
ಇತ್ತೀಚಿನ ದಿನಗಳಲ್ಲಿ ಇಂಟರ್ನೆಟ್ (Internet) ನಮ್ಮ ದೈನಂದಿನ ಜೀವನದ ಪ್ರಮುಖ ಭಾಗವಾಗಿದೆ. ಆದರೆ ಇದೇ ಸೌಲಭ್ಯ ಕೆಲವೊಮ್ಮೆ ನಮ್ಮ ವೈಯಕ್ತಿಕ ಮಾಹಿತಿಯ ಸುರಕ್ಷತೆಗೆ ದೊಡ್ಡ ಅಪಾಯವನ್ನೂ ತಂದೊಡ್ಡಬಹುದು. ತಿಳಿದೋ ತಿಳಿಯದೆಯೋ ಹಲವು ವೆಬ್ಸೈಟ್ಗಳು, ಆನ್ಲೈನ್ ಡೈರೆಕ್ಟರಿಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ನಮ್ಮ ಮೊಬೈಲ್ ಸಂಖ್ಯೆ, ಮನೆಯ ವಿಳಾಸ ಹಾಗೂ ಇಮೇಲ್ ಐಡಿ ಸಾರ್ವಜನಿಕವಾಗಿ ಲಭ್ಯವಾಗಿರಬಹುದು. ಇದರಿಂದ ಅಪರಿಚಿತ ವ್ಯಕ್ತಿಯೊಬ್ಬರು ಗೂಗಲ್ನಲ್ಲಿ ನಿಮ್ಮ ಹೆಸರನ್ನು ಹುಡುಕುವ ಮೂಲಕ ನಿಮ್ಮ ವೈಯಕ್ತಿಕ ವಿವರಗಳನ್ನು ಸುಲಭವಾಗಿ ತಿಳಿದುಕೊಳ್ಳಬಹುದು.
ಇಂದಿನ ದಿನಗಳಲ್ಲಿ ಸೈಬರ್ ವಂಚನೆ, ಸ್ಪ್ಯಾಮ್ ಕರೆಗಳು ಮತ್ತು ಡಿಜಿಟಲ್ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿವೆ. ಹೀಗಾಗಿ ಸಾರ್ವಜನಿಕ ವೇದಿಕೆಗಳಲ್ಲಿ ಲಭ್ಯವಿರುವ ವೈಯಕ್ತಿಕ ಮಾಹಿತಿಯನ್ನು ತೆಗೆದುಹಾಕುವುದು ಮುಖ್ಯವಾಗಿದೆ. ಉತ್ತಮ ಸಂಗತಿಯೆಂದರೆ, ಗೂಗಲ್ ತನ್ನ ಬಳಕೆದಾರರಿಗೆ ಸರ್ಚ್ ಫಲಿತಾಂಶಗಳಲ್ಲಿ ಕಾಣಿಸಿಕೊಳ್ಳುವ ವೈಯಕ್ತಿಕ ಮಾಹಿತಿಯನ್ನು ತೆಗೆದುಹಾಕುವಂತೆ ಮನವಿ ಸಲ್ಲಿಸಲು ಅವಕಾಶ ನೀಡುತ್ತದೆ. ಇದಕ್ಕಾಗಿ ಸರಳ ಪ್ರಕ್ರಿಯೆಯನ್ನು ಅನುಸರಿಸಬೇಕಾಗುತ್ತದೆ.
ಬಳಕೆದಾರರ ಖಾಸಗಿತನವನ್ನು ಕಾಪಾಡುವ ಉದ್ದೇಶದಿಂದ ಗೂಗಲ್ Results about you ಎಂಬ ಉಪಯುಕ್ತ ಸೌಲಭ್ಯವನ್ನು ಪರಿಚಯಿಸಿದೆ. ಇಂಟರ್ನೆಟ್ನಲ್ಲಿ ಲಭ್ಯವಿರುವ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಗಮನಿಸುವುದು ಮತ್ತು ಅದನ್ನು ಗೂಗಲ್ ಸರ್ಚ್ ಫಲಿತಾಂಶಗಳಿಂದ ತೆಗೆದುಹಾಕಲು ಮನವಿ ಸಲ್ಲಿಸುವುದು ಈ ಸೌಲಭ್ಯದ ಉದ್ದೇಶವಾಗಿದೆ.
ಈ ಟೂಲ್ನಲ್ಲಿ ನಿಮ್ಮ ಹೆಸರು, ಮೊಬೈಲ್ ಸಂಖ್ಯೆ, ಇಮೇಲ್ ಐಡಿ ಮತ್ತು ಮನೆಯ ವಿಳಾಸವನ್ನು ನಮೂದಿಸಿದರೆ, ಗೂಗಲ್ ಈ ವಿವರಗಳು ಸರ್ಚ್ ಫಲಿತಾಂಶಗಳಲ್ಲಿ ಕಾಣಿಸಿಕೊಳ್ಳುತ್ತಿವೆಯೇ ಎಂಬುದನ್ನು ಪರಿಶೀಲಿಸಲು ನೆರವಾಗುತ್ತದೆ. ನಿಮ್ಮ ವೈಯಕ್ತಿಕ ಮಾಹಿತಿ ಸರ್ಚ್ ಫಲಿತಾಂಶಗಳಲ್ಲಿ ಕಾಣಿಸಿಕೊಂಡರೆ, ಅದರ ಕುರಿತು ಸೂಚನೆ ಪಡೆಯುವ ವ್ಯವಸ್ಥೆಯೂ ಇದೆ. ಬಳಿಕ ಸಂಬಂಧಪಟ್ಟ ಲಿಂಕ್ ಅನ್ನು ತೆಗೆದುಹಾಕುವಂತೆ ಗೂಗಲ್ಗೆ ಮನವಿ ಸಲ್ಲಿಸಬಹುದು.
ಜಾಗತಿಕ ಎಐ ಪೂರೈಕೆ ಸರಪಳಿ ವ್ಯವಸ್ಥೆಗೆ ಮೈತ್ರಿ; ಅಮೆರಿಕ ನೇತೃತ್ವದ ಗುಂಪಿಗೆ ಭಾರತ ಸೇರ್ಪಡೆ
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ