
ನವದೆಹಲಿ, ನವೆಂಬರ್ 6: ಯುವಜನರಲ್ಲಿ ಕೌಶಲ್ಯಾಭಿವೃದ್ಧಿ ಹೆಚ್ಚಿಸಲು ರೂಪಿಸಲಾಗಿರುವ ಪ್ರಧಾನಮಂತ್ರಿ ಕೌಶಲ್ ವಿಕಾಸ್ ಯೋಜನೆ (PMKVY- PM Kausha Vikas Yojana) ಜಾರಿ ವೇಳೆ ಭಾರೀ ಅಕ್ರಮಗಳು (Irregularities) ನಡೆದಿರುವುದು ಬೆಳಕಿಗೆ ಬಂದಿದೆ. ಟ್ರೈನೀಗಳ ಅನುಪಸ್ಥಿತಿ, ನಕಲಿ ದಾಖಲೆಗಳು, ಅಸ್ತಿತ್ವದಲ್ಲೇ ಇಲ್ಲದ ಟ್ರೈನಿಂಗ್ ಸೆಂಟರ್ಗಳು ಹೀಗೆ ಸಾಕಷ್ಟು ಗೋಲ್ಮಾಲ್ಗಳು ನಡೆದಿವೆ ಎಂದು ಇಂಡಿಯನ್ ಎಕ್ಸ್ಪ್ರೆಸ್ ಪತ್ರಿಕೆಯಲ್ಲಿ ವರದಿಯಾಗಿದೆ.
2015ರಲ್ಲಿ ಶುರುವಾದ ಪಿಎಂ ಕೌಶಲ್ ವಿಕಾಸ್ ಯೋಜನೆಯಲ್ಲಿ ಇಲ್ಲಿಯವರೆಗೆ (2025ರ ಜೂನ್) 1.64 ಕೋಟಿ ಯುವಕರಿಗೆ ತರಬೇತಿ ಕೊಡಲಾಗಿದೆ. 2022ರಲ್ಲಿ ನಾಲ್ಕನೇ ಆವೃತ್ತಿಯ ಯೋಜನೆ (PMKVY 4.0) ಆರಂಭಿಸಿದಾಗಿನಿಂದ ನಾನಾ ತರಹದ ಅಕ್ರಮಗಳು (irregularities) ನಡೆದಿದೆ ಎನ್ನಲಾಗಿದೆ. ನಕಲಿ ಬಿಲ್ಗಳನ್ನು ಸೃಷ್ಟಿಸಲಾಗುತ್ತಿದೆ; ವಿದ್ಯಾರ್ಥಿಗಳು ತರಬೇತಿಗೆ ಹಾಜರಾಗುತ್ತಿಲ್ಲ; ನಕಲಿ ದಾಖಲೆ ಸೃಷ್ಟಿಸಲಾಗುತ್ತಿದೆ; ಟ್ರೈನಿಂಗ್ ಪಾರ್ಟ್ನರ್ಗಳು ಮತ್ತು ಟ್ರೈನಿಂಗ್ ಸೆಂಟರ್ಗಳೇ ಅಸ್ತಿತ್ವದಲ್ಲಿ ಇಲ್ಲದಿರುವುದು ಹೀಗೆ ಸಾಕಷ್ಟು ಆರೋಪಗಳು ಕೇಳಿಬಂದಿವೆ.
ಇದನ್ನೂ ಓದಿ: ಅನಿಲ್ ಅಂಬಾನಿಗೆ ಮುಂದುವರಿದ ಇಡಿ ಕಂಟಕ; ನ. 14ಕ್ಕೆ ವಿಚಾರಣೆಗೆ ಹಾಜರಾಗುವಂತೆ ಹೊಸ ಸಮನ್ಸ್
ಪಿಎಂ ಕೌಶಲ್ ವಿಕಾಸ್ ಯೋಜನೆಯ ನಿಯಮಗಳನ್ನು ಪಾಲಿಸದ ವ್ಯಕ್ತಿಗಳು ಮತ್ತು ಸಂಸ್ಥೆಗಳ ಮೇಲೆ ಕ್ರಮ ತೆಗೆದುಕೊಳ್ಳಲಾಗುವುದನ್ನು ತಿಳಿಸಿ ಕೌಶಲ್ಯಾಭಿವೃದ್ಧಿ ಸಚಿವಾಲಯವು ಅಕ್ಟೋಬರ್ 30ರಂದು ಎಲ್ಲಾ ರಾಜ್ಯ ಪ್ರಧಾನ ಕಾರ್ಯದರ್ಶಿಗಳು, ಪ್ರಾದೇಶಿಕ ನಿರ್ದೇಶನಾಲಯಗಳಿಗೆ ಪತ್ರ ಬರೆದು ತಿಳಿಸಿದೆ.
ಪಿಎಂ ಕೌಶಲ್ ವಿಕಾಸ್ ಯೋಜನೆಯನ್ನು ದುರ್ಬಳಕೆ ಮಾಡಿಕೊಂಡಿದ್ದು ಕಂಡು ಬಂದ ಒಟ್ಟು 178 ಟ್ರೈನಿಂಗ್ ಪಾರ್ಟ್ನರ್ಗು (ಟಿಪಿ) ಮತ್ತು ಟ್ರೈನಿಂಗ್ ಸೆಂಟರ್ಗಳನ್ನು (ಟಿಸಿ) ಕೌಶಲ್ಯಾಭಿವೃದ್ಧಿ ಸಚಿವಾಲಯ ಹಾಗೂ ರಾಷ್ಟ್ರೀಯ ಕೌಶಲ್ಯಾಭಿವೃದ್ದಿ ನಿಗಮ (ಎನ್ಎಸ್ಡಿಸಿ) ಬ್ಲ್ಯಾಕ್ಲಿಸ್ಟ್ ಮಾಡಿದೆ.
ಇದನ್ನೂ ಓದಿ: ಕೇವಲ 30 ರೂಗೆ ರಾಕೆಟ್ ಸರ್ವಿಸ್; ಚೆನ್ನೈ ಕಂಪನಿಯಿಂದ ಮರುಬಳಕೆಯ ಎಲೆಕ್ಟ್ರಿಕ್ ರಾಕೆಟ್ ಆವಿಷ್ಕಾರ
ಉತ್ತರಪ್ರದೇಶ ರಾಜ್ಯದಲ್ಲಿ ಅತಿಹೆಚ್ಚು ಟಿಪಿ ಮತ್ತು ಟಿಸಿಗಳನ್ನು ಕಪ್ಟುಪಟ್ಟಿಗೆ ಸೇರಿಸಲಾಗಿದೆ. ಈ ರಾಜ್ಯದಿಂದ ಬ್ಲ್ಯಾಕ್ ಲಿಸ್ಟ್ ಆಗಿರುವುವು 59. ದೆಹಲಿ (25), ಮಧ್ಯಪ್ರದೇಶ (24) ಮತ್ತು ರಾಜಸ್ಥಾನ (20) ರಾಜ್ಯಗಳೂ ಕೂಡ ಅಧಿಕ ಸಂಖ್ಯೆಯಲ್ಲಿ ಟ್ರೈನಿಂಗ್ ಪಾರ್ಟ್ನರ್ಸ್ ಮತ್ತು ಟ್ರೈನಿಂಗ್ ಸೆಂಟರ್ಗಳನ್ನು ಕಪ್ಪುಪಟ್ಟಿಗೆ ಸೇರಿಸಿವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ