LIC Credit Card: ಎಲ್​ಐಸಿ- ಐಡಿಬಿಐಯಿಂದ ಹೊಸದಾಗಿ ಎರಡು ಕ್ರೆಡಿಟ್​ ಕಾರ್ಡ್​ ಬಿಡುಗಡೆ; ಏನೆಲ್ಲ ಅನುಕೂಲ ಗೊತ್ತೆ?

ಎಲ್​ಐಸಿ ಹಾಗೂ ಐಡಿಬಿಐ ಸಹಯೋಗದಲ್ಲಿ ಎರಡು ಹೊಸ ಕ್ರೆಡಿಟ್​ ಕಾರ್ಡ್​ಗಳನ್ನು ಬಿಡುಗಡೆ ಮಾಡಲಾಗಿದೆ. ಅವುಗಳ ಅನುಕೂಲ ಮತ್ತಿತರ ವಿವರಗಳು ಇಲ್ಲಿವೆ.

LIC Credit Card: ಎಲ್​ಐಸಿ- ಐಡಿಬಿಐಯಿಂದ ಹೊಸದಾಗಿ ಎರಡು ಕ್ರೆಡಿಟ್​ ಕಾರ್ಡ್​ ಬಿಡುಗಡೆ; ಏನೆಲ್ಲ ಅನುಕೂಲ ಗೊತ್ತೆ?
ಎಲ್​ಐಸಿ- ಐಡಿಬಿಐ ಕ್ರೆಡಿಟ್ ಕಾರ್ಡ್​ಗಳು (ಸಾಂದರ್ಭಿಕ ಚಿತ್ರ)
Follow us
TV9 Web
| Updated By: Digi Tech Desk

Updated on:Aug 03, 2021 | 12:29 PM

LIC ಕಾರ್ಡ್ಸ್​ ಸರ್ವೀಸಸ್ ಲಿಮಿಟೆಡ್ (LIC-CSL) ಮತ್ತು ಐಡಿಬಿಐ ಬ್ಯಾಂಕ್​ನಿಂದ ಹೊಸದಾಗಿ ಎರಡು ಕೋ-ಬ್ರ್ಯಾಂಡೆಡ್ ರುಪೇ ಕ್ರೆಡಿಟ್​ ಕಾರ್ಡ್ಸ್​ ಬಿಡುಗಡೆ ಮಾಡಲಾಗಿದೆ. ಈ ಕಾರ್ಡ್​ಗಳನ್ನು LIC CSL ‘Eclat’ Select Credit Card ಮತ್ತು ‘Lumine’ Platinum Credit Card ಎನ್ನಲಾಗುತ್ತದೆ. ಬಿಡುಗಡೆ ಮಾಡಿರುವ ಮಾಹಿತಿಯಂತೆ, ಕ್ರೆಡಿಟ್​ ಕಾರ್ಡ್​ದಾರರಿಗೆ ಅತ್ಯುತ್ತಮ ಅಉಕೂಲಗಳು ದೊರೆಯುತ್ತವೆ. ಕಾರ್ಡ್​ಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಐಡಿಬಿಐ ಬ್ಯಾಂಕ್​ ಎಂ.ಡಿ. ಮತ್ತು ಸಿಇಒ ರಾಕೇಶ್ ಶರ್ಮಾ, ಎಲ್​ಐಸಿ ಸಿಎಸ್​ಎಲ್ ಮತ್ತು ರುಪೇ ಜತೆ ಸಹಭಾಗಿತ್ವ ವಹಿಸುವುದಕ್ಕೆ ನಮಗೆ ಸಂತೋಷವಾಗಿದೆ. ನಮ್ಮ ಗ್ರಾಹಕರಿಗೆ ಆರೋಗ್ಯ, ಮನರಂಜನೆ, ಪ್ರವಾಸ ಮತ್ತು ವಿವಿಧ ಅನುಕೂಲಕರ ರಿವಾರ್ಡ್​ ಪಾಯಿಂಟ್​ಗಳನ್ನು ಒದಗಿಸುವಂಥ ಇನ್ನೊವೇಟಿವ್ ಆದ ಕ್ರೆಡಿಟ್ ಕಾರ್ಡ್​ ಇದು ಎಂದಿದ್ದಾರೆ.

ಆದರೆ, ನಿರ್ದಿಷ್ಟ ಗ್ರಾಹಕರು ಮಾತ್ರ ಈ ಹೊಸ ಕಾರ್ಡ್​ಗಳಿಗೆ ಅಪ್ಲೈ ಮಾಡುವುದಕ್ಕೆ ಸಾಧ್ಯ. ಪಾಲಿಸಿದಾರರು, ಏಜೆಂಟ್​ಗಳು, ಎಲ್​ಐಸಿ ಇಂಡಿಯಾದ ಉದ್ಯೋಗಿಗಳು ಮಾತ್ರ ಅಪ್ಲೈ ಮಾಡುವುದಕ್ಕೆ ಸಾಧ್ಯ. ಇನ್ನು ಎಲ್​ಐಸಿಯ ಅಂಗಸಂಸ್ಥೆಯಾದ ಎಲ್​ಐಸಿ ಹೌಸಿಂಗ್​ ಸಿಬ್ಬಂದಿ ಸಹ ಅರ್ಜಿ ಸಲ್ಲಿಸಬಹುದು ಎಂದು ಎಲ್​ಐಸಿ ಹೇಳಿಕೆಯಲ್ಲಿ ತಿಳಿಸಲಾಗಿದೆ. Eclat ಹಾಗೂ Lumine ಕಾರ್ಡ್​ಗಳಿಗೆ ಆಯಾ ಕ್ರೆಡಿಟ್​ಕಾರ್ಡ್​ದಾರರ ಅಗತ್ಯಕ್ಕೆ ತಕ್ಕಂತೆ ಮಿತಿ ಇರುತ್ತದೆ. Eclat ಕಾರ್ಡ್​ನಿಂದ ಪ್ರತಿ 100 ರೂಪಾಯಿ ಖರ್ಚಿಗೆ 4 ಪಾಯಿಂಟ್ಸ್​ ಸಿಗುತ್ತದೆ. Lumine ಕಾರ್ಡ್​ದಾರರು ಖರ್ಚು ಮಾಡುವ ಪ್ರತಿ 100 ರೂಪಾಯಿಗೆ 3 “ಡಿಲೈಟ್” ಪಾಯಿಂಟ್ಸ್ ದೊರೆಯುತ್ತವೆ. ಈ ಕಾರ್ಡ್​ಗಳಿಗೆ 4 ವರ್ಷದ ವ್ಯಾಲಿಡಿಟಿ ಇರಲಿದ್ದು, 48 ದಿನಗಳ ತನಕ ಬಡ್ಡಿರಹಿತವಾದ ಕ್ರೆಡಿಟ್ ಅವಧಿ ದೊರೆಯುತ್ತದೆ.

ಇದರ ಹೊರತುಪಡಿಸಿ, ಗ್ರಾಹಕರು ಈ ಕ್ರೆಡಿಟ್ ಕಾರ್ಡ್​ ಬಳಸಿ ಎಲ್​ಐಸಿ ರಿನೀವಲ್ ಅಥವಾ ಪ್ರೀಮಿಯಂ ಪಾವತಿ ಮಾಡಿದರೆ ದುಪ್ಪಟ್ಟು ರಿವಾರ್ಡ್ ಪಾಯಿಂಟ್ಸ್​ ಸಿಗುತ್ತದೆ. ಇನ್ನು ಎರಡು ಕಾರ್ಡ್​ಗಳಲ್ಲೂ 3000 ರೂಪಾಯಿ ಮೇಲ್ಪಟ್ಟ ಖರ್ಚು ಮಾಡಿದ ವಹಿವಾಟುಗಳನ್ನು ಇಎಂಐಗೆ ಕನ್ವರ್ಟ್​ ಮಾಡಿಕೊಳ್ಳುವ ವ್ಯವಸ್ಥೆ ಇರುತ್ತದೆ. ಇದಕ್ಕೆ ಶೂನ್ಯ ಪ್ರೊಸೆಸಿಂಗ್ ಶುಲ್ಕ ಹಾಗೂ ಅವಧಿಪೂರ್ವ ಶುಲ್ಕ, ಶೇ 1 ಫ್ಯೂಯೆಲ್ ಸರ್​ಚಾರ್ಜ್​ ಮನ್ನಾ ಆಗುತ್ತದೆ. ಆದರೆ 400 ರೂಪಾಯಿ ಮೇಲ್ಪಟ್ಟ ವಹಿವಾಟು ಅದಾಗಿರಬೇಕು. ಇನ್ನು ಈ ಕ್ರೆಡಿಟ್​ ಕಾರ್ಡ್​ಗಳ ಜತೆಗೆ ವಿಮಾನ ಅಪಘಾತ ಇನ್ಷೂರೆನ್ಸ್ ಕವರ್, ವಯಕ್ತಿಕ ಅಪಘಾತ/ಶಾಶ್ವತ ವೈಕಲ್ಯ ಕವರ್, ಕ್ರೆಡಿಟ್ ಶೀಲ್ಡ್ ಕವರ್ ಮತ್ತು ಕಾರ್ಡ್​ ಕಳೆದುಹೋದಲ್ಲಿ ಯಾವುದೇ ಶುಲ್ಕ ಇರಲ್ಲ. ಎಕ್ಲಾಟ್ ಕಾರ್ಡ್​ದಾರರಿಗೆ ಎಲ್ಲ ದೇಶೀಯ ಹಾಗೂ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾಂಪ್ಲಿಮೆಂಟರಿಯಾಗಿ ಲಾಂಜ್ ಸಂಪರ್ಕ ಇರುತ್ತದೆ.

ಇದನ್ನೂ ಓದಿ: Credit Card EMI: ಕ್ರೆಡಿಟ್ ಕಾರ್ಡ್ ಬಿಲ್ ಯಾವಾಗ ಮತ್ತು ಯಾಕೆ ಇಎಂಐಗೆ ಕನ್ವರ್ಟ್ ಮಾಡಿಸಬೇಕು ಗೊತ್ತಾ?

ಇದನ್ನೂ ಓದಿ: Credit score: ಸಾಲ, ಕ್ರೆಡಿಟ್ ಕಾರ್ಡ್ ಬಿಲ್ ಸರಿಯಾಗಿ ಪಾವತಿಸಿದರೂ ಕ್ರೆಡಿಟ್ ಸ್ಕೋರ್ ಯಾಕೆ ಕಡಿಮೆ ಆಗುತ್ತೆ?

(Two New Credit Cards Launched With LIC And IDBI Partnership Here Is The Benefits Of Cards)

Published On - 12:17 pm, Tue, 3 August 21