Narendra Modi: ದೆಹಲಿಯಿಂದ ವಿಶೇಷ ವಿಮಾನದಲ್ಲಿ ಅಮೆರಿಕ ಪ್ರವಾಸಕ್ಕೆ ತೆರಳಿದ ಪ್ರಧಾನಿ ನರೇಂದ್ರ ಮೋದಿ
Narendra Modi in US: ಮೂರು ದಿನಗಳ ಅಮೆರಿಕ ಪ್ರವಾಸಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ದೆಹಲಿ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದಲ್ಲಿ ಹೊರಟಿದ್ದಾರೆ. ಇಂದು ರಾತ್ರಿ ಅವರು ಅಮೆರಿಕ ತಲುಪಲಿದ್ದಾರೆ.
ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಇಂದು ಅಮೆರಿಕ ಪ್ರವಾಸಕ್ಕೆ ತೆರಳಿದ್ದಾರೆ. ನಾಳೆಯಿಂದ 3 ದಿನಗಳ ಅಮೆರಿಕ ಪ್ರವಾಸದಲ್ಲಿರುವ (US Visit) ಪ್ರಧಾನಿ ಮೋದಿ ಸೆ. 26ರಂದು ದೆಹಲಿಗೆ ವಾಪಾಸ್ ಆಗಮಿಸಲಿದ್ದಾರೆ. ಅಮೆರಿಕಾ ಪ್ರವಾಸದ ವೇಳೆ ಪ್ರಧಾನಿ ನರೇಂದ್ರ ಮೋದಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಬಳಿಕ ಅಮೆರಿಕಾದ ಅಧ್ಯಕ್ಷ ಜೋ ಬೈಡೆನ್ (Joe Biden) ಹಾಗೂ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ (Kamala Harris) ಜೊತೆಗೆ ಮಾತುಕತೆ ನಡೆಸಲಿದ್ದಾರೆ. ಕ್ವಾಡ್ ರಾಷ್ಟ್ರಗಳ ನಾಯಕರ ಶೃಂಗ ಸಭೆಯಲ್ಲಿ ಕೂಡ ನರೇಂದ್ರ ಮೋದಿ ಪಾಲ್ಗೊಳ್ಳಲಿದ್ದಾರೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಅಮೆರಿಕಾದ ವಾಷಿಂಗ್ಟನ್ ಡಿ.ಸಿ.ಗೆ ತೆರಳಲು ಪಾಕಿಸ್ತಾನದ ವಾಯುಪ್ರದೇಶವನ್ನು ಬಳಸಲಾಗುತ್ತದೆ. ಪ್ರಧಾನಿಯ ಏರ್ ಇಂಡಿಯಾ ಒನ್ ಬೋಯಿಂಗ್ 777-300 ಇಆರ್ ವಿಮಾನವು ಪಾಕ್ ವಾಯುಪ್ರದೇಶದ ಮೂಲಕ ಹಾದು ಹೋಗಲು ಪಾಕಿಸ್ತಾನ ಸರ್ಕಾರದ ಅನುಮತಿ ನೀಡಿದೆ. ಅಫ್ಘಾನಿಸ್ತಾನವನ್ನು ಅವಾಯ್ಡ್ ಮಾಡಿ ಈ ವಿಶೇಷ ವಿಮಾನ ಪ್ರಯಾಣ ಬೆಳೆಸಲಿದೆ. ಈಗಾಗಲೇ ನರೇಂದ್ರ ಮೋದಿ ದೆಹಲಿಯ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದಲ್ಲಿ ಅಮೆರಿಕಕ್ಕೆ ಹೊರಟಿದ್ದಾರೆ.
ಸೆಪ್ಟೆಂಬರ್ 23 ರಿಂದ 3 ದಿನಗಳ ಕಾಲ ನರೇಂದ್ರ ಮೋದಿ ಅಮೆರಿಕಾ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಇಂದು ಬೆಳಗ್ಗೆ ದೆಹಲಿಯಿಂದ ಹೊರಟಿರುವ ನರೇಂದ್ರ ಮೋದಿ ರಾತ್ರಿ ವೇಳೆಗೆ ಅಮೆರಿಕಾದ ವಾಷಿಂಗ್ಟನ್ ಡಿ.ಸಿ. ತಲುಪಲಿದ್ದಾರೆ. ಭಾರತದಲ್ಲಿ ಕೊವಿಡ್ ಅಟ್ಟಹಾಸ ಶುರುವಾದ ಬಳಿಕ ಪ್ರಧಾನಿ ನರೇಂದ್ರ ಮೋದಿ ತೆರಳುತ್ತಿರುವ ಮೊದಲ ಪ್ರಮುಖ ವಿದೇಶಿ ಪ್ರವಾಸ ಇದಾಗಿದೆ. ನಾಳೆ ಬೆಳಿಗ್ಗೆ ನರೇಂದ್ರ ಮೋದಿ ಅಮೆರಿಕದ ಕಂಪನಿಗಳ ಸಿಇಓ ಜೊತೆಗೆ ಸಭೆ ನಡೆಸುವರು. ಆ್ಯಪಲ್ ಸಿಇಓ ಟೀಮ್ ಕುಕ್ ಸೇರಿದಂತೆ ಪ್ರಮುಖ ಕಂಪನಿಗಳ ಸಿಇಓ ಜೊತೆಗೆ ಸಭೆ ನಡೆಸುವರು. ಭಾರತದಲ್ಲಿ ಬಂಡವಾಳ ಹೂಡಿಕೆಗೆ ಕಂಪನಿಗಳ ಸಿಇಓಗಳನ್ನು ಆಹ್ವಾನಿಸುವರು. ಭಾರತದಲ್ಲಿ ಬಂಡವಾಳ ಹೂಡಿಕೆಗೆ ಇರುವ ಅವಕಾಶಗಳ ಬಗ್ಗೆ ಮನವರಿಕೆ ಮಾಡಿಕೊಟ್ಟು ಆಹ್ವಾನ ನೀಡುವರು. ಬಳಿಕ ಅಮೆರಿಕಾದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ರನ್ನು ಭೇಟಿಯಾಗಿ ಮಾತುಕತೆ ನಡೆಸುವರು. ಕಮಲಾ ಹ್ಯಾರಿಸ್, ಭಾರತ ಮೂಲದವರು. ಹೀಗಾಗಿ ತಮ್ಮ ಆಡಳಿತಾವಧಿಯಲ್ಲಿ ಭಾರತಕ್ಕೆ ಅನುಕೂಲವಾಗುವ ನೀತಿ, ನಿಯಮಗಳನ್ನು ಜಾರಿಗೆ ತರಬೇಕೆಂದು ಕಮಲಾ ಹ್ಯಾರಿಸ್ ಜೊತೆಗೆ ನರೇಂದ್ರ ಮೋದಿ ಚರ್ಚೆ ನಡೆಸುವರು.
PM Modi’s flight to US will avoid Afghanistan, Pakistan gives nod for usage of its airspace
Read @ANI Story | https://t.co/SarqSQiDZG#PMModi #US pic.twitter.com/RvmyAkPznc
— ANI Digital (@ani_digital) September 22, 2021
ಸೆಪ್ಟೆಂಬರ್ 24ರಂದು ಪ್ರಧಾನಿ ನರೇಂದ್ರ ಮೋದಿ ಅಮೆರಿಕದ ಶ್ವೇತ ಭವನಕ್ಕೆ ಭೇಟಿ ನೀಡುವರು. ಶ್ವೇತ ಭವನದಲ್ಲಿ ನಡೆಯುವ ಕ್ವಾಡ್ ರಾಷ್ಟ್ರಗಳ ನಾಯಕರ ಮೊದಲ ಮುಖಾಮುಖಿ ಸಭೆಯಲ್ಲಿ ಪ್ರಧಾನಿ ಮೋದಿ ಪಾಲ್ಗೊಳ್ಳುವರು. ಈ ಸಭೆಯಲ್ಲೇ ಕ್ವಾಡ್ ಸದಸ್ಯ ರಾಷ್ಟ್ರವಾಗಿರುವ ಅಮೆರಿಕಾದ ಅಧ್ಯಕ್ಷ ಜೋ ಬೈಡೆನ್, ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮ್ಯಾರಿಸನ್, ಜಪಾನ್ ಪ್ರಧಾನಿ ಯೋಗಶಿಧೆ ಸುಗಾ ಪಾಲ್ಗೊಳ್ಳುವರು. ಏಷ್ಯಾ ಹಾಗೂ ಇಂಡೋ-ಫೆಸಿಫಿಕ್ನಲ್ಲಿ ಚೀನಾದ ಪ್ರಾಬಲ್ಯ ತಡೆಯುವ ಉದ್ದೇಶದಿಂದ ನಾಲ್ಕು ರಾಷ್ಟ್ರಗಳು ಸೇರಿ ಕ್ವಾಡ್ ಒಕ್ಕೂಟ ರಚಿಸಿಕೊಂಡಿವೆ. ಇದರಲ್ಲಿ ಭದ್ರತೆ ಮಾತ್ರವಲ್ಲದೆ, ಉಳಿದ ವಿಷಯಗಳ ಬಗ್ಗೆ ಪರಸ್ಪರ ಸಹಕಾರದ ಬಗ್ಗೆಯೂ ಚರ್ಚೆ ನಡೆಯಲಿದೆ. ಕ್ವಾಡ್ ರಾಷ್ಟ್ರಗಳ ಸಭೆಯ ಬಳಿಕ ಪ್ರಧಾನಿ ಮೋದಿ, ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ಜೊತೆಗೆ ದ್ವಿಪಕ್ಷೀಯ ಬಾಂಧವ್ಯ ವೃದ್ಧಿಯ ಬಗ್ಗೆ ಚರ್ಚೆ ನಡೆಸುವರು. ಜೋ ಬೈಡೆನ್ ಅಮೆರಿಕಾ ಅಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ಮುಖಾಮುಖಿಯಾಗಿ ಮೋದಿ ದ್ವಿಪಕ್ಷೀಯ ಬಾಂಧವ್ಯ ವೃದ್ಧಿಯ ಬಗ್ಗೆ ಮಾತುಕತೆ ನಡೆಸಲಿದ್ದಾರೆ. ಸೆಪ್ಟೆಂಬರ್ 24ರ ರಾತ್ರಿಯೇ ಶ್ವೇತ ಭವನದಲ್ಲಿ ಕ್ವಾಡ್ ರಾಷ್ಟ್ರಗಳ ನಾಯಕರಿಗೆ ಜೋ ಬೈಡೆನ್ ಔತಣ ಕೂಟ ಏರ್ಪಡಿಸಿದ್ದಾರೆ. ಈ ಔತಣಕೂಟದಲ್ಲಿ ಭಾಗವಹಿಸಿದ ಬಳಿಕ ನರೇಂದ್ರ ಮೋದಿ ನ್ಯೂಯಾರ್ಕ್ನತ್ತ ಪ್ರಯಾಣ ಬೆಳೆಸಲಿದ್ದಾರೆ.
ಸೆಪ್ಟಂಬರ್ 25ರಂದು ಭಾರತೀಯ ಕಾಲಮಾನ ಸಂಜೆ 6.30ಕ್ಕೆ ಪ್ರಧಾನಿ ನರೇಂದ್ರ ಮೋದಿ, ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಉದ್ದೇಶಿಸಿ ಮಾತನಾಡುವರು. ಸೆೆಪ್ಟೆಂಬರ್ 25ರಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮೋದಿಯೇ ಮೊದಲ ಭಾಷಣಕಾರರು. 2019ರಲ್ಲಿ ಮೋದಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಗೆ ಖುದ್ದಾಗಿ ಹೋಗಿ ಭಾಗವಹಿಸಿದ್ದರು. 2020ರಲ್ಲಿ ಕೊರೊನಾದ ಕಾರಣದಿಂದ ವರ್ಚುವಲ್ ಆಗಿ ನಡೆದ ಸಾಮಾನ್ಯ ಸಭೆಯನ್ನು ಉದ್ದೇಶಿಸಿ ಭಾರತದಿಂದಲೇ ಮಾತನಾಡಿದ್ದರು. ಈಗ ಖುದ್ದಾಗಿ ಹೋಗಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯನ್ನು ಉದ್ದೇಶಿಸಿ ಮಾತನಾಡುವರು.
At the invitation of @POTUS @JoeBiden, I am visiting USA to continue our dialogue, and exchange views on areas of mutual interest. Also looking forward to meet @VP @KamalaHarris to discuss global issues and explore ideas for cooperation between ????.
— Narendra Modi (@narendramodi) September 22, 2021
ಭಾರತದ ವಿದೇಶಾಂಗ ಸಚಿವ ಜೈಶಂಕರ್ ಈಗಾಗಲೇ ನ್ಯೂಯಾರ್ಕ್ ತಲುಪಿದ್ದಾರೆ. ಜಿ-4 ರಾಷ್ಟ್ರಗಳೊಂದಿಗೆ ಮಾತುಕತೆ ನಡೆಸಿದ್ದಾರೆ. ಬ್ರೆಜಿಲ್, ಜರ್ಮನಿ, ಜಪಾನ್ ಹಾಗೂ ಭಾರತ ದೇಶಗಳು ಜಿ-4 ರಾಷ್ಟ್ರಗಳಾಗಿವೆ. ಇನ್ನು, ಅಮೆರಿಕಕ್ಕೆ ತೆರಳುವ ಮುನ್ನ ಟ್ವೀಟ್ ಮಾಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, ಜೋ ಬೈಡನ್ ಅವರ ಆಹ್ವಾನದ ಮೇರೆಗೆ ನಾನು ಅಮೆರಿಕಕ್ಕೆ ತೆರಳುತ್ತಿದ್ದೇನೆ. ನಮ್ಮ ಸಮಾನ ಆಸಕ್ತಿ, ಆಲೋಚನೆಗಳನ್ನು ಈ ವೇಳೆ ವಿನಿಮಯ ಮಾಡಿಕೊಳ್ಳಲಿದ್ದೇವೆ. ಹಾಗೇ, ಜಾಗತಿಕ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲು ಕಮಲಾ ಹ್ಯಾರಿಸ್ ಅವರನ್ನು ಭೇಟಿಯಾಗಲು ನಾನು ಕಾತುರನಾಗಿದ್ದೇನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: Narendra Modi: ಸೆ. 23ರಿಂದ 3 ದಿನ ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಪ್ರವಾಸ; ಜೋ ಬೈಡನ್ ಜೊತೆ ಭೇಟಿ
(PM Narendra Modi Leaves for US Visit Calls it Occasion to Strengthen Global Strategic Partnership)