Indian Economy: ಭಾರತ 2030ರೊಳಗೆ 3ನೇ ಅತಿದೊಡ್ಡ ಆರ್ಥಿಕತೆಯಾಗಲಿದೆ: ಎಸ್ & ಪಿ ಗ್ಲೋಬಲ್ ರೇಟಿಂಗ್ಸ್ ಅಂದಾಜು

|

Updated on: Dec 05, 2023 | 6:27 PM

S&P Global Ratings Report: ಭಾರತ 2030ರೊಳಗೆ ಜಪಾನ್ ಮತ್ತು ಜರ್ಮನಿಯ ಆರ್ಥಿಕತೆಗಳನ್ನು ಮೀರಿಸಿ ಬೆಳೆಯಲಿದೆ ಎಂದು ಎಸ್ & ಪಿ ನಿರೀಕ್ಷೆ ವ್ಯಕ್ತಪಡಿಸಿದೆ. ಭಾರತದ ಆರ್ಥಿಕ ಬೆಳವಣಿಗೆ 2023-24, 2024-25ರಲ್ಲಿ ಶೇ. 6.4, 2025-26ರಲ್ಲಿ ಶೇ. 6.9, 2026-27ರಿಂದ ಶೇ. 7ರಷ್ಟು ಮುಟ್ಟುವ ಸಾಧ್ಯತೆ ಇದೆ. ಭಾರತ ಮುಂದಿನ ವರ್ಷಗಳಲ್ಲಿ ಜಾಗತಿಕ ಮ್ಯಾನುಫ್ಯಾಕ್ಚರಿಂಗ್ ದೈತ್ಯನಾಗಬಹುದಾ ಎಂಬುದು ಎಸ್ & ಪಿ ಮುಂದಿರುವ ಪ್ರಶ್ನೆಯಾಗಿದೆ.

Indian Economy: ಭಾರತ 2030ರೊಳಗೆ 3ನೇ ಅತಿದೊಡ್ಡ ಆರ್ಥಿಕತೆಯಾಗಲಿದೆ: ಎಸ್ & ಪಿ ಗ್ಲೋಬಲ್ ರೇಟಿಂಗ್ಸ್ ಅಂದಾಜು
ಭಾರತದ ಆರ್ಥಿಕತೆ
Follow us on

ನವದೆಹಲಿ, ಡಿಸೆಂಬರ್ 5: ಭಾರತ ಇನ್ನು ಏಳೆಂಟು ವರ್ಷದಲ್ಲಿ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯ ದೇಶವಾಗಲಿದೆ (Indian economy) ಎಂದು ಎಸ್ & ಪಿ ಗ್ಲೋಬಲ್ ರೇಟಿಂಗ್ಸ್ (S&P Global Ratings) ಸಂಸ್ಥೆ ಅಂದಾಜು ಮಾಡಿದೆ. ಸ್ಟಾಂಡರ್ಡ್ ಅಂಡ್ ಪೂರ್ ಸಂಸ್ಥೆಯ ಪ್ರಕಾರ ಭಾರತದ ಜಿಡಿಪಿ ವೃದ್ಧಿ ದರ 2026-27ರಲ್ಲಿ ಶೇ. 7ಕ್ಕೆ ಮುಟ್ಟಲಿದೆ. ಅಲ್ಲಿಯವರೆಗೂ ಶೇ. 6.4ರಿಂದ ಶೇ. 6.9ರ ದರದಲ್ಲಿ ಜಿಡಿಪಿ ಬೆಳೆಯಲಿದೆ ಎನ್ನಲಾಗಿದೆ.

‘ಭಾರತ 2030ರೊಳಗೆ ಮೂರನೇ ಅತಿದೊಡ್ಡ ಆರ್ಥಿಕತೆಯ ದೇಶವಾಗಲಿದೆ. ಮುಂದಿನ ಮೂರು ವರ್ಷದಲ್ಲಿ ಪ್ರಮುಖ ಆರ್ಥಿಕತೆಗಳ ಪೈಕಿ ಭಾರತ ಅತಿವೇಗವಾಗಿ ಬೆಳವಣಿಗೆ ಸಾಧಿಸಬಹುದು ಎಂದು ನಿರೀಕ್ಷಿಸಿದ್ದೇವೆ,’ ಎಂದು ಎಸ್ & ಪಿ ಸಂಸ್ಥೆ ಹೇಳಿದೆ.

ಭಾರತ ಸದ್ಯ ಐದನೇ ಅತಿದೊಡ್ಡ ಆರ್ಥಿಕತೆಯ ದೇಶವಾಗಿದೆ. ಅಮೆರಿಕ ಮತ್ತು ಚೀನಾದ ಜಿಡಿಪಿ ಬಹಳ ದೊಡ್ಡದಿದೆ. ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿ ಜರ್ಮನಿ ಮತ್ತು ಜಪಾನ್ ದೇಶದ ಆರ್ಥಿಕತೆಗಳಿವೆ. ಆದರೆ, ಜಿಡಿಪಿ ಗಾತ್ರದಲ್ಲಿ ಜರ್ಮನಿ, ಜಪಾನ್ ಮತ್ತು ಭಾರತದ ಮಧ್ಯೆ ಅಷ್ಟೇನೂ ವ್ಯತ್ಯಾಸಗಳಿಲ್ಲ. ಭಾರತ ಇದೇ ವೇಗದಲ್ಲಿ ಆರ್ಥಿಕತೆಯ ವೇಗ ಮುಂದುವರಿಸಿದರೆ ಕೆಲವೇ ವರ್ಷಗಳಲ್ಲಿ ಜರ್ಮನಿ, ಜಪಾನ್ ಜಿಡಿಪಿಯನ್ನು ಸಹಜವಾಗಿ ಮೀರಿಸಬಹುದು. ಕೆಲ ಸಂಸ್ಥೆಗಳು 2027ರಲ್ಲೇ ಇದು ಸಾಧ್ಯವಾಗಬಹುದು ಎಂದು ನಿರೀಕ್ಷಿಸಿರುವುದುಂಟು.

ಇದನ್ನೂ ಓದಿ: Bengaluru Airport: ಹೆಚ್ಚಿನ ಭಾರತೀಯ ವಿಮಾನ ನಿಲ್ದಾಣಗಳು ನಷ್ಟದಲ್ಲಿ; ಬೆಂಗಳೂರು ಏರ್ಪೋರ್ಟ್ ಅತಿಹೆಚ್ಚು ಲಾಭದಾಯಕ

ಮುಂದಿನ ಪ್ರಶ್ನೆ ಇರುವುದು ಭಾರತದ ತಯಾರಿಕಾ ಕ್ಷೇತ್ರದ ಬಗ್ಗೆ

ಭಾರತದ ಆರ್ಥಿಕ ಬೆಳವಣಿಗೆ ಬಗ್ಗೆ ಸಕಾರಾತ್ಮಕವಾಗಿರುವ ಎಸ್ & ಪಿ ಸಂಸ್ಥೆ, ಮುಂದಿನ ದಿನಗಳಲ್ಲಿ ಭಾರತ ಎಷ್ಟರಮಟ್ಟಿಗೆ ತಯಾರಿಕಾ ಕ್ಷೇತ್ರದಲ್ಲಿ ಬೆಳೆಯಬಲ್ಲುದು ಎಂಬ ಪ್ರಶ್ನೆಗೆ ಉತ್ತರ ಬಯಸುತ್ತಿದೆ.

‘ಭಾರತಕ್ಕೆ ದೊಡ್ಡ ಮ್ಯಾನುಫ್ಯಾಕ್ಚರಿಂಗ್ ಅಡ್ಡೆಯಾಗುವ ಅವಕಾಶ ಇದೆ. ಭಾರತ ಇದನ್ನು ಸಾದಿಸುತ್ತದಾ ಎಂಬುದು ಅದಕ್ಕೆ ಎದುರಾಗಿರುವ ಸತ್ವ ಪರೀಕ್ಷೆಯಾಗಿದೆ. ಸೇವಾ ವಲಯದ ಮೇಲೆ ಅವಲಂಬಿತವಾಗಿರುವ ಭಾರತದ ಆರ್ಥಿಕತೆಗೆ ತಯಾರಿಕಾ ಕ್ಷೇತ್ರದ ಬಲ ಸಿಗಬೇಕಾದರೆ ಬಲವಾದ ಲಾಜಿಸ್ಟಿಕ್ಸ್ ಫ್ರೇಮ್​​ವರ್ಕ್ ರೂಪುಗೊಳ್ಳುವುದು ಅವಶ್ಯಕತೆ ಇದೆ.

ಇದನ್ನೂ ಓದಿ: Indian Economy: ಅಮೃತ ಘಳಿಗೆಯಲ್ಲಿ 5 ಟ್ರಿಲಿಯನ್ ಡಾಲರ್ ಆಗಲಿದೆ ಭಾರತದ ಆರ್ಥಿಕತೆ: ಪಂಕಜ್ ಚೌಧರಿ

‘ಕಾರ್ಮಿಕ ಮಾರುಕಟ್ಟೆಯ ಶಕ್ತಿಯನ್ನು ಅನಾವರಣಗೊಳಿಸಬೇಕಿದೆ. ಕಾರ್ಮಿಕರ ಕೌಶಲ್ಯ ಹೆಚ್ಚಿಸುವುದು ಮತ್ತು ಉದ್ಯೋಗ ಕ್ಷೇತ್ರದಲ್ಲಿ ಹೆಚ್ಚಿನ ಮಹಿಳೆಯರ ಸೇರ್ಪಡೆಯಾಗುವುದು ಇವು ಬಹಳ ಮುಖ್ಯ. ಈ ಎರಡು ಕ್ಷೇತ್ರದಲ್ಲಿ ಭಾರತ ಯಶಸ್ಸು ಕಂಡರೆ ಆಗ ಮಾನವ ಸಂಪನ್ಮೂಲದ ಶಕ್ತಿಯನ್ನು ಭಾರತ ಪೂರ್ಣವಾಗಿ ಅನುಕೂಲಕ್ಕೆ ಬಳಸಿಕೊಳ್ಳಬಹುದು,’ ಎಂದು ಸ್ಟ್ಯಾಂಡರ್ಡ್ ಅಂಡ್ ಪೂರ್ ಗ್ಲೋಬಲ್ ರೇಟಿಂಗ್ಸ್ ಸಂಸ್ಥೆ ಅಭಿಪ್ರಾಯಪಟ್ಟಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 6:23 pm, Tue, 5 December 23