ನವದೆಹಲಿ, ಮೇ 29: ಯುಪಿಐ ಪ್ಲಾಟ್ಫಾರ್ಮ್ನಲ್ಲಿ ಎಚ್ಡಿಎಫ್ಸಿ ಬ್ಯಾಂಕ್ ಖಾತೆಯಲ್ಲಿ ಅಲ್ಪ ಮೊತ್ತದ ವಹಿವಾಟಿಗೆ (low value UPI transactions) ನಡೆದಲ್ಲಿ ಅದರ ಅಲರ್ಟ್ ಮೆಸೇಜ್ ಖಾತೆದಾರರ ಮೊಬೈಲ್ಗೆ ಬರುವುದಿಲ್ಲ. ಎಚ್ಡಿಎಫ್ಸಿ ಬ್ಯಾಂಕ್ ಈ ವಿಚಾರವನ್ನು ತಿಳಿಸಿದೆ. ಎಚ್ಡಿಎಫ್ಸಿ ಬ್ಯಾಂಕ್ ಖಾತೆಯಿಂದ ನೂರು ರೂ ಪಾವತಿಯಾದಲ್ಲಿ, ಮತ್ತು ಖಾತೆಗೆ ಐನ್ನೂರು ರೂ ಅಥವಾ ಅದಕ್ಕಿಂತ ಕಡಿಮೆ ಮೊತ್ತದ ಹಣ ಜಮೆ ಆದಲ್ಲಿ ಅಲರ್ಟ್ ಮೆಸೇಜ್ ಬರುವುದಿಲ್ಲ. ಜೂನ್ 25ರಿಂದ ಇದು ಜಾರಿಗೆ ಬರಲಿದೆ.
ನೂರು ರೂ ಮೇಲ್ಪಟ್ಟ ಪಾವತಿ ಹಾಗೂ 500 ರೂ ಮೇಲ್ಪಟ್ಟ ಸ್ವೀಕೃತಿಗೆ ಮಾತ್ರವೇ ಮೆಸೇಜ್ ಬರುತ್ತದೆ. ಒಟ್ಟಿಗೆ ಮಸೇಜ್ಗಳನ್ನು ಕಳುಹಿಸಲು ಸಾಕಷ್ಟು ವೆಚ್ಚವಾಗುವುದರಿಂದ ಬ್ಯಂಕ್ ಈ ನಿರ್ಧಾರ ಕೈಗೊಂಡಿದೆ. ಅದು ಮಾಹಿತಿ ನೀಡಿರುವ ಪ್ರಕಾರ, ಈ ರೀತಿಯ ಎಸ್ಸೆಮ್ಮೆಸ್ಗಾಗಿ ನಿತ್ಯವೂ ಕೋಟ್ಯಂತರ ರೂ ವೆಚ್ಚವಾಗುತ್ತದೆ. ಯುಪಿಐ ವಹಿವಾಟು ಬಹಳ ಅಧಿಕ ಇರುವುದರಿಂದ ಅಲರ್ಟ್ ಮೆಸೇಜ್ಗಳಿಗಾಗಿ ಎಚ್ಡಿಎಫ್ಸಿ ಬ್ಯಾಂಕ್ ದಿನಕ್ಕೆ ಸುಮಾರು 40 ಕೋಟಿ ರೂ ವ್ಯಯಿಸುತ್ತದೆ.
ಇದನ್ನೂ ಓದಿ: ಪೇಟಿಎಂ ಖರೀದಿಸಲು ಮುಂದಾದ್ರಾ ಅದಾನಿ? ಇಲ್ಲ ಎನ್ನುತ್ತಿವೆ ಎರಡೂ ಸಂಸ್ಥೆಗಳು
ಕಡಿಮೆ ಮೊತ್ತದ ವಹಿವಾಟಿಗೆ ಎಚ್ಡಿಎಫ್ಸಿಯಿಂದ ಎಸ್ಸೆಮ್ಮೆಸ್ ಬರದೇ ಹೋದರೂ ಇಮೇಲ್ ಅಲರ್ಟ್ ಮುಂದುವರಿಯುತ್ತದೆ. ಹಾಗೆಯೇ, ಯುಪಿಐ ವಹಿವಾಟು ನಡೆಯುವ ಪ್ಲಾಟ್ಫಾರ್ಮ್ಗಳೂ ಕೂಡ ಅಲರ್ಟ್ ಮೆಸೇಜ್ ಕಳುಹಿಸುತ್ತವೆ. ಉದಾಹರಣೆಗೆ, ಫೋನ್ ಪೆ ವ್ಯಾಲಟ್ನಿಂದ ಹಣ ಪಾವತಿಯಾದರೆ ಅದರ ಅಲರ್ಟ್ ಮೆಸೇಜ್ ಯುಪಿಐ ಬಳಕೆದಾರರಿಗೆ ಹೋಗುತ್ತದೆ.
ಯುಪಿಐ ವಹಿವಾಟು ಬಳಕೆ ಆಗುತ್ತಿರುವುದು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. 2016ರಲ್ಲಿ ಮೊದಲ ಬಾರಿಗೆ ಯುಪಿಐ ಚಾಲನೆಗೆ ಬಂದಿತ್ತು. ಕೋವಿಡ್ ಕಾಲಘಟ್ಟದಲ್ಲಿ ಯುಪಿಐ ವಹಿವಾಟು ಬಹಳ ವ್ಯಾಪಕ ಬಳಕೆಗೆ ಬಂದಿತ್ತು. 2023ರಲ್ಲಿ 11,768 ಕೋಟಿ ರೂ ಮೊತ್ತದ ವಹಿವಾಟು ಯುಪಿಐನಲ್ಲಿ ಆಗಿರುವುದು ಗೊತ್ತಾಗಿದೆ. ಒಟ್ಟಾರೆ ನಡೆಯುವ ಹಣ ವಹಿವಾಟಿನಲ್ಲಿ ಯುಪಿಐನದ್ದು ಸಿಂಹಪಾಲು.
ಇದನ್ನೂ ಓದಿ: ಗೃಹಜ್ಯೋತಿ ಸ್ಕೀಮ್: ಕರೆಂಟ್ ಬಿಲ್ನಿಂದ ಆಧಾರ್ ಡೀಲಿಂಕ್ ಮಾಡುವುದು ಹೇಗೆ?
ಯುಪಿಐ ಸೇವೆ ಒದಗಿಸುವ ಪ್ರಮುಖ ಆ್ಯಪ್ಗಳಲ್ಲಿ ಫೋನ್ಪೆ ಅಗ್ರಸ್ಥಾನ ಇದೆ. ಗೂಗಲ್ ಪೇ ಮತ್ತು ಪೇಟಿಎಂ ನಂತರದ ಸ್ಥಾನದಲ್ಲಿವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ