Narendra Modi US Visit: ಅಮೆರಿಕದಲ್ಲಿ ಪ್ರಮುಖ ಕಂಪೆನಿಗಳ ಸಿಇಒಗಳ ಜತೆಗೆ ಪ್ರಧಾನಿ ಮೋದಿ ಮಾತುಕತೆ

| Updated By: Srinivas Mata

Updated on: Sep 23, 2021 | 11:09 PM

ಭಾರತದ ಪ್ರಧಾನಿ ನರೇಂದ್ರ ಮೋದಿ ಮೂರು ದಿನಗಳ ಅಮೆರಿಕ ಪ್ರವಾಸಕ್ಕೆ ತೆರಳಿದ್ದು, ಪ್ರಮುಖ ಕಂಪೆನಿಗಳ ಸಿಇಒಗಳನ್ನು ಭೇಟಿ ಮಾಡಿದ್ದಾರೆ.

Narendra Modi US Visit: ಅಮೆರಿಕದಲ್ಲಿ ಪ್ರಮುಖ ಕಂಪೆನಿಗಳ ಸಿಇಒಗಳ ಜತೆಗೆ ಪ್ರಧಾನಿ ಮೋದಿ ಮಾತುಕತೆ
ನರೇಂದ್ರ ಮೋದಿ (ಸಂಗ್ರಹ ಚಿತ್ರ)
Follow us on

ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಗುರುವಾರ (ಸೆಪ್ಟೆಂಬರ್ 23, 2021) ಮೂರು ದಿನಗಳ ಅಮೆರಿಕ ಭೇಟಿಯನ್ನು ಆರಂಭಿಸಿದರು. ಒಂದರ ಬೆನ್ನಿಗೆ ಒಂದರಂತೆ ಐದು ಪ್ರಮುಖ ಅಮೆರಿಕನ್ ಕಂಪೆನಿಗಳ ಸಿಇಒಗಳೊಂದಿಗೆ ಭೇಟಿಯಾದರು. ಐ.ಟಿ. ವಲಯದಿಂದ ಹಣಕಾಸುವರೆಗೆ ರಕ್ಷಣೆ ತನಕ ನವೀಕರಿಸಬಹುದಾದ ಇಂಧನವರೆಗೆ- ಒಂದೋ ಭಾರತಕ್ಕೆ ಹೊಸ ಹೂಡಿಕೆಗಳನ್ನು ತರಲು ನೋಡುತ್ತಿದ್ದಾರೆ ಅಥವಾ ಈಗಾಗಲೇ ಇರುವ ಅಸ್ತಿತ್ವವನ್ನು ವಿಸ್ತರಿಸುವುದಕ್ಕೆ ಪ್ರಯತ್ನಿಸುತ್ತಿದ್ದಾರೆ. ರಕ್ಷಣಾ ದೈತ್ಯ ಜನರಲ್ ಅಟೊಮಿಕ್ಸ್​ನ ವಿವೇಕ್ ಲಲ್ ಮತ್ತು ಅಡೋಬ್​ನ ಶಾಂತನು ನಾರಾಯಣ್ ಈ ಇಬ್ಬರು ಸಿಇಒಗಳು ಭಾರತೀಯ ಮೂಲದವರು. “ನಾವು ಭಾರತದಲ್ಲಿ ಕೇವಲ ದೇಶೀಯವಾಗಿ ಉದ್ಯಮವನ್ನು ಮುನ್ನಡೆಸಲು ಅಪೂರ್ವ ಅವಕಾಶದ ಬಗ್ಗೆ ಮಾತನಾಡಿದ್ದೇವೆ. ಆದರೆ ಭಾರತವು ತಂತ್ರಜ್ಞಾನದ ರಫ್ತು (er), ಡಿಜಿಟಲ್ ರೂಪಾಂತರದ ಬಗ್ಗೆ, ಭಾರತದಲ್ಲಿ ವಿನ್ಯಾಸದೊಂದಿಗೆ 5G ಮೂಲಕ ಸಕ್ರಿಯಗೊಳಿಸಲಾಗಿದೆ,” ಎಂದು ಐಟಿ ದೈತ್ಯ ಕ್ವಾಲ್ಕಾಮ್ ಸಿಇಒ ಕ್ರಿಸ್ಟಿಯಾನೋ ಅಮೋನ್ ಸಭೆಯ ನಂತರ ಹೇಳಿದರು. “ನಾವು ಸೆಮಿಕಂಡಕ್ಟರ್‌ಗಳ ಬಗ್ಗೆ ಮಾತನಾಡಿದ್ದೇವೆ. ಇದು ಒಂದು ರೀತಿಯ ಪ್ರಮುಖ, ನನ್ನ ಪ್ರಕಾರ, ಮಾತುಕತೆಯ ಮುಖ್ಯ ವಿಷಯವಾಗಿದೆ. ಮತ್ತು ಭಾರತದಲ್ಲಿ ಅಭಿವೃದ್ಧಿ ಹೊಂದುತ್ತಿರುವ ನಂಬಲಾಗದ ಮೊಬೈಲ್ ಎಕೋ ಸಿಸ್ಟಮ್ ನಿರ್ಮಿಸುವ ಅವಕಾಶದ ಕುರಿತು ನಾವು ಮಾತನಾಡಿದ್ದೇವೆ.” ಎಂದರು.

ಸೆಮಿಕಂಡಕ್ಟರ್ ಕ್ಷೇತ್ರಕ್ಕೆ ಹೊಸಬರಾಗಿ, ಭಾರತವು ಅಲ್ಲಿ ಮಳಿಗೆಗಳನ್ನು ಸ್ಥಾಪಿಸಲು ತಯಾರಕರನ್ನು ಆಕರ್ಷಿಸುತ್ತಿದೆ. ಸೆಮಿಕಂಡಕ್ಟರ್ ಪೂರೈಕೆ-ಸರಪಳಿಯನ್ನು ಭದ್ರಪಡಿಸುವುದು ಶುಕ್ರವಾರದ ಚರ್ಚೆಯ ಪ್ರಮುಖ ವಿಷಯವಾಗಿದೆ ಎಂದು ಕ್ವಾಡ್ ನಾಯಕ ಯು.ಎಸ್. ಅಧ್ಯಕ್ಷ ಜೋ ಬೈಡನ್, ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್ ಮತ್ತು ಜಪಾನ್ ಪ್ರಧಾನಿ ಯೋಶಿಹೈಡ್ ಸುಗಾ ಅವರು ಭಾಗವಹಿಸಿದ್ದ ಮೊದಲ ವ್ಯಕ್ತಿಗತವಾದ ಶೃಂಗಸಭೆಯಲ್ಲಿ ಚರ್ಚಿಸಲಾಗಿದೆ. ಸೆಮಿಕಂಡಕ್ಟರ್​ ಪೂರೈಕೆ ಸರಪಳಿಯನ್ನು ಭದ್ರಪಡಿಸುವ ಉದ್ದೇಶದಿಂದ ಒಟ್ಟಾಗಿ ಕೆಲಸ ಮಾಡಲು ನಾಲ್ಕೂ ನಾಯಕರು ಒಪ್ಪಿಕೊಳ್ಳುವ ನಿರೀಕ್ಷೆಯಿದೆ. ಚೀನಾ, ತೈವಾನ್ ಮತ್ತು ದಕ್ಷಿಣ ಕೊರಿಯಾದೊಂದಿಗೆ ಯು.ಎಸ್., ಜಪಾನ್ ಸೆಮಿಕಂಡಕ್ಟರ್‌ಗಳ ವಿಶ್ವದ ಅಗ್ರ ತಯಾರಕ ಆಗಿವೆ.

ಸೋಲಾರ್ ಪ್ಯಾನಲ್‌ಗಳ ತಯಾರಕರಾದ ಫಸ್ಟ್ ಸೋಲಾರ್‌ನ ಮಾರ್ಕ್ ವಿಡ್ಮಾರ್, ಜಾಗತಿಕ ಹೂಡಿಕೆ ನಿರ್ವಹಣಾ ಕಂಪೆನಿ ಬ್ಲ್ಯಾಕ್‌ಸ್ಟೋನ್‌ನ ಸ್ಟೀಫನ್ ಎ ಶ್ವಾರ್ಜ್‌ಮನ್ ಅವರು ನರೇಂದ್ರ ಮೋದಿಯವರನ್ನು ಭೇಟಿಯಾದ ಇತರ ಸಿಇಒಗಳು. ಭಾರತವು ಕೈಗಾರಿಕಾ ನೀತಿ ಮತ್ತು ವ್ಯಾಪಾರ ನೀತಿಯ ಮಧ್ಯೆ ನಿಜವಾಗಿಯೂ ಬಲವಾದ ಸಮತೋಲನವನ್ನು ಸಾಧಿಸಿದೆ ಎಂದು ಮಾರ್ಕ್ ವಿಡ್ಮಾರ್ ಹೇಳಿದರು. ಭಾರತೀಯ-ಅಮೆರಿಕನ್ ನಾರಾಯಣ್ ಅವರೊಂದಿಗಿನ ಚರ್ಚೆಗಳಲ್ಲಿ, “ಯುವಜನರಿಗೆ ಸ್ಮಾರ್ಟ್ ಶಿಕ್ಷಣವನ್ನು ನೀಡಲು ಮತ್ತು ಸಂಶೋಧನೆಯನ್ನು ಹೆಚ್ಚಿಸಲು ತಂತ್ರಜ್ಞಾನವನ್ನು ಸದುಪಯೋಗಪಡಿಸಿಕೊಳ್ಳುವುದರ ಮೇಲೆ ಕೇಂದ್ರೀಕರಿಸಿದೆ,” ಎಂದು ಪ್ರಧಾನ ಮಂತ್ರಿಗಳ ಕಚೇರಿಯು ಟ್ವೀಟ್​ನಲ್ಲಿ ಬರೆದಿದೆ. “ಭಾರತೀಯ ಯುವಕರಿಂದ ನಡೆಯುತ್ತಿರುವ ರೋಮಾಂಚಕ ಸ್ಟಾರ್ಟ್ ಅಪ್ ವಲಯದ ಬಗ್ಗೆಯೂ ಅವರು ಚರ್ಚಿಸಿದರು,” ಎಂದು ಸೇರಿಸಿದೆ.

ಈ ಸಭೆಯನ್ನು ಮುಂಚಿತವಾಗಿಯೇ ಪರಾಂಬರಿಸುವ ಒಂದು ಮೂಲವು ಬುಧವಾರ ಹೇಳಿದ್ದರ ಪ್ರಕಾರ, ಇವುಗಳು “ಬಹಳ ದೊಡ್ಡ ಕಾರ್ಪೊರೇಟ್ ಹಿತಾಸಕ್ತಿಗಳನ್ನು ಪ್ರತಿನಿಧಿಸುವ ಸಿಇಒಗಳು, ಭಾರತದಲ್ಲಿ ಹೂಡಿಕೆ ಮಾಡಿದ ನಿರ್ದಿಷ್ಟ ಪರಿಣತಿಯನ್ನು ಹೊಂದಿರುವ ಕಂಪೆನಿಗಳು ಮತ್ತು ಭಾರತದಲ್ಲಿ ಗಮನಾರ್ಹವಾಗಿ ಹೂಡಿಕೆ ಮಾಡುವ ಸಾಮರ್ಥ್ಯವನ್ನು ಹೊಂದಿರುವ ಕಂಪೆನಿಗಳು.” ಲಲ್ ಜೊತೆಗಿನ ಭೇಟಿಯಲ್ಲಿ ವಿಶೇಷವಾಗಿ ಗಮನಿಸಬೇಕಾದ ಸಂಗತಿಯೆಂದರೆ, ಈಗಾಗಲೇ ಭಾರತೀಯ ನೌಕಾಪಡೆಯೊಂದಿಗೆ ಸೇವೆಯಲ್ಲಿರುವ ಎರಡರ ಜೊತೆಗೆ ಜನರಲ್ ಅಟೊಮಿಕ್ಸ್ ತಯಾರಿಸಿದ 30 ಪ್ರಿಡೇಟರ್ MQ-9 ನಿಶ್ಶಸ್ತ್ರ ಡ್ರೋನ್‌ಗಳನ್ನು ಖರೀದಿಸುವ ಆಲೋಚನೆಯಲ್ಲಿದೆ. ವಿವೇಕ್ ಲಲ್ ಅವರು ಪ್ರಧಾನಿಯವರೊಂದಿಗೆ ಭೇಟಿ ಮಾಡಿದರು. ಭಾರತದ ಡ್ರೋನ್​ ನೀತಿಯಲ್ಲಿನ ಇತ್ತೀಚಿನ ಬದಲಾವಣೆಗಳನ್ನು “ನೀತಿ ಸೂಚನೆಗಳು ಮತ್ತು ಸುಧಾರಣೆಗಳು ಬಹಳ ಶ್ಲಾಘನೀಯ” “ಭಾರತದಲ್ಲಿ ಹೆಚ್ಚಿನ ಆಸಕ್ತಿ ಮತ್ತು ಹೂಡಿಕೆಯನ್ನು ಉತ್ತೇಜಿಸುತ್ತದೆ,” ಎಂದು ಸ್ವಾಗತಿಸಿದರು.

ಇದನ್ನೂ ಓದಿ: ಮೋದಿ ಅಮೆರಿಕ ಪ್ರವಾಸ: ಶ್ವೇತ ಭವನದಲ್ಲಿ ಕ್ವಾಡ್ ಔತಣ, ಚೀನಾ ವಿಚಾರದತ್ತ ಮುಖ್ಯ ಗಮನ

Narendra Modi US visit: ಪ್ರಧಾನಿ ಮೋದಿ ವಾಷಿಂಗ್ಟನ್​ ಭೇಟಿ: ಯಾವುದೇ ಗ್ಯಾಪ್ ಇಲ್ಲದೆ ಜನರೊಂದಿಗೆ ಮುಕ್ತವಾಗಿ ಬೆರೆತರು

(India PM Narendra Modi US Visit Meeting With Top Corporates CEOs)