
ನವದೆಹಲಿ, ಜನವರಿ 16: ಸೌರಶಕ್ತಿ ಮತ್ತು ಸೌರ ಮಾರುಕಟ್ಟೆ (Solar Market) ಭಾರತದಲ್ಲಿ ಅಗಾಧವಾಗಿ ಬೆಳೆಯುತ್ತಿದೆ. ಈ ವರ್ಷ (2026) ಭಾರತ ಎರಡನೇ ಅತಿದೊಡ್ಡ ಸೌರ ಮಾರುಕಟ್ಟೆಯಾಗಲಿದೆ. ಸೌರ ಮಾರುಕಟ್ಟೆ ಗಾತ್ರದಲ್ಲಿ ಭಾರತ ಮೊದಲ ಬಾರಿಗೆ ಅಮೆರಿಕವನ್ನು ಹಿಂದಿಕ್ಕಲಿದೆ. ಜಾಗತಿಕವಾಗಿ ಸೌರ ಸ್ಥಾಪನೆಗಳು (Solar Installations) ಕುಸಿಯುತ್ತಿರುವಾಗ ಭಾರತದಲ್ಲಿ ಈ ಕ್ಷೇತ್ರ ಬೆಳವಣಿಗೆ ಹೊಂದುತ್ತಿರುವುದು ಗಮನಾರ್ಹ.
2026ರಲ್ಲ ಭಾರತದಲ್ಲಿ 50 ಗಿಗಾವ್ಯಾಟ್ಗೂ ಅಧಿಕ ಸೌರ ವಿದ್ಯುತ್ ಶಕ್ತಿ ಸೇರ್ಪಡೆಯಾಗುವ ನಿರೀಕ್ಷೆ ಇದೆ. 2025ಕ್ಕೆ ಹೋಲಿಸಿದರೆ ಸೌರ ಶಕ್ತಿ ಸಾಮರ್ಥ್ಯ ಶೇ. 6ರಷ್ಟು ಹೆಚ್ಚಾಗಬಹುದು. ಮನೆಗಳ ಮೇಲ್ಛಾವಣಿ ಸೋಲಾರ್ ಸ್ಥಾಪನೆಗೆ ಸರ್ಕಾರ ನೀಡುತ್ತಿರುವ ಉತ್ತೇಜನವು ಭಾರತದಲ್ಲಿ ಹೊಸ ಸೋಲಾರ್ ಕೆಪಾಸಿಟಿ ಸೇರ್ಪಡೆಗೆ ಇರುವ ಕಾರಣಗಳಲ್ಲಿ ಒಂದು.
ಇದನ್ನೂ ಓದಿ: Startup India @10: ಸ್ಟಾರ್ಟಪ್ ಇಂಡಿಯಾಗೆ ದಶಕದ ಸಂಭ್ರಮ; ಸಾಧನೆ, ಮೈಲಿಗಲ್ಲುಗಳೇನು? ಇಲ್ಲಿದೆ ವಿವರ
ಜಾಗತಿಕವಾಗಿ ಸೋಲಾರ್ ಸ್ಥಾಪನೆಗಳು 2026ರಲ್ಲಿ ಮಂದಗೊಳ್ಳುವ ನಿರೀಕ್ಷೆ ಇದೆ. ಅದರಲ್ಲೂ ಅಮೆರಿಕದಲ್ಲಿ ಶೇ. 14ರಷ್ಟು ಕಡಿಮೆ ಆಗಬಹುದು. ಟ್ರಂಪ್ ಸರ್ಕಾರದ ಕೆಲ ನೀತಿಗಳು ಸೋಲಾರ್ ಯೋಜನೆಗಳಿಗೆ ಹಿನ್ನಡೆ ತರಬಹುದು. ಒಂದೆಡೆ, ಅಮೆರಿಕದಲ್ಲಿ ಸೌರಶಕ್ತಿ ಸ್ಥಾಪನೆ ಕಡಿಮೆಗೊಂಡರೆ, ಭಾರತದಲ್ಲಿ ಇದು ಹೆಚ್ಚಳಗೊಳ್ಳುತ್ತದೆ. ಇದರಿಂದ ಭಾರತವು ಅಮೆರಿಕವನ್ನು ಹಿಂದಿಕ್ಕಲು ಸಾಧ್ಯವಾಗಬಹುದು.
ಸೌರಶಕ್ತಿಯ ವಿಚಾರಕ್ಕೆ ಬಂದರೆ ಚೀನಾ ವಿಶ್ವದ ಕಿಂಗ್. ಈ ಕ್ಷೇತ್ರದಲ್ಲಿ ಬಹುತೇಕ ಚೀನಾದ ಪಾರಮ್ಯತೆ ಇದೆ. ಕಳೆದ ವರ್ಷದ ಶೇ. 14ರಷ್ಟು ಇಳಿಮುಖವಾದರೂ 2026ರಲ್ಲಿ ಜಾಗತಿಕವಾಗಿಚೀನಾ 321 ಗಿಗಾವ್ಯಾಟ್ನಷ್ಟು ಸೌರ ನಿಯೋಜನೆ ಮಾಡಬಹುದು.
ಇದನ್ನೂ ಓದಿ: India-Iran: ಇರಾನ್ ಕಟ್ಟರ್ ಇಸ್ಲಾಮಿಕ್ ದೇಶವಾದರೂ ಭಾರತಕ್ಕೆ ಬೇಕು; ಯಾಕೆ ಗೊತ್ತಾ?
2025ರಲ್ಲಿ ಜನವರಿಂದ ನವೆಂಬರ್ವರೆಗೆ ಭಾರತ 35 ಗಿಗಾವ್ಯಾಟ್ನಷ್ಟು ಹೊಸ ಸೌರವಿದ್ಯುತ್ ಸಾಮರ್ಥ್ಯ ಸೇರಿಸಿದೆ. 2030ರಲ್ಲಿ ಪಳೆಯುಳಿಕೆಯಲ್ಲದ ಇಂಧನ ಸಾಮರ್ಥ್ಯವನ್ನು 500 ಗಿಗಾವ್ಯಾಟ್ಗೆ ಬೆಳೆಸಬೇಕೆಂಬ ಗುರಿ ಇದೆ. ಈ ನಿಟ್ಟಿನಲ್ಲಿ ಭಾರತ ದಾಪುಗಾಲು ಇಡುತ್ತಿದೆ.
ಭಾರತದ ಮಾಡ್ಯೂಲ್ ಮ್ಯಾನುಫ್ಯಾಕ್ಚರಿಂಗ್ ಕೆಪಾಸಿಟಿ ಈಗ ವರ್ಷಕ್ಕೆ 125 ಗಿಗಾವ್ಯಾಟ್ ಮುಟ್ಟಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ