ಮೋದಿ ಅಮೆರಿಕ ಪ್ರವಾಸ: ಶ್ವೇತ ಭವನದಲ್ಲಿ ಕ್ವಾಡ್ ಔತಣ, ಚೀನಾ ವಿಚಾರದತ್ತ ಮುಖ್ಯ ಗಮನ

ಈ ಭೇಟಿಯಿಂದ ಮೋದಿ ಮತ್ತು ಭಾರತ ನಿರೀಕ್ಷಿಸುತ್ತಿರುವ ಸಂಗತಿಗಳು ಹಲವು ಎಂದು ವಿಶ್ಲೇಷಿಸುತ್ತಾರೆ ಹಿರಿಯ ಪತ್ರಕರ್ತ ಬಿಕ್ರಮ್ ವೊಹ್ರಾ.

ಮೋದಿ ಅಮೆರಿಕ ಪ್ರವಾಸ: ಶ್ವೇತ ಭವನದಲ್ಲಿ ಕ್ವಾಡ್ ಔತಣ, ಚೀನಾ ವಿಚಾರದತ್ತ ಮುಖ್ಯ ಗಮನ
ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಹಾಗೂ ಪ್ರಧಾನಿ ನರೇಂದ್ರ ಮೋದಿ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Sep 22, 2021 | 11:05 PM

ಸರಿಯಾಗಿ ಎರಡು ವರ್ಷಗಳ ಮೊದಲು ಅಮೆರಿಕದ ಹ್ಯೂಸ್ಟನ್ ಟೆಕ್ಸಾಸ್ ನಗರದಲ್ಲಿ ಹೌಡಿ ಮೋದಿ ರೋಡ್​ ಶೋ ನಡೆದಿತ್ತು. ಈ ವರ್ಷ ಸೆಪ್ಟೆಂಬರ್​ 22ರಂದು ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಅಷ್ಟೊಂದು ವೈಭವವಿಲ್ಲ. ಕಳೆದ ವರ್ಷ ಡೊನಾಲ್ಡ್​ ಟ್ರಂಪ್ ನೀಡಿದ್ದ ಮಾದರಿಯಲ್ಲಿ ಆಲಿಂಗನದ ಸ್ವಾಗತವನ್ನು ಈ ಬಾರಿ ಅಮೆರಿಕದ ಅಧ್ಯಕ್ಷ ಜೋ ಬೈಡೆನ್​ ಮತ್ತು ಉಪಾಧ್ಯಕ್ಷ ಕಮಲಾ ಹ್ಯಾರಿಸ್​ರಿಂದ ನಿರೀಕ್ಷಿಸಲು ಆಗುವುದಿಲ್ಲ. ಈ ಭೇಟಿಯಿಂದ ಮೋದಿ ಮತ್ತು ಭಾರತ ನಿರೀಕ್ಷಿಸುತ್ತಿರುವ ಸಂಗತಿಗಳು ಹಲವು ಎಂದು ವಿಶ್ಲೇಷಿಸುತ್ತಾರೆ ಹಿರಿಯ ಪತ್ರಕರ್ತ ಬಿಕ್ರಮ್ ವೊಹ್ರಾ.

ಕ್ವಾಡ್ QUAD (The Quadrilateral Security Dialogue) ಸಭೆಯನ್ನು ಇದೇ ಮೊದಲ ಬಾರಿಗೆ ಬೈಡೆನ್ ನಡೆಸುತ್ತಿದ್ದಾರೆ. ಚೀನಾವನ್ನು ನಿಯಂತ್ರಣದಲ್ಲಿಡುವ ಉದ್ದೇಶಕ್ಕೆ ಅಸ್ಟ್ರೇಲಿಯಾ, ಜಪಾನ್ ಮತ್ತು ಅಮೆರಿಕ ದೇಶಗಳಿಗೆ ಮೋದಿ ಬಾಂಧವ್ಯ ಅನಿವಾರ್ಯ. ಇಂಡೊ-ಪೆಸಿಫಿಕ್ ವಲಯದಲ್ಲಿ ಚೀನಾದ ಮಹತ್ವಾಕಾಂಕ್ಷೆ ಅರಿತಿರುವ ಈ ದೇಶಗಳು ಭಾರತದ ಮಹತ್ವವನ್ನು ಅರ್ಥ ಮಾಡಿಕೊಂಡಿವೆ. ಆಸ್ಟ್ರೇಲಿಯಾ, ಅಮೆರಿಕ ಮತ್ತು ಬ್ರಿಟನ್ ನಡುವೆ ಅಕಸ್ (AUKUS) ಒಪ್ಪಂದ ಚಾಲ್ತಿಗೆ ಬಂದ ನಂತರ ನಡೆಯುತ್ತಿರುವ ಮೊದಲ ಸಭೆ ಇದು. ಅಕಸ್ ಒಪ್ಪಂದವು ಆಸ್ಟ್ರೇಲಿಯಾಕ್ಕೆ ಅಣುಶಕ್ತಿ ಚಾಲಿತ ಜಲಾಂತರ್ಗಾಮಿಗಳನ್ನು ಪಡೆದುಕೊಳ್ಳಲು ನೆರವಾಗಿದೆ. ಚೀನಾವನ್ನು ಹದ್ದುಬಸ್ತಿನಲ್ಲಿಡಲು ಸಮಾನ ಮನಸ್ಕ ದೇಶಗಳಿಗೆ ಯಾವುದೇ ನೆರವು ಒದಗಿಸಲು ಸಿದ್ಧ ಎಂಬ ಅಮೆರಿಕದ ಧೋರಣೆಯನ್ನು ಇದು ಸಾರಿ ಹೇಳುತ್ತದೆ.

ನಾನು ಸಮಾನ ಮನಸ್ಕ ದೇಶಗಳು ಎಂಬ ಪದವನ್ನು ಉದ್ದೇಶಪೂರ್ವಕವಾಗಿ ಬಳಸುತ್ತಿದ್ದೇನೆ. ಜಪಾನ್ ಪ್ರಧಾನಿ ಶಿಂಜೊ ಅಬೆ 2007ರಲ್ಲಿ ಕ್ವಾಡ್ ಒಪ್ಪಂದದ ನಿಜವಾದ ಉದ್ದೇಶವನ್ನು ಆರ್ಥಿಕ ಪ್ರಗತಿಯ ಪದಗುಚ್ಛಗಳಲ್ಲಿ ಬಚ್ಚಿಟ್ಟರು. ಭಾರತದ ವಿದೇಶಾಂಗ ವ್ಯವಹಾರಗಳ ಇಲಾಖೆಯು ಕ್ವಾಡ್ ಒಪ್ಪಂದವನ್ನು ಹೀಗೆ ವಿವರಿಸುತ್ತದೆ. ‘ಕ್ವಾಡ್ ಹಂದರದಲ್ಲಿ ಸಹಕಾರದ ಉದ್ದೇಶವು ಸಕಾರಾತ್ಮಕವಾದ ಮತ್ತು ವೈವಿಧ್ಯತೆಯನ್ನು ಒಳಗೊಂಡಿರುತ್ತದೆ. ಸಂಪರ್ಕ, ಮೂಲಸೌಕರ್ಯ, ಪ್ರವರ್ಧಮಾನಕ್ಕೆ ಬರುತ್ತಿರುವ ತಂತ್ರಜ್ಞಾನಗಳು, ಹವಾಮಾನ ಸುಧಾರಣೆ, ಶಿಕ್ಷಣ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಕೊವಿಡ್-19ಕ್ಕೆ ಸಂಬಂಧಿಸಿದ ಪ್ರತಿಕ್ರಿಯೆಯನ್ನು ಇದು ಒಳಗೊಂಡಿರುತ್ತದೆ. ವಿಶ್ವಾಸಾರ್ಹ ಪೂರೈಕೆ ಜಾಲವನ್ನು ಇದು ಬೆಳೆಸುತ್ತದೆ’ ಎಂದು ಹೇಳಿತ್ತು.

ಚೀನಾಗೆ ಸಹಜವಾಗಿಯೇ ಈ ಒಪ್ಪಂದದ ಬಗ್ಗೆ ಅನುಮಾನಗಳು ಮೂಡಿದ್ದವು. ಯುದ್ಧವನ್ನು ಮತ್ತಷ್ಟು ದೂರಕ್ಕೆ ಕೊಂಡೊಯ್ಯುವ ಅಮೆರಿಕದ ಪ್ರಯತ್ನ ಎನಿಸಿತ್ತು.

2017ರ ಆಸಿಯಾನ್ ಸಮಾವೇಶದಲ್ಲಿ ಕ್ವಾಡ್​ ಧ್ಯೇಯೋದ್ದೇಶಗಳ ಬಗ್ಗೆ ವಿಸ್ತೃತ ಚರ್ಚೆಯಾಯಿತು. ಆದರೆ ಈ ಬಾರಿ ಕಣ್ಣೊರೆಸುವ ತಂತ್ರಗಳೇ ಹೆಚ್ಚಾಗಿ ಮುಂಚೂಣಿಗೆ ಬರುವ ಸಾಧ್ಯತೆಯಿದೆ. ಚೀನಾಕ್ಕೆ ಇದು ಇಷ್ಟವಿಲ್ಲ. ಅಮೆರಿಕ, ಬ್ರಿಟನ್ ಮತ್ತು ಆಸ್ಟ್ರೇಲಿಯಾ ನಡುವೆ ಈಗ ಅಕಸ್ ಒಪ್ಪಂದದ ನಂಟೂ ಸಹ ಇದೆ. ಭಾರತವೂ ಸೇರಿದರೆ ಒಟ್ಟು ಐದು ದೇಶಗಳು ಸಮಾನ ಉದ್ದೇಶದ ಸಹಪಯಣಿಗರಾದಂತೆ ಆಗಿದೆ. ಚೀನಾಕ್ಕೆ ಈ ಬೆಳವಣಿಗೆಯನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ. ಆಸ್ಟ್ರೇಲಿಯಾದೊಂದಿಗಿನ ಜಲಾಂತರ್ಗಾಮಿ ಒಪ್ಪಂದ ರದ್ದಾಗಿರುವ ಹಿನ್ನೆಲೆಯಲ್ಲಿ ಮುನಿಸಿಕೊಂಡಿರುವ ಫ್ರಾನ್ಸ್​ ಹೇಗೆ ನಡೆದುಕೊಳ್ಳುತ್ತದೆ ಎಂದು ಹೇಳಲು ಆಗುವುದಿಲ್ಲ.

ಈ ಬಾರಿಯ ಸಭೆಯಲ್ಲಿ ಮೋದಿ ಪ್ರಮುಖ ಪಾತ್ರ ವಹಿಸಲಿದ್ದಾರೆ. ಸಹಜವಾಗಿಯೇ ತಮಗೆ ಸಿಕ್ಕಿರುವ ಪ್ರಾಧಾನ್ಯತೆಯ ಲಾಭ ಪಡೆದುಕೊಳ್ಳುವ ಮೋದಿ ಪ್ರಬಲ ಯುದ್ಧೋಪಕರಣಗಳನ್ನು ಭಾರತಕ್ಕೆ ಸಿಗುವಂತೆ ಮಾಡಲು ಪ್ರಯತ್ನಿಸಬಹುದು. ಅಕಸ್ ಒಪ್ಪಂದದಿಂದ ಕ್ವಾಡ್​ಗೆ ಯಾವುದೇ ಧಕ್ಕೆಯಾಗದಂತೆ ಹಾಗೂ ಅದರ ಪ್ರಭಾವ ಕುಂಠಿತವಾಗದಂತೆ ಮೋದಿ ಗಮನ ಹರಿಸುತ್ತಾರೆ. ಏಕೆಂದರೆ ಭವಿಷ್ಯದಲ್ಲಿ ಅಕಸ್ ಹೆಚ್ಚು ಪ್ರಭಾವಿಯಾದರೆ ಕ್ವಾಡ್​ ತನ್ನ ಪ್ರಾಮುಖ್ಯತೆ ಕಳೆದುಕೊಳ್ಳಬಹುದು ಎಂಬ ವಿಶ್ಲೇಷಣೆಗಳು ಚಾಲ್ತಿಯಲ್ಲಿವೆ.

ಅಫ್ಘಾನಿಸ್ತಾನದ ಈಚಿನ ಬೆಳವಣಿಗೆಗಳ ಬಗ್ಗೆಯೂ ಮೋದಿ ಅವರು ತಮ್ಮ ಅಮೆರಿಕ ಪ್ರವಾಸದಲ್ಲಿ ಪ್ರಮುಖವಾಗಿ ಪ್ರಸ್ತಾಪಿಸಬಹುದು ಎನ್ನಲಾಗಿದೆ. ತಾಲಿಬಾನ್ ಕೈಗೆ ದೊಡ್ಡಮಟ್ಟದ ಶಸ್ತ್ರಾಸ್ತ್ರಗಳು ಸಿಕ್ಕಿರುವುದು ಸಹಜವಾಗಿಯೇ ಭಾರತದ ಭದ್ರತೆಗೆ ಆತಂಕ ತಂದೊಡ್ಡಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರ ಒಳನುಸುಳುವಿಕೆ ಹೆಚ್ಚಾಗಿದೆ. ಸೆ.25ರಂದು ನಡೆಯಲಿರುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿಯೂ ಮೋದಿ ಈ ವಿಚಾರವನ್ನು ಪ್ರಸ್ತಾಪಿಸುವ ಸಾಧ್ಯತೆ ನಿಚ್ಚಳವಾಗಿದೆ. ಜಾಗತಿಕ ಭಯೋತ್ಪಾದನೆ ಮತ್ತು ಅದಕ್ಕೆ ಸಿಕ್ಕಿರುವ ಹೊಸ ಶಕ್ತಿಯ ಬಗ್ಗೆ ಭಾರತದ ಆತಂಕಗಳನ್ನು ಮೋದಿ ಅಭಿವ್ಯಕ್ತಿಸಲಿದ್ದಾರೆ. ಕಾಶ್ಮೀರದ ವಿಚಾರವನ್ನು ವಿಶ್ವಸಂಸ್ಥೆಯಲ್ಲಿ ಪ್ರಸ್ತಾಪಿಸಬೇಕೆನ್ನುವ ಪಾಕಿಸ್ತಾನದ ಪ್ರಯತ್ನಗಳನ್ನ ವಿಫಲಗೊಳಿಸಬೇಕಾದ ಜವಾಬ್ದಾರಿಯೂ ಮೋದಿ ಅವರಿಗಿದೆ. ಹೀಗಾಗಿಯೇ ವಿಶ್ವಸಂಸ್ಥೆ ಅಧಿವೇಶನದಲ್ಲಿ ಸದಸ್ಯ ದೇಶಗಳ ಗಮನ ಸೆಳೆಯಲು ಸಿಗುವ ಎಲ್ಲ ಅವಕಾಶಗಳನ್ನೂ ಮೋದಿ ನಿಚ್ಚಳವಾಗಿ ಬಳಸಿಕೊಳ್ಳಲಿದ್ದಾರೆ.

ವಾಣಿಜ್ಯ, ವ್ಯಾಪಾರ ಮತ್ತು ಕೊವಿಡ್ ಸೇರಿದಂತೆ ಹತ್ತಾರು ವಿಚಾರಗಳು ಈ ಪ್ರವಾಸದಲ್ಲಿ ಪ್ರಸ್ತಾಪವಾಗಬಹುದು. ಆದರೆ ಮೋದಿ ಅವರ ಪ್ರವಾಸವು ನಿಚ್ಚಳವಾಗಿ ಚೀನಾವನ್ನು ನಿಯಂತ್ರಿಸಬಹುದು ಎಂಬ ಸಾಧ್ಯತೆಗಳನ್ನು ಹೆಚ್ಚಾಗಿ ಅವಲೋಕಿಸಲಿದೆ. ಪ್ರಭಾವ ವಿಸ್ತರಿಸಿಕೊಳ್ಳಲು ಯತ್ನಿಸುತ್ತಿರುವ ಚೀನಾದ ಮುನ್ನಡೆಯನ್ನು ನಿಯಂತ್ರಿಸುವ ಹಾಗೂ ಅದರ ರೆಕ್ಕೆಗಳನ್ನು ಬಹುರಾಷ್ಟ್ರ ಒಪ್ಪಂದ ಮತ್ತು ಸೇನಾ ಬಲದಿಂದ ಹೇಗೆಲ್ಲಾ ಕತ್ತರಿಸಲು ಸಾಧ್ಯ ಎಂಬ ಚರ್ಚೆಗಳೇ ಈ ಭೇಟಿಯ ಅತಿಮುಖ್ಯ ಉದ್ದೇಶ ಎಂಬ ವಿಶ್ಲೇಷಣೆಗಳೂ ಚಾಲ್ತಿಯಲ್ಲಿವೆ.

ಇದನ್ನೂ ಓದಿ: Narendra Modi: ದೆಹಲಿಯಿಂದ ವಿಶೇಷ ವಿಮಾನದಲ್ಲಿ ಅಮೆರಿಕ ಪ್ರವಾಸಕ್ಕೆ ತೆರಳಿದ ಪ್ರಧಾನಿ ನರೇಂದ್ರ ಮೋದಿ

ಇದನ್ನೂ ಓದಿ: Narendra Modi: ಸೆ. 23ರಿಂದ 3 ದಿನ ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಪ್ರವಾಸ; ಜೋ ಬೈಡನ್ ಜೊತೆ ಭೇಟಿ

(Narendra Modi America tour QUAD summit discussion may focus to curtail China)

ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ
ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ
ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್
ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್
ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್
ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್
ಮೊಮ್ಮಗ ನಿಖಿಲ್ ಸೋಲಿನ ಬಗ್ಗೆ ದೇವೇಗೌಡರ ಮೊದಲ ಪ್ರತಿಕ್ರಿಯೆ ಹೇಗಿತ್ತು ನೋಡಿ
ಮೊಮ್ಮಗ ನಿಖಿಲ್ ಸೋಲಿನ ಬಗ್ಗೆ ದೇವೇಗೌಡರ ಮೊದಲ ಪ್ರತಿಕ್ರಿಯೆ ಹೇಗಿತ್ತು ನೋಡಿ
ಸಮುದ್ರಕ್ಕೆ ಹಾರಿದ ಯುವತಿ, ರೋಚಕ ರಕ್ಷಣಾ ಕಾರ್ಯಾಚರಣೆ ಹೀಗಿತ್ತು ನೋಡಿ
ಸಮುದ್ರಕ್ಕೆ ಹಾರಿದ ಯುವತಿ, ರೋಚಕ ರಕ್ಷಣಾ ಕಾರ್ಯಾಚರಣೆ ಹೀಗಿತ್ತು ನೋಡಿ
ನಾಥನ್ ಲಿಯಾನ್ ಹೆಣೆದ ಬಲೆಗೆ ಬಿದ್ದ ರಿಷಭ್ ಪಂತ್
ನಾಥನ್ ಲಿಯಾನ್ ಹೆಣೆದ ಬಲೆಗೆ ಬಿದ್ದ ರಿಷಭ್ ಪಂತ್
ಆಸ್ಟ್ರೇಲಿಯಾ ಪಾಲಿಗೆ ದುಬಾರಿಯಾದ ಖ್ವಾಜಾ ಕೈಬಿಟ್ಟ ಕ್ಯಾಚ್
ಆಸ್ಟ್ರೇಲಿಯಾ ಪಾಲಿಗೆ ದುಬಾರಿಯಾದ ಖ್ವಾಜಾ ಕೈಬಿಟ್ಟ ಕ್ಯಾಚ್
ಮಹಾರಾಷ್ಟ್ರ: ಸ್ವತಂತ್ರ ಅಭ್ಯರ್ಥಿಯ ವಿಜಯೋತ್ಸವದ ವೇಳೆ ಅಗ್ನಿ ಅವಘಡ
ಮಹಾರಾಷ್ಟ್ರ: ಸ್ವತಂತ್ರ ಅಭ್ಯರ್ಥಿಯ ವಿಜಯೋತ್ಸವದ ವೇಳೆ ಅಗ್ನಿ ಅವಘಡ
ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ
ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ