುಂದಿನ ಆರ್ಥಿಕ ವೇಗಕ್ಕೆ ಕಾರಣವಾಗುವ ಸಂಗತಿಗಳು: ಕ್ಯಾಪಿಟಲ್ ಗ್ರೂಪ್ ವಿಶ್ಲೇಷಣೆ

‘ಖರೀದಿ ವೆಚ್ಚ ಅಧಿಕವಾಗಿದೆ, ಕಚ್ಛಾ ವಸ್ತುಗಳ ಬೆಲೆ ಹೆಚ್ಚಾಗಿದೆ. ಇದರಿದ ಬೆಲೆ ಹೆಚ್ಚಳವಾಗಿದೆ. ಉತ್ಪಾಕರ ವೆಚ್ಚ ಅಂತರವೂ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಮ್ಯಾನುಫ್ಯಾಕ್ಚರಿಂಗ್ ಸೆಕ್ಟರ್​ನತ್ತ ಹೆಚ್ಚು ಗಮನ ಹರಿಸಬೇಕಾಗುತ್ತದೆ. ಸುಲಭ ಕಾನೂನು ಹೊಂದಿಕೆ, ಏಕ ಕವಾಕ್ಷಿ ವ್ಯವಸ್ಥೆ ಇತ್ಯಾದಿ ವ್ಯವಹಾರ ವೆಚ್ಚ ಇಳಿಕೆಯಿಂದ ಭಾರತದಲ್ಲಿ ಸರಾಗ ವ್ಯವಹಾರಕ್ಕೆ ಪುಷ್ಟಿ ಕೊಡುತ್ತದೆ,’ ಎಂದು ಪಿಎಚ್​ಡಿ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ ಹೇಳಿದೆ.

ಇತ್ತೀಚಿನ ಕೆಲ ಜಾಗತಿಕ ವಿದ್ಯಮಾನಗಳಿಂದ ಭಾರತದ ಆರ್ಥಿಕತೆಗೆ ಹಿನ್ನಡೆಯಾಗಿದೆ. ಕಚ್ಛಾ ತೈಲ ಆಮದು, ರುಪಾಯಿ ಮೌಲ್ಯ ಕುಸಿತ, ಹಣದುಬ್ಬರ ಇತ್ಯಾದಿಗಳು ಇತ್ತೀಚಿನ ವರ್ಷಗಳಲ್ಲಿ ಪರಿಣಾಮ ಬೀರಿದ್ದವು. ಆದರೆ, ರಷ್ಯಾ ಮತ್ತು ಉಕ್ರೇನ್​ಗೆ ಭಾರತದ ರಫ್ತು ಪ್ರಮಾಣ ಗಮನಾರ್ಹವಿಲ್ಲವಾದ್ದರಿಂದ ರಫ್ತು ಮತ್ತು ಹಣಕಾಸು ವಲಯಕ್ಕೆ ಹೆಚ್ಚಿನ ಧಕ್ಕೆಯಾಗಿಲ್ಲ. ಫಾರೆಕ್ಸ್ ಮೀಸಲು ನಿಧಿ ಉತ್ತಮ ಪ್ರಮಾಣದಲ್ಲಿ ಇದೆ ಎಂದು ಪಿಎಚ್​ಡಿಸಿಸಿಐನ ಸೆಮಿನಾರ್​ನಲ್ಲಿ ಪಾಲ್ಗೊಂಡಿದ್ದ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿTrade Deficit: ಹಣದುಬ್ಬರ ಬಳಿಕ, ಈಗ ವ್ಯಾಪಾರ ಕೊರತೆಯೂ ಜೂನ್​ನಲ್ಲಿ ಕಡಿಮೆ

ಇಂಟರ್ನ್ಯಾಷನಲ್ ಗ್ರೋತ್ ಸೆಂಟರ್​ನ ಪ್ರಣಬ್ ಸೇನ್, ಇಂದಿರಾ ಗಾಂಧಿ ಇನ್ಸ್​ಟಿಟ್ಯೂಟ್ ಆಫ್ ಡೆವಲಪ್ಮೆಂಟ್ ರಿಸರ್ಚ್​ನ ಪ್ರೊಫೆಸರ್ ಅಶಿಮಾ ಗೋಯಲ್, ಆರ್​ಬಿಐನ ಆರ್ಥಿಕತೆ ಮತ್ತು ನೀತಿ ಸಂಶೋಧನಾ ವಿಭಾಗದ ನಿರ್ದೇಶಕ ರಾಜ್ಮಲ್, ಭಾರ್ತಿ ವಿದ್ಯಾಪೀಠದ ಡೈರೆಕ್ಟರ್ ಯಾಮಿನಿ ಅಗರ್ವಾಲ್, ಗ್ಲೋಬಲ್ ಇನ್​ಫ್ರಾಸ್ಟ್ರಕ್ಚರ್ ಹಬ್​ನ ಹಿರಿಯ ಆರ್ಥಿಕ ತಜ್ಞ ಮನಪ್ರೀತ್ ಜುನೇಜಾ, ಪಿಎಚ್​ಡಿಸಿಸಿಐನ ಸಿಇಒ ಸೌರಭ್ ಸಾನ್ಯಾಲ್, ಚೀಫ್ ಎಕನಾಮಿಸ್ಟ್ ಎಸ್ ಪಿ ಶರ್ಮಾ ಮೊದಲಾದವರು ಈ ಸೆಮಿನಾರ್ ಕಾರ್ಯಕ್ರಮದಲ್ಲಿ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ