ಮುಂದಿನ ವರ್ಷ ಭಾರತದ ಆರ್ಥಿಕತೆಗೆ ಈ ಮೂರು ವಿದ್ಯಮಾನಗಳಿಂದ ಅಪಾಯ ಸಾಧ್ಯತೆ: ಮಾರ್ಗನ್ ಸ್ಟಾನ್ಲೀ

|

Updated on: Nov 16, 2023 | 3:32 PM

Morgan Stanley On Indian Economy: ಇದೇ ವೇಗದಲ್ಲಿ ಭಾರತದ ಜಿಡಿಪಿ ಬೆಳೆದರೆ 2027ರಲ್ಲಿ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆ ಆಗುವ ಗುರಿ ಮುಟ್ಟಬಹುದು. ಅನೇಕ ಅಂತಾರಾಷ್ಟ್ರೀಯ ಬ್ರೋಕರೇಜ್ ಸಂಸ್ಥೆಗಳು ಭಾರತದ ಆರ್ಥಿಕ ಬೆಳವಣಿಗೆ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿವೆ. 2024 ಮತ್ತು 2025ರ ಕ್ಯಾಲಂಡರ್ ವರ್ಷಗಳಲ್ಲಿ ಭಾರತದ ಆರ್ಥಿಕತೆ ಶೇ. 6.4 ಮತ್ತು ಶೇ. 6.5ರಷ್ಟು ಬೆಳೆಯಬಹುದು ಎಂದು ಮಾರ್ಗನ್ ಸ್ಟಾನ್ಲೀ ನಿರೀಕ್ಷಿಸಿದೆ.

ಮುಂದಿನ ವರ್ಷ ಭಾರತದ ಆರ್ಥಿಕತೆಗೆ ಈ ಮೂರು ವಿದ್ಯಮಾನಗಳಿಂದ ಅಪಾಯ ಸಾಧ್ಯತೆ: ಮಾರ್ಗನ್ ಸ್ಟಾನ್ಲೀ
ಭಾರತದ ಆರ್ಥಿಕತೆ
Follow us on

ನವದೆಹಲಿ, ನವೆಂಬರ್ 16: ಭಾರತದ ಆರ್ಥಿಕತೆ (Indian economy) ಸದ್ಯಕ್ಕೆ ವ್ಯವಸ್ಥಿತವಾಗಿ ಓಡುತ್ತಿದೆ. ಅತಿವೇಗದಲ್ಲಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಲ್ಲಿ ಭಾರತದ್ದೂ ಒಂದು. ಹೆಚ್ಚಿನ ಬೆಲೆ ಏರಿಕೆ ನಡುವೆಯೂ ಮತ್ತು ಜಾಗತಿಕ ಭೌಗೋಳಿಕ ರಾಜಕೀಯ ಬಿಕ್ಕಟ್ಟುಗಳ ಮಧ್ಯೆಯೂ ಕೆಸರಿನಲ್ಲಿ ಕಮಲ ಅರಳುವಂತೆ ಭಾರತದ ಆರ್ಥಿಕತೆ ಅರಳುತ್ತಿದೆ. ಇದೇ ವೇಗದಲ್ಲಿ ಭಾರತದ ಜಿಡಿಪಿ ಬೆಳೆದರೆ 2027ರಲ್ಲಿ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆ ಆಗುವ ಗುರಿ ಮುಟ್ಟಬಹುದು. ಅನೇಕ ಅಂತಾರಾಷ್ಟ್ರೀಯ ಬ್ರೋಕರೇಜ್ ಸಂಸ್ಥೆಗಳು ಭಾರತದ ಆರ್ಥಿಕ ಬೆಳವಣಿಗೆ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿವೆ. 2024 ಮತ್ತು 2025ರ ಕ್ಯಾಲಂಡರ್ ವರ್ಷಗಳಲ್ಲಿ ಭಾರತದ ಆರ್ಥಿಕತೆ ಶೇ. 6.4 ಮತ್ತು ಶೇ. 6.5ರಷ್ಟು ಬೆಳೆಯಬಹುದು ಎಂದು ಮಾರ್ಗನ್ ಸ್ಟಾನ್ಲೀ ನಿರೀಕ್ಷಿಸಿದೆ.

2024ರಲ್ಲಿ ಇವೆಯಂತೆ ಅಪಾಯಗಳು

ಮುಂದಿನ ವರ್ಷ ಭಾರತದ ಆರ್ಥಿಕತೆಗೆ ತುಸು ಅಪಾಯ ತರಬಲ್ಲ ಕೆಲ ಸಂಗತಿಗಳನ್ನು ಮಾರ್ಗನ್ ಸ್ಟಾನ್ಲೀ ಎತ್ತಿತೋರಿಸಿದೆ.

  1. ಎಣ್ಣೆ ಹಾಗೂ ಇತರ ಸರಕುಗಳ ಬೆಲೆ ಏರಿಕೆಯಿಂದ ಹಣದುಬ್ಬರ ಹೆಚ್ಚಬಹುದು. ಇದರಿಂದ ಆರ್​ಬಿಐ ಬಡ್ಡಿದರ ಇಳಿಸುವುದು ವಿಳಂಬವಾಗಬಹುದು.
  2. ಜಾಗತಿಕ ಹಿಂಜರಿತದಂತಹ ಬಾಹ್ಯ ಕಾರಣಗಳಿಂದ ರುಪಾಯಿ ಕರೆನ್ಸಿಗೆ ಹಿನ್ನಡೆಯಾಗಬಹುದು. ಇದರಿಂದ ಸ್ಥೂಲ ಆರ್ಥಿಕ ಸ್ಥಿತಿಯ ಸಮತೋಲನದಲ್ಲಿ ವ್ಯತ್ಯಯವಾಗಬಹುದು.
  3. ಮುಂದಿನ ಸಾರ್ವತ್ರಿಕ ಚುನಾವಣೆ (ಲೋಕಸಭೆಗೆ) ಇರುವುದು ಮತ್ತೊಂದು ಅಪಾಯ. ಯಾಕೆಂದರೆ, ಸರ್ಕಾರ ಬದಲಾದರೆ ಈಗಿರುವ ಹಾದಿ ಬದಲಾಗುವ ಸಾಧ್ಯತೆ ಇರುತ್ತದೆ.

ಇದನ್ನೂ ಓದಿ: ಆನ್​ಲೈನ್​ನಲ್ಲಿ ಹಂದಿ ಕಡಿಯುವ ಹಗರಣ ಟ್ರೆಂಡಿಂಗ್; ನಿತಿನ್ ಕಾಮತ್ ಉಲ್ಲೇಖಿಸಿದ ಈ ಸ್ಕ್ಯಾಮ್ ಏನು? ಯಾಕೆ ಇದು ಡೆಡ್ಲಿ?

ಮಾರ್ಗನ್ ಸ್ಟಾನ್ಲೀ ಸಂಸ್ಥೆ ಭಾರತಕ್ಕೆ ಈ ಮೇಲಿನ ಮೂರು ಸಮಸ್ಯೆಗಳು ಮುಂದಿನ ವರ್ಷ ಎದುರಾಗಬಹುದು ಎಂದು ಎಚ್ಚರಿಸಿದೆ. ಆದರೆ, ಭಾರತದ ಆರ್ಥಿಕತೆಯ ಮೂಲಭೂತ ಶಕ್ತಿ ಪ್ರಬಲವಾಗಿರುವುದರಿಂದ ಅಡೆತಡೆಗಳನ್ನು ಸುಲಭವಾಗಿ ದಾಟಿ ಹೋಗುತ್ತದೆ.

ಸರ್ಕಾರದಿಂದ ಬಂಡವಾಳ ವೆಚ್ಚ ಹೆಚ್ಚುತ್ತಿರುವುದು, ಆಂತರಿಕವಾಗಿ ಬೇಡಿಕೆ ಮತ್ತು ಅನುಭೋಗ ಪ್ರಮಾಣ ಹೆಚ್ಚುತ್ತಿರುವುದು ಭಾರತದ ಆರ್ಥಿಕತೆಗೆ ಪುಷ್ಟಿ ಕೊಡುತ್ತದೆ ಎಂಬುದು ತಜ್ಞರ ಅಭಿಮತ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ