ಭಾರತ ಚುನಾವಣಾ ಆಯೋಗವು (Election Commission Of India) ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಪರಿಶೀಲಿಸಲು ಮತದಾರರಿಗೆ ಆನ್‌ಲೈನ್ ಮತ್ತು ತಡೆರಹಿತ ಸೌಲಭ್ಯವನ್ನು ಒದಗಿಸುತ್ತದೆ. ಹುಡುಕಾಟ ನಡೆಸಲು ಮೊದಲ ಹೆಸರು, ಕೊನೆಯ ಹೆಸರು, ವಿಧಾನಸಭಾ ಕ್ಷೇತ್ರ, ಲಿಂಗ ಇತ್ಯಾದಿ ವಿವರಗಳು ಅಗತ್ಯವಿದೆ. ಅದಕ್ಕೆ ಬದಲಾಗಿ, ಈ ಹುಡುಕಾಟವನ್ನು ನಡೆಸಲು EPIC ಸಂಖ್ಯೆಯನ್ನು ಸಹ ಬಳಸಬಹುದು. ಭಾರತ ಚುನಾವಣಾ ಆಯೋಗವು ತನ್ನ ಮತದಾರರ ಪಟ್ಟಿಯನ್ನು ನಿಯಮಿತವಾಗಿ ನವೀಕರಿಸುತ್ತದೆ. ಹಲವಾರು ಸಂದರ್ಭಗಳಲ್ಲಿ ಜನರು ತಮ್ಮ ವಿಳಾಸವನ್ನು ಬದಲಾಯಿಸುತ್ತಾರೆ, ಇತರ ಕ್ಷೇತ್ರಗಳಿಗೆ ತೆರಳುತ್ತಾರೆ. ಆದ್ದರಿಂದಾಗಿ ಚುನಾವಣೆ ಆಯೋಗವು ನಿಯತಕಾಲಿಕವಾಗಿ ಮತದಾರರ ಪಟ್ಟಿಯನ್ನು ನವೀಕರಿಸುತ್ತಿರುತ್ತದೆ. ನೀವು ಜಾಗೃತ ಮತದಾರರಾಗಿದ್ದಲ್ಲಿ ನಿಯಮಿತವಾಗಿ ಚುನಾವಣೆ ಆಯೋಗದ ವೆಬ್‌ಸೈಟ್‌ನಲ್ಲಿ ಹೆಸರನ್ನು ಪರಿಶೀಲಿಸಲು ಬಯಸುತ್ತೀರಿ.
ಭಾರತೀಯ ಚುನಾವಣಾ ಆಯೋಗದ ನವೀಕರಿಸಿದ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಹೇಗೆ ಪರಿಶೀಲಿಸುವುದು ಎಂಬುದು ಇಲ್ಲಿದೆ:
– ರಾಷ್ಟ್ರೀಯ ಮತದಾರರ ಸೇವಾ ಪೋರ್ಟಲ್‌ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ (https://www.nvsp.in/).
– ವೆಬ್‌ಸೈಟ್‌ನಲ್ಲಿ ಎರಡು ಆಯ್ಕೆಗಳು ಲಭ್ಯವಿವೆ: (ಎ) ವಿವರಗಳ ಮೂಲಕ ಹುಡುಕಿ ಮತ್ತು (ಬಿ) EPIC ಸಂಖ್ಯೆಯಿಂದ ಹುಡುಕಿ.
– ನೀವು EPIC ಸಂಖ್ಯೆಯ ಮೂಲಕ ಹುಡುಕಲು ಬಯಸಿದದಲ್ಲಿ ನಿಮ್ಮ EPIC ಸಂಖ್ಯೆ, ರಾಜ್ಯ ಮತ್ತು ಕೋಡ್ ಅನ್ನು ಭರ್ತಿ ಮಾಡಬೇಕಾಗುತ್ತದೆ. ಅದರ ನಂತರ ನೀವು ಕ್ಯಾಪ್ಚಾ ಕೋಡ್ ಅನ್ನು ನಮೂದು ಮಾಡಬೇಕಾಗುತ್ತದೆ ಮತ್ತು ನಂತರ ನಿಮ್ಮ ಹೆಸರನ್ನು ಕಂಡುಹಿಡಿಯಬಹುದು.
– ನೀವು ವಿವರಗಳ ಮೂಲಕ ಹುಡುಕಲು ಬಯಸಿದರೆ ನಿಮ್ಮ ವೈಯಕ್ತಿಕ ವಿವರಗಳು ಮತ್ತು ಮತದಾನದ ಪ್ರದೇಶವನ್ನು ಒಳಗೊಂಡಿರುವ ಸರಳ ಫಾರ್ಮ್ ಅನ್ನು ಭರ್ತಿ ಮಾಡಬೇಕಾಗುತ್ತದೆ
– ವೈಯಕ್ತಿಕ ವಿವರಗಳು ನಿಮ್ಮ ಹೆಸರು, ತಂದೆ/ಗಂಡನ ಹೆಸರು, ಜನ್ಮ ದಿನಾಂಕ ಮತ್ತು ಲಿಂಗವನ್ನು ಒಳಗೊಂಡಿರುತ್ತದೆ. ಮತದಾನದ ವಿವರಗಳು ನಿಮ್ಮ ರಾಜ್ಯ, ಜಿಲ್ಲೆ ಮತ್ತು ವಿಧಾನಸಭಾ ಕ್ಷೇತ್ರವನ್ನು ಒಳಗೊಂಡಿರುತ್ತವೆ. ಎಲ್ಲ ವಿವರಗಳನ್ನು ಭರ್ತಿ ಮಾಡಿದ ನಂತರ ಕ್ಯಾಪ್ಚಾ ಕೋಡ್ ಅನ್ನು ನಮೂದು ಮಾಡಬೇಕಾಗುತ್ತದೆ ಮತ್ತು ಆ ನಂತರ ನಿಮ್ಮ ಹೆಸರನ್ನು ಕಂಡುಹಿಡಿಯಬಹುದು.
ಚುನಾವಣಾ ಆಯೋಗದ ವೆಬ್ಸೈಟ್ ಬಳಸಿಕೊಂಡು ನೀವು ಈ ಕೆಳಗಿನ ವೈಶಿಷ್ಟ್ಯಗಳನ್ನು ಸಹ ಪಡೆಯಬಹುದು:
ಮೂಲಭೂತ ವಿವರಗಳನ್ನು ನಮೂದಿಸುವ ಮೂಲಕ ರಾಷ್ಟ್ರೀಯ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಹುಡುಕಿ.
ನಕ್ಷೆಯಲ್ಲಿ ಮತದಾನ ಕೇಂದ್ರವನ್ನು ಪತ್ತೆ ಮಾಡಿ.
ಮತದಾರರ ಮಾಹಿತಿ ಚೀಟಿಯನ್ನು ಮುದ್ರಿಸಿ.
ಮತದಾರರ ಪಟ್ಟಿಯಲ್ಲಿ ನೋಂದಣಿ, ಮಾರ್ಪಾಟು, ಅಳಿಸುವಿಕೆ ಮತ್ತು ವಿಳಾಸ ಬದಲಾವಣೆಗೆ ಅರ್ಜಿ ಸಲ್ಲಿಸಿ
ಬೂತ್ ಮಟ್ಟದ ಅಧಿಕಾರಿ (BLO), ಮತದಾರರ ಪಟ್ಟಿ ಅಧಿಕಾರಿ (ERO) ತಿಳಿಯಿರಿ
ಜಿಲ್ಲಾ ಚುನಾವಣಾ ಅಧಿಕಾರಿಗಳು ಮತ್ತು ಮುಖ್ಯ ಚುನಾವಣಾ ಕಚೇರಿಯಲ್ಲಿರುವ ಅಧಿಕಾರಿಗಳನ್ನು ತಿಳಿದುಕೊಳ್ಳಿ
ಇದನ್ನೂ ಓದಿ: Assembly Election 2022 Voter ID Card: ವೋಟರ್ ಐಡಿ ಕಾರ್ಡ್ ಇಲ್ಲದಿದ್ದರೂ ಈ ದಾಖಲೆಗಳಿದ್ದರೆ ಮತದಾನ ಮಾಡಬಹುದು
Published On - 10:55 pm, Fri, 24 June 22