AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೋಟಿ ರೂ ಸಂಪಾದನೆ, ಡಿಸೈನ್ ಬಟ್ಟೆ ತೊಡುತ್ತಿದ್ದ ಭಾರತೀಯ ಮಹಿಳೆ, ಮೆಲ್ಬೋರ್ನ್​ನಲ್ಲಿ ಮನೆಗೆಲಸಕ್ಕೆ ಸೇರಿಕೊಂಡಾಗ…

Story of Shweta Desai from earning Rs 1 crore in London to cleaning flats in Melbourne: ಭಾರತ ಮೂಲದ ಶ್ವೇತಾ ದೇಸಾಯಿ ಲಂಡನ್​ನಲ್ಲಿ ಕೋಟಿ ರೂ ಸಂಪಾದಿಸುತ್ತಿದ್ದವಳು ಈಗ ಮೆಲ್ಬೋರ್ನ್​ನಲ್ಲಿ ಫ್ಲಾಟ್​ಗಳ ಕ್ಲೀನಿಂಗ್ ಇತ್ಯಾದಿ ಕೆಲಸ ಮಾಡುತ್ತಿದ್ದಾಳೆ. ಥರಹಾವೇರಿ ಡಿಸೈನರ್ ಬ್ಯಾಗ್, ಶೂ, ಬಟ್ಟೆ ಇತ್ಯಾದಿಯೊಂದಿಗೆ ಹಣಕಾಸು ಸ್ವಾತಂತ್ರ್ಯವನ್ನೂ ಅನುಭವಿಸುತ್ತಿದ್ದ ಈಕೆ ಈಗ ಬೇರೆಯೇ ಪರಿಸ್ಥಿತಿಯಲ್ಲಿದ್ದಾಳೆ.

ಕೋಟಿ ರೂ ಸಂಪಾದನೆ, ಡಿಸೈನ್ ಬಟ್ಟೆ ತೊಡುತ್ತಿದ್ದ ಭಾರತೀಯ ಮಹಿಳೆ, ಮೆಲ್ಬೋರ್ನ್​ನಲ್ಲಿ ಮನೆಗೆಲಸಕ್ಕೆ ಸೇರಿಕೊಂಡಾಗ...
ಶ್ವೇತಾ ದೇಸಾಯಿImage Credit source: Gemini AI
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 07, 2026 | 5:26 PM

Share

ಈಕೆಯ ಹೆಸರು ಶ್ವೇತಾ ದೇಸಾಯಿ. ಮುಂಬೈನಲ್ಲಿ ಹುಟ್ಟಿ ಬೆಳೆದವಳು. ವಯಸ್ಸು ಈಗ 37 ವರ್ಷ. ಉನ್ನತ ವ್ಯಾಸಂಗಕ್ಕೆಂದು 2008ರಲ್ಲಿ ಲಂಡನ್​ಗೆ ಹೋದವಳು ಅಲ್ಲಿಯೇ ಬದುಕು ಮತ್ತು ವೃತ್ತಿ ಕಟ್ಟಿಕೊಂಡವಳು. 15 ವರ್ಷ ಲಂಡನ್​ನಲ್ಲಿ ಇದ್ದ ಬಳಿಕ ಆಕೆಯ ಜೀವನಕ್ಕೆ ಅನಿರೀಕ್ಷಿತ ತಿರುವು ಸಿಕ್ಕಿತು. ಲಂಡನ್ ತೊರೆಯುವಾಗ ಈಕೆ ಅಲ್ಲಿ ಪಡೆಯುತ್ತಿದ್ದ ಸಂಬಳ ವರ್ಷಕ್ಕೆ ಸುಮಾರು ಒಂದು ಕೋಟಿ ರೂ. ಹಾಗಿದ್ದ ಈಕೆ ಈಗ ಆಸ್ಟ್ರೇಲಿಯಾದ ಮೆಲ್ಬೋರ್ನ್​ನಲ್ಲಿ ಅಪಾರ್ಟ್ಮೆಂಟ್ ಸ್ವಚ್ಛಗೊಳಿಸುವ ಕಾಯಕ ಮಾಡುತ್ತಿದ್ದಾಳೆ. ಹೇಗಿದ್ದವಳು, ಹೀಗೇಕಾದಳು?

ಶ್ವೇತಾ ದೇಸಾಯಿ ಅವರು ವಿವಾಹಿತೆ ಹಾಗೂ ಇಬ್ಬರು ಮಕ್ಕಳ ತಾಯಿ. ಲಂಡನ್​ನಲ್ಲಿ ಇಷ್ಟ ಬಂದಂತೆ ಜೀವಿಸಿದ ಅದೃಷ್ಟವಂತೆ. ಈಕೆಯ ಪತಿಗೆ ಮೆಲ್ಬೋರ್ನ್​ನಲ್ಲಿ ಕೆಲಸ ಸಿಕ್ಕಿ ಅಲ್ಲಿ ನೆಲಸಬೇಕಾದ ಕಾರಣ, ಈಕೆಯೂ ಲಂಡನ್​ನಲ್ಲಿ ತನ್ನ ಕೆಲಸ ಬಿಟ್ಟು ಗಂಡ ಹಾಗು ಇಬ್ಬರು ಮಕ್ಕಳೊಂದಿಗೆ 2023ರಲ್ಲಿ ಮೆಲ್ಬೋರ್ನ್​ಗೆ ಹೋಗುತ್ತಾಳೆ. ಇಲ್ಲಿ ಈಕೆಗೆ ಶುರುವಾಗುವುದು ಐಡೆಂಟಿಟಿ ಕ್ರೈಸಿಸ್.

ಇದನ್ನೂ ಓದಿ: ಬ್ಯಾಂಕ್ ಸಾಲಗಾರರ ಗಮನಕ್ಕೆ; ಅಡಮಾನ ಆಸ್ತಿ ವಿಚಾರದಲ್ಲಿ ಆರ್​ಬಿಐ ಕರಡು ನಿಯಮಗಳಿವು…

ಲಂಡನ್​ನಲ್ಲಿ ಕೈತುಂಬ ಸಂಬಳ ಕೊಡುವ ಕೆಲಸ ಇತ್ತು. ಮೆಲ್ಬೋರ್ನ್​ನಲ್ಲಿ ಎಷ್ಟು ಹುಡುಕಿದರೂ ಈಕೆಗೆ ಬೇಕಾದ ಕೆಲಸ ಸಿಗುವುದಿಲ್ಲ. ಕೊನೆಗೆ ಏರ್​ಬಿಎನ್​ಬಿಯಲ್ಲಿ ಅಪಾರ್ಟ್ಮೆಂಟ್ ನಿರ್ವಹಣೆಯ ಕೆಲಸಕ್ಕೆ ಸೇರಿಕೊಳ್ಳಬೇಕಾಯಿತು.

ಶ್ವೇತಾ ದೇಸಾಯಿ ಇನ್ಸ್​ಟಾ ವಿಡಿಯೋ

View this post on Instagram

A post shared by Shweta (@shweta_lifecoach)

ಏರ್​ಬಿಎನ್​ಬಿ ಅಪಾರ್ಟ್ಮೆಂಟ್​ಗಳನ್ನು ಸ್ವಚ್ಛಗೊಳಿಸುವುದು, ಬಟ್ಟೆಗಳನ್ನು ವಾಶ್ ಮಾಡಿಸಿ ಇಸ್ತ್ರಿ ಮಾಡಿಸಿಡುವುದು, ಅತಿಥಿಗಳ ಪ್ರಶ್ನೆಗಳಿಗೆ ಸಮಾಧಾನ ಹೇಳುವುದು ಇತ್ಯಾದಿ ಕೆಲಸ ಮಾಡುತ್ತಿದ್ಧಾಳೆ ಶ್ವೇತಾ ದೇಸಾಯಿ.

ಲಂಡನ್​ನಲ್ಲಿ ಡಿಸೈನರ್ ಬಟ್ಟೆ, ಬ್ಯಾಗು, ಫ್ಯಾನ್ಸಿ ಮೇಕಪ್ ಹೊಂದಿದ್ದ ಶ್ವೇತಾ ದೇಸಾಯಿ, ಹಣಕಾಸು ಸ್ವಾತಂತ್ರ್ಯ ಅನುಭವಿಸುತ್ತಿರುತ್ತಾಳೆ. ಆದರೆ, ಮೆಲ್ಬೊರ್ನ್​ನಲ್ಲಿ ಈಕೆ ಬಲವಂತವಾಗಿ ತನ್ನ ಲೈಫ್​ಸ್ಟೈಲ್ ಬದಲಾಯಿಸಿಕೊಳ್ಳಬೇಕಾಗುತ್ತದೆ. ಉದ್ಯೋಗ ಇಲ್ಲದೇ ಇದ್ದಾಗ ಏನೆಲ್ಲಾ ಆಗುತ್ತೆ ಎಂಬುದು ಈಕೆಗೆ ಅನುಭವಕ್ಕೆ ಬಂದಿತು. ಈಗ ಸಿಕ್ಕ ಕೆಲಸದಲ್ಲೇ ತೃಪ್ತಿ ಗಳಿಸುತ್ತಿದ್ದಾಳೆ.

ಇದನ್ನೂ ಓದಿ: ಲಾಭದ ಹಳಿಗೆ ಬಂದ ಪೇಟಿಎಂ; 663 ಕೋಟಿ ರೂ ನಷ್ಟದಿಂದ 552 ಕೋಟಿ ರೂ ಲಾಭ ಕಂಡ ಒನ್97 ಕಮ್ಯೂನಿಕೇಶನ್ಸ್

ಶ್ವೇತಾಗೆ ತನ್ನನ್ನು ತಾನು ವಿಮರ್ಶೆ ಮಾಡಿಕೊಳ್ಳಲು ಈ ಕೆಲಸ ಸಹಾಯವಾಗಿದೆ. ಅಪಾರ್ಟ್ಮೆಂಟ್​ಗಳ ನಿರ್ವಹಣೆ ಜೊತೆಗೆ ಈಕೆ ಬಿಡುವಿನ ವೇಳೆಯಲ್ಲಿ ಮಕ್ಕಳಿಗೆ ಇಂಗ್ಲೀಷ್ ಹೇಳಿಕೊಡುತ್ತಾಳೆ, ತನ್ನದೇ ಬ್ಯುಸಿನೆಸ್ ಮತ್ತು ಕೋಚಿಂಗ್ ಪ್ರಾಕ್ಟೀಸ್ ನಡೆಸುತ್ತಾಳೆ. ಈಕೆ ರೀಬ್ಯುಲ್ಡ್ ರೂಮ್ ಹೆಸರಿನಲ್ಲಿ ಒಂದು ವಾಟ್ಸಾಪ್ ಕಮ್ಯೂನಿಟಿ ಆರಂಭಿಸಿದ್ದು, ಅದರಲ್ಲಿ ತನ್ನಂತೆ ಜೀವನ ಬದಲಾವಣೆಗೆ ಒಗ್ಗಿಕೊಳ್ಳಬೇಕಿರುವ ಮಹಿಳೆಯರಿಗೆ ಮಾರ್ಗದರ್ಶನ ಕೊಡುತ್ತಾಳೆ. ಹಾಗಂತ, ಶ್ವೇತಾ ದೇಸಾಯಿ ತಮ್ಮ ಇನ್ಸ್​ಟಾಗ್ರಾಮ್ ರೀಲ್ಸ್​ನಲ್ಲಿ ಹೇಳಿಕೊಂಡಿದ್ದಾಳೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ