AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಂದೀಪ್ ರೆಡ್ಡಿ ವಂಗಗೆ ಮುಂಬೈನಲ್ಲಿ ಸಿಕ್ಕಿಲ್ಲ ಶಾಂತಿ

Sandeep Reddy Vanga: ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಮೋಸ್ಟ್ ವೈಯಲೆಂಟ್ ನಿರ್ದೇಶಕ ಎನಿಸಿಕೊಂಡಿದ್ದಾರೆ. ಬಾಲಿವುಡ್​ಗೆ ಹೋಗಿ ಅಲ್ಲಿಯೂ ಅಲ್ಲೋಲ-ಕಲ್ಲೋಲ ಎಬ್ಬಿಸಿದ್ದಾರೆ. ಇದೀಗ ಪ್ರಭಾಸ್ ನಟನೆಯ ಸಿನಿಮಾ ನಿರ್ದೇಶಿಸಲು ಮುಂದಾಗಿದ್ದಾರೆ. ಆದರೆ ಸಂದೀಪ್ ರೆಡ್ಡಿ ವಂಗಾಗೆ ಬಾಲಿವಡ್​ನಲ್ಲಿ ಶಾಂತಿ ಸಿಗಲಿಲ್ಲವಂತೆ. ಅದಕ್ಕೆ ಕಾರಣ ಏನು? ಇಲ್ಲಿದೆ ನೋಡಿ ಮಾಹಿತಿ...

ಸಂದೀಪ್ ರೆಡ್ಡಿ ವಂಗಗೆ ಮುಂಬೈನಲ್ಲಿ ಸಿಕ್ಕಿಲ್ಲ ಶಾಂತಿ
Sandeep Reddy Vanga
 ಶ್ರೀಲಕ್ಷ್ಮೀ ಎಚ್
| Updated By: ಮಂಜುನಾಥ ಸಿ.|

Updated on:May 28, 2025 | 10:58 PM

Share

ಸಂದೀಪ್ ರೆಡ್ಡಿ ವಂಗ (Sandeep Reddy Vanga) ಅವರು ‘ಅರ್ಜುನ್ ರೆಡ್ಡಿ’ ಸಿನಿಮಾ ಮಾಡಿದರು. ಈ ಚಿತ್ರವು ಯಶಸ್ಸು ಕಂಡಿತು ಮತ್ತು ಇದೇ ಚಿತ್ರವನ್ನು ಅವರು ಹಿಂದಿಯಲ್ಲಿ ‘ಕಬೀರ್ ಸಿಂಗ್’ ಆಗಿ ರಿಮೇಕ್ ಮಾಡಿದರು. ಇದಲ್ಲದೆ, ‘ಅನಿಮಲ್’ ಹೆಸರಿನ ಚಿತ್ರವನ್ನು ಕೂಡ ಮಾಡಿದರು. ಹಿಂದಿಯಲ್ಲಿ ಎರಡು ಹಿಟ್ ಚಿತ್ರಗಳನ್ನು ಅವರು ನೀಡಿದ್ದಾರೆ ಎನ್ನಬಹುದು. ಆದರೆ, ಅವರಿಗೆ ಮುಂಬೈನಲ್ಲಿ ಶಾಂತಿ ಸಿಕ್ಕಿಲ್ಲವಂತೆ. ಈ ವಿಚಾರದ ಬಗ್ಗೆ ಇತ್ತೀಚೆಗೆ ಚರ್ಚೆ ನಡೆದಿದೆ.

ಸಂದೀಪ್ ರೆಡ್ಡಿ ವಂಗ, ಸಾಯಿ ರಾಜೇಶ್, ಶಿವ ನಿರ್ವಾಣ ಮತ್ತು ಮೆಹೆರ್ ರಮೇಶ್ ಅವರು ‘ತೆಲುಗು ಕಾದಂಬರಿ ‘ಪ್ರೇಮ್ ಕಿ ಪ್ರಾಣಮ್ ಉಂಟೆ’ ಲಾಂಚ್ ಈವೆಂಟ್​ನಲ್ಲಿ ಭಾಗಿ ಆಗಿದ್ದರು. ಈ ಕಾದಂಬರಿಯನ್ನು ಗಣ ಅವರು ಅವರು ಬರೆದಿದ್ದಾರೆ. ಈ ವೇದಿಕೆ ಮೇಲೆ ಒಂದು ಅಚ್ಚರಿಯ ಮಾಹಿತಿ ರಿವೀಲ್ ಆಯಿತು.

ಶಿವ ನಿರ್ವಾಣ ಅವರು ವೇದಿಕೆ ಮೇಲೆ ಮಾತನಾಡಿದರು ಮತ್ತು ಸಂದೀಪ್ ಅವರನ್ನು ಹೊಗಳಿದರು. ‘ಸಂದೀಪ್ ಅವರಿಗೆ ಮುಂಬೈನಲ್ಲಿ ಶಾಂತಿ ಸಿಕ್ಕಿಲ್ಲ. ಅವರು ಹೈದರಾಬಾದ್​ಗೆ ಮರಳಿದ ನಂತರ ನಗರದಲ್ಲಿ ಆಗುವ ಎಲ್ಲಾ ಕಾರ್ಯಕ್ರಮಕ್ಕೆ ತೆರಳುತ್ತಿದ್ದಾರೆ. ಅವರು ಆ ರೀತಿಯ ವ್ಯಕ್ತಿ. ಅವರಿಗೆ ಸಾಕಷ್ಟು ಖ್ಯಾತಿ ಸಿಕ್ಕರೂ ಅವರು ಸರಳವಾಗಿ ಇರಲು ಬಯಸುತ್ತಾರೆ. ಅಗತ್ಯ ಇರುವವರಿಗೆ ಸಹಾಯ ಮಾಡುತ್ತಾರೆ’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ:ಬಾಲಿವುಡ್ ಸ್ಟಾರ್ ಹೀರೋ ಜೊತೆ ಸಿನಿಮಾ ಘೋಷಿಸಿದ ಹೊಂಬಾಳೆ

‘ಸಂದೀಪ್ ರೆಡ್ಡಿ ರೀತಿ ಹಿಂದಿಯಲ್ಲಿ ಯಾರೊಬ್ಬರೂ ಇಷ್ಟು ಹೆಸರು ಮಾಡಿಲ್ಲ. ಸ್ಪಿರಿಟ್ ಚಿತ್ರದಲ್ಲೂ ಮ್ಯಾಜಿಕ್ ಆಗಲಿ ಎಂದು ಬಯಸುತ್ತಿದ್ದೇವೆ. ಪ್ರಭಾಸ್​ಗೆ ಹಾಗೂ ಸಂದೀಪ್​ಗೆ ಆಲ್​ ದಿ ಬೆಸ್ಟ್ ಎಂದು ಹೇಳಿದರು.

ಸಂದೀಪ್ ರೆಡ್ಡಿ ವಂಗ ಅವರಿಗೆ ಹಿಂದಿ ಚಿತ್ರರಂಗದವರ ಮೇಲೆ ಬೇಸರ ಆಗಿದೆಯೇ ಎನ್ನುವ ಪ್ರಶ್ನೆ ಮೂಡಿದೆ. ಏಕೆಂದರೆ ಅವರು ದೀಪಿಕಾ ಪಡುಕೋಣೆಗೆ ಕಥೆ ಹೇಳಿದ್ದರು. ಆ ಬಳಿ ದೀಪಿಕಾ ಈ ಕಥೆಯನ್ನು ತಿರಸ್ಕರಿಸಿದ್ದರು. ಆ ಬಳಿಕ ಕೇಳಿ ಬಂದ ಮಾಹಿತಿ ಏನೆಂದರೆ ದೀಪಿಕಾ ಅವರು ಕಥೆಯನ್ನು ಲೀಕ್ ಮಾಡಿದ್ದಾರಂತೆ. ಈ ವಿಚಾರದಲ್ಲಿ ಸಂದೀಪ್ ಅವರಿಗೆ ಸಿಟ್ಟಿದೆ. ಅವರು ಓಪನ್ ಆಗಿ ಈ ವಿಚಾರವನ್ನು ಮಾತನಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:33 pm, Wed, 28 May 25

ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಕುಸಿತ
ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಕುಸಿತ
ಕುಮಾರಸ್ವಾಮಿ ಕುರಿತ ಪ್ರಶ್ನೆಯನ್ನು ಶಿವಕುಮಾರ್ ಅಸಡ್ಡೆ ಮಾಡಿದರು!
ಕುಮಾರಸ್ವಾಮಿ ಕುರಿತ ಪ್ರಶ್ನೆಯನ್ನು ಶಿವಕುಮಾರ್ ಅಸಡ್ಡೆ ಮಾಡಿದರು!
ವಿಡಿಯೋ: ಪೊಲೀಸರೆದುರೇ ಗಾಳಿಯಲ್ಲಿ ಗುಂಡು ಹಾರಿಸಿದ ರಮೇಶ್ ಜಾರಕಿಹೊಳಿ ಪುತ್ರ
ವಿಡಿಯೋ: ಪೊಲೀಸರೆದುರೇ ಗಾಳಿಯಲ್ಲಿ ಗುಂಡು ಹಾರಿಸಿದ ರಮೇಶ್ ಜಾರಕಿಹೊಳಿ ಪುತ್ರ
ರಸ್ತೆಯಲ್ಲಿ ನಿಂತಿದ್ದವನಿಗೆ ಅಟ್ಟಾಡಿಸಿಕೊಂಡು ಹಲ್ಲೆ: ವಿಡಿಯೋ ನೋಡಿ
ರಸ್ತೆಯಲ್ಲಿ ನಿಂತಿದ್ದವನಿಗೆ ಅಟ್ಟಾಡಿಸಿಕೊಂಡು ಹಲ್ಲೆ: ವಿಡಿಯೋ ನೋಡಿ
ಈಗಲೂ ಮಾತಿಗೆ ಬದ್ಧ; ಕೇಂದ್ರದಿಂದ ಅನುಮೋದನೆ ಕೊಡಿಸಲು ಸಿದ್ಧ: ಹೆಚ್ಡಿಕೆ
ಈಗಲೂ ಮಾತಿಗೆ ಬದ್ಧ; ಕೇಂದ್ರದಿಂದ ಅನುಮೋದನೆ ಕೊಡಿಸಲು ಸಿದ್ಧ: ಹೆಚ್ಡಿಕೆ
ಕೊಲೆ ಆರೋಪಿ ಮಹೇಶ್​ಗೆ ಗರ್ಭಧರಿಸಿದ್ದ ಹೆಂಡತಿ ಶುಭಾ ಮೇಲೆ ಸದಾ ಅನುಮಾನ
ಕೊಲೆ ಆರೋಪಿ ಮಹೇಶ್​ಗೆ ಗರ್ಭಧರಿಸಿದ್ದ ಹೆಂಡತಿ ಶುಭಾ ಮೇಲೆ ಸದಾ ಅನುಮಾನ
VIDEO: ಸುಈಈಈಈ... ಪ್ಯಾಟ್ ಕಮಿನ್ಸ್ ವಾಟ್ ಎ ಕ್ಯಾಚ್
VIDEO: ಸುಈಈಈಈ... ಪ್ಯಾಟ್ ಕಮಿನ್ಸ್ ವಾಟ್ ಎ ಕ್ಯಾಚ್
ಶಿವಕುಮಾರ್ ಕಾಮಗಾರಿ ನಡೆಯುತ್ತಿರುವ ಸ್ಥಳ ಪರಿಶೀಲನೆ ನಡೆಸಲಿದ್ದಾರೆ: ಸೋಮಣ್ಣ
ಶಿವಕುಮಾರ್ ಕಾಮಗಾರಿ ನಡೆಯುತ್ತಿರುವ ಸ್ಥಳ ಪರಿಶೀಲನೆ ನಡೆಸಲಿದ್ದಾರೆ: ಸೋಮಣ್ಣ
ತೇಜಸ್ವಿ ಸೂರ್ಯ ಮನೆಗೆ ಹೊಸ ಅತಿಥಿ: ಹಾಡಿನ ಮೂಲಕ ಸ್ವಾಗತಿಸಿದ ಶಿವಶ್ರೀ
ತೇಜಸ್ವಿ ಸೂರ್ಯ ಮನೆಗೆ ಹೊಸ ಅತಿಥಿ: ಹಾಡಿನ ಮೂಲಕ ಸ್ವಾಗತಿಸಿದ ಶಿವಶ್ರೀ
ಮ್ಯಾಕ್ಸ್ ನಿರ್ದೇಶಕನ ಜೊತೆ ಸುದೀಪ್ ಮತ್ತೊಂದು ಸಿನಿಮಾ; ಸುದ್ದಿಗೋಷ್ಠಿ ಲೈವ್
ಮ್ಯಾಕ್ಸ್ ನಿರ್ದೇಶಕನ ಜೊತೆ ಸುದೀಪ್ ಮತ್ತೊಂದು ಸಿನಿಮಾ; ಸುದ್ದಿಗೋಷ್ಠಿ ಲೈವ್