AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೃಹ ಸಾಲದ ಇಎಂಐ ಬಗ್ಗೆ ಟೆನ್ಶನ್ ಮಾಡ್ಕೋಬೇಡಿ, ಹೊರೆಯಾಗುತ್ತಿದ್ರೆ ಈ ಸಲಹೆ ಪಾಲಿಸಿ

ಮನೆ ಕಟ್ಟುವ ಕನಸನ್ನು ನನಸು ಮಾಡಲು ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಯಲ್ಲಿ ಗೃಹಸಾಲವನ್ನು ಪಡೆಯುತ್ತಾರೆ. ಲಕ್ಷಾನುಗಟ್ಟಲೇ ರೂಪಾಯಿ ಸಾಲ ಪಡೆಯುವುದರಿಂದ ಆರ್ಥಿಕ ಹೊರೆಯಾಗುತ್ತದೆ. ಸಾಲದ ಕಂತುಗಳು ಕಟ್ಟಲಾಗದೇ ಒದ್ದಾಡುತ್ತಿದ್ದೀರಾ ಅಂತಾದ್ರೆ ಇಎಂಐ ಕಂತುಗಳ ಅವಧಿ ಹೆಚ್ಚಳ, ಮುಂಗಡ ಪಾವತಿ ಹಣದಲ್ಲಿ ಹೆಚ್ಚಳ, ಕಡಿಮೆ ಬಡ್ಡಿದರವಿರುವ ಬ್ಯಾಂಕ್ ಗೆ ಗೃಹ ಸಾಲ ವರ್ಗಾಯಿಸುವ ಮೂಲಕ ಇಎಂಐ ಹೊರೆಯನ್ನು ತಗ್ಗಿಸಬಹುದು.

ಗೃಹ ಸಾಲದ ಇಎಂಐ ಬಗ್ಗೆ ಟೆನ್ಶನ್ ಮಾಡ್ಕೋಬೇಡಿ, ಹೊರೆಯಾಗುತ್ತಿದ್ರೆ ಈ ಸಲಹೆ ಪಾಲಿಸಿ
ಸಾಂದರ್ಭಿಕ ಚಿತ್ರImage Credit source: DEV IMAGES/Moment/Getty Images
ಸಾಯಿನಂದಾ
|

Updated on:Oct 27, 2026 | 5:15 PM

Share

ಮುಖ್ಯಾಂಶಗಳು

  • ಮನೆ ಕಟ್ಟುವವರಿಗೆ ಗೃಹ ಸಾಲವು ಅತ್ಯಂತ ಉತ್ತಮ ಆಯ್ಕೆಯಾಗಿದೆ.
  • ದೊಡ್ಡ ಮೊತ್ತದ ಸಾಲವು ಆರ್ಥಿಕ ಹೊರೆಯಾಗುತ್ತದೆ.
  • ಇಎಂಐ ಮೊತ್ತ ಹೆಚ್ಚಿದರೆ ಈ ಟ್ರಿಕ್ಸ್ ಅನುಸರಿಸಿದರೆ ಹೊರೆ ಕಡಿಮೆಯಾಗುತ್ತದೆ.

ಒಂದೇ ಒಂದು ರೂಪಾಯಿ ಸಾಲ ಮಾಡದೇನೇ ಮನೆ ಕಟ್ಟಲು ಸಾಧ್ಯನಾ? ಹೀಗೊಂದು ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ಆದರೆ ಸಾಲ ಮಾಡದೇನೇ ಮನೆ ಕಟ್ಟಲು ಸಾಧ್ಯವಿಲ್ಲ. ನೀವೇನಾದ್ರೂ ಗೃಹ ಸಾಲ (Home Loan) ಮಾಡಿದ್ರೆ ಇಎಂಐ ಕಟ್ಟಲು ಒದ್ದಾಡುತ್ತಿರಬಹುದು. ನಿಮ್ಮ ಇಎಂಐ ಮೊತ್ತ ಹೆಚ್ಚಿದ್ದರೆ ಈ ಕೆಲವು ವಿಧಾನಗಳನ್ನು ಅನುಸರಿಸಿದರೆ ಆರ್ಥಿಕ ಹೊರೆಯನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಿಕೊಳ್ಳಲು ಸಾಧ್ಯವಿದೆ. ಅದೇಗೆ ಅಂತೀರಾ? ಅದಕ್ಕೆ ಇಲ್ಲಿದೆ ಉತ್ತರ.

ಇಎಂಐ ಮೊತ್ತ ಹೊರೆಯಾಗುತ್ತಿದ್ರೆ ಇಲ್ಲಿದೆ ಸಿಂಪಲ್ ಟಿಪ್ಸ್

ಮುಂಗಡ ಪಾವತಿ: ನಿಮ್ಮ ಬಳಿ ಹೆಚ್ಚುವರಿ ಹಣ ಅಥವಾ ವಾರ್ಷಿಕ ಬೋನಸ್ ಸಿಕ್ಕರೆ ಸಾಲದ ಅಸಲನ್ನು ಪಾವತಿ ಮಾಡಿ. ಅಸಲು ಕಡಿಮೆಯಾದ್ರೆ ಸಹಜವಾಗಿ ಬಡ್ಡಿದರವು ಕಡಿಮೆಯಾಗುತ್ತದೆ.

ಸಾಲದ ಅವಧಿ ವಿಸ್ತರಿಸಿಕೊಳ್ಳಿ: ನಿಮ್ಮ ಸಾಲದ ಮರುಪಾವತಿ ಅವಧಿ 10 ರಿಂದ 15 ವರ್ಷವಿದ್ದರೆ ನೀವು ಅದನ್ನು 20 ವರ್ಷಕ್ಕೆ ವಿಸ್ತರಿಸಿ. ಈ ಬಗ್ಗೆ ಸಾಲ ಪಡೆದಿರುವ ಬ್ಯಾಂಕ್ ಗಳಲ್ಲಿ ಮಾತನಾಡಿ. ಮರುಪಾವತಿಯ ಅವಧಿ ಹೆಚ್ಚಾದರೆ ತಿಂಗಳ ಇಎಂಐ ಮೊತ್ತ ಕಡಿಮೆಯಾಗುತ್ತದೆ.

ಬ್ಯಾಲೆನ್ಸ್ ಟ್ರಾನ್ಸ್‌ಫರ್ ಮಾಡಿ: ಬ್ಯಾಲೆನ್ಸ್ ಟ್ರಾನ್ಸ್‌ಫರ್ ಎನ್ನುವುದು ಕೂಡ ಗೃಹಸಾಲದ ಒತ್ತಡವನ್ನು ಕಡಿಮೆ ಮಾಡುತ್ತದೆ. ನೀವು ಸಾಲ ಪಡೆದುಕೊಂಡ ಬ್ಯಾಂಕ್‌ಗಿಂತ ಕಡಿಮೆ ಬಡ್ಡಿದರದಲ್ಲಿ ಗೃಹ ಸಾಲ ಸಿಗುವ ಇತರೆ ಬ್ಯಾಂಕುಗಳಿಗೆ ನಿಮ್ಮ ಗೃಹ ಸಾಲವನ್ನು ವರ್ಗಾಯಿಸಿಕೊಳ್ಳುವುದು ಉತ್ತಮ.

ಇಎಂಐ ಮೊತ್ತವನ್ನು ಹೆಚ್ಚಿಸಿಕೊಳ್ಳಿ: ನಿಮ್ಮ ಆದಾಯ ಹೆಚ್ಚಾದಂತೆ, ಪ್ರತಿ ತಿಂಗಳು ಪಾವತಿಸುವ ಇಎಂಐ ಮೊತ್ತವನ್ನು ಸ್ವಲ್ಪಮಟ್ಟಿಗೆ ಹೆಚ್ಚಿಸಿ. ಹೀಗೆ ಮಾಡುವುದರಿಂದ ಸಾಲದ ಅವಧಿ ಹಾಗೂ ಬಡ್ಡಿದರವು ಕಡಿಮೆಯಾಗುತ್ತದೆ.

ಬ್ಯಾಂಕ್ ಜತೆಗೆ ಸಂಧಾನ ಮಾಡಿಕೊಳ್ಳಿ: ಉತ್ತಮ ಕ್ರೆಡಿಟ್ ಸ್ಕೋರ್ ಹೊಂದಿದ್ದು, ನಿಯಮಿತವಾಗಿ ಇಎಂಐ ಪಾವತಿಸುತ್ತಿದ್ದರೆ ನಿಮಗೆ ಈ ಆಯ್ಕೆಯಿದೆ. ಬ್ಯಾಂಕ್ ಜತೆಗೆ ಬಡ್ಡಿ ದರ ಕಡಿಮೆ ಮಾಡುವಂತೆ ವಿನಂತಿಸಬಹುದಾಗಿದೆ. ಈ ಬಗ್ಗೆ ಬ್ಯಾಂಕ್ ಜತೆಗೆ ಮಾತುಕತೆ ನಡೆಸಿ ಆರ್ಥಿಕ ಹೊರೆ ಮಾಡಿಕೊಳ್ಳಿ.

ಇದನ್ನೂ ಓದಿ: ಸಾಲದ ಹೊರೆ ಕಡಿಮೆಯಾಗ್ಬೇಕು ಅಂದ್ರೆ ಈ ಕೆಲ್ಸಗಳನ್ನು ಮೊದ್ಲು ಮಾಡಿ

ಸಾಮಾನ್ಯವಾಗಿ ಕೇಳುವ ಪ್ರಶ್ನೆ ಮತ್ತು ಉತ್ತರ (FAQs)

ಪ್ರಶ್ನೆ: ಗೃಹ ಸಾಲವು ಉತ್ತಮ ಆಯ್ಕೆಯೇ?

ಉತ್ತರ: ಮನೆ ಕಟ್ಟುವವರಿಗೆ ಗೃಹ ಸಾಲವು ಅತ್ಯಂತ ಉತ್ತಮ ಆಯ್ಕೆಯಾಗಿದೆ. ಇತರೆ ಸಾಲಗಳಿಗೆ ಹೋಲಿಸಿದರೆ ಈ ಸಾಲದ ಬಡ್ಡಿ ದರವು ಕಡಿಮೆ ಇರುತ್ತದೆ.

ಪ್ರಶ್ನೆ: ಗೃಹ ಸಾಲದ ಇಎಂಐ ಗರಿಷ್ಟ ಮೊತ್ತವು ಸಂಬಳದ ಎಷ್ಟು ಭಾಗವಿದ್ದರೆ ಉತ್ತಮ?

ಉತ್ತರ: ಗೃಹ ಸಾಲದ ಇಎಂಐ ಗರಿಷ್ಟ ಮೊತ್ತವು ನಿಮ್ಮ ಸಂಬಳದ ಶೇಕಡಾ 40ರ ಒಳಗಿದ್ದರೆ ಅದು ಅತ್ಯಂತ ಸುರಕ್ಷಿತ ಹಾಗೂ ಉತ್ತಮ ಮೊತ್ತವಾಗಿದೆ.

ಇಎಂಐ ಮೊತ್ತವು ಹೊರೆಯಾಗುತ್ತಿದ್ದರೆ ಏನು ಮಾಡಬೇಕು?

ಇಎಂಐ ಕಂತುಗಳ ಅವಧಿ ಹೆಚ್ಚಳ, ಮುಂಗಡ ಪಾವತಿ ಹಣದಲ್ಲಿ ಹೆಚ್ಚಳ, ಕಡಿಮೆ ಬಡ್ಡಿದರವಿರುವ ಬ್ಯಾಂಕ್ ಗೆ ಗೃಹ ಸಾಲ ವರ್ಗಾಯಿಸುವ ಮೂಲಕ ಈ ಹೊರೆ ಕಡಿಮೆ ಮಾಡಿಕೊಳ್ಳಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:15 pm, Tue, 27 October 26

Follow Us
ಸಾಯಿನಂದಾ
ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
19 ವರ್ಷದ ಇಬ್ಬರು ವಿದ್ಯಾರ್ಥಿನಿಯರು ರಸ್ತೆ ಅಪಘಾತದಲ್ಲಿ ಬಲಿ
19 ವರ್ಷದ ಇಬ್ಬರು ವಿದ್ಯಾರ್ಥಿನಿಯರು ರಸ್ತೆ ಅಪಘಾತದಲ್ಲಿ ಬಲಿ
ಚಳ್ಳಕೆರೆ ಬಳಿ ಡಿವೈಡರ್‌ಗೆ ಡಿಕ್ಕಿ ಹೊಡೆದ ಸಾರಿಗೆ ಬಸ್: 42 ಮಂದಿ ಪಾರು
ಚಳ್ಳಕೆರೆ ಬಳಿ ಡಿವೈಡರ್‌ಗೆ ಡಿಕ್ಕಿ ಹೊಡೆದ ಸಾರಿಗೆ ಬಸ್: 42 ಮಂದಿ ಪಾರು
ಸ್ಟಿಂಗ್ ಪ್ರಕರಣ: ಪೊಲೀಸರಿಗೆ ಮೊಬೈಲ್ ನೀಡಲು ಕೃಪಾ ಆಳ್ವ ನಿರಾಕರಣೆ!
ಸ್ಟಿಂಗ್ ಪ್ರಕರಣ: ಪೊಲೀಸರಿಗೆ ಮೊಬೈಲ್ ನೀಡಲು ಕೃಪಾ ಆಳ್ವ ನಿರಾಕರಣೆ!
ಪ್ರಧಾನಿ ಮೋದಿ ಆಡಳಿತದ ಯಶೋಗಾಥೆ, ಯೋಜನೆಗಳ ಅಧ್ಯಯನ
ಪ್ರಧಾನಿ ಮೋದಿ ಆಡಳಿತದ ಯಶೋಗಾಥೆ, ಯೋಜನೆಗಳ ಅಧ್ಯಯನ
ವೀರಾಂಜನೇಯ ವಿಗ್ರಹಕ್ಕೆ ಲೇಪಿಸಿದ ಬೆಣ್ಣೆ 17 ದಿನ ಕಳೆದರೂ ಕರಗಿಲ್ಲ
ವೀರಾಂಜನೇಯ ವಿಗ್ರಹಕ್ಕೆ ಲೇಪಿಸಿದ ಬೆಣ್ಣೆ 17 ದಿನ ಕಳೆದರೂ ಕರಗಿಲ್ಲ
‘ಮಾಡಿರೋದೇ ಒಂದು ಸಿನಿಮಾ, ಗಂಡಸರ ಹಾಗೆ ನಡೆದುಕೋ; ಜಗ್ಗುಗೆ ಮಂಜು ಅವಾಜ್
‘ಮಾಡಿರೋದೇ ಒಂದು ಸಿನಿಮಾ, ಗಂಡಸರ ಹಾಗೆ ನಡೆದುಕೋ; ಜಗ್ಗುಗೆ ಮಂಜು ಅವಾಜ್
ಸೆಂಟ್ರಲ್ ಜೈಲಿನ ಬಳಿ ನಿಷಿದ್ಧ ವಸ್ತುಗಳು: ಕೈದಿಗಳಿಗೆ ತಲುಪಿಸುವ ಯತ್ನ ವಿಫಲ
ಸೆಂಟ್ರಲ್ ಜೈಲಿನ ಬಳಿ ನಿಷಿದ್ಧ ವಸ್ತುಗಳು: ಕೈದಿಗಳಿಗೆ ತಲುಪಿಸುವ ಯತ್ನ ವಿಫಲ
ವೃತ್ತಿಯಲ್ಲಿ ಬಡ್ತಿ, ಆರ್ಥಿಕ ಪ್ರಗತಿ ಹಾಗೂ ಅಪವಾದಗಳಿಂದ ಮುಕ್ತಿ
ವೃತ್ತಿಯಲ್ಲಿ ಬಡ್ತಿ, ಆರ್ಥಿಕ ಪ್ರಗತಿ ಹಾಗೂ ಅಪವಾದಗಳಿಂದ ಮುಕ್ತಿ
ಧರ್ಮಸ್ಥಳಕ್ಕೆ ಭೇಟಿ ನೀಡಿದ ಕುಮಾರಸ್ವಾಮಿ ಕುಟುಂಬಕ್ಕೆ ಪೂರ್ಣಕುಂಭ ಸ್ವಾಗತ
ಧರ್ಮಸ್ಥಳಕ್ಕೆ ಭೇಟಿ ನೀಡಿದ ಕುಮಾರಸ್ವಾಮಿ ಕುಟುಂಬಕ್ಕೆ ಪೂರ್ಣಕುಂಭ ಸ್ವಾಗತ
ಒಂದೇ ಪ್ರಕರಣ, ಎರಡು FIR: ಮೈಸೂರಿನಲ್ಲಿ ಎರಡು ಕೋಮಿನ ಮಧ್ಯೆ ನಡೆದಿದ್ದೇನು?
ಒಂದೇ ಪ್ರಕರಣ, ಎರಡು FIR: ಮೈಸೂರಿನಲ್ಲಿ ಎರಡು ಕೋಮಿನ ಮಧ್ಯೆ ನಡೆದಿದ್ದೇನು?