ಆನ್ಲೈನ್ನಲ್ಲಿ ಹಂದಿ ಕಡಿಯುವ ಹಗರಣ ಟ್ರೆಂಡಿಂಗ್; ನಿತಿನ್ ಕಾಮತ್ ಉಲ್ಲೇಖಿಸಿದ ಈ ಸ್ಕ್ಯಾಮ್ ಏನು? ಯಾಕೆ ಇದು ಡೆಡ್ಲಿ?
Pig Butchering scam: ಪಿಗ್ ಬಚರಿಂಗ್ ಎಂಬುದು ಅನ್ಲೈನ್ ವಂಚನೆಯ ಹಗರಣ. ಒಬ್ಬ ವ್ಯಕ್ತಿಯನ್ನು ವಂಚಿಸುವ ಮುನ್ನ ಅವರ ವಿಶ್ವಾಸ ಸಂಪಾದಿಸಿ ಆ ಬಳಿಕ ಆತನನ್ನು ಖೆಡ್ಡಾಗೆ ಬೀಳಿಸುವುದು ಈ ಸ್ಕ್ಯಾಮ್ನ ಮೂಲತಂತ್ರ. ಝೀರೋಧ ಸಂಸ್ಥೆಯ ಸಿಇಒ ನಿತಿನ್ ಕಾಮತ್ ಇತ್ತೀಚೆಗೆ ಪಿಗ್ ಬಚರಿಂಗ್ ಸ್ಕ್ಯಾಮ್ ಬಗ್ಗೆ ಉಲ್ಲೇಖಿಸಿ ತಮ್ಮ ಎಕ್ಸ್ ಖಾತೆಯಲ್ಲಿ ಒಂದು ಪೋಸ್ಟ್ ಹಾಕಿದ್ದಾರೆ.
ಬೆಂಗಳೂರು, ನವೆಂಬರ್ 16: ಆನ್ಲೈನ್ ಜಗತ್ತು ಪ್ರಬಲಗೊಂಡಂತೆಯಲ್ಲಾ ವಿವಿಧೆಡೆ ಸೈಬರ್ ಕ್ರೈಮ್ಗಳ (cybercrimes) ಸಂಖ್ಯೆ ಮತ್ತು ವೈವಿಧ್ಯತೆ ಬಹಳ ಹೆಚ್ಚಾಗಿದೆ. ಮೋಸದ ಬಗ್ಗೆ ಅರಿವು ಹೆಚ್ಚಾದಂತೆ ವಂಚಕರು ಹೊಸ ಹೊಸ ದಾರಿ ಹುಡುಕಿ ಮೋಸ ಮುಂದುವರಿಸುತ್ತಿದ್ದಾರೆ. ಝೀರೋಧ ಸಂಸ್ಥೆಯ ಸಿಇಒ ನಿತಿನ್ ಕಾಮತ್ ಇತ್ತೀಚೆಗೆ ಪಿಗ್ ಬಚರಿಂಗ್ ಸ್ಕ್ಯಾಮ್ (Pig Butchering scam) ಬಗ್ಗೆ ಉಲ್ಲೇಖಿಸಿ ತಮ್ಮ ಎಕ್ಸ್ ಖಾತೆಯಲ್ಲಿ ಒಂದು ಪೋಸ್ಟ್ ಹಾಕಿದ್ದರು. ಅವರ ಪ್ರಕಾರ ಭಾರತದಲ್ಲಿ ಈ ಪಿಗ್ ಬಚರಿಂಗ್ ಅಥವಾ ಹಂದಿ ಕಡಿಯುವ ಹಗರಣ ಹತ್ತಾರು ಸಾವಿರ ಕೋಟಿ ರೂ ಮೊತ್ತದಷ್ಟಿದೆಯಂತೆ.
‘ಭಾರತದಲ್ಲಿ ಪಿಗ್ ಬಚರಿಂಗ್ ಸ್ಕ್ಯಾಮ್ಗಳ ಮೊತ್ತ ಹತ್ತಾರು ಸಾವಿರ ಕೋಟಿ ರೂಗಳಷ್ಟಾಗುತ್ತದೆ. ಉದ್ಯೋಗ, ಹೈರಿಟರ್ನ್ ಹೂಡಿಕೆ, ಕ್ರಿಪ್ಟೋ ಹೂಡಿಕೆ ಇತ್ಯಾದಿ ನಕಲಿ ಆಫರ್ಗಳನ್ನು ಅದೆಷ್ಟೋ ಜನರು ನಂಬಿ ಮೋಸ ಹೋಗುತ್ತಿರುವುದನ್ನು ನೋಡಿದಾಗ ಭಯವಾಗುತ್ತದೆ,’ ಎಂದು ನಿತಿನ್ ಕಾಮತ್ ಬರೆದಿದ್ದಾರೆ.
ಇದನ್ನೂ ಓದಿ: ಈ ಶಿಕ್ಷಕರಿಗೆ 83 ಲಕ್ಷ ಸಂಬಳ ಕೊಡಿ; 10 ಸಾವಿರ ರಿಟೈರ್ಡ್ ಟೀಚರ್ಗಳನ್ನು ಟ್ರೈನರುಗಳಾಗಿ ನೇಮಿಸುವಂತೆ ನಾರಾಯಣಮೂರ್ತಿ ಸಲಹೆ
ಏನಿದು ಪಿಗ್ ಬಚರಿಂಗ್ ಹಗರಣ?
ಪಿಗ್ ಬಚರಿಂಗ್ ಎಂಬುದು ಅನ್ಲೈನ್ ವಂಚನೆಯ ಹಗರಣ. ಒಬ್ಬ ವ್ಯಕ್ತಿಯನ್ನು ವಂಚಿಸುವ ಮುನ್ನ ಅವರ ವಿಶ್ವಾಸ ಸಂಪಾದಿಸಿ ಆ ಬಳಿಕ ಆತನನ್ನು ಖೆಡ್ಡಾಗೆ ಬೀಳಿಸುವುದು ಈ ಸ್ಕ್ಯಾಮ್ನ ಮೂಲತಂತ್ರ. ಪಿಗ್ ಬಚರಿಂಗ್ ಎಂದರೆ ಹಂದಿ ಕಡಿಯುವುದು. ಚೀನಾದ Sha Zhu Pan ಸಂಪ್ರದಾಯದಲ್ಲಿ ಹೀಗೆ ಹಂದಿಯನ್ನು ಕೊಬ್ಬಿಸಿ ಕಡಿಯಲಾಗುತ್ತದೆ. ನಮ್ಮಲ್ಲಿ ಕುರಿ ಕಡಿಯುವ ಮುನ್ನ ಅದಕ್ಕೆ ಚೆನ್ನಾಗಿ ಮೇವು ಕೊಟ್ಟು ದಷ್ಟಪುಷ್ಟಗೊಳಿಸಿ ಕೊಬ್ಬಿಸಿರಲಾಗುತ್ತದೆ. ಕೊಬ್ಬಿರುವ ಕುರಿ ಕಡಿದರೆ ಲಾಭವಾಗುವುದು ಕಟುಕನಿಗೇ ಅಲ್ಲವಾ? ಅದೇ ರೀತಿಯದ್ದು ಪಿಗ್ ಬಚರಿಂಗ್ ಕೂಡ.
ನಿತಿನ್ ಕಾಮತ್ ತಮ್ಮ ಪೋಸ್ಟ್ನಲ್ಲಿ ಈ ಸ್ಕ್ಯಾಮ್ ಹೇಗೆ ನಡೆಯುತ್ತದೆ ಎಂದು ವಿವರಿಸಿದ್ದಾರೆ. ಮೊದಲಿಗೆ ವಂಚಕರು ನಕಲಿ ಪ್ರೊಫೈಲ್ ರಚಿಸಿ, ಸ್ನೇಹ, ಪ್ರೀತಿ ಇತ್ಯಾದಿ ಮೂಲಕ ಟಾರ್ಗೆಟ್ ಜನರ ವಿಶ್ವಾಸ ಗಳಿಸುತ್ತಾರೆ. ಅವರಿಗೆ ಉತ್ತಮ ಉದ್ಯೋಗ, ಉತ್ತಮ ಹೂಡಿಕೆ ಇತ್ಯಾದಿ ಮೂಲಕ ಪುಸಲಾಯಿಸಿ ಹಣ ಪಡೆದು ವಂಚಿಸುತ್ತಾರೆ.
ಇದನ್ನೂ ಓದಿ: ಎಸ್ಸಿಎಸ್ಎಸ್ನಿಂದ ನ್ಯಾಷನಲ್ ಸೇವಿಂಗ್ಸ್ವರೆಗೂ; ಪೋಸ್ಟ್ ಆಫೀಸ್ನಲ್ಲಿ ಅತ್ಯುತ್ತಮ ಉಳಿತಾಯ ಯೋಜನೆಗಳಿವು
‘ಕ್ರೌರ್ಯತೆ ಏನೆಂದರೆ ವಂಚನೆ ಎಸಗುತ್ತಿರುವ ವ್ಯಕ್ತಿ ಕೂಡ ಇನ್ನೊಂದು ರೀತಿಯಲ್ಲಿ ವಂಚನೆಗೆ ಬಲಿಯಾಗಿರುವವನೇ ಆಗಿರುತ್ತಾನೆ. ವಂಚಕ ಕಂಪನಿಗಳು ನೀಡುವ ಅಂತಾರಾಷ್ಟ್ರೀಯ ಉದ್ಯೋಗ ಆಫರ್ಗಳ ಬಲೆಗೆ ಹಲವರು ಬಿದ್ದುಹೋಗುತ್ತಾರೆ. ಒಮ್ಮೆ ಅವರು ವಿದೇಶಕ್ಕೆ ಹೋದರೆ ಅಲ್ಲಿ ವಂಚಕರ ಕೈಗೆ ಸಿಕ್ಕಿಬೀಳುತ್ತಾರೆ. ಅವರ ಕೈಯಿಂದ ನಕಲಿ ಪ್ರೊಫೈಲ್ ಸೃಷ್ಟಿಸಿ ಇತರರನ್ನು ಸೆಳೆಯುವಂತೆ ಒತ್ತಾಯಪಡಿಸಲಾಗುತ್ತದೆ’ ಎಂದು ಝೀರೋಧ ಸಂಸ್ಥೆಯ ಸಂಸ್ಥಾಪಕರಾದ ಅವರು ಹೇಳಿದ್ದಾರೆ.
The scale of pig butchering scams in India runs into tens of thousands of crores. It is scary how many people fall for fake job offer scams, scammy high-return investment schemes and crypto investments, etc.
As the name implies, a pig butchering scam involves fattening the… pic.twitter.com/x3ezkZrmHR
— Nithin Kamath (@Nithin0dha) November 13, 2023
ಬಹಳ ಬಾರಿ ನಕಲಿ ಹುಡುಗಿಯ ಪ್ರೊಫೈಲ್ ಮಾಡಿ ಹುಡುಗರನ್ನು ಆಕರ್ಷಿಸಿ ವಂಚಿಸಲಾಗುತ್ತದೆ. ಇದೊಂದು ರೀತಿಯಲ್ಲಿ ಆನ್ಲೈನ್ ಹನಿಟ್ರ್ಯಾಪಿಂಗ್ ರೀತಿಯದ್ದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ