ಇತ್ತೀಚಿನ ದಿನಗಳಲ್ಲಿ ಕ್ರೆಡಿಟ್ ಕಾರ್ಡ್ಗಳ ರಿವಾರ್ಡ್ ಪಾಯಿಂಟ್ಸ್ ಹಾಗೂ ಕ್ಯಾಶ್ಬ್ಯಾಕ್ಗಳು ಉತ್ತೇಜನ ನೀಡುವಂತಿವೆ. ಅದರಲ್ಲೂ ಪೆಟ್ರೋಲ್- ಡೀಸೆಲ್ ದರ ಲೀಟರ್ಗೆ 100 ರೂಪಾಯಿಯ ಗಡಿ ದಾಟಿದ ಮೇಲಂತೂ ಫ್ಯುಯೆಲ್ ಕ್ರೆಡಿಟ್ ಕಾರ್ಡ್ಗಳ ಸಹಾಯದಿಂದ ಪುಕ್ಕಟೆ ಇಂಧನ ಪಡೆಯುವ ಆಲೋಚನೆ ಸೂಪರ್ ಎನಿಸುತ್ತದೆ. ಇದು ನಿಜವಾಗಲೂ ಸಾಧ್ಯವಾ ಎನಿಸುತ್ತಿದೆಯಾ? ತಾಂತ್ರಿಕವಾಗಿ ಹೇಳಬೇಕೆಂದರೆ, ಹೌದು. ಆದರೆ ಆ ಬಗ್ಗೆ ಗೊತ್ತಿರಬೇಕು. ರಿವಾರ್ಡ್ ಪಾಯಿಂಟ್ಸ್ಗಳನ್ನು ಹಾಗೂ ಕ್ಯಾಶ್ಬ್ಯಾಕ್ಗಳನ್ನು ವಿಮಾನ ಟಿಕೆಟ್ಗಳು, ಗಿಫ್ಟ್ ವೋಚರ್ಗಳು ಅಥವಾ ಆಯ್ದ ಮಳಿಗೆಗಳಲ್ಲಿನ ರಿಯಾಯಿತಿಗೆ ಬಳಸಿಕೊಳ್ಳುತ್ತೀರಿ. ಆದರೆ ಈಗ ಹೇಳಲು ಹೊರಟಿರುವ ವಿಚಾರ ಅಂದುಕೊಂಡಷ್ಟು ಸಲೀಸಿಲ್ಲ. ಗಣಿತ ಲೆಕ್ಕಾಚಾರ ತಿಳಿಯುವುದು ಬಹಳ ಮುಖ್ಯ. ಉದಾಹರಣೆಯೊಂದನ್ನು ಕೇಳಿ: ಒಂದು ಪ್ರಾಜೆಕ್ಟ್ನಲ್ಲಿ ಕ್ರೆಡಿಟ್ ಕಾರ್ಡ್ ಗ್ರಾಹಕರು ತಮ್ಮ ರಿವಾರ್ಡ್ ಪಾಯಿಂಟ್ಗಳನ್ನು ಶೇಖರಣೆ ಮಾಡುತ್ತಾ ಹೋಗಿದ್ದರು. ಅವರಿಗೆ ಏನಿತ್ತು ಅಂದರೆ, ಒಂದು ಮಿಲಿಯನ್ ಪಾಯಿಂಟ್ಸ್ ರಿಡೀಮ್ ಮಾಡಿದರೆ ಸೂಪರ್ ಮಾಡೆಲ್ ಜತೆಗೆ ಡಿನ್ನರ್ ಮೀಟಿಂಗ್ ಮಾಡಬಹುದು. ಸೂಪರ್ ಮಾಡೆಲ್ನ ಒಬ್ಬರೇ ಭೇಟಿ ಅಗಬಹುದು ಎಂಬ ಭಾವನೆ ಅವರದು. ಆದರೆ ಅಷ್ಟು ಪಾಯಿಂಟ್ಸ್ಗೆ ಕಾರ್ಡ್ ಮೇಲೆ ಅವರು ಖರ್ಚು ಮಾಡಬೇಕಾಗಿದ್ದ ಮೊತ್ತವನ್ನು ಊಹೆ ಮಾಡುವುದಕ್ಕೂ ಸ್ವಲ್ಪ ಕಷ್ಟವೇ ಎನ್ನುತ್ತಾರೆ ಇದೇ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವ ಅಧಿಕಾರಿ.
ಪ್ರತಿ ಕ್ರೆಡಿಟ್ ಕಾರ್ಡ್ ಕೂಡ ವಿಭಿನ್ನ. ಕೆಲವು ಕಾರ್ಡ್ಗಳಿಗೆ ಪ್ರತಿ 100 ರೂಪಾಯಿ ಖರ್ಚು ಮಾಡಿದಲ್ಲಿ 1 ಪಾಯಿಂಟ್ ಬಂದರೆ, ಇನ್ನೂ ಕೆಲವಕ್ಕೆ 40 ರೂಪಾಯಿ ಖರ್ಚಿಗೆ 1 ಪಾಯಿಂಟ್ ಸಿಗುತ್ತದೆ. ಕೆಲವಕ್ಕೆ ವಾರ್ಷಿಕ ಶುಲ್ಕ ಇದ್ದರೆ, ಮತ್ತೆ ಕೆಲವಕ್ಕೆ ಇಲ್ಲ. ಅಥವಾ ಆ ಶುಲ್ಕ ಮನ್ನಾ ಆಗುವ ವ್ಯವಸ್ಥೆ ಇರುತ್ತದೆ. ಕೆಲವು ಕಾರ್ಡ್ಗಳನ್ನು ಅದರ ಕೋ ಬ್ರ್ಯಾಂಡ್ ಫ್ಯುಯೆಲ್ ಸ್ಟೇಷನ್ಗಳಲ್ಲೇ ಬಳಸಬೇಕು ಮತ್ತು ಕೆಲವು ಕಾರ್ಡ್ಗಳನ್ನು ಎಲ್ಲೆಡೆ ಬಳಸಬಹುದು. ಇನ್ನು ನಿರ್ದಿಷ್ಟ ಮೊತ್ತದ ಖರೀದಿ ಮಾಡಿದ ನಂತರವಷ್ಟೇ ರಿವಾರ್ಡ್ ಪಾಯಿಂಟ್ಸ್ ಪಡೆಯಲು ಸಾಧ್ಯವಿರುತ್ತದೆ. ಆದ್ದರಿಂದ ಈ ಲೆಕ್ಕಾಚಾರ ಮಾಡಿಕೊಳ್ಳಬೇಕು. ಫ್ಯುಯೆಲ್ ಕಾರ್ಡ್ಗಳು ಅನುಕೂಲ ಆಗಬಹುದಾದ್ದು ಯಾವಾಗೆಂದರೆ, ಒಂದು ನಿರ್ದಿಷ್ಟ ಜಾಲದ ಪೆಟ್ರೋಲ್ ಪಂಪ್ಗಳ ಜತೆಗೆ ಒಪ್ಪಂದ ಮಾಡಿಕೊಂಡಿದ್ದಾಗ. ಉದಾಹರಣೆಗೆ, ಎಚ್ಪಿಸಿಎಲ್, ಬಿಪಿಸಿಎಲ್ ಮುಂತಾದವು. ಗರಿಷ್ಠ ಮಟ್ಟದ ಅನುಕೂಲ ಬೇಕು ಅಂತಾದರೆ ಪದೇ ಪದೇ ಅದೇ ಜಾಲದಲ್ಲಿನ ಪೆಟ್ರೋಲ್ ಪಂಪ್ನಲ್ಲೇ ಇಂಧನ ತುಂಬಿಸಿರಬೇಕು.
ಕಾರ್ಡ್ಗಳಿಂದ ಪೂರ್ತಿ ಅನುಕೂಲ ಪಡೆಯಬೇಕು ಅಂದಾಗ ಇಂಧನ ಖರೀದಿ ಆಯ್ಕೆ ಬಗ್ಗೆಯೂ ಯೋಜನೆ ಹಾಕಿಕೊಳ್ಳುವುದು ಮುಖ್ಯ. ಇದೇ ಸಂದರ್ಭದಲ್ಲಿ ಇನ್ನೂ ಒಂದು ಮಾತು ತಿಳಿಸಬೇಕು. ಕಾರ್ಡ್ಗಳ ಸೇರ್ಪಡೆ ಶುಲ್ಕ ಮತ್ತು ವಾರ್ಷಿಕ ಶುಲ್ಕದ ಲೆಕ್ಕಾಚಾರವನ್ನೂ ಗಮನದಲ್ಲಿ ಇಟ್ಟುಕೊಳ್ಳಬೇಕು. ಕೆಲವು ಕಾರ್ಡ್ಗಳಿಗೆ ವರ್ಷಕ್ಕೆ 2ರಿಂದ 5 ಸಾವಿರ ರೂಪಾಯಿ ತನಕ ವಾರ್ಷಿಕ ಶುಲ್ಕ ಇದೆ. ಜತೆಗೆ ಷರತ್ತು ಸಹ ಇರುತ್ತದೆ. ಒಂದು ವೇಳೆ 1 ಲಕ್ಷಕ್ಕಿಂತ ಹೆಚ್ಚು ಮೊತ್ತವನ್ನು ಕ್ರೆಡಿಟ್ ಕಾರ್ಡ್ ಮೂಲಕ ಖರ್ಚು ಮಾಡಿದಲ್ಲಿ ಮಾತ್ರ ಅದು ರೀಎಂಬರ್ಸ್ ಆಗುತ್ತದೆ. ಅಷ್ಟು ಮೊತ್ತವನ್ನು ಕ್ರೆಡಿಟ್ ಕಾರ್ಡ್ ಮೂಲಕ ಬಳಸುವಂತಿದ್ದಲ್ಲಿ ಮಾತ್ರ ತೆಗೆದುಕೊಳ್ಳಬೇಕು. ಫ್ಯುಯೆಲ್ ಕ್ರೆಡಿಟ್ ಕಾರ್ಡ್ಗಳನ್ನು ಪಡೆಯುವುದು ತಪ್ಪಲ್ಲ. ಆದರೆ ಅದನ್ನು ಎಷ್ಟು ಪರಿಣಾಮಕಾರಿಯಾಗಿ ಬಳಸುತ್ತೀರಿ ಎಂಬುದು ಮುಖ್ಯ.
ಇದನ್ನೂ ಓದಿ: Credit score: ಸಾಲ, ಕ್ರೆಡಿಟ್ ಕಾರ್ಡ್ ಬಿಲ್ ಸರಿಯಾಗಿ ಪಾವತಿಸಿದರೂ ಕ್ರೆಡಿಟ್ ಸ್ಕೋರ್ ಯಾಕೆ ಕಡಿಮೆ ಆಗುತ್ತೆ?
ಇದನ್ನೂ ಓದಿ: LIC Credit Card: ಎಲ್ಐಸಿ- ಐಡಿಬಿಐಯಿಂದ ಹೊಸದಾಗಿ ಎರಡು ಕ್ರೆಡಿಟ್ ಕಾರ್ಡ್ ಬಿಡುಗಡೆ; ಏನೆಲ್ಲ ಅನುಕೂಲ ಗೊತ್ತೆ?
(How To Make Best Use Of Fuel Credit Card Here Is An Explainer)