IT Notice: ಆದಾಯ ತೆರಿಗೆ ನೋಟೀಸ್ ಯಾರಿಗೆ ಬರುತ್ತದೆ? ಯಾವ ತಪ್ಪಾಗಿದ್ದರೆ ಐಟಿ ಇಲಾಖೆ ಕ್ರಮ ಕೈಗೊಳ್ಳುತ್ತದೆ? ಕಾರಣ ತಿಳಿದಿರಿ

Income Tax Returns: ಒಂದು ವೇಳೆ ಇನ್ಕಮ್ ಟ್ಯಾಕ್ಸ್ ಇಲಾಖೆಯಿಂದ ನೋಟೀಸ್ ಬಂದರೆ ನಿರ್ಲಕ್ಷಿಸದಿರಿ. ಅಥವಾ ಗಾಬರಿ ಪಟ್ಟುಕೊಳ್ಳುವ ಅಗತ್ಯವೂ ಇಲ್ಲ. ನೋಟೀಸ್​ನಲ್ಲಿ ಕೇಳಲಾಗುವ ಎಲ್ಲಾ ಅಗತ್ಯ ದಾಖಲೆಗಳನ್ನು ಐಟಿ ಇಲಾಖೆಗೆ ಒದಗಿಸಿ ಸಾಕು.

IT Notice: ಆದಾಯ ತೆರಿಗೆ ನೋಟೀಸ್ ಯಾರಿಗೆ ಬರುತ್ತದೆ? ಯಾವ ತಪ್ಪಾಗಿದ್ದರೆ ಐಟಿ ಇಲಾಖೆ ಕ್ರಮ ಕೈಗೊಳ್ಳುತ್ತದೆ? ಕಾರಣ ತಿಳಿದಿರಿ
ಐಟಿ ಇಲಾಖೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Apr 08, 2023 | 5:09 PM

ಈಗ ಐಟಿ ರಿಟರ್ನ್ ಫೈಲ್ ಮಾಡುವ ಸಮಯ. ಇದೆಲ್ಲಾ ಆದ ಮೇಲೆ ಯಾರಿಗೆ ಬೇಕಾದರೂ ಆದಾಯ ತೆರಿಗೆ ಇಲಾಖೆಯಿಂದ ನೋಟೀಸ್ (Income Tax Notice) ಬರಬಹುದು. ಒಂದು ವೇಳೆ ಇನ್ಕಮ್ ಟ್ಯಾಕ್ಸ್ ಇಲಾಖೆಯಿಂದ ನೋಟೀಸ್ ಬಂದರೆ ನಿರ್ಲಕ್ಷಿಸದಿರಿ. ಅಥವಾ ಗಾಬರಿ ಪಟ್ಟುಕೊಳ್ಳುವ ಅಗತ್ಯವೂ ಇಲ್ಲ. ನೋಟೀಸ್​ನಲ್ಲಿ ಕೇಳಲಾಗುವ ಎಲ್ಲಾ ಅಗತ್ಯ ದಾಖಲೆಗಳನ್ನು ಐಟಿ ಇಲಾಖೆಗೆ ಒದಗಿಸಿ ಸಾಕು. ಆದಾಯ ತೆರಿಗೆ ಇಲಾಖೆ ನೋಟೀಸ್ ನೀಡಲು ಬೇರೆ ಬೇರೆ ಕಾರಣಗಳಿರಬಹುದು. ಸಾಮಾನ್ಯವಾಗಿ ನಿಗದಿತ ದಿನಾಂಕದೊಳಗೆ ಐಟಿ ರಿಟರ್ನ್ (IT Returns) ಫೈಲ್ ಮಾಡದವರಿಗೆ ಹೆಚ್ಚಾಗಿ ನೋಟೀಸ್ ಬರಬಹುದು. ಐಟಿಆರ್ ಫೈಲ್ ಮಾಡಿದವರಿಗೂ ಇಲಾಖೆಯಿಂದ ನೋಟೀಸ್ ಬರಬಹುದು. ಅದಕ್ಕೆ ಬೇರೆ ಬೇರೆ ಕಾರಣಗಳಿರುತ್ತವೆ.

ಒಂದು ಅಂಶ ಗಮನದಲ್ಲಿರಲಿ, ನಿಮಗೆ ಆದಾಯ ತೆರಿಗೆ ಇಲಾಖೆಯಿಂದ ನೋಟೀಸ್ ಬಂದಿದ್ದರೆ ನೀವು ಏನೋ ಮಾಡಿದ್ದಿರಲೇಬೇಕು ಎಂದಲ್ಲ. ನೀವು ಫೈಲ್ ಮಾಡಿದ ಐಟಿ ರಿಟರ್ನ್​ನಲ್ಲಿ ಕೆಲ ಅಂಶಗಳು ಅನುಮಾನಾಸ್ಪದವಾಗಿ ಕಂಡು ಬಂದಿದ್ದಿರಬಹುದು. ನಿಮ್ಮ ವಾಸ್ತವ ಆದಾಯಕ್ಕೂ ಘೋಷಿತ ಆದಾಯಕ್ಕೂ ದೊಡ್ಡ ಮಟ್ಟದಲ್ಲಿ ವ್ಯತ್ಯಾಸ ಗೋಚರಿಸಿದ್ದಿರಬಹುದು. ಅಥವಾ ಸರಿಯಾದ ದಾಖಲೆಗಳನ್ನು ಫೈಲಿಂಗ್​ನಲ್ಲಿ ಒದಗಿಸದೇ ಇದ್ದಿರಬಹುದು. ದೊಡ್ಡ ಪ್ರಮಾಣದ ವಹಿವಾಟುಗಳನ್ನು ಫೈಲಿಂಗ್​ನಲ್ಲಿ ತೋರಿಸಲು ಮರೆತಿರಬಹುದು.

ಅಥವಾ ನಿಗದಿಗಿಂತ ಹೆಚ್ಚು ಪ್ರಮಾಣದಲ್ಲಿ ಡಿಡಕ್ಷನ್​ಗಳನ್ನು ತೋರಿಸಿ ಕ್ಲೈಮ್ ಮಾಡಿದ್ದರೂ ನಿಮಗೆ ನೋಟೀಸ್ ಬರಬಹುದು. ಹೀಗಾಗಿ, ಐಟಿ ಇಲಾಖೆ ಕೊಡುವ ನೋಟೀಸ್​ನಲ್ಲಿರುವ ಅಂಶಗಳನ್ನು ಗಮನಿಸಿ, ಅದಕ್ಕೆ ತಕ್ಕಂತೆ ಸ್ಪಂದಿಸುವುದು ನಿಮ್ಮ ಕರ್ತವ್ಯ.

ಇದನ್ನೂ ಓದಿKMF vs Amul: ಕೆಎಂಎಫ್ ಎದುರು ಸೆಣಸಿ ಗೆಲ್ಲಲು ಅಮುಲ್​ಗೆ ಆಗುತ್ತಾ? ಎರಡು ದೈತ್ಯ ಹಾಲು ಉತ್ಪಾದಕರ ಮಧ್ಯೆ ಒಂದು ಹೋಲಿಕೆ

ಆದಾಯ ತೆರಿಗೆ ಇಲಾಖೆಯಿಂದ ನಿಮಗೆ ಯಾವ್ಯಾವ ಕಾರಣಕ್ಕೆ ನೋಟೀಸ್ ಬರಬಹುದು ಎಂದು ಕೆಲ ಸಂಭಾವ್ಯ ಕಾರಣಗಳನ್ನು ಇಲ್ಲಿ ಕೊಡಲಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡಿರಿ.

ನೈಜ ಆದಾಯ ಮತ್ತು ಘೋಷಿತ ಆದಾಯದಲ್ಲಿ ಹೆಚ್ಚು ವ್ಯತ್ಯಾಸ ಇದ್ದರೆ ಐಟಿ ನೋಟೀಸ್ ಬರುತ್ತೆ:

ಬಹಳ ದೊಡ್ಡ ಪ್ರಮಾಣದ ಆದಾಯ ಇದ್ದವರು ಹೆಚ್ಚು ತೆರಿಗೆ ಕಟ್ಟಬೇಕು. ಕೆಲವರು ಈ ತೆರಿಗೆ ಹೊರೆಯಿಂದ ನುಣುಚಿಕೊಳ್ಳಲು ತಮ್ಮ ಆದಾಯವನ್ನು ಮುಚ್ಚಿಡಬಹುದು. ಐಟಿ ರಿಟರ್ನ್ ಫೈಲ್ ಮಾಡುವ ತಮ್ಮ ವಾಸ್ತವ ಆದಾಯವನ್ನು ಮರೆ ಮಾಚಬಹುದು. ಅಥವಾ ಕಡಿಮೆ ಆದಾಯವನ್ನು ತೋರಿಸಬಹುದು. ಇಂಥ ಪ್ರಕರಣಗಳ ಬಗ್ಗೆ ಐಟಿ ಇಲಾಖೆ ಬಹಳ ನಿಗಾ ವಹಿಸುತ್ತದೆ. ಆದ್ದರಿಂದ ಘೋಷಿತ ಆದಾಯ ಮತ್ತು ವಾಸ್ತವ ಆದಾಯದಲ್ಲಿ ಹೆಚ್ಚು ವ್ಯತ್ಯಾಸ ಇರುವುದು ಕಂಡು ಬಂದರೆ ಅಂಥ ತೆರಿಗೆದಾರರಿಗೆ ಇಲಾಖೆ ನೋಟೀಸ್ ನೀಡುತ್ತದೆ.

ದೊಡ್ಡ ಮೊತ್ತದ ವಹಿವಾಟಿನ ವಿವರ ಮುಚ್ಚಿಟ್ಟರೆ ಐಟಿ ನೋಟೀಸ್ ಬರುತ್ತೆ

ದೊಡ್ಡ ಪ್ರಮಾಣದ ವಹಿವಾಟು ನಡೆಸಿದ್ದರೆ ಅದನ್ನು ಐಟಿ ರಿಟರ್ನ್​ನಲ್ಲಿ ತಪ್ಪದೇ ನಮೂದಿಸಬೇಕು. ಉದಾಹರಣೆಗೆ, ಯಾವುದಾದರೂ ಸೈಟು, ಜಮೀನು, ಫ್ಲಾಟು ಇತ್ಯಾದಿ ಕೊಂಡಿದ್ದರೆ ಅಥವಾ ಐಷಾರಾಮಿ ವಸ್ತುವನ್ನು ಖರೀದಿಸಿದ್ದರೆ ಅದು ನಿಮ್ಮ ಐಟಿಆರ್​ನಲ್ಲಿ ನಮೂದಾಗಿರಬೇಕು. ಇಂಥವು ಐಟಿ ಇಲಾಖೆಯ ಕಣ್ಣಿಗೆ ಸುಲಭವಾಗಿ ಬೀಳುತ್ತದೆ. ಬಹಳ ಬೇಗ ನಿಮಗೆ ನೋಟೀಸ್ ಕೂಡ ಜಾರಿಯಾಗುತ್ತದೆ.

ಇದನ್ನೂ ಓದಿPMMY: ಪಿಎಂ ಮುದ್ರಾ ಯೋಜನೆ ಅಡಿ ವಿತರಣೆಯಾದ ಸಾಲ ಪಾಕಿಸ್ತಾನ ಜಿಡಿಪಿಗೆ ಸಮ? 41 ಕೋಟಿ ಜನರ ಸ್ವಂತ ಉದ್ಯಮದ ಕನಸು ನನಸಾಗಿಸಿದ ಮುದ್ರಾ ಸ್ಕೀಮ್

ದಾಖಲೆಗಳನ್ನು ಸರಿಯಾಗಿ ಸೇರಿಸದಿದ್ದರೂ ಬರುತ್ತೆ ಐಟಿ ನೋಟೀಸ್

ಐಟಿಆರ್ ಫಾರ್ಮ್ ಸಲ್ಲಿಸುವಾಗ ಕೆಲ ಅಗತ್ಯ ದಾಖಲೆಗಳನ್ನೂ ಲಗತ್ತಿಸಬೇಕಾಗುತ್ತದೆ. ನೀವು ಒಂದು ವೇಳೆ ಆ ದಾಖಲೆಗಳನ್ನು ಅಟ್ಯಾಚ್ ಮಾಡಲು ಮರೆತರೆ, ಅಥವಾ ಮಾಡದೇ ಇದ್ದಲ್ಲಿ ನೋಟೀಸ್ ಬರಬಹುದು. ಇಲ್ಲಿ ದಾಖಲೆಗಳೆಂದರೆ, ನೀವು ರೀಫಂಡ್​ಗೆ ಕ್ಲೈಮ್ ಮಾಡಲು ತೋರಿಸುವ ಡಿಡಕ್ಷನ್​ಗಳಿಗೆ ಪೂರಕವಾದ ದಾಖಲೆಗಳು. ಹಾಗೆಯೇ ನಿಮ್ಮ ಎಲ್ಲಾ ಮೂಲಗಳಿಂದ ಬಂದಿರುವ ಆದಾಯಗಳಿಗೆ ದಾಖಲೆಗಳನ್ನು ಸಲ್ಲಿಸಬೇಕು.

ಐಟಿ ಇಲಾಖೆ ನೋಟೀಸ್ ಬರಲು ಇತರ ಕಾರಣಗಳು

  • ಐಟಿ ರಿಟರ್ನ್ ಸಲ್ಲಿಸದಿದ್ದರೆ ಅಥವಾ ತಡವಾಗಿ ಸಲ್ಲಿಸಿದರೆ ಆಗ ನೋಟೀಸ್ ಬರುತ್ತದೆ
  • ಐಟಿ ಇಲಾಖೆ ಅನಿರ್ದಿಷ್ಟವಾಗಿ ಐಟಿಆರ್​ಗಳನ್ನು ಆಯ್ದುಕೊಂಡು ಪರಿಶೀಲನೆ ನಡೆಸಬಹುದು. ಅಂಥ ಫೈಲಿಂಗ್​ನಲ್ಲಿ ಹೆಚ್ಚಿನ ವ್ಯತ್ಯಾಸಗಳು ಕಂಡುಬಂದಿದ್ದಲ್ಲಿ ನೋಟೀಸ್ ಬರಬಹುದು.
  • ಐಟಿ ಇಲಾಖೆ ಇಂತಿಷ್ಟು ಮಾತ್ರ ಡಿಡಕ್ಷನ್ ಕ್ಲೈಮ್ ಮಾಡಬಹುದು ಎಂದು ನಿರ್ದಿಷ್ಟಪಡಿಸಿದೆ. ಅದನ್ನು ಮೀರಿ ನೀವು ಡಿಡಕ್ಷನ್​ಗೆ ಕ್ಲೈಮ್ ಮಾಡಿದರೆ ಆಗ ಕಾರಣ ಕೇಳಿ ಇಲಾಖೆಯಿಂದ ನೋಟೀಸ್ ಬರುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 5:09 pm, Sat, 8 April 23

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್