ಈ ವಾರ ಜಿಎಸ್​ಟಿ ಕೌನ್ಸಿಲ್ ಸಭೆ; ಸಣ್ಣ ಇ-ಕಾಮರ್ಸ್ ವರ್ತಕರಿಗೆ ನಿರಾಳ ತರುವ ಕ್ರಮಗಳಿಗೆ ನಿರೀಕ್ಷೆ

ಈ ವಾರ ನಡೆಯಲಿರುವ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಸಣ್ಣ ಇ-ಕಾಮರ್ಸ್ ವರ್ತಕರಿಗೆ ಜಿಎಸ್‌ಟಿ ನೋಂದಣಿ ವಿನಾಯಿತಿ, ಕಾಂಪೌಂಡಿಂಗ್ ದರಗಳ ಸರಳೀಕರಣ ಹಾಗೂ ತೆರಿಗೆ ವ್ಯಾಜ್ಯಗಳನ್ನು ಕಡಿಮೆ ಮಾಡುವ ಪ್ರಮುಖ ಸುಧಾರಣೆಗಳ ಕುರಿತು ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ. ಇನ್ನಷ್ಟು ಜಿಎಸ್​ಟಿ ವ್ಯವಸ್ಥೆಗಳ ಸುಧಾರಣೆಯಿಂದ ವ್ಯಾಪಾರ ವಹಿವಾಟು ಹೆಚ್ಚು ಬಲಗೊಳ್ಳುವ ನಿರೀಕ್ಷೆ ಇದೆ.

ಈ ವಾರ ಜಿಎಸ್​ಟಿ ಕೌನ್ಸಿಲ್ ಸಭೆ; ಸಣ್ಣ ಇ-ಕಾಮರ್ಸ್ ವರ್ತಕರಿಗೆ ನಿರಾಳ ತರುವ ಕ್ರಮಗಳಿಗೆ ನಿರೀಕ್ಷೆ
ಜಿಎಸ್‌ಟಿ
Image Credit source: Getty Images

Updated on: Oct 05, 2026 | 1:38 PM

ನವದೆಹಲಿ, ಅಕ್ಟೋಬರ್ 5: ಈ ವಾರ ನಡೆಯಲಿರುವ ಪ್ರಮುಖ ‘ಜಿಎಸ್‌ಟಿ ಕೌನ್ಸಿಲ್’ (GST Council) ಸಭೆಯಲ್ಲಿ ಸಣ್ಣ ಇ-ಕಾಮರ್ಸ್ ಮಾರಾಟಗಾರರು ಹಾಗೂ ತೆರಿಗೆದಾರರಿಗೆ ಬಿಡುಗಡೆ ನೀಡುವ ಮತ್ತು ಕಾನೂನು ವ್ಯಾಜ್ಯಗಳನ್ನು (Litigations) ತಗ್ಗಿಸುವ ಉದ್ದೇಶದ ಪ್ರಮುಖ ಸುಧಾರಣೆಗಳನ್ನು ಕೈಗೊಳ್ಳುವ ಸಾಧ್ಯತೆ ಇದೆ.

ಪ್ರಸ್ತುತ ನಿಯಮಗಳ ಪ್ರಕಾರ, ಅಮೇಜಾನ್, ಫ್ಲಿಪ್​ಕಾರ್ಟ್ ಇತ್ಯಾದಿ ಆನ್‌ಲೈನ್‌ ಪ್ಲಾಟ್​ಫಾರ್ಮ್​ಗಳಲ್ಲಿ ಸರಕುಗಳನ್ನು ಮಾರಾಟ ಮಾಡುವ ಸಣ್ಣ ಉದ್ಯಮಿಗಳು ತಮ್ಮ ವಾರ್ಷಿಕ ವಹಿವಾಟು ಎಷ್ಟೇ ಕಡಿಮೆಯಿದ್ದರೂ ಕಡ್ಡಾಯವಾಗಿ ಜಿಎಸ್‌ಟಿ ನೋಂದಣಿ ಪಡೆಯಬೇಕಾಗಿದೆ. ಆಫ್‌ಲೈನ್ ವರ್ತಕರಿಗೆ ನೀಡಲಾಗಿರುವ ₹20 ಲಕ್ಷ/₹40 ಲಕ್ಷ ವಹಿವಾಟಿನ ವಿನಾಯಿತಿ ಮಿತಿಯನ್ನು ಇ-ಕಾಮರ್ಸ್ ಮಾರಾಟಗಾರರಿಗೂ ವಿಸ್ತರಿಸುವ ಅಥವಾ ಸರಳೀಕೃತ ನೋಂದಣಿ ಪ್ರಕ್ರಿಯೆ ತರುವ ಕುರಿತು ಕೌನ್ಸಿಲ್ ಚರ್ಚಿಸಲಿದೆ.

ಇದನ್ನೂ ಓದಿ: ಇಂದು ಆರ್​ಬಿಐ ಎಂಪಿಸಿ ಸಭೆ ಆರಂಭ; ರೆಪೋದರವನ್ನು ಶೇ. 5.50ಕ್ಕೆ ಏರಿಸುವ ನಿರೀಕ್ಷೆ; ಬಡ್ಡಿದರ ಹೆಚ್ಚಿದರೆ ಆಗುವ ಪರಿಣಾಮಗಳಿವು

ತೆರಿಗೆ ವ್ಯಾಜ್ಯಗಳ ಇತ್ಯರ್ಥಕ್ಕೆ ಕ್ರಮ

ಜಿಎಸ್‌ಟಿ ಜಾರಿಯಾದಾಗಿನಿಂದ ಬಾಕಿಯಿರುವ ಲಕ್ಷಾಂತರ ಸಣ್ಣಪುಟ್ಟ ತೆರಿಗೆ ನೋಟಿಸ್‌ಗಳು ಹಾಗೂ ದಂಡಗಳಿಗೆ ಸರಳ ಇತ್ಯರ್ಥ ಯೋಜನೆ (Amnesty Scheme / Settlement Options) ಪರಿಚಯಿಸುವ ನಿರೀಕ್ಷೆಯಿದೆ. ಅನಗತ್ಯ ಕಾನೂನು ಹೋರಾಟಗಳನ್ನು ತಪ್ಪಿಸಲು ಕಾಂಪೌಂಡಿಂಗ್ ಅಪರಾಧಗಳ ಪರಿಮಿತಿಯನ್ನು ಸರಳಗೊಳಿಸುವ ಸೌಲಭ್ಯ ನೀಡಬಹುದು.

ದರಗಳ ತರ್ಕಬದ್ಧಗೊಳಿಸುವಿಕೆ

ವಿವಿಧ ವಸ್ತುಗಳ ಮೇಲಿನ ಜಿಎಸ್‌ಟಿ ದರಗಳಲ್ಲಿರುವ ವಿರೋಧಾಭಾಸಗಳನ್ನು (Inverted Duty Structure) ಸರಿಪಡಿಸುವ ನಿಟ್ಟಿನಲ್ಲಿ ಸಚಿವರ ಗುಂಪು (Group of Ministers – GoM) ಸಲ್ಲಿಸಿರುವ ವರದಿಯ ಆಧಾರದಲ್ಲಿ ಕೆಲವು ದಿನಬಳಕೆಯ ವಸ್ತುಗಳು ಹಾಗೂ ಕಚ್ಚಾವಸ್ತುಗಳ ಮೇಲಿನ ದರಗಳನ್ನು ತರ್ಕಬದ್ಧಗೊಳಿಸುವ ಕುರಿತು ಸಮಾಲೋಚನೆ ನಡೆಯಲಿದೆ.

ಇದನ್ನೂ ಓದಿ: ಬೆಂಗಳೂರು ಥರ ಮತ್ತೊಂದು ನಗರ ಇಲ್ಲ; ಕಂಪನಿ ಶಿಫ್ಟ್ ಮಾಡಿದ್ದು ಒಳ್ಳೇದಾಯ್ತು: ಬ್ಯುಸಿನೆಸ್​ಮ್ಯಾನ್ ಹರೀಶ್ ವರದರಾಜನ್

ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ (ITC) ನಿಯಮಗಳ ಸರಳೀಕರಣ

ಪ್ರಾಮಾಣಿಕವಾಗಿ ಜಿಎಸ್‌ಟಿ ಪಾವತಿಸುವ ಉದ್ಯಮಿಗಳಿಗೆ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಪಡೆಯುವಲ್ಲಿ ಎದುರಾಗುತ್ತಿರುವ ತಾಂತ್ರಿಕ ಅಡೆತಡೆಗಳನ್ನು ನಿವಾರಿಸಲು ಮತ್ತು ಸುಳ್ಳು ಐಟಿಸಿ (Fake ITC) ದಾವೆಗಳನ್ನು ತಡೆಯಲು ಪೋರ್ಟಲ್‌ನಲ್ಲಿ ಹೊಸ ವೈಶಿಷ್ಟ್ಯಗಳನ್ನು ಅಳವಡಿಸುವ ಇರಾದೆಯಿದೆ.

ಈ ಸುಧಾರಣೆಗಳು ಜಾರಿಗೆ ಬಂದರೆ ದೇಶದ ಲಕ್ಷಾಂತರ ಸಣ್ಣ ಉದ್ಯಮಿಗಳು ಮತ್ತು ಡಿಜಿಟಲ್ ವ್ಯಾಪಾರಿಗಳಿಗೆ ಆಡಳಿತಾತ್ಮಕ ಹೊರೆ ತಗ್ಗಲಿದ್ದು, ಆನ್‌ಲೈನ್ ವ್ಯಾಪಾರಕ್ಕೆ ಹೆಚ್ಛಿನ ಉತ್ತೇಜನ ಸಿಗಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 1:34 pm, Mon, 5 October 26

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us