Assembly Election 2022 Voter ID Card: ವೋಟರ್ ಐಡಿ ಕಾರ್ಡ್ ಇಲ್ಲದಿದ್ದರೂ ಈ ದಾಖಲೆಗಳಿದ್ದರೆ ಮತದಾನ ಮಾಡಬಹುದು

ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿದ್ದು, ಚುನಾವಣಾ ಆಯೋಗ ನೀಡಿರುವ ಗುರುತಿನ ಚೀಟಿ ನಿಮ್ಮ ಬಳಿ ಇಲ್ಲದಿದ್ದರೂ ನೀವು ಮತ ಚಲಾಯಿಬಹುದು

Assembly Election 2022 Voter ID Card: ವೋಟರ್ ಐಡಿ ಕಾರ್ಡ್ ಇಲ್ಲದಿದ್ದರೂ ಈ ದಾಖಲೆಗಳಿದ್ದರೆ ಮತದಾನ ಮಾಡಬಹುದು
ಸಾಂದರ್ಭಿಕ ಚಿತ್ರ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Feb 10, 2022 | 6:15 AM

ಚುನಾವಣಾ ಆಯೋಗ ನೀಡಿರುವ ಗುರುತಿನ ಚೀಟಿ ಇಲ್ಲ ಎನ್ನುವ ಕಾರಣಕ್ಕೆ ಕೆಲವರು ಮತದಾನಕ್ಕೇ ಹೋಗುವುದಿಲ್ಲ. ಆದರೆ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿದ್ದು, ಚುನಾವಣಾ ಆಯೋಗ ನೀಡಿರುವ ಗುರುತಿನ ಚೀಟಿ ನಿಮ್ಮ ಬಳಿ ಇಲ್ಲದಿದ್ದರೂ ನೀವು ಮತ ಚಲಾಯಿಬಹುದು. ಚುನಾವಣಾ ಆಯೋಗದ ಮಾನ್ಯತೆ ಇರುವ ಈ 11 ದಾಖಲೆಗಳು ಇದ್ದರೆ ಸಾಕು. ಆದರೆ ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದಿದ್ದರೆ ಮಾತ್ರ ಯಾವ ಗುರುತಿನ ಚೀಟಿಯೂ ಪ್ರಯೋಜನಕ್ಕೆ ಬರುವುದಿಲ್ಲ.

ಈ ದಾಖಲೆಗಳಿಗೆ ಚುನಾವಣಾ ಆಯೋಗದ ಮಾನ್ಯತೆಯಿದೆ

1) ಪಾಸ್‌ಪೋರ್ಟ್‌ 2) ಡ್ರೈವಿಂಗ್‌ ಲೈಸನ್ಸ್‌ 3) ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ, ಸರ್ಕಾರಿ ಉದ್ದಿಮೆ, ಪಬ್ಲಿಕ್‌ ಲಿಮಿಟೆಡ್‌ ಕಂಪನಿಗಳು ನೀಡಿರುವ ವ್ಯಕ್ತಿಯ ಭಾವಚಿತ್ರ ಹೊಂದಿರುವ ಸೇವಾ ಗುರುತಿನ ಚೀಟಿ 4) ಪೋಸ್ಟ್‌ ಆಫೀಸ್‌ ಅಥವಾ ಬ್ಯಾಂಕುಗಳಲ್ಲಿ ನೀಡಿರುವ ಪಾಸ್‌ ಪುಸ್ತಕ 5) ಪ್ಯಾನ್‌ ಕಾರ್ಡ್‌ 6) ಉದ್ಯೋಗ ಖಾತ್ರಿ ಯೋಜನೆಯ ಜಾಬ್ ಕಾರ್ಡ್ 7) ಕಾರ್ಮಿಕ ಇಲಾಖೆಯಿಂದ ನೀಡಲಾಗಿರುವ ಆರೋಗ್ಯ ವಿಮಾ ಸ್ಮಾರ್ಟ್‌ ಕಾರ್ಡ್‌ 8) ಭಾವಚಿತ್ರ ಹೊಂದಿರುವ ಪೆನ್ಷನ್‌ ಕಾರ್ಡ್‌ 9) ಲೋಕಸಭಾ ಸದಸ್ಯರು, ರಾಜ್ಯಸಭಾ ಸದಸ್ಯರುಗಳು, ಶಾಸಕರು, ವಿಧಾನಸಭಾ ಸದಸ್ಯರು ನೀಡಿರುವ ಅಧಿಕೃತ ಗುರುತಿನ ಚೀಟಿ 10) ಆಧಾರ್‌ ಕಾರ್ಡ್‌ 11) ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್​ಪಿಆರ್) ಮೂಲಕ ನೀಡಲಾದ ಸ್ಮಾರ್ಟ್​ಕಾರ್ಡ್​

ವೋಟರ್​ ಲಿಸ್ಟ್​ನಲ್ಲಿ ನಿಮ್ಮ ಹೆಸರು ಹೀಗೆ ಪರಿಶೀಲಿಸಿಕೊಳ್ಳಿ ಚುನಾವಣೆಯಲ್ಲಿ ಅಕ್ರಮ ನಡೆಯಬಾರದು ಎನ್ನುವ ಕಾರಣಕ್ಕೆ ಪ್ರತಿ ಚುನಾವಣೆಗೂ ಮುನ್ನ ಆಯೋಗವು ಮತದಾರರ ಪಟ್ಟಿಯನ್ನು ಪರಿಷ್ಕರಿಸುತ್ತದೆ. ಈ ಸಂದರ್ಭದಲ್ಲಿ, ಹೊಸ ಮತದಾರರ ಹೆಸರು ಸೇರಿಸಲು, ನಿಧನರಾದ ಅಥವಾ ಸ್ಥಳಾಂತರಗೊಂಡ ಮತದಾರರ ಹೆಸರು ತೆಗೆಯಲು ಅವಕಾಶ ನೀಡಲಾಗುತ್ತದೆ. ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳುವುದು ಅತ್ಯಗತ್ಯ. ಒಂದು ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇಲ್ಲದಿದ್ದಲ್ಲಿ ಚುನಾವಣಾ ಆಯೋಗಕ್ಕೆ ಮುಂಚಿತವಾಗಿ ದೂರು ಸಲ್ಲಿಸುವ ಮೂಲಕ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಿಕೊಳ್ಳಬಹುದು. ಆದರೆ ಮತದಾನದ ದಿನ ಮತಗಟ್ಟ ಸಮೀಪ ಇದು ನಿಮ್ಮ ಗಮನಕ್ಕೆ ಬಂದರೆ ಏನೂ ಮಾಡಲು ಆಗುವುದಿಲ್ಲ.

ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ ಇಲ್ಲವೇ ಎಂಬುದನ್ನು ತಿಳಿಯಲು http://sec.up.nic.in/site/PRIVoterSearch.aspx ಲಿಂಕ್ ಕ್ಲಿಕ್ ಮಾಡಿ. ನಿಮ್ಮ ಜಿಲ್ಲೆ, ತಾಲ್ಲೂಕು, ಪಂಚಾಯಿತಿಯನ್ನು ಆಯ್ಕೆ ಮಾಡಿ. ಈಗ ಇಲ್ಲಿ ಕೆಳಗೆ ಮತದಾರರ ಹೆಸರನ್ನು ನಮೂದಿಸಿ. ನಿಮ್ಮ ತಾಯಿ / ತಂದೆ / ಗಂಡನ ಹೆಸರನ್ನು ನಮೂದಿಸಿ. ಇದರ ನಂತರ, ನಿಮ್ಮ ಮನೆಯ ಸಂಖ್ಯೆಯನ್ನು ನಮೂದಿಸಿ. ನಂತರ ವಿವರಗಳು ನಿಮ್ಮ ಮುಂದೆ ತೆರೆದುಕೊಳ್ಳುತ್ತವೆ.

ನಿಮ್ಮ ಹೆಸರನ್ನು ಪರಿಶೀಲಿಸಲು ಇನ್ನೊಂದು ಮಾರ್ಗವೂ ಇದೆ. ಮತದಾರರ ಪಟ್ಟಿಯನ್ನು ಪರಿಶೀಲಿಸಲು ಮೊದಲು https://Electoralsearch.in ವೆಬ್‌ಸೈಟ್‌ಗೆ ಹೋಗಿ. ಇಲ್ಲಿ ಒಂದು ಕ್ರಮದಲ್ಲಿ; ನಿಮ್ಮ ಹೆಸರು, ವಿಳಾಸ ಇತ್ಯಾದಿ ವಿವರಗಳನ್ನು ನಮೂದಿಸುವ ಮೂಲಕ ನಿಮ್ಮ ಹೆಸರನ್ನು ಪರಿಶೀಲಿಸಬಹುದು. ಇದಲ್ಲದೇ, ಮತ್ತೊಂದು ವಿಧಾನದಲ್ಲಿ ಗುರುತಿನ ಚೀಟಿಯ ವಿವರಗಳಿಂದ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು (EPIC ಸಂಖ್ಯೆ ಮೂಲಕ) ಪರಿಶೀಲಿಸಬಹುದು.

ಇದನ್ನೂ ಓದಿ: PM Modi Interview: ಉತ್ತರ ಪ್ರದೇಶದಲ್ಲಿ ಬಿಜೆಪಿ ಪರ ಅಲೆ ಇದೆ: ಪ್ರಧಾನಿ ನರೇಂದ್ರ ಮೋದಿ ಇದನ್ನೂ ಓದಿ: UP Election Voting 2022 Live Streaming ಮೊದಲ ಹಂತದ ಚುನಾವಣೆ ನಾಳೆ, ಮತದಾನಕ್ಕೆ ಸಜ್ಜಾದ ಉತ್ತರ ಪ್ರದೇಶ