Kargil Vijay Diwas 2023: ಕಾರ್ಗಿಲ್ ಯುದ್ಧದ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಪ್ರಮುಖ ಸಂಗತಿಗಳು

1999ನೇ ಇಸವಿ ಜು.26ರಂದು ಭಾರತದ ಸೈನೀಕರು ಅಪರೇಷನ್​​ ವಿಜಯ್​​ ಮೂಲಕ ಕಾರ್ಗಿಲ್​​ -ಡ್ರಾಸ್​​ ಭಾಗದದಲ್ಲಿ ಸೈನ್ಯ ಶೌರ್ಯವನ್ನು ಪ್ರದರ್ಶಿಸಿದರು.

Kargil Vijay Diwas 2023: ಕಾರ್ಗಿಲ್ ಯುದ್ಧದ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಪ್ರಮುಖ ಸಂಗತಿಗಳು
Follow us
ಅಕ್ಷಯ್​ ಪಲ್ಲಮಜಲು​​
|

Updated on:Jul 24, 2023 | 10:56 AM

ಜು.26 ದೇಶದ ಪ್ರತಿಯೊಬ್ಬ ಭಾರತೀಯರು ಹೆಮ್ಮೆ ಪಡುವ ದಿನ, ನಮ್ಮ ಸೈನಿಕ ಸಾಹಸಕ್ಕೆ ಮತ್ತು ಶ್ರಮಕ್ಕೆ ಸಿಕ್ಕ ಮಹತ್ವ ವಿಜಯ ದಿನ. ಜು.26ರಂದು ದೇಶದ್ಯಾಂತ ಕಾರ್ಗಿಲ್​​ ವಿಜಯ ದಿವಸ್​​ (Kargil Vijay Diwas) ಅಥವಾ ಕಾರ್ಗಿಲ್​​ ವಿಜಯ ದಿನವನ್ನು ಆಚರಿಸಲಾಗುತ್ತದೆ. ಪಾಕಿಸ್ತಾನದ ಕುತಂತ್ರ ತಂತ್ರವನ್ನು ಸದೆಬಡಿದು , ಮತ್ತೆ ಭಾರತದ ಭಾಗವನ್ನು ಪಡೆದ ದಿನ. ಪ್ರತಿ ವರ್ಷ ಜುಲೈ 26ರಂದು ಕಾರ್ಗಿಲ್​​ ವಿಜಯ್​​ ದಿವಸ್​​ ಎಂದು ದೇಶದ್ಯಾಂತ ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತದೆ.

1999ನೇ ಇಸವಿ ಜು.26ರಂದು ಭಾರತದ ಸೈನೀಕರು ಅಪರೇಷನ್​​ ವಿಜಯ್​​ ಮೂಲಕ ಕಾರ್ಗಿಲ್​​ -ಡ್ರಾಸ್​​ ಭಾಗದದಲ್ಲಿ ಸೈನ್ಯ ಶೌರ್ಯವನ್ನು ಪ್ರದರ್ಶಿಸಿದರು. ಈ ನೆನಪಿಗಾಗಿ ಈ ದಿನವನ್ನು ಆಚರಣೆ ಮಾಡಲಾಗುತ್ತದೆ.

ಕಾರ್ಗಿಲ್ ಯುದ್ಧದ ಮೇಲೆ ಬೆಳಕು ಚೆಲ್ಲುವ 10 ಸಂಗತಿಗಳು:

1. ಕಾರ್ಗಿಲ್ ಸಂಘರ್ಷವು ಮೇ ಮತ್ತು ಜುಲೈ 1999ರ ನಡುವೆ ಭಾರತದ ಜಮ್ಮು ಮತ್ತು ಕಾಶ್ಮೀರದ ಕಾರ್ಗಿಲ್ ಜಿಲ್ಲೆಯಲ್ಲಿ ನಡೆಯಿತು.

2. ಭಾರತದ ನಿಯಂತ್ರಣದಲ್ಲಿರುವ ಕಾರ್ಗಿಲ್ ಪ್ರದೇಶಕ್ಕೆ ಪಾಕಿಸ್ತಾನಿ ಸೈನಿಕರು ಒಳನುಸುಳಲು ಪ್ರಯತ್ನಸಿದಕ್ಕೆ ಈ ಯುದ್ಧವು ಸಂಭವಿಸಿತ್ತು.

3. “ಆಪರೇಷನ್ ವಿಜಯ್” ಮೂಲಕ ಆಕ್ರಮಿತ ಕಾರ್ಗಿಲ್ ಎತ್ತರದ ಶಿಖರವನ್ನು ಮರಳಿ ವಶಪಡಿಸಿಕೊಳ್ಳಲು ಭಾರತೀಯ ಸೇನೆಯ ಕಾರ್ಯಾಚರಣೆಯನ್ನು ನಡೆಸಿತ್ತು.

4. ಕಾರ್ಗಿಲ್ ಯುದ್ಧವು ತುಂಬಾ ಭೀಕರ ಮತ್ತು ಅತ್ಯಂತ ಗಂಭೀರವಾಗಿತ್ತು. ದೇಶದ ಸೈನಿಕರು ಪಾಕಿಸ್ತಾನ ಸೈನಿಕರ ವಿರೋಧ ಹೋರಾಡಲು ಎತ್ತರ ಶಿಖರವನ್ನು ಹತ್ತಬೇಕಿತ್ತು, ಭಾರತದ ಕೆಲವು ಚೆಕ್​​ಪೋಸ್ಟ್‌ಗಳು 18,000 ಅಡಿಗಳಲ್ಲಿ ನೆಲೆಗೊಳಿಸಬೇಕಿತ್ತು. ಇದು ಯುದ್ಧಕ್ಕೆ ಅತ್ಯಂತ ಸವಾಲಿನ ಭೂಪ್ರದೇಶಗಳಲ್ಲಿ ಒಂದಾಗಿದೆ.

5. ಈ ಸಂಘರ್ಷದಿಂದ ಎರಡೂ ಕಡೆಗಳಲ್ಲಿ ಹಲವಾರು ಸಾವು ನೋವುಗಳು ಸಂಭವಿಸಿತ್ತು. ಸುಮಾರು 500 ಭಾರತೀಯ ಮತ್ತು 700 ಪಾಕಿಸ್ತಾನಿ ಸೈನಿಕರು ಪ್ರಾಣ ಕಳೆದುಕೊಂಡರು.

6. ಈ ಯುದ್ಧದಲ್ಲಿ ಫಿರಂಗಿ, ವಾಯು ಶಕ್ತಿ ಮತ್ತು ಪದಾತಿ ದಳದ ಕಾರ್ಯಾಚರಣೆಗಳನ್ನು ವ್ಯಾಪಕವಾಗಿ ಬಳಸಿಕೊಳ್ಳಲಾಗಿತ್ತು.

7. ಭಾರತೀಯ ವಾಯುಪಡೆಯು ಸಂಘರ್ಷದ ಸಮಯದಲ್ಲಿ ವೈಮಾನಿಕ ಬೆಂಬಲವನ್ನು ಒದಗಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿತು, ಶತ್ರುಗಳನ್ನು ವ್ಯೂಹಾತ್ಮಕ ಸ್ಥಾನಗಳಿಂದ ಹೊರಹಾಕಲು ನಿರ್ಣಾಯಕ ವಾಯುದಾಳಿಗಳನ್ನು ನಡೆಸಿತು.

8. ಭಾರತೀಯ ಸೇನಾ ಅಧಿಕಾರಿಯಾದ ಕ್ಯಾಪ್ಟನ್ ವಿಕ್ರಮ್ ಬಾತ್ರಾ ಯುದ್ಧದ ಸಮಯದಲ್ಲಿ ಅವರು “ಯೇ ದಿಲ್ ಮಾಂಗೆ ಮೋರ್” ಎಂಬ ಈ ಸಾಲುಗಳು ಸೈನ್ಯದಲ್ಲಿ ಮತ್ತಷ್ಟು ಯುದ್ಧಕ್ಕೆ ಶಕ್ತಿಯನ್ನು ನೀಡಿತ್ತು. ನಂತರ ಅವರ ಶೌರ್ಯ ಮತ್ತು ಧೈರ್ಯಶಾಲಿ ಕಾರ್ಯಗಳಿಗಾಗಿ ಈ ಸಾಲುಗಳ ಮೂಲಕ ಗೌರವಿಸಲಾಗಿತ್ತು.

9. ಯುದ್ಧದ ಸಮಯದಲ್ಲಿ ಭಾರತೀಯ ಸೇನೆಯು ಟೋಲೋಲಿಂಗ್, ಟೈಗರ್ ಹಿಲ್ ಮತ್ತು ಪಾಯಿಂಟ್ 4875ರ ಆಯಕಟ್ಟಿನ ಶಿಖರಗಳನ್ನು ಮತ್ತೆ ವಶಪಡಿಸಿಕೊಂಡಿತು.

10. 1971ರ ಭಾರತ-ಪಾಕಿಸ್ತಾನ ಯುದ್ಧದ ನಂತರ ಎರಡು ದೇಶಗಳ ಸೈನ್ಯ ಕಾರ್ಗಿಲ್ ಯುದ್ಧದಲ್ಲಿ ನೇರ ಮಿಲಿಟರಿ ಸಂಘರ್ಷದಲ್ಲಿ ತೊಡಗಿಕೊಂಡಿತ್ತು.

11. ಈ ಸಂಘರ್ಷವು ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನವನ್ನು ಸೆಳೆಯಿತು, ಈ ಪ್ರದೇಶದಿಂದ ತನ್ನ ಸೈನ್ಯವನ್ನು ಹಿಂತೆಗೆದುಕೊಳ್ಳುವಂತೆ ವಿವಿಧ ದೇಶಗಳು ಪಾಕಿಸ್ತಾನವನ್ನು ಒತ್ತಾಯಿಸಿದವು.

ಇದನ್ನೂ ಓದಿ: ಕಾರ್ಗಿಲ್​ ಯುದ್ಧದ ನೆನಪು;​ ಈ ಸಿನಿಮಾಗಳನ್ನು ಮಿಸ್​ ಮಾಡಿಕೊಳ್ಳಬೇಡಿ

ಕಾರ್ಗಿಲ್​​ ಯುದ್ಧದ ಹಂತಗಳು

ಮೇ 3, 1999- ಕಾರ್ಗಿಲ್‌ನಲ್ಲಿ ಸ್ಥಳೀಯ ಕುರುಬರಿಂದ ಈ ಪ್ರದೇಶದಲ್ಲಿ ಪಾಕಿಸ್ತಾನಿ ಪಡೆಗಳು ಮತ್ತು ಉಗ್ರಗಾಮಿಗಳ ಒಳನುಸುಳುವಿಕೆ ಬಗ್ಗೆ ಭಾರತೀಯ ಸೇನೆಗೆ ಎಚ್ಚರಿಕೆ ನೀಡಿತು.

ಮೇ 5, 1999- ಪಾಕಿಸ್ತಾನಿ ಪಡೆಗಳು 5 ಭಾರತೀಯ ಸೇನಾ ಯೋಧರನ್ನು ಕೊಂದರು.

ಮೇ 10, 1999- ಭಾರತೀಯ ಸೇನೆಯು ‘ಆಪರೇಷನ್ ವಿಜಯ್’ ಅನ್ನು ಪ್ರಾರಂಭಿಸಿತು. ಕಾರ್ಗಿಲ್‌ನಲ್ಲಿ ಭಾರತೀಯ ಸೇನೆಯ ಮದ್ದುಗುಂಡು ನಿಕ್ಷೇಪಗಳ ಮೇಲೆ ಪಾಕಿಸ್ತಾನಿ ಸೇನೆಯು ದಾಳಿ ನಡೆಸಿತು.

ಮೇ 26, 1999- ಭಾರತೀಯ ಸೇನೆಯು ವೈಮಾನಿಕ ದಾಳಿಯನ್ನು ಪ್ರಾರಂಭಿಸಿತು.

ಮೇ 27, 1999- IAF, MiG-27 ಪತನ. 4 ವಾಯುಪಡೆ ಸಿಬ್ಬಂದಿ ಸಾವು. ಪಾಕಿಸ್ತಾನವು ಪೈಲಟ್​​ಗಳನ್ನು ಯುದ್ಧ ಕೈದಿ ಎಂದು ಸೆರೆಹಿಡಿಯುತ್ತದೆ.

ಮೇ 31, 1999- ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಕಾರ್ಗಿಲ್‌ನಲ್ಲಿ “ಯುದ್ಧದಂತಹ ಪರಿಸ್ಥಿತಿ” ಎಂದು ಘೋಷಿಸಿದರು.

ಜೂನ್ 1, 1999- USA ಮತ್ತು ಫ್ರಾನ್ಸ್ ಭಾರತದ ವಿರುದ್ಧ ಮಿಲಿಟರಿ ಕಾರ್ಯಾಚರಣೆಗಳಿಗೆ ಪಾಕಿಸ್ತಾನವನ್ನು ಹೊಣೆಗಾರರನ್ನಾಗಿ ಮಾಡಿತು.

ಜೂನ್ 5, 1999- ಭಾರತೀಯ ಸೇನೆಯು ಪಾಕಿಸ್ತಾನದ ಒಳಗೊಳ್ಳುವಿಕೆಯನ್ನು ಬಹಿರಂಗಪಡಿಸುವ ದಾಖಲೆಗಳನ್ನು ಬಿಡುಗಡೆ ಮಾಡಿತು.

ಜೂನ್ 9, 1999- ಭಾರತೀಯ ಸೇನೆಯು ಬಟಾಲಿಕ್ ಸೆಕ್ಟರ್‌ನಲ್ಲಿ ಎರಡು ಪ್ರಮುಖ ಪ್ರದೇಶಗಳನ್ನು ಮತ್ತೆ ವಶಪಡಿಸಿಕೊಂಡಿತು.

ಜೂನ್ 10, 1999- ಪಾಕಿಸ್ತಾನವು ಜಾಟ್ ರೆಜಿಮೆಂಟ್‌ನ 6 ಭಾರತೀಯ ಸೈನಿಕರ ವಿರೂಪಗೊಂಡ ದೇಹಗಳನ್ನು ಹಿಂದಿರುಗಿಸುತ್ತದೆ.

ಜೂನ್ 13, 1999- ಸಂಘರ್ಷದ ದಿಕ್ಕನ್ನು ಬದಲಾಯಿಸುವ ನಿರ್ಣಾಯಕ ಟೊಲೊಲಿಂಗ್ ಶಿಖರವನ್ನು ಭಾರತವು ಮತ್ತೆ ಪಡೆದುಕೊಂಡಿತು. ಕಾರ್ಗಿಲ್‌ಗೆ ಪ್ರಧಾನಿ ವಾಜಪೇಯಿ ಭೇಟಿ ನೀಡಿದ್ದು ಈ ಸಮಯದಲ್ಲೇ

ಜೂನ್ 15, 1999- ಯುಎಸ್ ಅಧ್ಯಕ್ಷರು ಬಿಲ್ ಕ್ಲಿಂಟನ್, ಪಾಕಿಸ್ತಾನಿ ಪಡೆಗಳನ್ನು ಹಿಂಪಡೆಯಲು ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ಅವರನ್ನು ಒತ್ತಾಯಿಸಿದರು.

ಜೂನ್ 20, 1999- ಭಾರತೀಯ ಸೇನೆಯು 11 ಗಂಟೆಗಳ ಯುದ್ಧದ ನಂತರ ಟೈಗರ್ ಹಿಲ್ ಬಳಿ ಪಾಯಿಂಟ್ 5060 ಮತ್ತು ಪಾಯಿಂಟ್ 5100 ಅನ್ನು ವಶಪಡಿಸಿಕೊಂಡಿತು. ಜುಲೈ 5ರ ತನಕ ಗುಂಡಿನ ಚಕಮಕಿ ನಡೆಯುತ್ತಲೇ ಇತ್ತು.

ಜುಲೈ 5, 1999- ಯುಎಸ್​​​ ಅಧ್ಯಕ್ಷ ಬಿಲ್ ಕ್ಲಿಂಟನ್​​ ನವಾಜ್ ಷರೀಫ್ ಅವರನ್ನು ಭೇಟಿಯಾದರು. ಕಾರ್ಗಿಲ್‌ನಿಂದ ಪಾಕ್ ಪಡೆಗಳನ್ನು ಹಿಂದೆಗೆದುಕೊಳ್ಳುವುದಾಗಿ ಪಾಕ್ ಪ್ರಧಾನಿ ಷರೀಫ್ ಘೋಷಿಸಿದ್ದಾರೆ.

ಜುಲೈ 11, 1999- ಪಾಕಿಸ್ತಾನಿ ಪಡೆಗಳು ಹಿಂದೆ ಸರಿಯಲು ಪ್ರಾರಂಭಿಸಿದವು. ಭಾರತೀಯ ಸೇನೆಯು ಬಟಾಲಿಕ್‌ನಲ್ಲಿ ಪ್ರಮುಖ ಶಿಖರಗಳನ್ನು ವಶಪಡಿಸಿಕೊಂಡವು.

ಜುಲೈ 14, 1999- ಭಾರತೀಯ ಸೇನೆಯು ‘ಆಪರೇಷನ್ ವಿಜಯ್’ ಯಶಸ್ಸನ್ನು ಘೋಷಿಸಿತು.

ಜುಲೈ 26, 1999 – ಕಾರ್ಗಿಲ್ ಯುದ್ಧವು ಕೊನೆಗೊಳ್ಳುತ್ತದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 10:54 am, Mon, 24 July 23

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್