ಭಾರತೀಯ ರಿಸರ್ವ್ ಬ್ಯಾಂಕ್ನಿಂದ (RBI) ರೆಪೋ ದರದ ಏರಿಕೆ ಮಾಡಿದ ಮೇಲೆ ಸಾಲ ಕೂಡ ದುಬಾರಿ ಆಗಿದೆ. ಏಕೆಂದರೆ ಹಲವು ಬ್ಯಾಂಕ್- ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಕಳೆದ ಕೆಲವು ವಾರಗಳಿಂದ ಬ್ಯಾಂಕ್ಗಳಿಂದ ಸಾಲದ ಮೇಲಿನ ಬಡ್ಡಿ ದರವನ್ನು ಪರಿಷ್ಕರಣೆ ಮಾಡಲಾಗಿದೆ. ಇಂಥ ಸನ್ನಿವೇಶದಲ್ಲಿ ಐದು ಬ್ಯಾಂಕ್ಗಳಾದ ಪಂಜಾಬ್ ನ್ಯಾಷನಲ್ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಬರೋಡ, ಬ್ಯಾಂಕ್ ಆಫ್ ಮಹಾರಾಷ್ಟ್ರ ಮತ್ತು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಿಂದ ಪರ್ಸನಲ್ ಲೋನ್ (ವೈಯಕ್ತಿಕ ಸಾಲ) ಮೇಲೆ ಬಡ್ಡಿ ದರ ಎಷ್ಟು ಎಂಬ ಬಗ್ಗೆ ಮಾಹಿತಿ ಇಲ್ಲಿದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ನಿಂದ ವಾರ್ಷಿಕವಾಗಿ ಶೇ 8.80ರಿಂದ 15.35ರ ಬಡ್ಡಿ ದರದಲ್ಲಿ ನೀಡಲಾಗಿದುತ್ತದೆ. ಉದಾಹರಣೆಗೆ, 5 ಲಕ್ಷ ರೂಪಾಯಿ ಸಾಲ ಪಡೆದಲ್ಲಿ ಐದು ವರ್ಷಗಳ ಅವಧಿಗೆ ಇಎಂಐ 10,331ರಿಂದ 11,987 ರೂಪಾಯಿ ಬರುತ್ತದೆ. ಇದರ ಹೊರತಾಗಿ ಒಟ್ಟಾರೆ ಸಾಲದ ಮೊತ್ತದ ಮೇಲೆ ಇಂತಿಷ್ಟು ಪ್ರಮಾಣದಲ್ಲಿ ಅಂತ ಪ್ರೊಸೆಸಿಂಗ್ ಶುಲ್ಕ ಆಗುತ್ತದೆ. ಪಿಎನ್ಬಿಯಿಂದ ಶೇ 1ರವರೆಗೆ ಬಡ್ಡಿ ದರ ಆಗುತ್ತದೆ. ಅಂದಹಾಗೆ ಬಡ್ಡಿ ದರವು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ. ಲಿಂಗ, ವಯಸ್ಸು, ಕ್ರೆಡಿಟ್ ಸ್ಕೋರ್ ಮತ್ತಿತರ ಅಂಶಗಳು ಬಡ್ಡಿ ದರ ವಿಚಾರದಲ್ಲಿ ಪರಿಣಾಮ ಬೀರುತ್ತದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶೇ 9.80ರಿಂದ 13.80ರ ದರದಲ್ಲಿ ಪರ್ಸನಲ್ ಲೋನ್ ದೊರೆಯುತ್ತದೆ. 5 ಲಕ್ಷ ರೂಪಾಯಿ ಸಾಲದ ಮೊತ್ತಕ್ಕೆ 5 ವರ್ಷಗಳ ಅವಧಿಗೆ 10,574ರಿಂದ 11,582 ರೂಪಾಯಿ ಇಎಣೈ ಬರುತ್ತದೆ. ಇದರ ಮೇಲೆ ಸಾಲದ ಮೊತ್ತಕ್ಕೆ ಶೇ 1ರಷ್ಟು ಪ್ರೊಸೆಸಿಂಗ್ ಶುಲ್ಕ ಬೀಳುತ್ತದೆ. ಎಸ್ಬಿಐನಿಂದ ಶೇ 1.5 ಅಥವಾ 15 ಸಾವಿರ ರೂಪಾಯಿ ಇವೆರಡರಲ್ಲಿ ಯಾವುದು ಕಡಿಮೆಯೋ ಅದನ್ನು ಪ್ರೊಸೆಸಿಂಗ್ ಶುಲ್ಕ ಲೆಕ್ಕ ಹಾಕಲಾಗುತ್ತದೆ.
ಇನ್ನು ಬ್ಯಾಂಕ್ ಆಫ್ ಬರೋಡದಿಂದ ಶೇ 9.20ರಿಂದ 16.55ರಷ್ಟು ವಾರ್ಷಿಕ ದರ ಇದೆ. 5 ಲಕ್ಷ ರೂಪಾಯಿ ಮೊತ್ತ, 5 ವರ್ಷದ ಅವಧಿಗೆ 10,428ರಿಂದ 12,306 ರೂಪಾಯಿ ಇಎಂಐ ಆಗುತ್ತದೆ. ಇದನ್ನು ಹೊರತುಪಡಿಸಿ ಶೇ 2ರಷ್ಟು ಅಥವಾ ಕನಿಷ್ಠ ಶುಲ್ಕ 1000 ರೂ. ಗರಿಷ್ಠ 10 ಸಾವಿರ ರೂ. ಆಗುತ್ತದೆ.
ಬ್ಯಾಂಕ್ ಮಹಾರಾಷ್ಟ್ರದಿಂದ ಶೇ 9.35ರಿಂದ ಶೇ 13.70 ಮಧ್ಯೆ ಪರ್ಸನಲ್ ಲೋನ್ ನೀಡಲಾಗುತ್ತದೆ. 5 ಲಕ್ಷ ರೂಪಾಯಿ ವೈಯಕ್ತಿಕ ಸಾಲಕ್ಕೆ 5 ವರ್ಷಗಳ ಅವಧಿಗೆ ಇಎಂಐ 10,464ರಿಂದ 11,557 ಬರುತ್ತದೆ. ಇದರ ಹೊರತಾಗಿ ಪ್ರೊಸೆಸಿಂಗ್ ಶುಲ್ಕ ಸಾಲದ ಮೊತ್ತದ ಮೇಲೆ ಶೇ 1ರಷ್ಟು ಆಗುತ್ತದೆ.
ಇದ್ದುದರಲ್ಲಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಬಡ್ಡಿ ಹೆಚ್ಚು. ಬಡ್ಡಿ ದರ ಶೇ 9.8ರಿಂದ 13.9ರ ಮಧ್ಯೆ ಇದೆ. 5 ಲಕ್ಷ ರೂಪಾಯಿ ಮೊತ್ತಕ್ಕೆ 5 ವರ್ಷದ ಅವಧಿಗೆ ಇಎಂಐ 10,574ರಿಂದ 11, 608 ಆಗುತ್ತದೆ.
ಇತರ ಬ್ಯಾಂಕ್ಗಳಾದ ಐಸಿಐಸಿಐ ಬ್ಯಾಂಕ್, ಕೊಟಕ್ ಮಹೀಂದ್ರಾ ಬ್ಯಾಂಕ್, ಎಚ್ಡಿಎಫ್ಸಿ ಬ್ಯಾಂಕ್ ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್ನಿಂದ ಈಚೆಗೆ ಡೆಪಾಸಿಟ್ ಮತ್ತು ಸಾಲಗಳ ಮೇಲಿನ ಬಡ್ಡಿ ದರ ಹೆಚ್ಚಿಸಲಾಗಿದೆ.
ಇದನ್ನೂ ಓದಿ: RBI: ರೆಪೋ ರೇಟ್ ಶೇ. 4.90ಕ್ಕೆ ಹೆಚ್ಚಿಸಿದ ಆರ್ಬಿಐ; ಬ್ಯಾಂಕ್ ಸಾಲದ ಬಡ್ಡಿ ದರವೂ ಏರಿಕೆ