ನವದೆಹಲಿ, ಸೆಪ್ಟೆಂಬರ್ 21: ಟೊಮೆಟೋ, ಈರುಳ್ಳಿ ಇತ್ಯಾದಿ ಆಹಾರವಸ್ತುಗಳ ಬೆಲೆ ಏರಿಕೆಯ ಆಘಾತ ಕಂಡಿರುವ ಭಾರತಕ್ಕೆ ಈಗ ಸಕ್ಕರೆ ಬೆಲೆ ಏರಿಕೆಯ ಭೀತಿ ಎದುರಾಗಿದೆ. ಅಂತಾರಾಷ್ಟ್ರೀಯವಾಗಿ ಸಕ್ಕರೆ ಬೆಲೆ ಗಗನಕ್ಕೇರಿದೆ. ಭಾರತದಲ್ಲೂ ಬೆಲೆ ಏರುವ ಸಾಧ್ಯತೆಯನ್ನು ತಪ್ಪಿಸಲು ಸರ್ಕಾರ ಕ್ರಮ ಕೈಗೊಂಡಿದೆ. ಅಕ್ಕಿ ಇತ್ಯಾದಿ ಆಹಾರವಸ್ತುಗಳ ರಫ್ತಿಗೆ ನಿರ್ಬಂಧ ಹಾಕುವ ಮೂಲಕ ಅವುಗಲ ಬೆಲೆ ಏರಿಕೆ ಆಗದಂತೆ ಎಚ್ಚರ ವಹಿಸಿದ್ದ ಕೇಂದ್ರ ಸರ್ಕಾರ ಈಗ ಸಕ್ಕರೆ ಸಾಮಾನ್ಯ ಜನರಿಗೆ ಕಹಿಯಾಗದಂತೆ ಮುನ್ನೆಚ್ಚರಿಕೆಯ ಕ್ರಮ ಜಾರಿ ಮಾಡಿದೆ. ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯ ನೀಡಿರುವ ಮಾಹಿತಿ ಪ್ರಕಾರ, ಸಕ್ಕರೆ ದಾಸ್ತಾನು ಎಷ್ಟಿದೆ ಎಂಬ ವಿವರವನ್ನು ವರ್ತಕರು ಸಲ್ಲಿಸಬೇಕು ಎಂದು ಸರ್ಕಾರ ಕಡ್ಡಾಯಪಡಿಸಿದೆ. ಇದು ಅನಗತ್ಯ ಸಕ್ಕರೆ ದಾಸ್ತಾನು ನಿಯಂತ್ರಿಸಲು ಕೈಗೊಂಡಿರುವ ಕ್ರಮ ಎನ್ನಲಾಗಿದೆ.
ಸಗಟು ಮತ್ತು ಚಿಲ್ಲರೆ ಮಾರಾಟಗಾರರು, ಸಕ್ಕರೆ ಉತ್ಪಾದಕರು ಎಲ್ಲರೂ ತಮ್ಮಲ್ಲಿರುವ ಸಕ್ಕರೆ ದಾಸ್ತಾನಿನ ವಿವರವನ್ನು ಪ್ರತೀ ಸೋಮವಾರದಂದು ಕೇಂದ್ರ ಆಹಾರ ಇಲಾಖೆಯ ಇಶುಗರ್ ಪೋರ್ಟಲ್ನಲ್ಲಿ (esugar.nic.in) ಅಪ್ಡೇಟ್ ಮಾಡಬೇಕು ಎಂದು ಸೂಚಿಸಲಾಗಿದೆ. ಇದರಿಂದ ದೇಶದಲ್ಲಿರುವ ಸಕ್ಕರೆ ಆವಕ ಮತ್ತು ದಾಸ್ತಾನಿ ಸ್ಥಿತಿಗತಿ ಬಗ್ಗೆ ಸರ್ಕಾರಕ್ಕೆ ಸದಾ ಅರಿವಿದ್ದಂತಾಗುತ್ತದೆ.
ಇದನ್ನೂ ಓದಿ: Arecanut Price 21 Sep: ಪ್ರಮುಖ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ಮತ್ತು ಕೋಕೋ ದರ ಹೀಗಿದೆ
ಅನಗತ್ಯವಾಗಿ ಸಂಗ್ರಹ ಇಟ್ಟುಕೊಳ್ಳಲು ಮತ್ತು ಸಕ್ಕರೆ ಅಭಾವ ಸೃಷ್ಟಿಯಾದಂತೆ ಮಾಡುವುದನ್ನು ನಿಯಂತ್ರಿಸಲು ಸರ್ಕಾರದ ಈ ಕ್ರಮ ಸಹಾಯವಾಗಬಹುದು. ಸಕ್ಕರೆ ಕೊರತೆ ಕಂಡುಬರುತ್ತಿದ್ದಂತೆಯೇ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತದೆ.
ಒಂದು ವೇಳೆ ಸರ್ಕಾರ ಹೇಳಿದ ರೀತಿಯಲ್ಲಿ ಪ್ರತೀ ವಾರವೂ ಸಕ್ಕರೆ ದಾಸ್ತಾನಿನ ವಿವರವನ್ನು ಅಪ್ಡೇಟ್ ಮಾಡದೇ ಇರುವ ಸಕ್ಕರೆ ಕಾರ್ಖಾನೆಗಳು ಮತ್ತು ವರ್ತಕರ ಮೇಲೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ.
ಇದನ್ನೂ ಓದಿ: Business Idea: ಕೇವಲ 3 ಲಕ್ಷ ಬಂಡವಾಳದಲ್ಲಿ ತಿಂಗಳಿಗೆ 70 ಸಾವಿರ ರೂ ವರಮಾನ ಕೊಡಬಲ್ಲ ಜೇನುಸಾಕಾಣಿಕೆ
ಈಗ ಹಬ್ಬದ ಸೀಸನ್ ಶುರುವಾಗಿರುವುದಿಂದ ಸಕ್ಕರೆಗೆ ಬೇಡಿಕೆ ಹೆಚ್ಚಿರುತ್ತದೆ. ಆದರೆ, ಭಾರತದಲ್ಲಿ ಸಾಕಷ್ಟು ಸಕ್ಕರೆ ದಾಸ್ತಾನು ಇದೆ ಎನ್ನಲಾಗಿದೆ. ಸರ್ಕಾರ ಬಿಡುಗಡೆ ಮಾಡಿರುವ ವರದಿ ಪ್ರಕಾರ ಆಗಸ್ಟ್ ತಿಂಗಳಲ್ಲಿ 83 ಲಕ್ಷ ಮೆಟ್ರಿಲ್ ಟನ್ನಷ್ಟು (ಎಲ್ಎಂಟಿ) ಸಕ್ಕರೆ ದಾಸ್ತಾನು ಇದೆ. ಅಕ್ಟೋಬರ್ ತಿಂಗಳಲ್ಲಿ ಸಕ್ಕರೆ ಕಾರ್ಖಾನೆಗಳಲ್ಲಿ ಕಬ್ಬನ್ನು ಅರೆಯುತ್ತಿರುವುದರಿಂದ ಮುಂದಿನ ದಿನಗಳಲ್ಲೂ ಸಕ್ಕರೆ ದಾಸ್ತಾನು ಕಡಿಮೆ ಅಗುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 6:26 pm, Thu, 21 September 23