Edible Oil Price: ತೈಲ ಬೆಲೆಯಲ್ಲಿ ಭಾರೀ ಕುಸಿತ, ಚಿನ್ನ- ಬೆಳ್ಳಿಯ ಆಮದು ಸುಂಕವೂ ಕಡಿತ

| Updated By: Digi Tech Desk

Updated on: Jul 16, 2022 | 3:18 PM

ಕೇಂದ್ರ ಸರ್ಕಾರದಿಂದ ಚಿನ್ನ, ಬೆಳ್ಳಿ ಹಾಗೂ ಖಾದ್ಯ ತೈಲದ ಮೇಲಿನ ಮೂಲ ಆಮದು ಸುಂಕದ ಕಡಿತ ಮಾಡಲಾಗಿದ್ದು, ಆ ನಂತರ ಖಾದ್ಯ ತೈಲದ ಬೆಲೆ ಎಷ್ಟಿದೆ ಎಂಬ ವಿವರ ಇಲ್ಲಿದೆ.

Edible Oil Price: ತೈಲ ಬೆಲೆಯಲ್ಲಿ ಭಾರೀ ಕುಸಿತ, ಚಿನ್ನ- ಬೆಳ್ಳಿಯ ಆಮದು ಸುಂಕವೂ ಕಡಿತ
ಸಾಂದರ್ಭಿಕ ಚಿತ್ರ
Follow us on

ಖಾದ್ಯ ತೈಲದ (Edible Oil) ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಜನ ಸಾಮಾನ್ಯರಿಗೆ ಈಗ ನೆಮ್ಮದಿಯ ಸುದ್ದಿ ಬಂದಿದೆ. ದೆಹಲಿಯ ಎಣ್ಣೆಕಾಳುಗಳ ಮಾರುಕಟ್ಟೆಯಲ್ಲಿ ಹೆಚ್ಚಿನ ಖಾದ್ಯ ತೈಲಗಳು ಕುಸಿತ ಕಂಡಿವೆ. ಜಾಗತಿಕ ಮಾರುಕಟ್ಟೆಯಲ್ಲಿ ಖಾದ್ಯ ತೈಲ ಬಿಕ್ಕಟ್ಟಿನಿಂದಾಗಿ ತೈಲ ಬೆಲೆಗಳು ದೀರ್ಘ ಕಾಲದವರೆಗೆ ಏರಿಕೆ ಆಗುತ್ತಲೇ ಇದ್ದವು. ಭಾರತದಲ್ಲಿ ಖಾದ್ಯ ತೈಲವನ್ನು ವಿದೇಶದಿಂದ ಹೆಚ್ಚಿನ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳಲಾಗುತ್ತದೆ. ರಷ್ಯಾ, ಮಲೇಷ್ಯಾ ಮತ್ತು ಇಂಡೋನೇಷ್ಯಾದಂತಹ ದೇಶಗಳಿಂದ ಸಹ ಆಮದು ಮಾಡಿಕೊಳ್ಳುವುದನ್ನು ಒಳಗೊಂಡಿದೆ. ಮಾರುಕಟ್ಟೆ ಮೂಲಗಳ ಪ್ರಕಾರ, ಮಲೇಷ್ಯಾ ಎಕ್ಸ್‌ಚೇಂಜ್ ಸುಮಾರು ಶೇ 8ರಷ್ಟು ಕುಸಿದಿದ್ದು, ಇದರ ಪರಿಣಾಮವಾಗಿ ದೆಹಲಿಯ ತೈಲ-ಎಣ್ಣೆಕಾಳುಗಳ ಮಾರುಕಟ್ಟೆಯಲ್ಲಿ ಸಾಸಿವೆ, ಕಡಲೆಕಾಯಿ, ಸೋಯಾಬೀನ್ ಎಣ್ಣೆ-ಎಣ್ಣೆಕಾಳುಗಳು, ಸಿಪಿಒ, ಹತ್ತಿಬೀಜ ಮತ್ತು ಪಾಮೊಲಿನ್ ಎಣ್ಣೆ ಸೇರಿದಂತೆ ಹೆಚ್ಚಿನ ತೈಲ-ಎಣ್ಣೆಕಾಳುಗಳ ಬೆಲೆಯಲ್ಲಿ ಕಂಡುಬಂದಿದೆ.

ಗರಿಷ್ಠ ಮಾರಾಟದ ಬೆಲೆ ಬಗ್ಗೆ ಸರ್ಕಾರ ಗಂಭೀರ

ದೇಶದ ಅನೇಕ ತೈಲ ಬ್ರಾಂಡ್‌ಗಳು ಅನಿಯಂತ್ರಿತ ಎಂಆರ್‌ಪಿಯೊಂದಿಗೆ ತೈಲವನ್ನು ಮಾರಾಟ ಮಾಡುತ್ತಿವೆ. ಉದಾಹರಣೆಗೆ, ತೈಲ ಪ್ಯಾಕೆಟ್‌ನಲ್ಲಿ ಲೀಟರ್‌ಗೆ 205-225 ರೂಪಾಯಿ ಎಂದು ಬರೆಯಲಾಗಿರುತ್ತದೆ. ಆದರೆ ವಾಸ್ತವದಲ್ಲಿ ಅದರ ಗರಿಷ್ಠ ಮಾರಾಟ ಬೆಲೆ ಲೀಟರ್‌ಗೆ 150-155 ರೂಪಾಯಿ ಆಗಿರಬೇಕು. ಸರ್ಕಾರವು ಈ ಬಗ್ಗೆ ಗಂಭೀರವಾಗಿ ಚರ್ಚಿಸಿ ಎಂಆರ್​ಪಿ ಬಗ್ಗೆ ನೇರ ಕ್ರಮ ಕೈಗೊಳ್ಳಲು ಚಿಂತನೆ ನಡೆಸಿದೆ.

ಮಾರುಕಟ್ಟೆಯಲ್ಲಿನ ಖಾದ್ಯ ತೈಲದ ತಾಜಾ ಬೆಲೆಗಳು ಇಲ್ಲಿವೆ

– ಸಾಸಿವೆ ಎಣ್ಣೆ ಕಾಳುಗಳು – ಕ್ವಿಂಟಲ್‌ಗೆ ರೂ 7,295-7,345 (ಶೇಕಡಾ 42 ಕಂಡೀಷನ್ ಬೆಲೆ)

– ನೆಲಗಡಲೆ – 6,735 ರೂ. – 6,860 ರೂ. ಕ್ವಿಂಟಲ್‌ಗೆ

– ಕಡಲೆ ಎಣ್ಣೆ ಗಿರಣಿ ವಿತರಣೆ (ಗುಜರಾತ್) – ಪ್ರತಿ ಕ್ವಿಂಟಲ್‌ಗೆ 15,750 ರೂ.

– ನೆಲಗಡಲೆ ದ್ರಾವಕ ಸಂಸ್ಕರಿಸಿದ ತೈಲ ರೂ 2,640ರಿಂದ ರೂ. 2,830 ಪ್ರತಿ ಟಿನ್

– ಸಾಸಿವೆ ಎಣ್ಣೆ ದಾದ್ರಿ- ಕ್ವಿಂಟಲ್‌ಗೆ 14,650 ರೂ.

– ಸರ್ಸನ್ ಪಕ್ಕಿ ಘನಿ – ಪ್ರತಿ ಟಿನ್​ಗೆ 2,315- 2,395 ರೂ.

– ಸಾಸಿವೆ ಕಚ್ಚಿ ಘನಿ – ಟಿನ್​ಗೆ 2,355-2,460 ರೂ.

– ಎಳ್ಳು ಎಣ್ಣೆ ಗಿರಣಿ ವಿತರಣೆ – ಪ್ರತಿ ಕ್ವಿಂಟಲ್‌ಗೆ 17,000-18,500 ರೂ.

– ಸೋಯಾಬೀನ್ ಆಯಿಲ್ ಮಿಲ್ ಡೆಲಿವರಿ ದೆಹಲಿ – ಕ್ವಿಂಟಲ್‌ಗೆ 13,700 ರೂ.

– ಸೋಯಾಬೀನ್ ಮಿಲ್ ಡೆಲಿವರಿ ಇಂದೋರ್ – ಕ್ವಿಂಟಲ್‌ಗೆ 12,950 ರೂ.

– ಸೋಯಾಬೀನ್ ಆಯಿಲ್ ಡೇಗಂ, ಕಾಂಡ್ಲಾ – ಕ್ವಿಂಟಲ್‌ಗೆ 11,750 ರೂ

– ಸಿಪಿಒ ಎಕ್ಸ್-ಕಾಂಡ್ಲಾ – ಕ್ವಿಂಟಲ್‌ಗೆ 11,000 ರೂ.

– ಹತ್ತಿಬೀಜ ಗಿರಣಿ ವಿತರಣೆ (ಹರ್ಯಾಣ) – ಪ್ರತಿ ಕ್ವಿಂಟಲ್‌ಗೆ 13,950 ರೂ.

– ಪಾಮೊಲಿನ್ ಆರ್‌ಬಿಡಿ, ದೆಹಲಿ – ಕ್ವಿಂಟಲ್‌ಗೆ 12,800 ರೂ.

– ಪಾಮೊಲಿನ್ ಎಕ್ಸ್-ಕಾಂಡ್ಲಾ – ಕ್ವಿಂಟಲ್‌ಗೆ ರೂ. 11,600 (ಜಿಎಸ್‌ಟಿ ಇಲ್ಲದೆ)

– ಸೋಯಾಬೀನ್ ಧಾನ್ಯ – ಕ್ವಿಂಟಲ್‌ಗೆ 6,250-6,300 ರೂ.

– ಸೋಯಾಬೀನ್ ಕ್ವಿಂಟಲ್​ಗೆ 6,000-6,050 ರೂ.

– ಮೆಕ್ಕೆಜೋಳ ಖಾಲ್ (ಸಾರಿಸ್ಕಾ) ಕ್ವಿಂಟಲ್‌ಗೆ 4,010 ರೂ.

ಚಿನ್ನ, ಬೆಳ್ಳಿ ಮತ್ತು ಕಚ್ಚಾ ಖಾದ್ಯ ತೈಲಗಳ ಬೆಲೆಗಳು ತಣ್ಣಗಾಗುವ ಲಕ್ಷಣಗಳನ್ನು ತೋರಿಸುತ್ತಿರುವ ಸಮಯದಲ್ಲಿ ಕೇಂದ್ರ ಸರ್ಕಾರವು ಜುಲೈ 15ರಂದು ಮೂಲ ಆಮದು ಬೆಲೆಗಳಲ್ಲಿ ಕಡಿತವನ್ನು ಘೋಷಿಸಿತು. ಹಣಕಾಸು ಸಚಿವಾಲಯ ಹೊರಡಿಸಿದ ಹೇಳಿಕೆ ಪ್ರಕಾರ, ಚಿನ್ನದ ಮೇಲಿನ ಮೂಲ ಆಮದು ಬೆಲೆಯನ್ನು ಪ್ರತಿ 10 ಗ್ರಾಂಗೆ ಯುಎಸ್​ಡಿ 37 ಮತ್ತು ಪ್ರತಿ ಕಿಲೋಗ್ರಾಂಗೆ ಬೆಳ್ಳಿಯ ಮೇಲೆ ಯುಎಸ್​ಡಿ 3ರಷ್ಟು ಕಡಿತಗೊಳಿಸಲಾಗಿದೆ. ಈ ಕಡಿತದೊಂದಿಗೆ ಚಿನ್ನದ ಮೂಲ ಆಮದು ಬೆಲೆ ಯುಎಸ್​ಡಿ 585/10 ಗ್ರಾಮ್​ನಿಂದ ಯುಎಸ್​ಡಿ 548/10 ಗ್ರಾಮ್​ಗೆ ಇಳಿಯುತ್ತದೆ. ತೊಲಾ ಬಾರ್‌ಗಳ ಹೊರತಾಗಿ ಚಿನ್ನದ ಬಾರ್‌ಗಳ ಆಮದು, ಬೇರಿಂಗ್ ತಯಾರಕರು ಅಥವಾ ರಿಫೈನರ್‌ಗಳ ಕೆತ್ತಿದ ಕ್ರಮ ಸಂಖ್ಯೆ ಮತ್ತು ಮೆಟ್ರಿಕ್ ಘಟಕಗಳಲ್ಲಿ ವ್ಯಕ್ತಪಡಿಸಿದ ತೂಕದ ಮೇಲೆ ತಾಜಾ ಬೆಲೆ ಅನ್ವಯಿಸುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಪ್ರತಿ ಕಿಲೋಗ್ರಾಂ ಬೆಳ್ಳಿಯ ಆಮದು ಮೇಲಿನ ಮೂಲ ಆಮದು ಬೆಲೆಯನ್ನು ಪ್ರಸ್ತುತ ಯುಎಸ್​ಡಿ 614ರಿಂದ ಯುಎಸ್​ಡಿ 611ಕ್ಕೆ ಇಳಿಸಲಾಗಿದೆ. ಪದಕಗಳು ಮತ್ತು ಬೆಳ್ಳಿಯ ನಾಣ್ಯಗಳನ್ನು ಹೊರತುಪಡಿಸಿ ಬೆಳ್ಳಿಯ ಅಂಶವು ಶೇ 99.9ಕ್ಕಿಂತ ಕಡಿಮೆಯಿಲ್ಲದಂತೆ ಇರುವ ಯಾವುದೇ ಬೆಳ್ಳಿಯ ಮೇಲೆ ಅನ್ವಯಿಸುತ್ತದೆ ಎಂದು ಸರ್ಕಾರ ಹೇಳಿದೆ. ಕೇಂದ್ರವು ಕಚ್ಚಾ ತಾಳೆ ಎಣ್ಣೆಯ ಮೂಲ ಆಮದು ಬೆಲೆಯನ್ನು ಕಡಿತಗೊಳಿಸಿದೆ, ಪ್ರತಿ ಟನ್‌ಗೆ ಯುಎಸ್​ಡಿ 1,401 (ಟನ್​) ನಿಂದ ಯುಎಸ್​ಡಿ 1,171 ಕ್ಕೆ ಇಳಿಸಿದೆ. RBD ಪಾಮ್ ಆಯಿಲ್ ಬೇಸ್ ಆಮದು ಬೆಲೆಯನ್ನು ಯುಎಸ್​ಡಿ 1,482/ಟನ್​ನಿಂದ ಯುಎಸ್​ಡಿ 1,346/ಟನ್​ಗೆ ಇಳಿಸಲಾಗಿದೆ.

ಕಚ್ಚಾ ಪಾಮೋಲಿನ್‌ನ ಮೂಲ ಆಮದು ಬೆಲೆಯನ್ನು ಯುಎಸ್​ಡಿ 1,545/ಟನ್​ನಿಂದ ಯುಎಸ್​ಡಿ 1,358/ಟನ್​ಗೆ ಕಡಿತಗೊಳಿಸಲಾಗಿದೆ. RBD ಪಾಮೊಲಿನ್‌ಗೆ ಯುಎಸ್​ಡಿ 1,548/ಟನ್​ನಿಂದ ಯುಎಸ್​ಡಿ 1,361/ಟನ್​ಗೆ ಕಡಿಮೆಯಾಗಿದೆ. ಸರ್ಕಾರವು ಕಚ್ಚಾ ಸೋಯಾ ಎಣ್ಣೆಯ ಮೂಲ ಆಮದು ಬೆಲೆಯನ್ನು ಸಹ ಕಡಿಮೆ ಮಾಡಿದ್ದು, ಯುಎಸ್​ಡಿ 1,572/ಟನ್​ನಿಂದ ಯುಎಸ್​ಡಿ 1,460/ಟನ್​ಗೆ ಕಡಿಮೆ ಮಾಡಿದೆ.

Published On - 1:20 pm, Sat, 16 July 22