Personal loan: ಎಸ್​ಬಿಐ ಗ್ರಾಹಕರಿಗೆ ಪ್ರೀ ಅಪ್ರೂವ್ಡ್ ವೈಯಕ್ತಿಕ ಸಾಲದ ಮೇಲೆ ವಿಶೇಷ ವಿನಾಯಿತಿ; ಪಡೆಯುವುದು ಹೇಗೆ?

| Updated By: Srinivas Mata

Updated on: Dec 09, 2021 | 2:51 PM

ಪ್ರೀ ಅಪ್ರೂವ್ಡ್ ವೈಯಕ್ತಿಕ ಸಾಲವನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಪಡೆಯುವುದು ಹೇಗೆ ಎಂಬುದರ ಹಂತಹಂತವಾದ ವಿವರಣೆ ಈ ಲೇಖನದಲ್ಲಿ ಇದೆ.

Personal loan: ಎಸ್​ಬಿಐ ಗ್ರಾಹಕರಿಗೆ ಪ್ರೀ ಅಪ್ರೂವ್ಡ್ ವೈಯಕ್ತಿಕ ಸಾಲದ ಮೇಲೆ ವಿಶೇಷ ವಿನಾಯಿತಿ; ಪಡೆಯುವುದು ಹೇಗೆ?
ಸಾಂದರ್ಭಿಕ ಚಿತ್ರ
Follow us on

ತುರ್ತು ಹಣಕಾಸು ಅಗತ್ಯ ಇರುವ ಸ್ಟೇಟ್ ಬ್ಯಾಂಕ್​ ಆಫ್ ಇಂಡಿಯಾ (State Bank Of India) ಗ್ರಾಹಕರು ಈಗ ಕೇವಲ ನಾಲ್ಕು ಕ್ಲಿಕ್‌ಗಳಲ್ಲಿ ಪೂರ್ವ-ಅನುಮೋದಿತ (Pre-approved) ವೈಯಕ್ತಿಕ ಸಾಲ(Personal Loan)ಗಳನ್ನು ಪಡೆಯಬಹುದು. ಅದು ಕೂಡ ಈ ಸೇವೆಯು ದಿನದ 24 ಗಂಟೆಗಳು ಲಭ್ಯ ಇವೆ.

ಅರ್ಜಿ ಸಲ್ಲಿಸುವುದು ಹೇಗೆ ಎಂಬ ವಿವರ ಇಲ್ಲಿದೆ:
ಹಂತ 1: YONOಗೆ ಲಾಗಿನ್ ಆಗಬೇಕು

ಹಂತ 2: Avail Now ಎಂಬುದರ ಮೇಲೆ ಕ್ಲಿಕ್ ಮಾಡಬೇಕು

ಹಂತ 3: ಸಾಲದ ಮೊತ್ತ ಮತ್ತು ಅವಧಿಯನ್ನು ಆಯ್ಕೆ ಮಾಡಬೇಕು

ಹಂತ 4: ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ ಸ್ವೀಕರಿಸಿದ OTP ಅನ್ನು ನಮೂದಿಸಬೇಕು -> ಜಮೆ ಆಗಬೇಕಾದ ಮೊತ್ತ ಹಾಕಬೇಕು

ಅರ್ಹತೆ:
“PAPL<space><ಕೊನೆಯ 4 ಅಂಕಿಗಳ SBI ಉಳಿತಾಯ ಬ್ಯಾಂಕ್ ಖಾತೆ ಸಂಖ್ಯೆ>>” ಗ್ರಾಹಕರು 567676ಗೆ SMS ಮಾಡಿ, ಅರ್ಹತೆಯನ್ನು ಪರಿಶೀಲಿಸಬಹುದು.

ಬಡ್ಡಿ ದರ:
ಅತ್ಂತ ಕಡಿಮೆ ಬಡ್ಡಿ ದರ ಶೇ 9.60ರಿಂದ ಪ್ರಾರಂಭವಾಗುತ್ತದೆ

ವೈಶಿಷ್ಟ್ಯಗಳು ಮತ್ತು ಪ್ರಯೋಜನಗಳು:
ಹಬ್ಬದ ಕೊಡುಗೆ: 31ನೇ ಜನವರಿ 2022ರವರೆಗೆ ಪ್ರೊಸೆಸಿಂಗ್ ಶುಲ್ಕಗಳಲ್ಲಿ ಶೇ 100ರಷ್ಟು ಮನ್ನಾ

ಕೇವಲ 4 ಕ್ಲಿಕ್‌ಗಳಲ್ಲಿ ಸಾಲಗಳ ಶೀಘ್ರ ಪ್ರಕ್ರಿಯೆ ಮತ್ತು ವಿತರಣೆ

ಯಾವುದೇ ಭೌತಿಕ ದಾಖಲೆಗಳ ಅಗತ್ಯ ಇಲ್ಲ

YONO ಮೂಲಕ 24\7 ಲಭ್ಯತೆ

ಬ್ಯಾಂಕ್​ ಶಾಖೆಗೆ ಭೇಟಿ ನೀಡಬೇಕಿಲ್ಲ

ಇದನ್ನೂ ಓದಿ: SBI Bank Charges: ಯುಪಿಐ, ರುಪೇ ಡೆಬಿಟ್ ಕಾರ್ಡ್, ಮೂಲ ಉಳಿತಾಯ ಖಾತೆಗಳ ಶುಲ್ಕಗಳ ಬಗ್ಗೆ ಎಸ್​ಬಿಐ ಸ್ಪಷ್ಟನೆ