AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

SBI Bank Charges: ಯುಪಿಐ, ರುಪೇ ಡೆಬಿಟ್ ಕಾರ್ಡ್, ಮೂಲ ಉಳಿತಾಯ ಖಾತೆಗಳ ಶುಲ್ಕಗಳ ಬಗ್ಗೆ ಎಸ್​ಬಿಐ ಸ್ಪಷ್ಟನೆ

ಮೂಲ ಉಳಿತಾಯ ಖಾತೆ, ಡೆಬಿಟ್ ಕಾರ್ಡ್, ರುಪೇ ಕಾರ್ಡ್, ಯುಪಿಐ ಕಾರ್ಡ್​ಗಳ ಶುಲ್ಕಗಳ ಬಗ್ಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು ಸ್ಪಷ್ಟನೆ ನೀಡಿದೆ.

SBI Bank Charges: ಯುಪಿಐ, ರುಪೇ ಡೆಬಿಟ್ ಕಾರ್ಡ್, ಮೂಲ ಉಳಿತಾಯ ಖಾತೆಗಳ ಶುಲ್ಕಗಳ ಬಗ್ಗೆ ಎಸ್​ಬಿಐ ಸ್ಪಷ್ಟನೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: shruti hegde

Updated on: Nov 25, 2021 | 8:04 AM

ಭಾರತದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಬೇಸಿಕ್ ಸೇವಿಂಗ್ಸ್ ಬ್ಯಾಂಕ್ ಠೇವಣಿ (ಬಿಎಸ್‌ಬಿಡಿ) ಖಾತೆಗಳಿಗೆ ಯಾವುದೇ ವಹಿವಾಟು ಶುಲ್ಕವನ್ನು ವಿಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಡಿಜಿಟಲ್ ವಹಿವಾಟಿನ ಮರುಪಾವತಿಯ ಬಗ್ಗೆ ಕೇಳಿಬಂದ ಆಕ್ಷೇಪಣೆಗಳಿಗೆ ಈ ಪ್ರತಿಕ್ರಿಯೆಯೊಂದಿಗೆ ಬಂದಿದೆ. ಯೂನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (ಯುಪಿಐ) ಮತ್ತು ರುಪೇ ಡೆಬಿಟ್ ಕಾರ್ಡ್‌ಗಳ ಮೂಲಕ ಮಾಡಿದ ವಹಿವಾಟು ಸೇರಿದಂತೆ ನಿಮ್ಮ ಖಾತೆಯಿಂದ ಯಾವುದೇ ವಹಿವಾಟು ಶುಲ್ಕವನ್ನು ವಿಧಿಸಲಾಗುವುದಿಲ್ಲ ಎಂದು ಎಸ್‌ಬಿಐ ಹೇಳಿಕೆಯಲ್ಲಿ ತಿಳಿಸಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 16 ಕೋಟಿಗೂ ಹೆಚ್ಚು ಬೇಸಿಕ್ ಸೇವಿಂಗ್ಸ್ ಬ್ಯಾಂಕ್ ಠೇವಣಿ ಖಾತೆಗಳನ್ನು ಹೊಂದಿದೆ. ಅದರಲ್ಲಿ ಹಣಕಾಸು ಸೇರ್ಪಡೆ (Financial Inclusion) ಗ್ರಾಹಕರ ಮೂಲವು ಸುಮಾರು 14 ಕೋಟಿ ಎಂದು ಬ್ಯಾಂಕ್ ಹೇಳಿದೆ.

ಐಐಟಿ ಅಧ್ಯಯನವನ್ನು ಉಲ್ಲೇಖಿಸಿ ಇತ್ತೀಚೆಗೆ ಪ್ರಕಟವಾದ ಮಾಧ್ಯಮ ವರದಿಯ ಪ್ರಕಾರ, 2017ರ ಏಪ್ರಿಲ್ ಮತ್ತು 2019ರ ಡಿಸೆಂಬರ್‌ ಮಧ್ಯೆ ಡಿಜಿಟಲ್ ಪಾವತಿಗಾಗಿ ಪ್ರಧಾನ ಮಂತ್ರಿ ಜನ್ ಧನ್ ಯೋಜನೆ (ಪಿಎಂಜೆಡಿವೈ) ಖಾತೆದಾರರಿಂದ ವಿಧಿಸಲಾದ 164 ಕೋಟಿ ರೂಪಾಯಿ ಅನಗತ್ಯ ಶುಲ್ಕವನ್ನು ಎಸ್​ಬಿಐ ಇನ್ನೂ ಹಿಂತಿರುಗಿಸಬೇಕಾಗಿದೆ ಎಂದು ಹೇಳಲಾಗಿದೆ. UPI ಮತ್ತು ರುಪೇ ಕಾರ್ಡ್‌ಗಳ ಮೂಲಕ ವಹಿವಾಟುಗಳಿಗಾಗಿ ಸರ್ಕಾರದ ಸೂಚನೆಗಳ ಮೇರೆಗೆ ಬ್ಯಾಂಕ್ ಈ ಖಾತೆದಾರರಿಗೆ ಕೇವಲ 90 ಕೋಟಿ ರೂಪಾಯಿಗಳನ್ನು ಹಿಂತಿರುಗಿಸಿದೆ ಎಂದು ಅಧ್ಯಯನವು ಉಲ್ಲೇಖಿಸಿದೆ. 2017 ಏಪ್ರಿಲ್​ನಿಂದ 2020ರ ಸೆಪ್ಟೆಂಬರ್ ಅವಧಿಯಲ್ಲಿ ಪ್ರಧಾನ ಮಂತ್ರಿ ಜನ್ ಧನ್ ಯೋಜನೆಯಡಿ BSBD ಖಾತೆಯ ಗ್ರಾಹಕರ ಮೇಲೆ ಪ್ರತಿ ವಹಿವಾಟಿಗೆ 17.70 ರೂಪಾಯಿಗಳನ್ನು ವಿಧಿಸುವ ಮೂಲಕ ಕನಿಷ್ಠ 14 ಕೋಟಿ ರೂಪಾಯಿ UPI/RPay ವಹಿವಾಟುಗಳಿಗೆ ಎಸ್​ಬಿಐ 254 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದೆ ಎಂದು ಅದು ಹೇಳಿದೆ.

ಇದಕ್ಕೆ ಪ್ರತಿಕ್ರಿಯೆಯಾಗಿ ಎಸ್​ಬಿಐ ಮಂಗಳವಾರ, ನವೆಂಬರ್ 23ರಂದು ಹೇಳಿಕೆಯಲ್ಲಿ, “ಯುನಿಫೈಡ್ ಪೇಮೆಂಟ್ ಇಂಟರ್​ಫೇಸ್ (UPI) ಮತ್ತು RuPay ಡೆಬಿಟ್ ಕಾರ್ಡ್‌ಗಳನ್ನು ಬಳಸುವ ವಹಿವಾಟು ಸೇರಿದಂತೆ ಡಿಜಿಟಲ್ ವಹಿವಾಟುಗಳಿಗೆ BSBD ಗ್ರಾಹಕರು ಯಾವುದೇ ಶುಲ್ಕವನ್ನು ಪಾವತಿಸುವುದಿಲ್ಲ ಎಂದು ನಾವು ಪುನರುಚ್ಚರಿಸುತ್ತೇವೆ ಎಂದಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಹೇಳಿಕೆ ಹೀಗಿದೆ: ಕಳೆದ ಮೂರು ವರ್ಷಗಳಲ್ಲಿ 4 ಕೋಟಿಗೂ ಹೆಚ್ಚು ಗ್ರಾಹಕರು ದಾಖಲಾಗಿದ್ದಾರೆ

ಬ್ಯಾಂಕ್ ಮಿತ್ರರಿಂದ ಈ ಸಾಮಾಜಿಕ ಭದ್ರತಾ ಯೋಜನೆಗಳಲ್ಲಿ 01.01.2020ರಿಂದ ತನ್ನ ಗ್ರಾಹಕರಿಗೆ ಎಲ್ಲ ಡಿಜಿಟಲ್ ವಹಿವಾಟುಗಳನ್ನು ಉಚಿತವಾಗಿ ನೀಡಿದೆ. ಇದಲ್ಲದೆ, ಬ್ಯಾಂಕ್ ತನ್ನ ಎಲ್ಲಾ ಉಳಿತಾಯ ಬ್ಯಾಂಕ್ ಖಾತೆದಾರರಿಗೆ SMS ಸೇವೆಗಳು ಮತ್ತು ಕನಿಷ್ಠ ಬ್ಯಾಲೆನ್ಸ್ ನಿರ್ವಹಣೆಯ ಮೇಲಿನ ಶುಲ್ಕವನ್ನು ಸಹ ಮನ್ನಾ ಮಾಡಿದೆ.

2017 ಏಪ್ರಿಲ್​ನಿಂದ 2019ರ ಡಿಸೆಂಬರ್ ನಡುವಿನ ಡಿಜಿಟಲ್ ವಹಿವಾಟಿಗೆ ಗ್ರಾಹಕರಿಂದ ವಸೂಲಿ ಮಾಡಿದ ಶುಲ್ಕವನ್ನು ಶುಲ್ಕವನ್ನು ಎಸ್​ಬಿಐ ಮರುಪಾವತಿ ಮಾಡಿಲ್ಲ ಎಂದು ಆರೋಪಿಸಿ 22.11.2021ರಂದು ಸುದ್ದಿ ಲೇಖನವನ್ನು ಉಲ್ಲೇಖಿಸಿ ನಾವು ಈ ಕೆಳಗಿನಂತೆ ಸಲ್ಲಿಸುತ್ತೇವೆ:

BC ಚಾನೆಲ್ ಹೊರಗುತ್ತಿಗೆ ಮಾದರಿಯಾಗಿದ್ದು, ಗ್ರಾಹಕರಿಗೆ ಎಲ್ಲ ಸೇವೆಗಳನ್ನು ಬ್ಯಾಂಕ್ ಮಿತ್ರರು ಸಹಾಯದ ಕ್ರಮದಲ್ಲಿ ಒದಗಿಸುತ್ತಾರೆ. ಗ್ರಾಹಕರು ಆಧಾರ್ ಆಧಾರಿತ ವಹಿವಾಟುಗಳನ್ನು (AePS), ಕಾರ್ಡ್ ಮತ್ತು PIN ಆಧಾರಿತ ವ್ಯವಹಾರಗಳನ್ನು ಮೈಕ್ರೋ ATM ಗಳಲ್ಲಿ ಮತ್ತು ಈ CSP ಔಟ್‌ಲೆಟ್‌ಗಳಲ್ಲಿ ಹಣ ವರ್ಗಾವಣೆ ವಹಿವಾಟುಗಳನ್ನು ಮಾಡಬಹುದು. BC/CSP ಗಳಿಗೆ ಮಾಸಿಕ ನಿಗದಿತ ಕಮಿಷನ್ ಹೊರತಾಗಿ ಪ್ರತಿ ವಹಿವಾಟಿಗೆ ಕಮಿಷನ್ ನೀಡಲಾಗುತ್ತಿದೆ. ಹೆಚ್ಚುವರಿಯಾಗಿ, ಮೈಕ್ರೋ ಎಟಿಎಂ ಆಧಾರಿತ ವಹಿವಾಟುಗಳು ಮತ್ತು ಎನ್‌ಪಿಸಿಐಗೆ ಹಣ ವರ್ಗಾವಣೆ ವಹಿವಾಟುಗಳಲ್ಲಿ ಎಇಪಿಎಸ್, ಕಾರ್ಡ್ + ಪಿನ್‌ಗಾಗಿ ಇಂಟರ್‌ಚೇಂಜ್ ಶುಲ್ಕವನ್ನು ಬ್ಯಾಂಕ್ ಪಾವತಿಸಬೇಕಾಗುತ್ತದೆ. ಅಂತಹ ವಹಿವಾಟಿನ ಸರಾಸರಿ ವೆಚ್ಚವು ರೂ. 12.72, ಇದು ಬ್ಯಾಂಕ್ ಪಡೆದುಕೊಳ್ಳುತ್ತದೆ.

ಗ್ರಾಹಕರಿಗೆ ಪೂರ್ವ ಸೂಚನೆಯೊಂದಿಗೆ RBI ಮಾರ್ಗಸೂಚಿಗಳಿಗೆ ಅನುಗುಣವಾಗಿ BC ಚಾನೆಲ್ 15.06.2016ರಿಂದ BSBD ಖಾತೆಗಳಲ್ಲಿ ಮೊದಲ ನಾಲ್ಕು ವಿಥ್​ಡ್ರಾ ಮೀರಿದರೆ ಶುಲ್ಕಗಳನ್ನು ಬ್ಯಾಂಕ್ ಪರಿಚಯಿಸಿತು. BSBD ಗ್ರಾಹಕರು ಸಾಮಾನ್ಯವಾಗಿ ಒಂದು ತಿಂಗಳಲ್ಲಿ ನಾಲ್ಕಕ್ಕಿಂತ ಹೆಚ್ಚು ವಿಥ್​ಡ್ರಾ ಅಗತ್ಯವಿಲ್ಲ, ಮತ್ತು ಅಗತ್ಯವಿದ್ದರೆ ಸಹ ಯಾವುದೇ ವೆಚ್ಚವಿಲ್ಲದೆ ಶಾಖೆಯಿಂದ ಮಾಡಬಹುದಾಗಿದೆ.

ಡಿಜಿಟಲ್ ವಹಿವಾಟುಗಳ ಮೇಲೆ 01.01.2020ರಂದು ಅಥವಾ ನಂತರ ಸಂಗ್ರಹಿಸಿದ ಶುಲ್ಕಗಳನ್ನು ಮರುಪಾವತಿಸಲು ಮತ್ತು ಅಂತಹ ಭವಿಷ್ಯದ ವಹಿವಾಟುಗಳ ಮೇಲೆ ಶುಲ್ಕವನ್ನು ವಿಧಿಸಬೇಡಿ ಎಂದು 30.08.2020ರಂದು CBDT ಬ್ಯಾಂಕ್‌ಗಳಿಗೆ ಸಲಹೆ ನೀಡಿತು. ಅದರಂತೆ, 01.01.2020 ಮತ್ತು 14.09.2020ರ ಅವಧಿಯಲ್ಲಿ ಗ್ರಾಹಕರಿಂದ ವಸೂಲಿ ಮಾಡಿದ್ದ ಬ್ಯಾಂಕ್ ಶುಲ್ಕವನ್ನು ರೂ. 90.20 ಕೋಟಿ ರೂಪಾಯಿ ಹಿಂತಿರುಗಿಸಲಾಯಿತು. ಬ್ಯಾಂಕ್ ಮಾತ್ರ BC ಚಾನಲ್‌ನಲ್ಲಿ ನಾಲ್ಕು ಉಚಿತ ನಗದು ಹಿಂಪಡೆಯುವಿಕೆಗಳನ್ನು ಮೀರಿ ಶುಲ್ಕ ವಿಧಿಸುತ್ತಿದೆ. ಆದರೆ ಡಿಜಿಟಲ್ ಚಾನಲ್‌ಗಳನ್ನು ಬಳಸಿದರೆ ಯಾವುದೇ ಶುಲ್ಕಗಳಿಲ್ಲ. ‘ಕಡಿಮೆ ನಗದು’ ಆರ್ಥಿಕತೆಯತ್ತ ಡಿಜಿಟಲ್ ವಹಿವಾಟುಗಳನ್ನು ಉತ್ತೇಜಿಸುವುದು ಇದರ ಉದ್ದೇಶವಾಗಿದೆ.

ಯುನಿಫೈಡ್ ಪೇಮೆಂಟ್ ಇಂಟರ್‌ಫೇಸ್ (UPI) ಮತ್ತು RuPay ಡೆಬಿಟ್ ಕಾರ್ಡ್‌ಗಳನ್ನು ಬಳಸುವ ವಹಿವಾಟು ಸೇರಿದಂತೆ ಡಿಜಿಟಲ್ ವಹಿವಾಟುಗಳಿಗೆ BSBD ಗ್ರಾಹಕರು ಯಾವುದೇ ಶುಲ್ಕವನ್ನು ಪಾವತಿಸುವುದಿಲ್ಲ ಎಂದು ನಾವು ಪುನರುಚ್ಚರಿಸುತ್ತೇವೆ. -ಹೀಗೆ ಎಸ್​ಬಿಐ ತಿಳಿಸಿದೆ.

ಇದನ್ನೂ ಓದಿ: SBI Pensioners Facility: ಪೆನ್ಷನ್​ದಾರರಿಗೆ ಎಸ್​ಬಿಐನಿಂದ ವಿಶೇಷ ವ್ಯವಸ್ಥೆ; ಈಗ ಸಲ್ಲಿಸಬಹುದು ವಿಡಿಯೋ ಜೀವಿತ ಪ್ರಮಾಣಪತ್ರ

ಆಡಿದ ಮಾತಿಗೆ ಕ್ಷಮೆ ಯಾಚಿಸಿದ ಮಧ್ಯಪ್ರದೇಶದ ಮಂತ್ರಿ ವಿಜಯ್ ಶಾ
ಆಡಿದ ಮಾತಿಗೆ ಕ್ಷಮೆ ಯಾಚಿಸಿದ ಮಧ್ಯಪ್ರದೇಶದ ಮಂತ್ರಿ ವಿಜಯ್ ಶಾ
ಒಪ್ಪಿಕೊಂಡಷ್ಟು ಅನುದಾನವನ್ನು ಕೇಂದ್ರ ಬಿಡುಗಡೆ ಮಾಡಬೇಕು: ಸಿದ್ದರಾಮಯ್ಯ
ಒಪ್ಪಿಕೊಂಡಷ್ಟು ಅನುದಾನವನ್ನು ಕೇಂದ್ರ ಬಿಡುಗಡೆ ಮಾಡಬೇಕು: ಸಿದ್ದರಾಮಯ್ಯ
ರಾಮನ ಹಾಡು ಹಾಡಿ ಮಗುವ ಮಲಗಿಸಿದ ನಟಿ ಹರಿಪ್ರಿಯಾ, ವಿಡಿಯೋ ನೋಡಿ
ರಾಮನ ಹಾಡು ಹಾಡಿ ಮಗುವ ಮಲಗಿಸಿದ ನಟಿ ಹರಿಪ್ರಿಯಾ, ವಿಡಿಯೋ ನೋಡಿ
ಸಿಂದಗಿ ಡಿಪೋದಲ್ಲಿ ಡೀಸೆಲ್​​ ಸಮಸ್ಯೆ, ನಿಂತಲ್ಲೇ ನಿಂತ ಬಸ್​ಗಳು..!
ಸಿಂದಗಿ ಡಿಪೋದಲ್ಲಿ ಡೀಸೆಲ್​​ ಸಮಸ್ಯೆ, ನಿಂತಲ್ಲೇ ನಿಂತ ಬಸ್​ಗಳು..!
ರೌಡಿಶೀಟರ್ ಎಂದ ಮಾತ್ರಕ್ಕೆ ಎಲ್ಲರೂ ರೌಡಿಶೀಟರ್​​ಗಲ್ಲ: ಸಿಟಿ ರವಿ
ರೌಡಿಶೀಟರ್ ಎಂದ ಮಾತ್ರಕ್ಕೆ ಎಲ್ಲರೂ ರೌಡಿಶೀಟರ್​​ಗಲ್ಲ: ಸಿಟಿ ರವಿ
ಅನೀಸುದ್ದೀನ್ ಹೆಸರಿನ ವ್ಯಕ್ತಿಯಿಂದ ಎಕ್ಸ್ ಹ್ಯಾಂಡಲ್​ನಲ್ಲಿ ಪೋಸ್ಟ್​
ಅನೀಸುದ್ದೀನ್ ಹೆಸರಿನ ವ್ಯಕ್ತಿಯಿಂದ ಎಕ್ಸ್ ಹ್ಯಾಂಡಲ್​ನಲ್ಲಿ ಪೋಸ್ಟ್​
ಭಾರತದ ಷರತ್ತುಗಳನ್ನು ಪ್ರಧಾನಿ ಮೋದಿ ಸ್ಪಷ್ಟಪಡಿಸಿದ್ದಾರೆ: ಯದುವೀರ್
ಭಾರತದ ಷರತ್ತುಗಳನ್ನು ಪ್ರಧಾನಿ ಮೋದಿ ಸ್ಪಷ್ಟಪಡಿಸಿದ್ದಾರೆ: ಯದುವೀರ್
ಮೈಸೂರು ಕ್ರಿಕೆಟ್ ಸ್ಟೇಡಿಯಂ ಬಗ್ಗೆ ಸಂಸದ ಯದುವೀರ್ ಮಹತ್ವದ ಮಾಹಿತಿ
ಮೈಸೂರು ಕ್ರಿಕೆಟ್ ಸ್ಟೇಡಿಯಂ ಬಗ್ಗೆ ಸಂಸದ ಯದುವೀರ್ ಮಹತ್ವದ ಮಾಹಿತಿ
ಮಳೆಗಾಲವನ್ನು ನೆನಪಿಸಿಕೊಳ್ಳಲೂ ಸಾಯಿ ಲೇಔಟ್ ಜನ ತಯಾರಿಲ್ಲ!
ಮಳೆಗಾಲವನ್ನು ನೆನಪಿಸಿಕೊಳ್ಳಲೂ ಸಾಯಿ ಲೇಔಟ್ ಜನ ತಯಾರಿಲ್ಲ!
ಸೋಫಿಯಾ ಮಾವನ ಮನೆ ಮೇಲೆ ದಾಳಿ ನಡೆಸುವ ಮನಸ್ಥಿತಿ ಕನ್ನಡಿಗರು ಕ್ಷಮಿಸಲಾರರು
ಸೋಫಿಯಾ ಮಾವನ ಮನೆ ಮೇಲೆ ದಾಳಿ ನಡೆಸುವ ಮನಸ್ಥಿತಿ ಕನ್ನಡಿಗರು ಕ್ಷಮಿಸಲಾರರು