Bengaluru Airport: ಹೆಚ್ಚಿನ ಭಾರತೀಯ ವಿಮಾನ ನಿಲ್ದಾಣಗಳು ನಷ್ಟದಲ್ಲಿ; ಬೆಂಗಳೂರು ಏರ್ಪೋರ್ಟ್ ಅತಿಹೆಚ್ಚು ಲಾಭದಾಯಕ

Loss Making Indian Airports: ದೇಶದ 125 ವಿಮಾನ ನಿಲ್ದಾಣಗಳ ಪೈಕಿ 93 ಏರ್ಪೋರ್ಟ್​ಗಳು ನಷ್ಟದಲ್ಲಿವೆ ಎಂದು ಕೇಂದ್ರ ಸಚಿವ ಜನರಲ್ ವಿ.ಕೆ. ಸಿಂಗ್ ಮಾಹಿತಿ ನೀಡಿದ್ದಾರೆ. ಪಿಪಿಪಿ ಮಾದರಿಯಲ್ಲಿ ನಿರ್ವಹಣೆ ಆಗುತ್ತಿರುವ 14 ಏರ್ಪೋರ್ಟ್​ಗಳಲ್ಲಿ 11 ನಿಲ್ದಾಣಗಳು ನಷ್ಟದಲ್ಲಿವೆ. ಲಾಭ ಮಾಡಿರುವ ಕೆಲವೇ ಏರ್​ಪೋರ್ಟ್​ಗಳಲ್ಲಿ ಬೆಂಗಳೂರು ಇದೆ. 2022-23ರಲ್ಲಿ ಕೆಂಪೇಗೌಡ ವಿಮಾನ ನಿಲ್ದಾಣ 528 ಕೋಟಿ ರೂ ಲಾಭ ಮಾಡಿತ್ತು.

Bengaluru Airport: ಹೆಚ್ಚಿನ ಭಾರತೀಯ ವಿಮಾನ ನಿಲ್ದಾಣಗಳು ನಷ್ಟದಲ್ಲಿ; ಬೆಂಗಳೂರು ಏರ್ಪೋರ್ಟ್ ಅತಿಹೆಚ್ಚು ಲಾಭದಾಯಕ
ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Dec 05, 2023 | 12:30 PM

ನವದೆಹಲಿ, ಡಿಸೆಂಬರ್ 5: ಭಾರತದಲ್ಲಿ ಅತ್ಯಂತ ಜಟಿಲವಾದ ವಲಯವೆಂದರೆ ವೈಮಾನಿಕ ಕ್ಷೇತ್ರದ್ದು. ಲಭ ಗಳಿಸುವ ಏರ್ಲೈನ್ಸ್ ಕಂಪನಿಗಳು ವಿರಳ. ಹಾಗೆಯೇ, ಏರ್ಪೋರ್ಟ್​ಗಳೂ ಕೂಡ ಲಾಭಕ್ಕಾಗಿ ತಡಕಾಡಬೇಕಾಗಿದೆ. ಕೇಂದ್ರ ನಾಗರಿಕ ವಿಮಾನಯಾನ ಖಾತೆ ರಾಜ್ಯ ಸಚಿವ ಜನರಲ್ ಡಾ. ವಿ.ಕೆ. ಸಿಂಗ್ (General Dr. V.K. Singh) ಇಂದು ಮಂಗಳವಾರ ಸಂಸತ್​ಗೆ ನೀಡಿರುವ ಮಾಹಿತಿ ಪ್ರಕಾರ, ಭಾರತದ ಹೆಚ್ಚಿನ ವಿಮಾನ ನಿಲ್ದಾಣಗಳು ನಷ್ಟದಲ್ಲಿವೆಯಂತೆ. ಕಳೆದ ಮೂರು ಹಣಕಾಸು ವರ್ಷಗಳ ವರದಿಗಳನ್ನು ಆಧರಿಸಿ ಸಚಿವರು ಈ ಮಾಹಿತಿ ನೀಡಿದ್ದಾರೆ. ದೇಶದ 125 ಏರ್ಪೋರ್ಟ್​ಗಳ ಪೈಕಿ 93 ವಿಮಾನ ನಿಲ್ದಾಣಗಳು (Airports) 2022-23ರಲ್ಲಿ ನಷ್ಟ ಅನುಭವಿಸಿವೆ. ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿದಂತೆ ಕೆಲವೇ ಏರ್ಪೋರ್ಟ್​ಗಳು ಲಾಭ ಮಾಡಿವೆ. ಅತಿ ಹೆಚ್ಚು ಲಾಭ ಕಂಡಿರುವುದು ಬೆಂಗಳೂರಿನ ವಿಮಾನ ನಿಲ್ದಾಣವೇ.

ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ 2022-23ರ ಹಣಕಾಸು ವರ್ಷದಲ್ಲಿ 528 ಕೋಟಿ ರೂನಷ್ಟು ಲಾಭ ಗಳಿಸಿರುವುದು ತಿಳಿದುಬಂದಿದೆ. ಲಾಭ ಮಾಡಿರುವ ಇತರ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಕೊಚ್ಚಿ ಮತ್ತು ಹೈದರಾಬಾದ್ ಏರ್​ಪೋರ್ಟ್​ಗಳೂ ಸೇರಿವೆ ಎಂದು ಸಚಿವ ಜನರಲ್ ವಿ.ಕೆ. ಸಿಂಗ್ ಹೇಳಿದ್ದಾರೆ.

ಇದನ್ನೂ ಓದಿ: ಶ್ರೀಲಂಕಾದಲ್ಲಿ ಅದಾನಿ ಗ್ರೂಪ್​ಗೆ ಧನಸಹಾಯ ಕೊಡುವ ಮುನ್ನ ಹಿಂಡನ್ಬರ್ಗ್ ವರದಿ ಅವಲೋಕಿಸಿದ್ದ ಅಮೆರಿಕದ ಸರ್ಕಾರ

ಅತಿಹೆಚ್ಚು ನಷ್ಟ ಕಂಡಿರುವುದು ಅಹ್ಮಾದಾಬಾದ್​ನ ವಿಮಾನ ನಿಲ್ದಾಣ. ಇದು 2022-23ರಲ್ಲಿ 408.51 ಕೋಟಿ ರೂ ನಷ್ಟ ಕಂಡಿತ್ತು. ದೆಹಲಿ ಏರ್​ಪೋರ್ಟ್ ಕೂಡ ನಷ್ಟದಲ್ಲಿ ಎರಡನೇ ಸ್ಥಾನದಲ್ಲಿದೆ. ಮುಂಬೈನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಷ್ಟ ಅನುಭವಿಸಿದೆಯಾದರೂ 2021-22ಕ್ಕೆ ಹೋಲಿಸಿದರೆ 2022-23ರಲ್ಲಿ ಕಡಿಮೆ ನಷ್ಟ ಕಂಡಿದೆ. 2022ರ ಹಣಕಾಸು ವರ್ಷದಲ್ಲಿ ಅದು 182.58 ಕೋಟಿ ರೂ ನಷ್ಟ ಕಂಡಿತ್ತು. 2023ರ ಹಣಕಾಸು ವರ್ಷದಲ್ಲಿ ನಷ್ಟವು 1.04 ಕೋಟಿ ರೂಗೆ ಇಳಿದಿದೆ. ಮಂಗಳೂರು ವಿಮಾನ ನಿಲ್ದಾಣ ಕೂಡ ನಷ್ಟ ಕಂಡಿದೆ.

ನಷ್ಟ ಕಂಡ ಪ್ರಮುಖ ಏರ್ಪೋರ್ಟ್​ಗಳು

ದೇಶದಲ್ಲಿ ಪಬ್ಲಿಕ್ ಪ್ರೈವೇಟ್ ಪಾರ್ಟ್ನರ್​ಶಿಪ್ ಮಾದರಿಯಲ್ಲಿ 14 ಏರ್ಪೋರ್ಟ್​ಗಳ ನಿರ್ವಹಣೆ ಆಗುತ್ತಿದೆ. ಈ ಪೈಕಿ 11 ಏರ್ಪೋರ್ಟ್​ಗಳು ನಷ್ಟ ಕಂಡಿವೆ. ಬೆಂಗಳೂರು, ಕೊಚ್ಚಿ ಮತ್ತು ಹೈದರಾಬಾದ್ ಏರ್ಪೋರ್ಟ್​ಗಳು ಮಾತ್ರವೇ ಲಾಭ ಮಾಡಿರುವುದು.

ಇದನ್ನೂ ಓದಿ: Corporate Bond: ಆರು ವರ್ಷದಲ್ಲಿ ದ್ವಿಗುಣಗೊಳ್ಳಲಿದೆ ಭಾರತದ ಕಾರ್ಪೊರೇಟ್ ಬಾಂಡ್ ಮಾರುಕಟ್ಟೆ; ಏನಿದು ಬಾಂಡ್?

ಅಹ್ಮದಾಬಾದ್, ದೆಹಲಿ, ಮುಂಬೈ, ಲಕ್ನೋ, ಜೈಪುರ್, ದುರ್ಗಾಪುರ್, ಮಂಗಳೂರು, ತಿರುವನಂತಪುರಂ, ಗುವಾಹತಿ, ಮೋಪಾ ಮೊದಲಾದ ಏರ್ಪೋರ್ಟ್​ಗಳು ನಷ್ಟ ಕಂಡಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 12:26 pm, Tue, 5 December 23

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್