Coronavirus cases in India: ದೇಶದಲ್ಲಿ 26,964 ಹೊಸ ಕೊವಿಡ್ ಪ್ರಕರಣಗಳು ಪತ್ತೆ, 383 ಮಂದಿ ಸಾವು
Covid 19: ದಿನನಿತ್ಯದ ಸಕಾರಾತ್ಮಕತೆ ದರ ಶೇ 1.69 ಆಗಿದೆ. ಕಳೆದ 24 ಗಂಟೆಗಳಲ್ಲಿ 34,167 ಮಂದಿ ಚೇತರಿಸಿಕೊಂಡಿದ್ದು ಚೇತರಿಸಿಕೊಂಡವರ ಒಟ್ಟು ಸಂಖ್ಯೆ 3,27,83,741ತಲುಪಿದೆ
ದೆಹಲಿ: ಕಳೆದ 24 ಗಂಟೆಗಳಲ್ಲಿ ಭಾರತವು 26, 964 ಹೊಸ ಕೊವಿಡ್ ಪ್ರಕರಣಗಳನ್ನು ವರದಿ ಮಾಡಿದ್ದು 383 ಸಾವು ಪ್ರಕರಣಗಳ ಸೇರ್ಪಡೆಯೊಂದಿಗೆ ಒಟ್ಟು ಸಾವಿನ ಸಂಖ್ಯೆ ಈಗ 4,45,768 ಆಗಿದೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ. ದಿನನಿತ್ಯದ ಸಕಾರಾತ್ಮಕತೆ ದರ ಶೇ 1.69 ಆಗಿದೆ. ಕಳೆದ 24 ಗಂಟೆಗಳಲ್ಲಿ 34,167 ಮಂದಿ ಚೇತರಿಸಿಕೊಂಡಿದ್ದು ಚೇತರಿಸಿಕೊಂಡವರ ಒಟ್ಟು ಸಂಖ್ಯೆ 3,27,83,741ತಲುಪಿದೆ. ಚೇತರಿಕೆಯ ಪ್ರಮಾಣವು ಶೇಕಡಾ 97.77 ರಷ್ಟಿದ್ದು, ಇದು ಕಳೆದ ವರ್ಷದ ಮಾರ್ಚ್‌ನಿಂದ ಗರಿಷ್ಠವಾಗಿದೆ. ಭಾರತವು ಮುಂದಿನ ತಿಂಗಳು ಹೆಚ್ಚುವರಿ ಲಸಿಕೆಗಳ ರಫ್ತು ಮತ್ತು ದೇಣಿಗೆಗಳನ್ನು ಪುನರಾರಂಭಿಸುವುದಾಗಿ ಸರ್ಕಾರ ಸೋಮವಾರ ಹೇಳಿದೆ. ಒಟ್ಟಾರೆಯಾಗಿ ವಿಶ್ವದ ಅತಿದೊಡ್ಡ ಲಸಿಕೆಗಳನ್ನು ತಯಾರಿಸುವ ಭಾರತವು ತನ್ನದೇ ಜನಸಂಖ್ಯೆಗೆ ಲಸಿಕೆ ಹಾಕುವತ್ತ ಗಮನಹರಿಸಲು ಏಪ್ರಿಲ್‌ನಲ್ಲಿ ಲಸಿಕೆ ರಫ್ತುಗಳನ್ನು ನಿಲ್ಲಿಸಿತ್ತು. 82.65 ಕೋಟಿ ರಾಷ್ಟ್ರವ್ಯಾಪಿ ವ್ಯಾಕ್ಸಿನೇಷನ್ ಡ್ರೈವ್ ಅಡಿಯಲ್ಲಿ ಇದುವರೆಗೆ ಲಸಿಕೆ ಪ್ರಮಾಣವನ್ನು ನೀಡಲಾಗಿದೆ. ಸಕ್ರಿಯ ಪ್ರಕರಣಗಳು ಒಟ್ಟು ಪ್ರಕರಣಗಳಲ್ಲಿ ಶೇ 1 ಕ್ಕಿಂತ ಕಡಿಮೆ ಆಗಿದ್ದು ಪ್ರಸ್ತುತ ಶೇ 0.90 ಆಗಿದೆ. ಭಾರತದ ಸಕ್ರಿಯ ಪ್ರಕರಣಗಳ ಸಂಖ್ಯೆ 3,01,989 ಆಗಿದೆ.
ಕಳೆದ 89 ದಿನಗಳಲ್ಲಿ ಸಾಪ್ತಾಹಿಕ ಧನಾತ್ಮಕ ದರ (ಶೇ 2.08) ಶೇ 3 ಕ್ಕಿಂತ ಕಡಿಮೆ ಮತ್ತು ಕಳೆದ 23 ದಿನಗಳಲ್ಲಿ ದೈನಂದಿನ ಧನಾತ್ಮಕ ದರ (ಶೇ 1.69) ಶೇ3 ಕ್ಕಿಂತ ಕಡಿಮೆ ಆಗಿದೆ.
ಥಾಣೆಯಲ್ಲಿ 258 ಹೊಸ ಕೊರೊನಾವೈರಸ್ ಪ್ರಕರಣಗಳು ವರದಿಯಾಗಿದ್ದು, ಮಹಾರಾಷ್ಟ್ರ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 5,56,855 ಕ್ಕೆ ಏರಿಕೆಯಾಗಿದೆ. ಮಂಗಳವಾರ ದಾಖಲಾದ ಈ ಹೊಸ ಪ್ರಕರಣಗಳಲ್ಲದೆ, ವೈರಸ್ ಇನ್ನೂ ಏಳು ಜನರ ಜೀವವನ್ನು ಬಲಿ ತೆಗೆದುಕೊಂಡಿದ್ದು ಸಾವಿನ ಸಂಖ್ಯೆಯನ್ನು 11,380ಕ್ಕೆ ತಲುಪಿದೆ.
India reports 26,964 new COVID cases, 34,167 recoveries, and 383 deaths in the last 24 hours
Active cases: 3,01,989 (lowest in 186 days) Total recoveries: 3,27,83,741 Death toll: 4,45,768
Total vaccination: 82,65,15,754 pic.twitter.com/2lkQeQCbRb
— ANI (@ANI) September 22, 2021
ಕರ್ನಾಟಕದಲ್ಲಿ 818 ಹೊಸ ಕೊವಿಡ್ -19 ಪ್ರಕರಣಗಳು, 21 ಸಾವು ಕರ್ನಾಟಕದಲ್ಲಿ ಮಂಗಳವಾರ ಒಟ್ಟು 818 ಹೊಸ ಕೊವಿಡ್ -19 ಪ್ರಕರಣಗಳು, 1,414 ಚೇತರಿಕೆ ಮತ್ತು 21 ಸಾವುಗಳು ವರದಿಯಾಗಿವೆ. ರಾಜ್ಯ ಆರೋಗ್ಯ ಇಲಾಖೆಯ ಮಾಧ್ಯಮ ಬುಲೆಟಿನ್ ಪ್ರಕಾರ, ಒಟ್ಟು ಕೇಸ್ ಲೋಡ್ 29,69,361 ರಲ್ಲಿ 13,741 ಸಕ್ರಿಯ ಪ್ರಕರಣಗಳಾಗಿವೆ. ಮಂಗಳವಾರದ ಧನಾತ್ಮಕ ದರವು ಶೇ .0.80 ರಷ್ಟಿದೆ. ರಾಜ್ಯದಲ್ಲಿ ಸಾವಿನ ಸಂಖ್ಯೆ 37,648 ಆಗಿದೆ. ಒಟ್ಟು ಚೇತರಿಕೆಗಳು 29,17,944 ಆಗಿದೆ.
ಕೇರಳದಲ್ಲಿ ಮಂಗಳವಾರ 15,768 ಹೊಸ ಕೊವಿಡ್ -19 ಪ್ರಕರಣಗಳು ಮತ್ತು 214 ಸಾವುಗಳನ್ನು ವರದಿ ಮಾಡಿದೆ. ಇಲ್ಲಿ ಒಟ್ಟು 45,39,953 ಕೊವಿಡ್ ಪ್ರಕರಣಗಳು ಮತ್ತು 23,897 ಸಾವು ಪ್ರಕರಣಗಳಿವೆ. ಸೋಮವಾರದಿಂದ ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ 21,367 ಆಗಿದ್ದು, ಇದು ಒಟ್ಟು ಚೇತರಿಕೆಯನ್ನು 43,54,264 ಕ್ಕೆ ಮತ್ತು ಸಕ್ರಿಯ ಪ್ರಕರಣಗಳ ಸಂಖ್ಯೆಯನ್ನು 1,61,195 ಕ್ಕೆ ತಂದಿದೆ ಎಂದು ಅಧಿಕೃತ ಪತ್ರಿಕಾ ಪ್ರಕಟಣೆ ತಿಳಿಸಿದೆ. ಕಳೆದ 24 ಗಂಟೆಗಳಲ್ಲಿ 1,05,513 ಮಾದರಿಗಳನ್ನು ಪರೀಕ್ಷಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಇದನ್ನೂ ಓದಿ: ಅಕ್ಟೋಬರ್ನಿಂದ ಕೊವಿಡ್ 19 ಲಸಿಕೆ ರಫ್ತು ಮತ್ತೆ ಪ್ರಾರಂಭ; ಇಂದು ಮಾಹಿತಿ ನೀಡಿದ ಕೇಂದ್ರ ಆರೋಗ್ಯ ಸಚಿವ
(India reports 26, 964 new Covid cases Recovery Rate currently at 97.77 percent Highest since March 2020)