ಭಾರತದಲ್ಲಿ ಆದಾಯ ತೆರಿಗೆ ವ್ಯವಸ್ಥೆ ಶುರುವಾಗಿ ಇವತ್ತಿಗೆ (ಜುಲೈ 24) 163 ವರ್ಷ ಆಯಿತು. ಆದಾಯ ತೆರಿಗೆ (Inclome Tax Return) ವ್ಯವಸ್ಥೆ 150 ವರ್ಷ ಗತಿಸಿದ ಗೌರವಾರ್ಥ 2010ರಿಂದ ಆದಾಯ ತೆರಿಗೆ ದಿನವನ್ನು ಆಚರಿಸಲಾಗುತ್ತದೆ. ಪ್ರತೀ ವರ್ಷ ಜುಲೈ 24ಕ್ಕೆ ಆದಾಯ ತೆರಿಗೆ ದಿನದ ಆಚರಣೆ ಇರುತ್ತದೆ. ಈ ವರ್ಷ 164ನೇ ಇನ್ಕಮ್ ಟ್ಯಾಕ್ಸ್ ಡೇ (Income Tax Day) ಆಚರಣೆಯನ್ನು ನವದೆಹಲಿಯ ವಿಜ್ಞಾನ ಭವನದ ಸಭಾಂಗಣವೊಂದರಲ್ಲಿ ಆಯೋಜಿಸಲಾಗಿದ್ದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಉಪಸ್ಥಿತರಿರಲಿದ್ದಾರೆ.
ದೇಶದ ಆರ್ಥಿಕ ಆರೋಗ್ಯಕ್ಕೆ ಆದಾಯ ತೆರಿಗೆ ಎಷ್ಟು ಮುಖ್ಯ ಎಂಬುದನ್ನು ನಾಗರಿಕರಿಗೆ ಮನವರಿಕೆ ಮಾಡುವ ಪ್ರಯತ್ನಗಳು ಇಂದು ನಡೆಯಲಿವೆ. ಇದೇ ವೇಳೆ, ಆದಾಯ ತೆರಿಗೆ ವ್ಯವಸ್ಥೆ ಭಾರತದಲ್ಲಿ ಹೇಗೆ ಹುಟ್ಟಿತು ಎಂಬುದರ ಹಿಂದೆ ಕುತೂಹಲಕರ ಕಥೆ ಇದೆ.
ಇದನ್ನೂ ಓದಿ: ಕಾರ್ಗಿಲ್ ಯುದ್ಧದ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಪ್ರಮುಖ ಸಂಗತಿಗಳು
1860ರ ಜುಲೈ 24ರಂದು ಸರ್ ಜೇಮ್ಸ್ ವಿಲ್ಸನ್ ಅವರು ಭಾರತದಲ್ಲಿ ಆದಾಯ ತೆರಿಗೆ ವ್ಯವಸ್ಥೆ ಮೊದಲಿಗೆ ಜಾರಿಗೆ ತಂದರು. ಅಲ್ಲಿಯವರೆಗೂ ಭಾರತದಲ್ಲಿ ಶತಶತಮಾನಗಳಿಂದ ವಿವಿಧ ತೆರಿಗೆ ವ್ಯವಸ್ಥೆ ಇತ್ತಾದರೂ ಆದಾಯ ತೆರಿಗೆ ಎಂಬುದು ಇರಲಿಲ್ಲ. ಬ್ರಿಟಿಷರು 19ನೇ ಶತಮಾನದಲ್ಲಿ ಆದಾಯ ತೆರಿಗೆ ವ್ಯವಸ್ಥೆ ತರಲು ಕುತೂಹಲಕಾರಿ ಕಾರಣ ಇದೆ. 1857ರಲ್ಲಿ ಸಿಪಾಯಿ ದಂಗೆ ಘಟನೆ ಬಗ್ಗೆ ನೀವು ಕೇಳಿರಬಹುದು. ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮ ಎಂದು ಅದನ್ನು ಪರಿಗಣಿಸಲಾಗುತ್ತದೆ. ಬ್ರಿಟಿಷ್ ಸೇನೆಯಲ್ಲಿದ್ದ ಭಾರತೀಯ ಸೈನಿಕರು ದಂಗೆ ಎದ್ದ ಘಟನೆ ಅದು. ಅದು ಯಶಸ್ವಿಯಾಗದೇ ಹೋದರೂ ಬ್ರಿಟಿಷರನ್ನು ನಡುಗಿಸಿದ್ದು ಹೌದು.
ಸಿಪಾಯಿ ದಂಗೆಯಿಂದ ಬ್ರಿಟಿಷರಿಗೆ ಭಾರೀ ನಷ್ಟವಾಗಿತ್ತು. ನಷ್ಟ ಸರಿಪಡಿಸಲೋ ಅಥವಾ ಭಾರತೀಯರ ಮೇಲೆ ಮುಯ್ಯಿ ತೀರಿಸಿಕೊಳ್ಳಲೂ ಬ್ರಿಟಿಷರು ಆದಾಯ ತೆರಿಗೆ ಪದ್ಧತಿಯನ್ನು ಭಾರತದಲ್ಲಿ 1860ರಲ್ಲಿ ಜಾರಿಗೆ ತಂದಿತು. ಆ ವರ್ಷ ಜುಲೈ 24ರಿಂದ ತೆರಿಗೆ ವಸೂಲಿ ಕಾರ್ಯವನ್ನು ಅಧಿಕೃತಗೊಳಿಸಲಾಯಿತು. 1922ರಲ್ಲಿ ಆದಾಯ ತೆರಿಗೆ ಕಾಯ್ದೆ ಅಧಿಕೃತವಾಗಿ ಚಾಲನೆಗೆ ಬಂದಿತು.
ಇದನ್ನೂ ಓದಿ: ದಿನಕ್ಕೆ 4 ಗಂಟೆ, ವಾರಕ್ಕೆ 4 ದಿನ ಕೆಲಸ; ಸಂಬಳ 50,000 ರೂ ಬೇಕಂತೆ; ಹೊಸಬರ ಬೇಡಿಕೆಗೆ ಸಂದರ್ಶಕರ ಪ್ರತಿಕ್ರಿಯೆ ಹೇಗಿತ್ತು..!
1939ರಲ್ಲಿ ಆದಾಯ ತೆರಿಗೆ ಕಾಯ್ದೆಗೆ ಮಹತ್ವದ ತಿದ್ದುಪಡಿ ತರಲಾಯಿತು. ಮೇಲ್ಮನವಿ ವ್ಯವಸ್ಥೆಯನ್ನು ಆಡಳಿತ ಕಾರ್ಯಗಳಿಂದ ಪ್ರತ್ಯೇಕಗೊಳಿಸಲಾಯಿತು.
ಭಾರತದ ಸರ್ಕಾರಗಳಿಗೆ ಈಗ ಪ್ರಮುಖ ಆದಾಯ ಮೂಲಗಳಲ್ಲಿ ಆದಾಯ ತೆರಿಗೆಯೂ ಒಂದಾಗಿದೆ. 2022-23ರ ಹಣಕಾಸು ವರ್ಷದಲ್ಲಿ ಭಾರತದಲ್ಲಿ ಸಂಗ್ರಹವಾದ ಒಟ್ಟು ಆದಾಯ ತೆರಿಗೆ ಮೊತ್ತ ಸುಮಾರು 20 ಲಕ್ಷ ಕೋಟಿ ರೂಪಾಯಿ ಇದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 12:19 pm, Mon, 24 July 23