AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Foreign Remittance: ಸೆಪ್ಟೆಂಬರ್​ನಲ್ಲಿ 3 ವರ್ಷಗಳ ಗರಿಷ್ಠ ಮಟ್ಟಕ್ಕೆ ವಿದೇಶಕ್ಕೆ ಹಣ ರವಾನೆ; 15,800 ಕೋಟಿ ರೂ. ಮುಟ್ಟಿದ ಮೊತ್ತ

2021ರ ಸೆಪ್ಟೆಂಬರ್​ನಲ್ಲಿ ವಿದೇಶಕ್ಕೆ ರವಾನೆ ಮಾಡಿರುವ ಮೊತ್ತ ಮೂರು ವರ್ಷದ ಗರಿಷ್ಠ ಮಟ್ಟವನ್ನು ತಲುಪಿದ್ದು, 200 ಕೋಟಿ ಅಮೆರಿಕನ್​ ಡಾಲರ್ ಆಗಿದೆ. ಈ ಪೈಕಿ ಕ್ರಿಪ್ಟೋಕರೆನ್ಸಿ ಖರೀದಿಗೆ ಎಷ್ಟು ಹೊರಹೋಗಿರಬಹುದು ಎಂಬ ಅಂದಾಜು ಸಾಧ್ಯವಿಲ್ಲ ಎಂದು ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ.

Foreign Remittance: ಸೆಪ್ಟೆಂಬರ್​ನಲ್ಲಿ 3 ವರ್ಷಗಳ ಗರಿಷ್ಠ ಮಟ್ಟಕ್ಕೆ ವಿದೇಶಕ್ಕೆ ಹಣ ರವಾನೆ; 15,800 ಕೋಟಿ ರೂ. ಮುಟ್ಟಿದ ಮೊತ್ತ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Nov 25, 2021 | 11:45 AM

Share

15,800 ಕೋಟಿ ರೂಪಾಯಿ ಅಥವಾ 200 ಕೋಟಿ ಅಮೆರಿಕನ್ ಡಾಲರ್! ಇದು ಸೆಪ್ಟೆಂಬರ್​ನಲ್ಲಿ ಭಾರತೀಯ ನಿವಾಸಿಗಳು ವಿದೇಶಕ್ಕೆ ಕಳುಹಿಸಿರುವ ಮೊತ್ತ. ಲಿಬರಲೈಸ್ಡ್ ರೆಮಿಟೆನ್ಸ್ ಸ್ಕೀಮ್ (ಎಲ್‌ಆರ್‌ಎಸ್) ಅಡಿಯಲ್ಲಿ ಭಾರತೀಯ ನಿವಾಸಿಗಳು ಇಷ್ಟು ಮೊತ್ತವನ್ನು ರವಾನಿಸಿದ್ದು, ಮೂರು ವರ್ಷಗಳ ಗರಿಷ್ಠ ಮಟ್ಟವನ್ನು ಮುಟ್ಟಿದೆ. ಇದರಲ್ಲಿ ಕ್ರಿಪ್ಟೋ ಖರೀದಿಗೆ ಕಳುಹಿಸಿರುವ ಮೊತ್ತ ಎಷ್ಟು ಎಂಬುದನ್ನು ಊಹಿಸುವುದಕ್ಕೆ ಸಾಧ್ಯವಿಲ್ಲ ಎಂದು ವಿಶ್ಲೇಷಕರು ಹೇಳಿದ್ದಾರೆ. ಶೇ 60ರಷ್ಟು ಹಣವು ವಿದೇಶ ಪ್ರವಾಸ ಮತ್ತು ಅಧ್ಯಯನಕ್ಕಾಗಿ ರವಾನೆಯಾಗಿದೆ, ಇದು ಕೂಡ ಬಹು ವರ್ಷಗಳ ಗರಿಷ್ಠ ಮಟ್ಟದಲ್ಲಿದೆ ಎಂದು ಆರ್‌ಬಿಐ ಅಂಕಿ-ಅಂಶಗಳು ಸೂಚಿಸುತ್ತವೆ. ಎಲ್‌ಆರ್‌ಎಸ್‌ನ ಅಡಿಯಲ್ಲಿ ಒಟ್ಟಾರೆ ಬಾಹ್ಯ ಹಣ ರವಾನೆಯು 2021ರ ಏಪ್ರಿಲ್-ಸೆಪ್ಟೆಂಬರ್​​ ಅವಧಿಯಲ್ಲಿ ಶೇಕಡಾ 56 ರಷ್ಟು ಏರಿಕೆಯಾಗಿ, 8.9 ಶತಕೋಟಿ ಡಾಲರ್​ಗೆ ತಲುಪಿದೆ. ವರ್ಷದ ಹಿಂದೆ ಇದೇ ಅವಧಿಯಲ್ಲಿ 5.7 ಬಿಲಿಯನ್ ಡಾಲರ್ ಆಗಿತ್ತು. ವಿದೇಶ ಪ್ರಯಾಣ, ವಿದೇಶದಲ್ಲಿ ಅಧ್ಯಯನ, ನಿಕಟ ಸಂಬಂಧಿಗಳ ನಿರ್ವಹಣೆ, ದೇಣಿಗೆ ಹಾಗೂ ಉಡುಗೊರೆಗಳು ಮತ್ತಿತರವು ಚಾಲ್ತಿ ಖಾತೆಯ ವಹಿವಾಟುಗಳಿಗಾಗಿ ಉದಾರೀಕೃತ ರವಾನೆ ಯೋಜನೆ (LRS) ಅಡಿಯಲ್ಲಿ ಪ್ರತಿ ವ್ಯಕ್ತಿಗೆ ವರ್ಷಕ್ಕೆ 2,50,000 ಡಾಲರ್​ವರೆಗೆ ವಿದೇಶಕ್ಕೆ ಕಳುಹಿಸಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಅವಕಾಶ ನೀಡುತ್ತದೆ. ಇದರ ಹೊರತುಪಡಿಸಿ ಡೆಪಾಸಿಟ್ಸ್​ಗಳಲ್ಲಿ ಹೂಡಿಕೆ, ಈಕ್ವಿಟೀಸ್ ಮತ್ತು ಬಾಂಡ್ಸ್​, ಆಸ್ತಿ ಖರೀದಿಗಳು ಇಂಥ ಬಂಡವಾಳ ಹೂಡಿಕೆಗಳು ಎಲ್​ಆರ್​ಎಸ್ ಅಡಿಯಲ್ಲಿ ಬರುತ್ತವೆ.​

ಯಾವುದೇ ಅನುಮತಿಸಲಾದ LRS ಶೀರ್ಷಿಕೆ ಅಡಿಯಲ್ಲಿ ರವಾನೆಯಾಗುವ ಹಣವನ್ನು ತರುವಾಯ ಕ್ರಿಪ್ಟೋಗಳ ಖರೀದಿ ಸೇರಿದಂತೆ ಯಾವುದೇ ಉದ್ದೇಶಕ್ಕಾಗಿ ಬಳಸಬಹುದಾದ ಸಾಧ್ಯತೆಯಿದೆ ಎಂದು ವಿಶ್ಲೇಷಕರು ಊಹಿಸುತ್ತಾರೆ. ಅಂತಹ ವ್ಯವಹಾರಗಳು ಯಾವುದಾದರೂ ಕಾನೂನಿಗೆ ವಿರುದ್ಧ ಆಗಿರಬಹುದು ಎಂದು ತಜ್ಞರು ಹೇಳುತ್ತಾರೆ. ಬಂಡವಾಳ ಖಾತೆಯ ವಹಿವಾಟುಗಳ ಅಡಿಯಲ್ಲಿ ಸಂಯೋಜಿತ ರವಾನೆಗಳು- ಠೇವಣಿಗಳು, ಆಸ್ತಿ ಖರೀದಿಗಳು ಮತ್ತು ಈಕ್ವಿಟಿಗಳು ಮತ್ತು ಬಾಂಡ್‌ಗಳಲ್ಲಿನ ಹೂಡಿಕೆಯು ಈ ಅವಧಿಯಲ್ಲಿ ಶೇ 25 ಏರಿಕೆಯಾಗಿ, ಸಣ್ಣ ಪ್ರಮಾಣದ ಬೇಸ್ ಇದ್ದರೂ 765 ಮಿಲಿಯನ್‌ ಡಾಲರ್​ಗೆ ತಲುಪಿದೆ.

“ಎಲ್ಆರ್​ಎಸ್ ಯೋಜನೆಯು ವಿದೇಶದಲ್ಲಿರುವ ವಿದೇಶಿ ಕರೆನ್ಸಿ ಖಾತೆಗೆ ರವಾನೆ ಮಾಡಲು ಅನುಮತಿ ನೀಡುತ್ತದೆ. ಆದರೂ ಅಂತಹ ಹಣವನ್ನು ವಿನಿಮಯ ನಿಯಂತ್ರಣ ನಿಯಮಗಳಿಗೆ ಅನುಸಾರವಾಗಿ ಬಳಸಬೇಕಾಗುತ್ತದೆ,” ವಿಶ್ಲೇಷಕರು ಹೇಳುತ್ತಾರೆ. “ಈ ನಿಯಮಗಳ ಅಡಿಯಲ್ಲಿ ಕ್ರಿಪ್ಟೋಕರೆನ್ಸಿ ಟ್ರೀಟ್​ಮೆಂಟ್​ ಬಗ್ಗೆ ಅಸ್ಪಷ್ಟತೆ ಇದೆ. ಆದ್ದರಿಂದ ಸಾಗರೋತ್ತರ ವಿದೇಶೀ ಕರೆನ್ಸಿ ಖಾತೆಯಲ್ಲಿ ನಡೆಸಲಾದ LRS ನಿಧಿಯನ್ನು ಬಳಸಿಕೊಂಡು ಅಂತಹ ಯಾವುದೇ ವ್ಯವಹಾರವನ್ನು ನಿಯಮಾವಳಿ ದೃಷ್ಟಿಕೋನದಿಂದ ಎಚ್ಚರಿಕೆಯಿಂದ ಮೌಲ್ಯಮಾಪನ ಮಾಡಬೇಕಾಗುತ್ತದೆ”.

ಆದರೆ, ಎರಡು ಶೀರ್ಷಿಕೆ ಅಡಿಯಲ್ಲಿ ಹಣ ರವಾನೆ- ವಿದೇಶ ಪ್ರವಾಸ ಮತ್ತು ಅಧ್ಯಯನದ ಅವಧಿಯಲ್ಲಿ ಹತ್ತಿರಹತ್ತಿರ ದ್ವಿಗುಣಗೊಂಡಿದೆ. FY22ರ ಮೊದಲಾರ್ಧದಲ್ಲಿ ಪ್ರಯಾಣದ ವೆಚ್ಚಗಳು 1.4 ಶತಕೋಟಿ ಡಾಲರ್​ಯಿಂದ 2.4 ಶತಕೋಟಿ ಡಾಲರ್​ಗೆ ಏರಿದರೆ, ವಿದೇಶದಲ್ಲಿ ಅಧ್ಯಯನಕ್ಕಾಗಿ ರವಾನೆಯು ಈ ಅವಧಿಯಲ್ಲಿ 1.5 ಶತಕೋಟಿ ಡಾಲರ್​ಯಿಂದ 3 ಶತಕೋಟಿ ಡಾಲರ್​ಗೆ ಏರಿತು. ಕೊರೊನಾದಿಂದಾಗಿ ಅಂತರರಾಷ್ಟ್ರೀಯ ಪ್ರಯಾಣದ ನಿರ್ಬಂಧಗಳನ್ನು ಬಿಡುಗಡೆ ಮಾಡುವುದರಿಂದ ಬಹಳಷ್ಟು ಹಣವನ್ನು ಖರ್ಚು ಮಾಡಿರಬಹುದು ಎಂದು ತಜ್ಞರು ಹೇಳುತ್ತಾರೆ.

“ನಾವು ವಿದೇಶದಲ್ಲಿ ಪ್ರಯಾಣ ಮತ್ತು ಅಧ್ಯಯನದಲ್ಲಿ ಏರಿಕೆ ಕಾಣುತ್ತಿದ್ದೇವೆ. ಸಾಕಷ್ಟು ಬೇಡಿಕೆ ಹೆಚ್ಚಿದೆ. ಯುನೈಟೆಡ್ ಸ್ಟೇಟ್ಸ್ ತೆರೆದಿದೆ, ಭಾರತೀಯರಿಗೆ ಪ್ರಮುಖ ಪ್ರವಾಸಿ ತಾಣವಾಗಿದೆ,” ಎಂದು ತಜ್ಞರು ಹೇಳಿದ್ದಾರೆ. RemitX ಬ್ರ್ಯಾಂಡ್ ಅಡಿಯಲ್ಲಿ ಹಣ ರವಾನೆ ಮಾಡಲಾಗುತ್ತದೆ. “ವಿದೇಶಗಳಲ್ಲಿನ ಅಧ್ಯಯನಗಳಿಗೆ ಸಂಬಂಧಿಸಿದಂತೆ, ಸಾಂಕ್ರಾಮಿಕ ರೋಗದಿಂದ ವಿಧಿಸಲಾದ ನಿರ್ಬಂಧಗಳಿಂದಾಗಿ ಕಳೆದ ವರ್ಷ ಆನ್‌ಲೈನ್ ಕೋರ್ಸ್‌ಗಳನ್ನು ಆರಿಸಿಕೊಂಡಿದ್ದ ಹಲವಾರು ವಿದ್ಯಾರ್ಥಿಗಳು ಈಗ ವಿಶ್ವವಿದ್ಯಾಲಯಗಳು ನೈಜ-ಸಮಯದ ಅಧ್ಯಯನಕ್ಕಾಗಿ ತೆರೆದಿರುವುದರಿಂದ ಕ್ಯಾಂಪಸ್ ತರಗತಿಗಳಿಗೆ ಹಿಂತಿರುಗುತ್ತಿದ್ದಾರೆ”.

ಬ್ಯಾಲೆನ್ಸ್ ಅಕೌಂಟ್ ದೃಷ್ಟಿಕೋನದಿಂದ ಅಂತಹ ಹೊರಹರಿವಿನ ಹೆಚ್ಚಳದ ಕಾರಣದಿಂದಾಗಿ ಹಿಂದಿನ ಲಾಭಗಳು ಮುಂದುವರಿಯುವುದಿಲ್ಲ.

ಇದನ್ನೂ ಓದಿ: ಕೋಲಾರದಿಂದ ವಿದೇಶಕ್ಕೆ ಸುವಾಸೆನೆಯ ದ್ರವ್ಯ ರಫ್ತು; ಧವನ ಬೆಳೆದು ಲಾಭ ಗಳಿಸುತ್ತಿರುವ ರೈತರು

ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್