ಉತ್ಪಾದನಾ ಮೌಲ್ಯದಲ್ಲಿ ಭಾರತ ಮೇಲೇರಬೇಕು; ಅಸೆಂಬ್ಲಿಂಗ್​ಗೆ ಸೀಮಿತವಾಗದೆ ಎಂಡ್ ಟು ಎಂಡ್ ಮ್ಯಾನುಫ್ಯಾಕ್ಚರಿಂಗ್ ಹೆಚ್ಚಿಸಬೇಕು: ಚಂದ್ರಶೇಖರನ್

ಟಾಟಾ ಸನ್ಸ್ ಅಧ್ಯಕ್ಷ ಎನ್. ಚಂದ್ರಶೇಖರನ್ ಅವರು ಭಾರತೀಯ ಉತ್ಪಾದನಾ ವಲಯದ ಅಭಿವೃದ್ಧಿಗೆ ಪ್ರಮುಖ ಸಲಹೆ ನೀಡಿದ್ದಾರೆ. ಭಾರತವು ಕೇವಲ ವಿದೇಶಿ ಭಾಗಗಳ ಜೋಡಣೆಗೆ (Assembly) ಸೀಮಿತವಾಗಬಾರದು ಎಂದು ಕಿವಿಮಾತು ಹೇಳಿದ್ದಾರೆ. ಕಚ್ಚಾವಸ್ತುವಿನಿಂದ ಅಂತಿಮ ಉತ್ಪನ್ನದವರೆಗೆ 'ಎಂಡ್-ಟು-ಎಂಡ್' ಉತ್ಪಾದನಾ ಸಾಮರ್ಥ್ಯ ಬೆಳೆಸಿಕೊಳ್ಳಬೇಕು ಎಂದಿದ್ದಾರೆ.

ಉತ್ಪಾದನಾ ಮೌಲ್ಯದಲ್ಲಿ ಭಾರತ ಮೇಲೇರಬೇಕು; ಅಸೆಂಬ್ಲಿಂಗ್​ಗೆ ಸೀಮಿತವಾಗದೆ ಎಂಡ್ ಟು ಎಂಡ್ ಮ್ಯಾನುಫ್ಯಾಕ್ಚರಿಂಗ್ ಹೆಚ್ಚಿಸಬೇಕು: ಚಂದ್ರಶೇಖರನ್
ಟಾಟಾ ಸನ್ಸ್ ಛೇರ್ಮನ್ ಎನ್ ಚಂದ್ರಶೇಖರನ್
Image Credit source: PTI

Updated on: Oct 05, 2026 | 8:01 PM

ನವದೆಹಲಿ, ಅಕ್ಟೋಬರ್ 5: ಭಾರತ ದೀರ್ಘಾವಧಿ ಆರ್ಥಿಕ ಬೆಳವಣಿಗೆ ಸಾಧಿಸಬೇಕಾದರೆ ಅದರ ಉತ್ಪಾದನಾ ಸಾಮರ್ಥ್ಯದಲ್ಲಿ ಗಮನಾರ್ಹ ಹೆಚ್ಚಳ ಆಗಬೇಕಾಗುತ್ತದೆ ಎಂದು ಟಾಟಾ ಸನ್ಸ್ ಛೇರ್ಮನ್ ಎನ್ ಚಂದ್ರಶೇಖರನ್ (N. Chandrasekaran) ಅಭಿಪ್ರಾಯಪಟ್ಟಿದ್ದಾರೆ. ಇಂಡಿಯನ್ ಫೌಂಡೇಶನ್ ಫಾರ್ ಕ್ವಾಲಿಟಿ ಮ್ಯಾನೇಜ್ಮೆಂಟ್ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅವರು, ಭಾರತವು ಜಾಗತಿಕ ಉತ್ಪಾದನಾ ಶಕ್ತಿಯಾಗಿ ಹೊರಹೊಮ್ಮಲು ಕೇವಲ ವಿದೇಶಿ ಬಿಡಿಭಾಗಗಳನ್ನು ತಂದು ಜೋಡಿಸುವ ‘ಅಸೆಂಬ್ಲಿ ಆಧಾರಿತ ಬೆಳವಣಿಗೆ’ಯಿಂದ (Assembly-led growth) ಹೊರಬಂದು, ಅಂತಿಮ ಉತ್ಪನ್ನದ ಸಂಪೂರ್ಣ ವಿನ್ಯಾಸ ಹಾಗೂ ತಯಾರಿಕೆಯನ್ನು ದೇಶದಲ್ಲೇ ಮಾಡುವ ‘ಎಂಡ್-ಟು-ಎಂಡ್’ (End-to-End) ಉತ್ಪಾದನಾ ಸಾಮರ್ಥ್ಯಕ್ಕೆ ಧುಮುಕಬೇಕು ಎಂದು ಪ್ರತಿಪಾದಿಸಿದ್ದಾರೆ.

ಪ್ರಸ್ತುತ ‘ಮೇಕ್ ಇನ್ ಇಂಡಿಯಾ’ (Make in India) ಹಾಗೂ ‘ಪಿಎಲ್‌ಐ’ (PLI) ಯೋಜನೆಗಳ ಅಡಿಯಲ್ಲಿ ಸ್ಮಾರ್ಟ್‌ಫೋನ್, ಎಲೆಕ್ಟ್ರಾನಿಕ್ಸ್ ಮತ್ತು ಸೆಮಿಕಂಡಕ್ಟರ್ ವಲಯಗಳಲ್ಲಿ ಭಾರತವು ದೊಡ್ಡ ಮಟ್ಟದ ಅಸೆಂಬ್ಲಿ ಘಟಕಗಳನ್ನು ಸ್ಥಾಪಿಸಿದೆ. ಆದರೆ, ಇವುಗಳಲ್ಲಿ ಬಹುತೇಕ ಬಿಡಿಭಾಗಗಳು (Components) ಚೀನಾ, ತೈವಾನ್ ಹಾಗೂ ಕೊರಿಯಾಗಳಿಂದ ಆಮದಾಗುತ್ತಿವೆ. ಇದರಿಂದ ದೇಶದಲ್ಲಿ ತಾಂತ್ರಿಕ ಮೌಲ್ಯವರ್ಧನೆ (Value Addition) ಕಡಿಮೆಯಾಗುತ್ತಿದ್ದು, ಲಾಭಾಂಶ ಹಾಗೂ ಜಾಗತಿಕ ಪೂರೈಕೆ ಸರಣಿಯ ಮೇಲಿನ ನಿಯಂತ್ರಣ ಸೀಮಿತವಾಗಿದೆ. ಈ ಹಿನ್ನೆಲೆಯಲ್ಲಿ ಎನ್ ಚಂದ್ರಶೇಖರನ್ ಅವರ ಅಭಿಪ್ರಾಯ ಸಂದರ್ಭೋಚಿತವಾಗಿದೆ.

ಇದನ್ನೂ ಓದಿ: ಫಾಸ್ಟ್‌ಟ್ಯಾಗ್ ಯುಗ ಹೋಯ್ತು; MLFF ವ್ಯವಸ್ಥೆ ಬರುತ್ತಿದೆ; ಹೆದ್ದಾರಿ ಟೋಲ್ ಕಲೆಕ್ಷನ್ ಸಿಸ್ಟಂನಲ್ಲಿ ಕ್ರಾಂತಿಕಾರಿ ಬದಲಾವಣೆ ನಿರೀಕ್ಷಿಸಿ

ಗುಣಮಟ್ಟಕ್ಕೆ ಆದ್ಯತೆ ಇದ್ದರೆ ಹೊಸ ಅನ್ವೇಷಣೆ, ಜಾಗತಿಕ ಮಟ್ಟದ ಉತ್ಪನ್ನ ಸಾಧ್ಯ

ಮ್ಯಾನುಫ್ಯಾಕ್ಚರಿಂಗ್​ನಲ್ಲಿ ಗುಣಮಟ್ಟ ಕಾಯ್ದುಕೊಳ್ಳುವುದು ಬಹಳ ಮುಖ್ಯ ಎಂಬ ಸಂಗತಿಯನ್ನು ಚಂದ್ರಶೇಖರನ್ ಎತ್ತಿತೋರಿಸಿದರು. ಜಾಗತಿಕ ಕಂಪನಿಗಳು ಸ್ಪರ್ಧಾತ್ಮಕತೆ ಹೆಚ್ಚಿಸಲು ಗುಣಮಟ್ಟವನ್ನು ಉಪಯೋಗಿಸಿರುವುದನ್ನು ಅವರು ಉಲ್ಲೇಖಿಸಿದರು.

ಜಪಾನ್​ನ ಟೊಯೋಟಾ ಕಂಪನಿಯು ನಾಮಕಾವಸ್ತೆಗೆ ಗುಣಮಟ್ಟ ಎಂದು ಹೇಳಲಿಲ್ಲ. ಅದರ ಉತ್ಪನ್ನದಲ್ಲಿ ಗುಣಮಟ್ಟ ಇರುವುದನ್ನ ಖಾತ್ರಿಪಡಿಸಿಕೊಂಡಿತು. ಈ ಗುಣಮಟ್ಟವೇ ನಾವೀನ್ಯತೆ, ಉತ್ಪನ್ನಶೀಲತೆ ಮತ್ತು ಸ್ಪರ್ಧಾತ್ಮಕತೆಗೆ ಪುಷ್ಟಿ ಕೊಟ್ಟಿತು ಎಂಬುದನ್ನು ಟಾಟಾ ಸನ್ಸ್ ಒಂದು ನಿದರ್ಶನವಾಗಿ ವಿವರಿಸಿದರು. ಹಾಗೆಯೇ, ಜರ್ಮನಿ ದೇಶದ ಕಂಪನಿಗಳು ಹೇಗೆ ಗುಣಮಟ್ಟಕ್ಕೆ ಪ್ರಾಶಸ್ತ್ಯ ಕೊಡುತ್ತವೆ ಎಂಬುದನ್ನೂ ಅವರು ಉದಾಹರಣೆಯಾಗಿ ನೀಡಿದರು.

ಇದನ್ನೂ ಓದಿ: ಈ ವಾರ 29 ಷೇರುಗಳ ಲಿಸ್ಟಿಂಗ್; 2026ರಲ್ಲಿ ಐಪಿಒ ಸುಗ್ಗಿ, ಈ ವಾರ ಹೊಸ ಐಪಿಒ ಒಂದೇ ಒಂದು

ಭಾರತದ ಬೆಳವಣಿಗೆ ನಿರೀಕ್ಷೆಮೀರಿದ್ದಾಗಿದೆ: ಚಂದ್ರಶೇಖರನ್

ಭಾರತದ ಆರ್ಥಿಕ ಪರಿಸ್ಥಿತಿ ಉತ್ತಮವಾಗಿದ್ದು, ಜಾಗತಿಕ ಅನಿಶ್ಚಿತ ಸ್ಥಿತಿಯಲ್ಲೂ ದೇಶ ನಿರೀಕ್ಷೆಮೀರಿದ ಬೆಳವಣಿಗೆ ಹೊಂದುತ್ತಿದೆ ಎಂದು ಟಾಟಾ ಸನ್ಸ್ ಛೇರ್ಮನ್ ತಿಳಿಸಿದರು.

ವಾಹನಗಳ ಮಾರಾಟ, ಸಾಲ ವಿತರಣೆ, ವಿದ್ಯುತ್ ಬೇಡಿಕೆ, ಸಿಮೆಂಟ್ ಬೇಡಿಕೆ ಇತ್ಯಾದಿ ಹಲವಾರು ಸೂಚಕಗಳು ಎರಡಂಕಿ ದರದಲ್ಲಿ ಹೆಚ್ಚುತ್ತಿವೆ. ಭಾರತದ ಕರೆಂಟ್ ಅಕೌಂಟ್ ಡೆಫಿಸಿಟ್ ಜಿಡಿಪಿಯ ಶೇ. 1ಕ್ಕಿಂತ ಕಡಿಮೆಇದೆ. ಫಾರೆಕ್ಸ್ ರಿಸರ್ವ್ಸ್ ಕೂಡ ಪ್ರಬಲವಾಗಿದೆ. ಬ್ಯಾಂಕ್​ಗಳ ಅನುತ್ಪಾದಕ ಆಸ್ತಿ (ಎನ್​ಪಿಎ) ಕೂಡ ಕಡಿಮೆ ಇದೆ ಎಂದು ಎನ್ ಚಂದ್ರೇಖರನ್ ಹೇಳಿದರು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us