AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತ-ರಷ್ಯಾ 23ನೇ ಜಂಟಿ ವಾರ್ಷಿಕ ಸಭೆ; 100 ಬಿಲಿಯನ್ ಡಾಲರ್​ಗೆ ವ್ಯಾಪಾರ ಹೆಚ್ಚಿಸುವ ಗುರಿ

India Russia joint annual summit: ರಾಷ್ಟ್ರರಾಜಧಾನಿಯಲ್ಲಿ ಡಿಸೆಂಬರ್ 5ರಂದು ಭಾರತ ಹಾಗು ರಷ್ಯಾ ನಡುವೆ 23ನೇ ಜಂಟಿ ವಾರ್ಷಿಕ ಸಭೆ ನIndia Russia joint annual summit: ರಾಷ್ಟ್ರರಾಜಧಾನಿಯಲ್ಲಿ ಡಿಸೆಂಬರ್ 5ರಂದು ಭಾರತ ಹಾಗು ರಷ್ಯಾ ನಡುವೆ 23ನೇ ಜಂಟಿ ವಾರ್ಷಿಕ ಸಭೆ ನಡೆಯಿತು. ನರೇಂದ್​ರ ಮೋದಿ, ವ್ಲಾದಿಮಿರ್ ಪುಟಿನ್ ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ ಸಾಕಷ್ಟು ಉದ್ಯಮ ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಎರಡೂ ದೇಶಗಳ ನಡುವಿನ ವ್ಯಾಪಾರ ವಹಿವಾಟನ್ನು 100 ಬಿಲಿಯನ್ ಡಾಲರ್​ಗೆ ಏರಿಸುವ ಸಂಬಂಧ ಚರ್ಚೆಗಳಾದವು.ಡೆಯಿತು. ನರೇಂದ್​ರ ಮೋದಿ, ವ್ಲಾದಿಮಿರ್ ಪುಟಿನ್ ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ ಸಾಕಷ್ಟು ಉದ್ಯಮ ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಎರಡೂ ದೇಶಗಳ ನಡುವಿನ ವ್ಯಾಪಾರ ವಹಿವಾಟನ್ನು 100 ಬಿಲಿಯನ್ ಡಾಲರ್​ಗೆ ಏರಿಸುವ ಸಂಬಂಧ ಚರ್ಚೆಗಳಾದವು.

ಭಾರತ-ರಷ್ಯಾ 23ನೇ ಜಂಟಿ ವಾರ್ಷಿಕ ಸಭೆ; 100 ಬಿಲಿಯನ್ ಡಾಲರ್​ಗೆ ವ್ಯಾಪಾರ ಹೆಚ್ಚಿಸುವ ಗುರಿ
ಭಾರತ ರಷ್ಯಾ ಜಂಟಿ ವಾರ್ಷಿಕ ಸಭೆ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Dec 05, 2025 | 7:24 PM

Share

ನವದೆಹಲಿ, ಡಿಸೆಂಬರ್ 5: ಭಾರತ ಹಾಗೂ ರಷ್ಯಾ ನಡುವಿನ 23ನೇ ಜಂಟಿ ವಾರ್ಷಿಕ ಶೃಂಗಸಭೆ (India Russia 23rd Joint Annual Summit) ಶುಕ್ರವಾರ ಭರ್ಜರಿಯಾಗಿ ನಡೆಯಿತು. ಪ್ರಧಾನಿ ನರೇಂದ್ರ ಮೋದಿ (Narendra Modi) ಹಾಗೂ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ನೇತೃತ್ವದಲ್ಲಿ ತುಂಬಿದ ಗೃಹದಲ್ಲಿ ನಡೆದ ಈ ಸಭೆಯಲ್ಲಿ ಜಾಗತಿಕ ರಾಜಕೀಯ ಅನಿಶ್ಚಿತ ಪರಿಸ್ಥಿತಿಯಲ್ಲಿ ಎರಡೂ ದೇಶಗಳ ನಡುವಿನ ಆರ್ಥಿಕ ಸಂಬಂಧವನ್ನು ಬಲಪಡಿಸಲು ಬದ್ಧತೆ ಇರುವುದನ್ನು ತೋರಿಸಲಾಯಿತು. ಸಭೆ ಬಳಿಕ ಮೋದಿ ಮತ್ತು ಪುಟಿನ್ ಇಬ್ಬರೂ ಜಂಟಿ ಹೇಳಿಕೆ ನೀಡಿ, ತಮ್ಮ ಬದ್ಧತೆಯನ್ನು ಒತ್ತಿ ಹೇಳಿದ್ದಾರೆ.

ನೂರು ಬಿಲಿಯನ್ ಡಾಲರ್ ವಹಿವಾಟು ಗುರಿ

‘ಭಾರತ-ರಷ್ಯಾ: ನಂಬಿಕೆ ಮತ್ತು ಗೌರವದ ತಳಹದಿಯಲ್ಲಿ ದೀರ್ಘ ಸಮಯದ ಪ್ರಗತಿದಾಯಕ ಜೊತೆಗಾರಿಕೆ’ ಎನ್ನುವ ಶೀರ್ಷಿಕೆಯಲ್ಲಿ ಬಿಡುಗಡೆ ಇಬ್ಬರೂ ನಾಯಕರು ಜಂಟಿ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಎರಡು ದೇಶಗಳ ನಡುವಿನ ವ್ಯಾಪಾರ ವಹಿವಾಟನ್ನು 100 ಬಿಲಿಯನ್ ಡಾಲರ್​ಗೆ ಏರಿಸುವ ಮಹತ್ವಾಕಾಂಕ್ಷಿ ಗುರಿಯನ್ನು ಈ ಹೇಳಿಕೆಯಲ್ಲಿ ನೀಡಲಾಗಿದೆ. ಸದ್ಯ ದ್ವಿಪಕ್ಷೀಯ ವ್ಯಾಪಾರ ವಹಿವಾಟು ಸುಮಾರು 69 ಬಿಲಿಯನ್ ಡಾಲರ್​ನಷ್ಟು ಇದೆ.

ಇದನ್ನೂ ಓದಿ: ಭಾರತ-ರಷ್ಯಾ ಬ್ಯುಸಿನೆಸ್ ಫೋರಂಗೆ ಮುನ್ನ ವಿಷನ್ 2030 ಒಪ್ಪಂದಕ್ಕೆ ಸಹಿ

ನೂರು ಬಿಲಿಯನ್ ಡಾಲರ್​ಗೆ ವ್ಯಾಪಾರ ವಹಿವಾಟು ಹೆಚ್ಚಿಸಲು ಎರಡೂ ದೇಶಗಳು ವಿವಿಧ ಕ್ರಮಗಳನ್ನು ಕೈಗೊಳ್ಳಲು ಸಿದ್ಧವಿವೆ. ಇದರ ಭಾಗವಾಗಿ 2030ರವರೆಗೆ ಆರ್ಥಿಕ ಸಹಕಾರ ಒಪ್ಪಂದಕ್ಕೂ ಸಹಿ ಹಾಕಲಾಗಿದೆ.

ನೂರು ಬಿಲಿಯನ್ ಡಾಲರ್ ಟ್ರೇಡಿಂಗ್ ಗುರಿ ಈಡೇರಬೇಕಾದರೆ ಭಾರತದಿಂದ ರಷ್ಯಾಗೆ ಹೆಚ್ಚೆಚ್ಚು ಉತ್ಪನ್ನಗಳ ರಫ್ತಾಗಬೇಕು. ಸದ್ಯ ರಷ್ಯಾ ಎದುರು ಭಾರತಕ್ಕೆ ವಿಪರೀತ ಟ್ರೇಡ್ ಡೆಫಿಸಿಟ್ ಇದೆ. ಎರಡೂ ದೇಶಗಳ ನಡುವಿನ ವ್ಯಾಪಾರದಲ್ಲಿ ರಷ್ಯಾದ ಪಾಲೇ ಬಹಳ ಹೆಚ್ಚಿದೆ. ಇಂದು ನಡೆದ ದ್ವಿಪಕ್ಷೀಯ ಸಭೆಯಲ್ಲಿ ಈ ಅಂಶಗಳನ್ನು ಆಳವಾಗಿ ಚರ್ಚಿಸಲಾಗಿದೆ.

ಇದನ್ನೂ ಓದಿ: ಭಾರತಕ್ಕೆ ತೈಲ ಪೂರೈಕೆ ಮುಂದುವರೆಸುತ್ತೇವೆ; ದೆಹಲಿಯಲ್ಲಿ ರಷ್ಯಾ ಅಧ್ಯಕ್ಷ ಪುಟಿನ್ ಹೇಳಿಕೆ

ಫಾರ್ಮಾ, ಆಟೊಮೊಬೈಲ್, ಕೃಷಿ, ಹೈಟೆಕ್ನಾಲಜಿ ಉತ್ಪನ್ನಗಳನ್ನು ಭಾರತದಿಂದ ರಷ್ಯಾಗೆ ಸರಬರಾಜು ಮಾಡಲು ಅವಕಾಶ ಕೊಡಲಾಗಬಹುದು. ಇಂಥ ಕೆಲ ಪ್ರಮುಖ ಸೆಕ್ಟರ್​ಗಳನ್ನು ಅವಲೋಕಿಸಲಾಗಿದೆ.

ಭಾರತ ಹಾಗೂ ಯೂರೇಷಿಯನ್ ಎಕನಾಮಿಕ್ ಯೂನಿಯನ್ ನಡುವೆ ಮುಕ್ತ ವ್ಯಾಪಾರ ಒಪ್ಪಂದ ಏರ್ಪಡಲು ಹೆಚ್ಚೆಚ್ಚು ಪ್ರಯತ್ನಗಳನ್ನು ಹಾಕಲು ಈ ಸಭೆಯಲ್ಲಿ ಇಂಗಿತ ವ್ಯಕ್ತವಾಗಿದೆ. ಈ ಯೂರೋಷಿಯನ್ ಎಕನಾಮಿಕ್ ಯೂನಿಯನ್​ನಲ್ಲಿ ರಷ್ಯಾ, ಆರ್ಮೇನಿಯಾ, ಬೆಲಾರಸ್, ಕಜಕಸ್ತಾನ್, ಕಿರ್ಗಿಸ್ತಾನ್ ದೇಶಗಳಿವೆ. ಈ ಗುಂಪಿನೊಂದಿಗೆ ಭಾರತ ಎಫ್​ಟಿಎ ಮಾಡಿಕೊಂಡರೆ ಸಾಕಷ್ಟು ರಫ್ತಿಗೆ ಅವಕಾಶ ಸಿಗಬಹುದು. ಈ ಎಲ್ಲಾ ದೇಶಗಳ ಜೊತೆ ಭಾರತದ ಉತ್ತಮ ಸಂಬಂಧವೂ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಳ್ಳಾರಿಯಲ್ಲಿ ಜನಾರ್ದನ ರೆಡ್ಡಿ ಮನೆ ಮುಂದೆ ಫೈರಿಂಗ್‌: ಶಾಕಿಂಗ್ ರಿಯಾಕ್ಷನ್
ಬಳ್ಳಾರಿಯಲ್ಲಿ ಜನಾರ್ದನ ರೆಡ್ಡಿ ಮನೆ ಮುಂದೆ ಫೈರಿಂಗ್‌: ಶಾಕಿಂಗ್ ರಿಯಾಕ್ಷನ್
ಹೊಸ ವರ್ಷಾಚರಣೆಗೆ ಆಂಧ್ರದಲ್ಲಿ ಅಪರೂಪದ ಟಗರು ಕಾಳಗ
ಹೊಸ ವರ್ಷಾಚರಣೆಗೆ ಆಂಧ್ರದಲ್ಲಿ ಅಪರೂಪದ ಟಗರು ಕಾಳಗ
ಈ ತಿಂಗಳಿಂದಲೇ ಬಜೆಟ್ ಸಿದ್ಧತೆ ಆರಂಭ ಎಂದ ಸಿಎಂ ಸಿದ್ದರಾಮಯ್ಯ
ಈ ತಿಂಗಳಿಂದಲೇ ಬಜೆಟ್ ಸಿದ್ಧತೆ ಆರಂಭ ಎಂದ ಸಿಎಂ ಸಿದ್ದರಾಮಯ್ಯ
ಹೊಸ ವರ್ಷದ ಪ್ರಯುಕ್ತ ನೀಲಕಂಠವರ್ಣಿ ಸ್ವಾಮಿಗೆ ವಿಶೇಷ ಅಭಿಷೇಕ
ಹೊಸ ವರ್ಷದ ಪ್ರಯುಕ್ತ ನೀಲಕಂಠವರ್ಣಿ ಸ್ವಾಮಿಗೆ ವಿಶೇಷ ಅಭಿಷೇಕ
ಬಾಂಗ್ಲಾದಲ್ಲಿ ಮತ್ತೋರ್ವ ಹಿಂದೂ ಮೇಲೆ ಹಲ್ಲೆ ನಡೆಸಿ, ಬೆಂಕಿ ಹಚ್ಚಿದ ಗುಂಪು
ಬಾಂಗ್ಲಾದಲ್ಲಿ ಮತ್ತೋರ್ವ ಹಿಂದೂ ಮೇಲೆ ಹಲ್ಲೆ ನಡೆಸಿ, ಬೆಂಕಿ ಹಚ್ಚಿದ ಗುಂಪು
46 ಎಸೆತಗಳಲ್ಲಿ 58 ರನ್ ಬಾರಿಸಿ ತಂಡ ಗೆಲ್ಲಿಸಿದ ಬಾಬರ್ ಆಝಂ
46 ಎಸೆತಗಳಲ್ಲಿ 58 ರನ್ ಬಾರಿಸಿ ತಂಡ ಗೆಲ್ಲಿಸಿದ ಬಾಬರ್ ಆಝಂ
ರಾಹುಲ್ ಗಾಂಧಿಯನ್ನು ಶ್ರೀರಾಮನಿಗೆ ಹೋಲಿಸಿದ ಕಾಂಗ್ರೆಸ್ ನಾಯಕ ನಾನಾ ಪಟೋಲೆ
ರಾಹುಲ್ ಗಾಂಧಿಯನ್ನು ಶ್ರೀರಾಮನಿಗೆ ಹೋಲಿಸಿದ ಕಾಂಗ್ರೆಸ್ ನಾಯಕ ನಾನಾ ಪಟೋಲೆ
ಬಿಗ್​​ಬಾಸ್​​ ಶೋನಲ್ಲಿ ಈ ವಾರ ಏನು ಮಾಡ್ತೀನಿ ನೋಡ್ತಿರಿ: ಸುದೀಪ್
ಬಿಗ್​​ಬಾಸ್​​ ಶೋನಲ್ಲಿ ಈ ವಾರ ಏನು ಮಾಡ್ತೀನಿ ನೋಡ್ತಿರಿ: ಸುದೀಪ್
ಮದ್ಯದ ಅಮಲಲ್ಲಿ ಫುಟ್ಪಾತ್​​ಗೆ ಕಾರು ನುಗ್ಗಿಸಿದ ಚಾಲಕ: ಬಾಲಕಿ ಜಸ್ಟ್​​ಮಿಸ್
ಮದ್ಯದ ಅಮಲಲ್ಲಿ ಫುಟ್ಪಾತ್​​ಗೆ ಕಾರು ನುಗ್ಗಿಸಿದ ಚಾಲಕ: ಬಾಲಕಿ ಜಸ್ಟ್​​ಮಿಸ್
ಕರ್ನಾಟಕದವರನ್ನ ಬಿಟ್ಟು ಬೇರೆಯವರಿಗೆ ಮನೆ ಕೊಡಲ್ಲ: ಸಚಿವ ಜಮೀರ್ ಖಡಕ್ ಮಾತು
ಕರ್ನಾಟಕದವರನ್ನ ಬಿಟ್ಟು ಬೇರೆಯವರಿಗೆ ಮನೆ ಕೊಡಲ್ಲ: ಸಚಿವ ಜಮೀರ್ ಖಡಕ್ ಮಾತು