IT Refund: ಆದಾಯ ತೆರಿಗೆ ಪಾವತಿದಾರರಿಗೆ ನ. 22ರ ತನಕ 1.24 ಲಕ್ಷ ಕೋಟಿ ರೀಫಂಡ್; ಮರುಪಾವತಿ ಸ್ಥಿತಿ ಪರಿಶೀಲನೆ ಹೇಗೆ?

| Updated By: Srinivas Mata

Updated on: Nov 25, 2021 | 1:34 PM

ನವೆಂಬರ್ 22, 2021ರ ತನಕ 1.23 ಲಕ್ಷ ಕೋಟಿ ರೂಪಾಯಿ ರೀಫಂಡ್​ ಅನ್ನು ಆದಾಯ ತೆರಿಗೆ ಪಾವತಿದಾರರಿಗೆ ಹಿಂತಿರುಗಿಸಲಾಗಿದೆ. ರೀಫಂಡ್​ ಸ್ಥಿತಿ ತಿಳಿಯುವುದು ಹೇಗೆ ಎಂಬ ವಿವರ ಇಲ್ಲಿದೆ.

IT Refund: ಆದಾಯ ತೆರಿಗೆ ಪಾವತಿದಾರರಿಗೆ ನ. 22ರ ತನಕ 1.24 ಲಕ್ಷ ಕೋಟಿ ರೀಫಂಡ್; ಮರುಪಾವತಿ ಸ್ಥಿತಿ ಪರಿಶೀಲನೆ ಹೇಗೆ?
ಸಾಂದರ್ಭಿಕ ಚಿತ್ರ
Follow us on

ಆದಾಯ ತೆರಿಗೆ ಇಲಾಖೆಯು ಪ್ರಸಕ್ತ ಹಣಕಾಸು ವರ್ಷದಲ್ಲಿ (2021-22) ನವೆಂಬರ್ 22ರವರೆಗೆ 1.11 ಕೋಟಿಗೂ ಹೆಚ್ಚು ತೆರಿಗೆದಾರರಿಗೆ 1,23,667 ಕೋಟಿ ರೂಪಾಯಿಗಳ ಮರುಪಾವತಿಯನ್ನು ನೀಡಿದೆ. ಈ ಅಂಕಿ- ಅಂಶವು 1, ಏಪ್ರಿಲ್ 2021 ಮತ್ತು 22 ನವೆಂಬರ್ 2021ರ ಮಧ್ಯೆ ಮಾಡಿದ ಮರುಪಾವತಿ ಆಗಿದೆ. ಈ ಮೊತ್ತದಲ್ಲಿ ವೈಯಕ್ತಿಕ ಆದಾಯ ತೆರಿಗೆ ಮರುಪಾವತಿ 41,649 ಕೋಟಿ ರೂಪಾಯಿಗಳಾಗಿದ್ದರೆ ಕಾರ್ಪೊರೇಟ್ ಮರುಪಾವತಿ 82,018 ಕೋಟಿ ರೂಪಾಯಿ. ಆದಾಯ ತೆರಿಗೆ ಇಲಾಖೆ ಈ ಬಗ್ಗೆ ಟ್ವೀಟ್ ಮಾಡಿದ್ದು, ಸಿಬಿಡಿಟಿ ಏಪ್ರಿಲ್ 1, 2021 ಮತ್ತು ನವೆಂಬರ್ 22, 2021ರ ಮಧ್ಯೆ 1.11 ಕೋಟಿ ತೆರಿಗೆದಾರರಿಗೆ ರೂ. 1,23,667 ಕೋಟಿ ಮರುಪಾವತಿ ಮಾಡಲಾಗಿದೆ. 1,08,88,278 ಪ್ರಕರಣಗಳಲ್ಲಿ 41,649 ಕೋಟಿ ರೂಪಾಯಿ ಆದಾಯ ತೆರಿಗೆ ಮರುಪಾವತಿ ನೀಡಲಾಗಿದೆ. 1,81,218 ಪ್ರಕರಣಗಳಲ್ಲಿ 82,018 ಕೋಟಿ ರೂಪಾಯಿಗಳ ಕಾರ್ಪೊರೇಟ್ ತೆರಿಗೆ ಮರುಪಾವತಿಯನ್ನು ನೀಡಲಾಗಿದೆ ಎಂದಿದೆ.

ಕಳೆದ ಹಣಕಾಸು ವರ್ಷದಲ್ಲಿ 2020-21ರಲ್ಲಿ ಆದಾಯ ತೆರಿಗೆ ಇಲಾಖೆಯು 2.38 ಕೋಟಿ ತೆರಿಗೆದಾರರಿಗೆ 2.62 ಲಕ್ಷ ಕೋಟಿ ರೂಪಾಯಿಗಳ ತೆರಿಗೆ ಮರುಪಾವತಿಯನ್ನು ನೀಡಿರುವುದನ್ನು ಸ್ಮರಿಸಬಹುದಾಗಿದೆ. ಇದು 2019-20ನೇ ಹಣಕಾಸು ವರ್ಷದಲ್ಲಿ ನೀಡಲಾದ ರೂ. 1.83 ಲಕ್ಷ ಕೋಟಿ ಮರುಪಾವತಿಗಿಂತ ಶೇಕಡಾ 43.2 ಹೆಚ್ಚು.

ಹೊಸ ಆದಾಯ ತೆರಿಗೆ ಇಲಾಖೆಯ ವೆಬ್‌ಸೈಟ್‌ನಿಂದ ಮರುಪಾವತಿ ಸ್ಥಿತಿಯನ್ನು ಹೇಗೆ ಪರಿಶೀಲಿಸುವುದು ಎಂಬ ಮಾಹಿತಿ ಇಲ್ಲಿದೆ:
– ಮೊದಲು ನೀವು www.incometax.gov.in ವೆಬ್‌ಸೈಟ್‌ಗೆ ತೆರಳಬೇಕು.
– ಬಳಕೆದಾರ ID ಮತ್ತು ಪಾಸ್​ವರ್ಡ್ ಅನ್ನು ನಮೂದಿಸಿ.
– ಲಾಗಿನ್ ಆದ ನಂತರ ನೀವು ಇ-ಫೈಲಿಂಗ್ ಆಯ್ಕೆಯನ್ನು ನೋಡುತ್ತೀರಿ.
– ಈಗ ನೀವು ಆದಾಯ ತೆರಿಗೆ ರಿಟರ್ನ್ ಅನ್ನು ಆಯ್ಕೆ ಮಾಡಿ.
– ನಂತರ ಫೈಲ್ ರಿಟರ್ನ್ ವೀಕ್ಷಿಸಿ ಕ್ಲಿಕ್ ಮಾಡಿ.
– ಈಗ ನಿಮ್ಮ ITR ವಿವರಗಳನ್ನು ಕಾಣಿಸುತ್ತದೆ.

ಐಟಿಆರ್ ಸಲ್ಲಿಸುವ ಮೊದಲು ಈ ಕೆಲಸವನ್ನು ಮಾಡಿ
ಸರ್ಕಾರವು ಇತ್ತೀಚೆಗೆ 2021-22ರ ಅಸೆಸ್​ಮೆಂಟ್​ ವರ್ಷಕ್ಕೆ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವ ಗಡುವನ್ನು ಮೂರು ತಿಂಗಳವರೆಗೆ ವಿಸ್ತರಿಸಿದೆ. ಅಸೆಸ್​ಮೆಂಟ್​ ವರ್ಷ 2021-22ಕ್ಕಾಗಿ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವ ದಿನಾಂಕವನ್ನು ಡಿಸೆಂಬರ್ 31, 2021ರವರೆಗೆ ಮೂರು ತಿಂಗಳವರೆಗೆ ವಿಸ್ತರಿಸಲಾಗಿದೆ. CBDT ಮಾರ್ಗಸೂಚಿಗಳ ಪ್ರಕಾರ, ತೆರಿಗೆದಾರರು ಈ ದಿನಾಂಕದೊಳಗೆ ರಿಟರ್ನ್ ಸಲ್ಲಿಸಲು ಸಾಧ್ಯವಾಗದಿದ್ದರೆ ವಿಳಂಬ ಶುಲ್ಕವನ್ನು ಪಾವತಿಸಬೇಕಾಗುತ್ತದೆ ಮತ್ತು ವಿಳಂಬವಾದ ITR ಅನ್ನು ಸಲ್ಲಿಸಬೇಕಾಗುತ್ತದೆ. ಆದಾಯ ತೆರಿಗೆ ರಿಟರ್ನ್ ಸಲ್ಲಿಸುವ ಮೊದಲು ಪರಿಗಣಿಸಬೇಕಾದ ಹಲವಾರು ವಿಷಯಗಳಿವೆ.

ಪ್ಯಾನ್ ಮತ್ತು ಆಧಾರ್ ಜೋಡಣೆ ಮಾಡಿ
ರಿಟರ್ನ್ ಸಲ್ಲಿಸುವ ಮೊದಲು ಇದು ಅತ್ಯಂತ ಮುಖ್ಯವಾದ ವಿಷಯವಾಗಿದೆ. ನಿಮ್ಮ ಆಧಾರ್‌ಗೆ ನಿಮ್ಮ ಪರ್ಮನೆಂಟ್ ಅಕೌಂಟ್ ನಂಬರ್ (PAN) ಅನ್ನು ಜೋಡಣೆ ಮಾಡಬೇಕಾಗುತ್ತದೆ. ಅದೇ ಸಮಯದಲ್ಲಿ, ಪ್ಯಾನ್-ಆಧಾರ್ ಜೋಡಣೆ ಮಾಡುವ ಗಡುವನ್ನು ವಿಸ್ತರಿಸಲಾಗಿದೆ. ಇದನ್ನು ಈಗ 31, 2022ರ ಮಾರ್ಚ್​ವರೆಗೆ ಜೋಡಣೆ ಮಾಡಬಹುದು.

ಇದನ್ನೂ ಓದಿ: Income Tax Returns: ಆದಾಯ ತೆರಿಗೆ ರಿಟರ್ನ್ಸ್​ ವೇಳೆ ಈ 4 ಕ್ಲೇಮ್​ಗಳ ಬಗ್ಗೆ ಗಮನ ನೀಡದಿದ್ದರೆ ನುಕ್ಸಾನ್ ಆದೀತು ಎಚ್ಚರ

Published On - 1:32 pm, Thu, 25 November 21