HAL Share: ಎಚ್​ಎಎಲ್ ಸತ್ತೇಹೋಯಿತು ಎಂದವರಿಗೆ ಶಾಕ್; ಹೂಡಿಕೆದಾರರಿಗೆ ಸ್ವರ್ಗವಾಗಿದೆ ಎಚ್​ಎಎಲ್ ಷೇರು

|

Updated on: Jul 24, 2023 | 3:57 PM

Multibagger Stock: 2018ರ ಮಾರ್ಚ್ ತಿಂಗಳಲ್ಲಿ ಷೇರುಪೇಟೆಗೆ ಪ್ರವೇಶ ಮಾಡಿದ ಎಚ್​ಎಎಲ್ ಸಂಸ್ಥೆಯ ಷೇರು ಕಳೆದ 3 ವರ್ಷದಲ್ಲಿ ಗಣನೀಯವಾಗಿ ವೃದ್ಧಿಸಿದೆ. 2020ರ ಏಪ್ರಿಲ್​ನಲ್ಲಿ 500 ರೂ ಆಸುಪಾಸು ಇದ್ದ ಅದರ ಷೇರುಬೆಲೆ ಇದೀಗ 4,000 ರೂ ಸಮೀಪಕ್ಕೆ ಬಂದಿದೆ.

HAL Share: ಎಚ್​ಎಎಲ್ ಸತ್ತೇಹೋಯಿತು ಎಂದವರಿಗೆ ಶಾಕ್; ಹೂಡಿಕೆದಾರರಿಗೆ ಸ್ವರ್ಗವಾಗಿದೆ ಎಚ್​ಎಎಲ್ ಷೇರು
ಎಚ್​ಎಎಲ್
Follow us on

ಮುಂಬೈ, ಜುಲೈ 24: ಬೆಂಗಳೂರು ಮೂಲದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿ (HAL) ಸಂಸ್ಥೆ ಇದೀಗ ಜಾಗತಿಕ ಭೂಪಟದಲ್ಲಿ ವಿಶೇಷ ಸ್ಥಾನ ಪಡೆಯುತ್ತಿದೆ. ಎಚ್​ಎಎಲ್ ನಿರ್ಮಿತ ಯುದ್ಧವಿಮಾನಗಳು ವಿದೇಶಕ್ಕೆ ರಫ್ತಾಗುತ್ತಿವೆ. ಭಾರತೀಯ ಮಿಲಿಟರಿಗಾಗಿ ಎಚ್​ಎಎಲ್ ಹಲವು ಯುದ್ಧಾಸ್ತ್ರಗಳನ್ನು ತಯಾರಿಸುತ್ತಿದೆ. ವಿದೇಶೀ ಶಸ್ತ್ರಾಸ್ತ್ರ ತಯಾರಿಕಾ ಕಂಪನಿಗಳ ಜೊತೆ ಎಚ್​ಎಎಲ್ ಸಹಭಾಗಿತ್ವದಲ್ಲಿ ಹಲವು ಶಸ್ತ್ರಾಸ್ತ್ರ ತಯಾರಿಸುತ್ತಿದೆ. ಭಾರತದ ಮಿಲಿಟರಿ ಶಕ್ತಿಯ ಜೊತೆಜೊತೆಗೆ ಎಚ್​ಎಎಲ್ ಕೂಡ ಬೆಳೆಯುತ್ತಿದೆ. ನಾಲ್ಕೈದು ವರ್ಷಗಳ ಹಿಂದೆ ವಿಪಕ್ಷ ನಾಯಕರು ಎಚ್​ಎಎಲ್ ಕಥೆ ಮುಗಿಯಿತು ಎಂದು ಆತಂಕ ವ್ಯಕ್ತಪಡಿಸಿದರು. ಅದಕ್ಕೆ ತದ್ವಿರುದ್ಧವಾಗಿ, ಸರ್ಕಾರಿ ಸ್ವಾಮ್ಯದ ಎಚ್​ಎಎಲ್ ಬಹಳ ಮಿಂಚಿನಂತೆ ಶಕ್ತಿವೃದ್ದಿಸಿದೆ. ಷೇರುಪೇಟೆಯಲ್ಲಿ ಅದರ ಷೇರುಗಳ ಮಿಂಚಿನ ಸಂಚಾರ ನಡೆದಿದೆ. ಐದು ವರ್ಷಗಳ ಹಿಂದೆ ಷೇರುಪೇಟೆಗೆ ಪ್ರವೇಶ ಮಾಡಿದ ಎಚ್​ಎಎಲ್ ಷೇರುಬೆಲೆ ಹೆಚ್ಚೂಕಡಿಮೆ ಮೂರು ಪಟ್ಟು ಬೆಳೆದಿದೆ. ಬೆಂಗಳೂರಿನ ಈ ಸಂಸ್ಥೆಯ ಷೇರು ಇದೀಗ ಮಲ್ಟಿಬ್ಯಾಗರ್ ಎನಿಸಿದೆ.

2018ರ ಎಚ್​ಎಎಲ್ ಐಪಿಒದಲ್ಲಿ 1,240 ರೂ, ಈಗ ಷೇರುಬೆಲೆ 3,880 ರೂ

ಹಿಂದೂಸ್ತಾನ್ ಏರೋನಾಟಿಕ್ಸ್ ಲಿ ಸಂಸ್ಥೆ 2018ರ ಮಾರ್ಚ್ ತಿಂಗಳಲ್ಲಿ ಐಪಿಒಗೆ ತೆರೆಯಿತು. 1,215ರಿಂದ 1,240 ರೂಗೆ ಐಪಿಒದಲ್ಲಿ ಷೇರುಬೆಲೆ ನಿಗದಿಯಾಯಿತು. 5 ವರ್ಷದ ಬಳಿಕ ಇದೀಗ ಅದರ ಬೆಲೆ 3,888 ರೂಗೆ ಏರಿದೆ. ಶೇ 243ರಷ್ಟು ಅದರ ಬೆಲೆ ಬೆಳೆದಿದೆ.

ಇದನ್ನೂ ಓದಿ: HAL: ಅಮೆರಿಕದ ಜಿಇ ಜೊತೆ ಸೇರಿ ಫೈಟರ್ ಜೆಟ್ ಎಂಜಿನ್ ತಯಾರಿಕೆಗೆ ಎಚ್​ಎಎಲ್ ಒಪ್ಪಂದ; ಒಮ್ಮೆಲೇ ಜಿಗಿದ ಷೇರುಬೆಲೆ

ಎಚ್​ಎಎಲ್​ನ ಆರಂಭಿಕ ಬೆಲೆಯಲ್ಲಿ ಷೇರನ್ನು ಖರೀದಿಸಿದವರು ಇವತ್ತು ತೃಪ್ತಿಯ ಅಲೆಯಲ್ಲಿ ತೇಲಾಡುತ್ತಿರಬಹುದು. ಅಂದಿನ ದರದಲ್ಲಿ ಯಾರಾದರೂ 1 ಲಕ್ಷ ರೂ ಹೂಡಿಕೆ ಮಾಡಿದ್ದರೆ 3.13 ಲಕ್ಷ ರೂ ಮೌಲ್ಯದ ಷೇರುಸಂಪತ್ತು ಹೊಂದಿರುತ್ತಿದ್ದರು. ಕೇವಲ 5 ವರ್ಷದಲ್ಲಿ ಅವರ ಹಣ 3 ಪಟ್ಟು ಹೆಚ್ಚಾಗಿರುತ್ತಿತ್ತು.

ಎಚ್​ಎಎಲ್ ಷೇರುಬೆಲೆ 5 ವರ್ಷದಲ್ಲಿ ಬೆಳೆದ ಪರಿ…

2019ರ ಲೋಕಸಭಾ ಚುನಾವಣೆಗೆ ಮೊದಲು ರಾಹುಲ್ ಗಾಂಧಿ ಅವರು ಎಚ್​ಎಎಲ್ ಸಂಸ್ಥೆಯನ್ನು ಸರ್ಕಾರ ಕೊಲ್ಲುತ್ತಿದೆ ಎಂದು ಆರೋಪಿಸಿದ್ದರು. ಒಂದು ಹಂತದಲ್ಲಿ ಎಚ್​ಎಎಲ್ ಷೇರುಬೆಲೆ ಅರ್ಧದಷ್ಟು ಕುಸಿತಗೊಂಡಿತ್ತು. 2020ರ ಏಪ್ರಿಲ್ 24ರಂದು, ಅಂದರೆ ಇವತ್ತಿಗೆ ಸರಿಯಾಗಿ 39 ತಿಂಗಳ ಹಿಂದೆ ಎಚ್​ಎಎಲ್ ಷೇರುಬೆಲೆ 533 ರೂಪಾಯಿಗೆ ಇಳಿದಿತ್ತು. ಮೇ 8ರಂದು 501 ರೂಪಾಯಿಯವರೆಗೂ ಇಳಿದುಹೋಗಿತ್ತು. ಅದಾದ ಬಳಿಕ ಎಚ್​ಎಎಲ್ ರಭಸವಾಗಿ ಮೇಲೇರಿದೆ. 39 ತಿಂಗಳಲ್ಲಿ 7 ಪಟ್ಟು ಬೆಲೆ ಹೆಚ್ಚಿದೆ.

ಇದನ್ನೂ ಓದಿ: HAL: ಷೇರುವಿಭಜನೆ ಅಂತ ಹೇಳಿದ್ದೇ ತಡ ಎಚ್​ಎಎಲ್ ಷೇರಿಗೆ ಭರ್ಜರಿ ಬೇಡಿಕೆ; ಏನಿದು ಷೇರುವಿಭಜನೆ? ಯಾರಿಗೆ ಲಾಭ?

ಒಂದು ವೇಳೆ 39 ತಿಂಗಳ ಹಿಂದೆ 2020ರ ಏಪ್ರಿಲ್ 24ರಂದು ಎಚ್​ಎಎಲ್ ಷೇರು ಬೆಲೆ 533 ರೂ ಇದ್ದಾಗ 1 ಲಕ್ಷ ರೂ ಹೂಡಿಕೆ ಮಾಡಿದ್ದೇ ಆಗಿದ್ದರೆ ಅವರ ಷೇರುಸಂಪತ್ತು 5.29 ಲಕ್ಷ ರೂ ಆಗುತ್ತಿತ್ತು. ಪ್ರತೀ ವರ್ಷ ಷೇರುಸಂಪತ್ತು ದ್ವಿಗುಣಗೊಳ್ಳುತ್ತಾ ಹೋಗಿರುವುದು ವಿಶೇಷ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 3:56 pm, Mon, 24 July 23