AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು ಥರ ಮತ್ತೊಂದು ನಗರ ಇಲ್ಲ; ಕಂಪನಿ ಶಿಫ್ಟ್ ಮಾಡಿದ್ದು ಒಳ್ಳೇದಾಯ್ತು: ಬ್ಯುಸಿನೆಸ್​ಮ್ಯಾನ್ ಹರೀಶ್ ವರದರಾಜನ್

ಚೆನ್ನೈನಲ್ಲಿದ್ದ ತಮ್ಮ ಕಂಪನಿಯನ್ನು ಬೆಂಗಳೂರಿಗೆ ವರ್ಗಾವಣೆ ಮಾಡಿಕೊಂಡಿದ್ದರಿಂದ ಆದ ಅನುಕೂಲಗಳ ಬಗ್ಗೆ ಹರೀಶ್ ವರದರಾಜನ್ ಹೇಳಿಕೊಂಡಿದ್ದಾರೆ. ಬೆಂಗಳೂರಿನ ಹವಾಮಾನ, ಸ್ಟಾರ್ಟಪ್ ಪರಿಸರ, ಹೂಡಿಕೆದಾರರ ಲಭ್ಯತೆ, ಮಾರುಕಟ್ಟೆ ಬಲವು ತಮ್ಮ ಸ್ಟಾರ್ಟಪ್​ಗೆ ಹೇಗೆ ಅನುಕೂಲವಾಯಿತು ಎಂದು ವಿವರಿಸಿದ್ದಾರೆ. ಬೆಂಗಳೂರಿನ ಟ್ರಾಫಿಕ್ ಸಮಸ್ಯೆಯಿಂದ ಪಾರಾಗುವ ಐಡಿಯಾ ಕೂಡ ಹೇಳಿದ್ದಾರೆ.

ಬೆಂಗಳೂರು ಥರ ಮತ್ತೊಂದು ನಗರ ಇಲ್ಲ; ಕಂಪನಿ ಶಿಫ್ಟ್ ಮಾಡಿದ್ದು ಒಳ್ಳೇದಾಯ್ತು: ಬ್ಯುಸಿನೆಸ್​ಮ್ಯಾನ್ ಹರೀಶ್ ವರದರಾಜನ್
ಬೆಂಗಳೂರು ನಗರImage Credit source: PTI
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 04, 2026 | 4:00 PM

Share

ಬೆಂಗಳೂರು, ಅಕ್ಟೋಬರ್ 4: ಬೆಂಗಳೂರು ನಗರ ಪ್ರತೀ ಕಾಲಘಟ್ಟದಲ್ಲೂ ಬೇರೆ ಬೇರೆ ಬಿರುದು, ಗುರುತುಗಳನ್ನು ಪಡೆದುಕೊಂಡು ಅಪ್​ಡೇಟ್ ಆಗುತ್ತಿದೆ. ಉದ್ಯಾನನಗರಿ ಎಂದೇ ಖ್ಯಾತವಾಗಿದ್ದ ಕರ್ನಾಟಕ ರಾಜಧಾನಿ ನಗರವು ನಂತರ ಐಟಿ ಸಿಟಿ, ಸಿಲಿಕಾನ್ ಸಿಟಿ ಎನಿಸಿತು. ಈಗ ಸ್ಟಾರ್ಟಪ್ ಸಿಟಿ ಎಂದೇ ಫೇಮಸ್ ಆಗಿದೆ. ಹಾಗೆ ಹೆಸರುವಾಸಿಯಾಗಲು ಅನೇಕ ಕಾರಣಗಳಿವೆ. ಅದರಲ್ಲಿ ಅನುಕೂಲಕರ ಪರಿಸರ ಮತ್ತು ಪೂರಕ ಉದ್ಯಮ ಪರಿಸರ ಕಾರಣಗಳೂ ಇವೆ. ಹರೀಶ್ ವರದರಾಜನ್ ಎನ್ನುವ ಉದ್ಯಮಿಯೊಬ್ಬರು ಬೆಂಗಳೂರಿನ ಗುಣಗಾನ ಮಾಡಿದ್ದಾರೆ. ತಮ್ಮ ಕಂಪನಿಯನ್ನು ಚೆನ್ನೈನಿಂದ ಬೆಂಗಳೂರಿಗೆ ಸ್ಥಳಾಂತರ ಮಾಡಿ ಒಳ್ಳೆಯ ಕೆಲಸ ಮಾಡಿದೆ ಎಂದಿದ್ದಾರೆ.

ಹರೀಶ್ ವರದರಾಜನ್ ಅವರು ಚೆನ್ನೈನಲ್ಲಿ ಫ್ರೆಗೇರಿಯಾ ಎಂಬ ಅಗ್ರಿಟೆಕ್ ಸ್ಟಾರ್ಟಪ್​ವೊಂದನ್ನು ಸ್ಥಾಪಿಡಿಸಿದ್ದರು. ಅದನ್ನು ಜಾಗತಿಕ ಉತ್ಪನ್ನವಾಗಿ ಮಾಡಲು ಕೈಮೀರಿ ಶ್ರಮಿಸಿದ್ದರು. ಆದರೆ, ಫಲಪ್ರದ ಎನಿಸಲಿಲ್ಲ. ವರ್ಷದ ಹಿಂದೆ ಅವರು ಬೆಂಗಳೂರಿಗೆ ತಮ್ಮ ಸ್ಟಾರ್ಟಪ್ ಕಚೇರಿ ಬದಲಾಯಿಸಿದ್ದಾರೆ. ಆ ಬಳಿಕ ಅವರ ಕಂಪನಿಯ ದೆಸೆಯೇ ಬದಲಾಗಿದೆಯಂತೆ.

‘ವರ್ಷದ ಹಿಂದೆ ಚೆನ್ನೈನಿಂದ ಬೆಂಗಳೂರಿಗೆ ಬಂದೆವು. ನಾನು ವೈಯಕ್ತಿಕವಾಗಿ ಮತ್ತು ವೃತ್ತಿದಾಯಕವಾಗಿ ಕೈಗೊಂಡ ಅತ್ಯುತ್ತಮ ನಿರ್ಧಾರಗಳಲ್ಲಿ ಇದೂ ಒಂದು’ ಎಂದು ವರದರಾಜನ್ ಅವರು ಲಿಂಕ್ಡ್​ಇನ್ ಪೋಸ್ಟ್​ನಲ್ಲಿ ಹೇಳಿಕೊಂಡಿದ್ದಾರೆ. ಬೆಂಗಳೂರಿನ ಹವಾಮಾನವು ಅವರಿಗೆ ಬಹಳ ಇಷ್ಟವಾಗಿದ್ದಂತೆ.

ಇದನ್ನೂ ಓದಿ: ‘ಕಷ್ಟ ಕಾಲ ಬರ್ತಿದೆ, ಸಾಲ ಬೇಡ, ಮೂರು ವರ್ಷದ ಎಮರ್ಜೆನ್ಸಿ ಫಂಡ್ ಇಡಿ’; ರಾಹುಲ್ ಗಾಂಧಿ ಸಲಹೆಗಾರನ ಪೋಸ್ಟ್ ವೈರಲ್

‘ವೈಯಕ್ತಿಕವಾಗಿ ನಾವು ಕಳೆದ 10 ವರ್ಷದಲ್ಲಿ ವಿಶ್ವದ ವಿವಿಧೆಡೆ ಐದು ನಗರಗಳಲ್ಲಿ ಜೀವನ ಮಾಡಿದ್ದೇನೆ. ಬೆಂಗಳೂರಿನಲ್ಲಿ ವರ್ಷವಿಡೀ ಇರುವ ಸ್ಥಿರ ಹವಾಮಾನ ಬೇರಾವ ನಗರದಲ್ಲೂ ಕಾಣಸಿಗಲ್ಲ’ ಎಂಬುದು ಅವರ ಅನಿಸಿಕೆ.

ಸಾಮಾನ್ಯ ನಾಗರಿಕರಿಗೆ ಬೆಂಗಳೂರಿನ ಹವಾಮಾನ ಹಿಡಿಸುವುದು ಸರಿ. ಆದರೆ, ಉದ್ಯಮಿಗಳು ಅದೊಂದೇ ಸಾಕಾ? ಸ್ಟಾರ್ಟಪ್​ಗಳಿಗೆ ಬೇಕಾದ ಹೂಡಿಕೆದಾರರು ಮತ್ತು ಇಕೋಸಿಸ್ಟಂ ಬೆಂಗಳೂರಿನಲ್ಲಿ ಉತ್ಕೃಷ್ಟವಾಗಿರುವುದು ಫ್ರಗೇರಿಯಾ ಕಂಪನಿಯನ್ನು ಚೆನ್ನೈನಿಂದ ಶಿಫ್ಟ್ ಮಾಡಲು ಬೇಕಾದ ಎರಡನೆ ಪ್ರಬಲ ಕಾರಣ.

ಹರೀಶ್ ವರದರಾಜನ್ ಅವರ ಲಿಂಕ್ಡ್​ಇನ್ ಪೋಸ್ಟ್

ಬೆಂಗಳೂರಿನ ಟ್ರಾಫಿಕ್ ಬಗ್ಗೆ ಏನಂತಾರೆ ನೋಡಿ ವರದರಾಜನ್?

ಬೆಂಗಳೂರು ನಗರ ಈಗ ನೊಟೋರಿಯಸ್ ಟ್ರಾಫಿಕ್​ಗೆ ವಿಶ್ವಾದ್ಯಂತ ಟ್ರೋಲ್ ಆಗುತ್ತಿದೆ. ಆದರೆ, ವರದರಾಜನ್ ಅವರು ಈ ಸಮಸ್ಯೆಗೆ ತಮ್ಮದೇ ಪರಿಹಾರ ಕಂಡುಕೊಂಡಿದ್ದಾರೆ. ನಗರದ ಹೊರವಲಯದಲ್ಲಿ ವಾಸಿಸುವುದು, ಪೀಕ್ ಇಲ್ಲದ ಅವಧಿಯಲ್ಲಿ ಪ್ರಯಾಣಿಸುವುದು ಮತ್ತು ಸಾಧ್ಯವಾದಷ್ಟೂ ಮೆಟ್ರೋ ಬಳಸುವುದು, ಇದರಿಂದ ಟ್ರಾಫಿಕ್ ಸಮಸ್ಯೆಯಿಂದ ತಪ್ಪಿಸಿಕೊಳ್ಳಲು ನೆರವಾಗುತ್ತದೆ ಎಂದು ಅವರು ಹೇಳುತ್ತಾರೆ.

ಇದನ್ನೂ ಓದಿ: ಇತರ ಸಾಲಕ್ಕಿಂತ ಚಿನ್ನದ ಸಾಲ ಉತ್ತಮ ಯಾಕೆ? ಇಲ್ಲಿದೆ ಕಾರಣ

‘ವೃತ್ತಿಯ ವಿಷಯಕ್ಕೆ ಬಂದರೆ, ದಕ್ಷಿಣ ನಗರಗಳಲ್ಲೇ ಪ್ರೀಮಿಯಮ್ ಗುಣಮಟ್ಟದ ಹಣ್ಣುಗಳಿಗೆ ಬೆಂಗಳೂರು ಅತಿದೊಡ್ಡ ಮಾರುಕಟ್ಟೆಯಾಗಿದೆ. ಇಲ್ಲಿಯ ಹವಾಗುಣದ ಕಾರಣ ನಮ್ಮ ಕಾರ್ಯಾಚರಣೆ ವೆಚ್ಚ ಕಡಿಮೆ ಆಗುತ್ತದೆ. ದೇಶದ ಅತ್ಯುತ್ತಮ ಹೂಡಿಕೆದಾರರು ಒಂದು ಟ್ಯಾಕ್ಸಿ ರೈಡ್​ನಷ್ಟು ಸನಿಹದಲ್ಲಿರುತ್ತಾರೆ’ ಎಂದು ಹರೀಶ್ ವರದರಾಜನ್ ತಿಳಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More