EPF Interest Rate: 2022-23ರ ವರ್ಷಕ್ಕೆ ಇಪಿಎಫ್​ಗೆ ಬಡ್ಡಿ ದರ ಹೆಚ್ಚಿಸಿದ ಸರ್ಕಾರ; ಇಲ್ಲಿದೆ ವಿವರ

2022-23ರ ಹಣಕಾಸು ವರ್ಷಕ್ಕೆ ಇಪಿಎಫ್ ಸದಸ್ಯರ ಖಾತೆಯ ಹಣಕ್ಕೆ ಶೇ. 8.15ರಷ್ಟು ಬಡ್ಡಿ ಜಮೆ ಆಗಲಿದೆ. ಇಪಿಎಫ್​ಒ ಜುಲೈ 24ರಂದು ಹೊರಡಿಸಿದ ಸುತ್ತೋಲೆಯಲ್ಲಿ ಇದನ್ನು ಪ್ರಕಟಿಸಲಾಗಿದೆ.

EPF Interest Rate: 2022-23ರ ವರ್ಷಕ್ಕೆ ಇಪಿಎಫ್​ಗೆ ಬಡ್ಡಿ ದರ ಹೆಚ್ಚಿಸಿದ ಸರ್ಕಾರ; ಇಲ್ಲಿದೆ ವಿವರ
ಇಪಿಎಫ್​ಒ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Jul 24, 2023 | 2:12 PM

ನವದೆಹಲಿ, ಜುಲೈ 24: ಕಳೆದ ಹಣಕಾಸು ವರ್ಷದಲ್ಲಿ (2022-23) ಇಪಿಎಫ್ ಖಾತೆಯಲ್ಲಿ ಹಣಕ್ಕೆ ಸರ್ಕಾರ ನೀಡುವ ಬಡ್ಡಿ ದರವನ್ನು (EPF Interest Rate) ಘೋಷಿಸಲಾಗಿದೆ. 2022-23ರ ವರ್ಷದಲ್ಲಿ ಶೇ. 8.15ರಷ್ಟು ಬಡ್ಡಿ ಕೊಡಲಾಗುವುದು ಎಂದು ಇಪಿಎಫ್​ಒ ತಿಳಿಸಿದೆ. ಜುಲೈ 24ರಂದು ಇಪಿಎಫ್​ಒ ಸುತ್ತೋಲೆ (Circular) ಮೂಲಕ ಈ ವರ್ಷಕ್ಕೆ ಬಡ್ಡಿ ದರ ಪ್ರಕಟಿಸಿದೆ. ಇಪಿಎಫ್​ಒದಿಂದ ತೆಗೆದುಕೊಳ್ಳಲಾದ ನಿರ್ಧಾರಕ್ಕೆ ಹಣಕಾಸು ಸಚಿವಾಲಯದಿಂದ ನೋಟಿಫೈ ಆಗಬೇಕು. ಅದಾದ ಬಳಿಕ ಪಿಎಫ್ ಖಾತೆಗಳಲ್ಲಿನ ಮೊತ್ತಕ್ಕೆ ಬಡ್ಡಿ ಹಣ ಜಮೆ ಆಗುತ್ತದೆ.

‘1952ರ ಇಪಿಎಫ್ ಸ್ಕೀಮ್​ನ ಪ್ಯಾರಾ 60 ಅಡಿಯಲ್ಲಿ ಇರುವ ನಿಯಮ ಪ್ರಕಾರ ಇಪಿಎಫ್ ಸ್ಕೀಮ್​ನ ಪ್ರತಿಯೊಬ್ಬ ಸದಸ್ಯರ ಖಾತೆಗೆ 2022-23ರ ವರ್ಷಕ್ಕೆ ಶೇ. 8.15ರಷ್ಟು ಬಡ್ಡಿ ಕೊಡಲು ಕೇಂದ್ರ ಸರ್ಕಾರ ಅನುಮೋದಿಸಿದೆ ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ತಿಳಿಸಿದೆ. ಸದಸ್ಯರ ಖಾತೆಗಳಿಗೆ ಈ ಬಡ್ಡಿ ಹಣವನ್ನು ಜಮೆ ಮಾಡುವಂತೆ ಸಂಬಂಧಿತರಿಗೆ ಅಗತ್ಯ ಸೂಚನೆಗಳನ್ನು ಕೊಡಬೇಕೆಂದು ಈ ಮೂಲಕ ತಮಗೆ ಮನವಿ ಮಾಡಲಾಗಿದೆ’ ಎಂದು ಇಪಿಎಫ್​ಒನ ಸರ್ಕುಲಾರ್​ನಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: EPF Withdrawal: ಉಮಂಗ್ ಆ್ಯಪ್ ಮೂಲಕ ಇಪಿಎಫ್ ಹಣ ವಿತ್​ಡ್ರಾ ಮಾಡುವುದು ಬಹಳ ಸುಲಭ; ಇಲ್ಲಿದೆ ವಿವರ

ಕಳೆದ ವರ್ಷದಲ್ಲಿ (2021-22) ಇಪಿಎಫ್​ಗೆ ಬಡ್ಡಿ ದರ ಶೇ. 8.10 ಇತ್ತು. 2022-23ರ ಹಣಕಾಸು ವರ್ಷಕ್ಕೆ ಶೇ. 8.15ರಷ್ಟು ಬಡ್ಡಿ ದರ ನೀಡಲಾಗುವ ಬಗ್ಗೆ ಇಪಿಎಫ್​ಒ ಮಾರ್ಚ್ ತಿಂಗಳಲ್ಲಿ ನಿರ್ಧರಿಸಿತ್ತು. ಇದೀಗ ಅದನ್ನು ಜಾರಿಗೊಳಿಸುವ ಸಂಬಂಧ ಸುತ್ತೋಲೆ ಹೊರಡಿಸಿದೆ. ಹಣಕಾಸು ಸಚಿವಾಲಯದಿಂದ ನೋಟಿಫೈ ಆದ ಬಳಿಕ ಖಾತೆದಾರರಿಗೆ ಆ ವರ್ಷದ ಬಡ್ಡಿ ಹಣ ಜಮೆ ಆಗುತ್ತದೆ.

ಇಪಿಎಫ್ ಖಾತೆಯಲ್ಲಿ ಹಣ ಎಷ್ಟಿದೆ ತಿಳಿಯುವುದು ಹೇಗೆ?

ನಿಮ್ಮ ಇಪಿಎಫ್ ಖಾತೆಯಲ್ಲಿ ಎಷ್ಟು ಹಣ ಜಮೆಯಾಗಿದೆ ಎಂಬುದನ್ನು ತಿಳಿಯಲು ಸುಲಭ ಮಾರ್ಗಗಳಿವೆ.

  1. ಇಪಿಎಫ್​ಒನ ಇಸೇವಾ ಪೋರ್ಟಲ್
  2. ಉಮಾಂಗ್ ಆ್ಯಪ್
  3. ಮೊಬೈಲ್​ನಿಂದ ಮಿಸ್ಡ್ ಕಾಲ್ ಮೂಲಕ
  4. ಎಸ್ಸೆಮ್ಮೆಸ್ ಕಳುಹಿಸುವ ಮೂಲಕ

ಈ ಸೇವೆ ಪಡೆಯಲು ಯುಎಎನ್ ನಂಬರ್ ಸಕ್ರಿಯಗೊಳಿಸಿರಬೇಕು. ಬಹುತೇಕ ಇಪಿಎಫ್ ಖಾತೆಗಳಿಗೆ ಯುಎಎನ್ ನಂಬರ್ ಕೊಟ್ಟಿರಲಾಗುತ್ತದೆ.

ಇದನ್ನೂ ಓದಿ: EPF Claim: ಉದ್ಯೋಗಿ ಸತ್ತಾಗ ಅವರ ಇಪಿಎಫ್ ಹಣಕ್ಕೆ ನಾಮಿನಿ ಕ್ಲೈಮ್ ಮಾಡುವುದು ಹೇಗೆ?

ಏನಿದು ಇಪಿಎಫ್ ಯೋಜನೆ?

ಇಪಿಎಫ್ ಎಂದರೆ ಎಂಪ್ಲಾಯೀ ಪ್ರಾವಿಡೆಂಟ್ ಫಂಡ್. ಅಥವಾ ಉದ್ಯೋಗಿ ಭವಿಷ್ಯ ನಿಧಿ ಯೋಜನೆ. ಉದ್ಯೋಗಿಗಳ ಭವಿಷ್ಯದ ದೃಷ್ಟಿಯಿಂದ ಸರ್ಕಾರ ರೂಪಿಸಿರುವ ಯೋಜನೆ ಇದು. ಪ್ರತಿಯೊಬ್ಬ ಉದ್ಯೋಗಿಯ ಹೆಸರಿನಲ್ಲಿ ಪಿಎಫ್ ಖಾತೆ ತೆರೆಯಲಾಗುತ್ತದೆ. ಉದ್ಯೋಗಿಯ ಸಂಬಳದಲ್ಲಿ ಮೂಲವೇತನದ ಶೇ. 12ರಷ್ಟು ಹಣವನ್ನು ಇಪಿಎಫ್ ಖಾತೆಗೆ ಜಮೆ ಮಾಡಲಾಗುತ್ತದೆ. ಉದ್ಯೋಗಿ ಕೆಲಸ ಮಾಡುವ ಸಂಸ್ಥೆಯಿಂದಲೂ ಶೇ. 12ರಷ್ಟು ಕೊಡುಗೆ ಈ ಖಾತೆಗೆ ಹೋಗುತ್ತದೆ. ಸರ್ಕಾರ ವರ್ಷಕ್ಕೊಮ್ಮೆ ಈ ಖಾತೆಯಲ್ಲಿರುವ ಹಣಕ್ಕೆ ಬಡ್ಡಿ ತುಂಬಿಸುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 1:27 pm, Mon, 24 July 23

ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ