
ನವದೆಹಲಿ, ಜುಲೈ 16: ಆನ್‌ಲೈನ್ ರೈಲ್ವೆ ಟಿಕೆಟ್ ಬುಕಿಂಗ್ ಪ್ರಕ್ರಿಯೆಯನ್ನು ಇನ್ನಷ್ಟು ಸುಲಭಗೊಳಿಸಲು ಭಾರತೀಯ ರೈಲ್ವೆ ಇಲಾಖೆಯು ಬಹುನಿರೀಕ್ಷಿತ ಹೊಸ ಐಆರ್‌ಸಿಟಿಸಿ (IRCTC) ವೆಬ್‌ಸೈಟ್‌ನ ಬೀಟಾ (ಪ್ರಾಯೋಗಿಕ) ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಸಾರ್ವಜನಿಕರು ಈ ಬೀಟಾ ಆವೃತ್ತಿಯನ್ನು ಬಳಸಬಹುದು. ಜುಲೈ 16, ರಾತ್ರಿ 9 ಗಂಟೆಯಿಂದ ಇದು ಸಾರ್ವಜನರಿಗೆ ಲಭ್ಯ ಇರುತ್ತದೆ. ಈಗಿರುವ ಅಧಿಕೃತ ಐಆರ್‌ಸಿಟಿಸಿ ವೆಬ್ಸೈಟ್ನಲ್ಲೇ ಬೀಟಾ ಆವೃತ್ತಿಯ ಲಿಂಕ್ ಇದ್ದು ಅದನ್ನು ಕ್ಲಿಕ್ ಮಾಡಿ ಪ್ರವೇಶ ಪಡೆಯಬಹುದು. ಈ ಲಿಂಕ್ ರಾತ್ರಿ 9ಕ್ಕೆ ಎನೇಬಲ್ ಆಗಬಹುದು.
ಈ ಪ್ರಾಯೋಗಿಕ ಆವೃತ್ತಿಯು ವೆಬ್‌ಸೈಟ್‌ನ ಕಾರ್ಯಕ್ಷಮತೆಯನ್ನು ಪರೀಕ್ಷಿಸಲು ಮತ್ತು ತಾಂತ್ರಿಕ ದೋಷಗಳನ್ನು ಸರಿಪಡಿಸಲು ಸಹಾಯ ಮಾಡಲಿದ್ದು, ಮುಂದಿನ ಕೆಲವು ವಾರಗಳಲ್ಲಿ ಸಂಪೂರ್ಣವಾಗಿ ನವೀಕರಿಸಿದ ವೆಬ್‌ಸೈಟ್ ಸಾರ್ವಜನಿಕ ಬಳಕೆಗೆ ಮುಕ್ತವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಳೆಯ ಐಆರ್‌ಸಿಟಿಸಿ ವೆಬ್‌ಸೈಟ್ ಬಹಳ ನಿಧಾನಗತಿಯಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಅಲ್ಲದೆ ಕಷ್ಟಕರವಾದ ನ್ಯಾವಿಗೇಷನ್ ಹಾಗೂ ಕಿರಿಕಿರಿ ಉಂಟುಮಾಡುವ ‘ಕ್ಯಾಪ್ಚಾ’ (Captcha) ನಿಯಮಗಳಿಂದಾಗಿ ಜನರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಇತ್ತೀಚೆಗೆ ಜೈಪುರದ ಮಾಳವೀಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (MNIT) ಗೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಭೇಟಿ ನೀಡಿದ್ದಾಗ, ವಿದ್ಯಾರ್ಥಿಯೊಬ್ಬರು ಈ ಸಮಸ್ಯೆಯನ್ನು ಸಚಿವರ ಗಮನಕ್ಕೆ ತಂದಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಸಚಿವರು ವೆಬ್‌ಸೈಟ್ ಅನ್ನು ಸಂಪೂರ್ಣವಾಗಿ ನವೀಕರಿಸಲು ಅಧಿಕಾರಿಗಳಿಗೆ ಸೂಚಿಸಿದ್ದರು. ಈ ಬದಲಾವಣೆಯಲ್ಲಿ ಕಾಲೇಜು ವಿದ್ಯಾರ್ಥಿಗಳ ಸಲಹೆ ಹಾಗೂ ಫೀಡ್‌ಬ್ಯಾಕ್‌ಗಳನ್ನು ಕೂಡ ಪಡೆದುಕೊಳ್ಳಲಾಗಿದೆ.
ಇದನ್ನೂ ಓದಿ: Kia Syros EV: ಕಿಯಾದ ಅತ್ಯಂತ ಚಿಕ್ಕ ಎಲೆಕ್ಟ್ರಿಕ್ ಕಾರು ಅನಾವರಣ: 526 ಕಿ.ಮೀ. ವ್ಯಾಪ್ತಿ 25,000ಕ್ಕೆ ಬುಕ್ಕಿಂಗ್
ಹೊಸ ಬೀಟಾ ಆವೃತ್ತಿಯಲ್ಲಿ ಪ್ರಮುಖವಾಗಿ ನಾಲ್ಕು ದೊಡ್ಡ ಸುಧಾರಣೆಗಳನ್ನು ಮಾಡಲಾಗಿದ್ದು, ಬಳಕೆದಾರರಿಗೆ ಅತ್ಯಂತ ಕ್ಲೀನ್ ಆದ ಇಂಟರ್‌ಫೇಸ್ ನೀಡಲಾಗಿದೆ:
ಇದನ್ನೂ ಓದಿ: ಮೊಬೈಲ್ ಫೋನ್ ಮ್ಯಾನುಫ್ಯಾಕ್ಚರಿಂಗ್ ಸ್ಕೀಮ್; ಗೇಮ್ ಚೇಂಜರ್ ಯೋಜನೆ; ಏನಿದರ ವಿಶೇಷತೆ?
ಐಆರ್‌ಸಿಟಿಸಿ ಬಳಕೆದಾರರು ಹೊಸ ವೆಬ್‌ಸೈಟ್‌ನಲ್ಲಿ ಈ ಕೆಳಗಿನ ಸುಲಭ ಹಂತಗಳ ಮೂಲಕ ಟಿಕೆಟ್ ಬುಕ್ ಮಾಡಬಹುದು:
ನೀವು ರೈಲು ಎಲ್ಲಿ ಬರುತ್ತಿದೆ, ನಿಮ್ಮ ನಿಲ್ದಾಣಕ್ಕೆ ಎಷ್ಟು ಹೊತ್ತಿಗೆ ಬರುತ್ತದೆ ಎನ್ನುವ ಲೈವ್ ಅಪ್ಡೇಟ್ಸ್ ಅನ್ನು ಈ ಮುಂದಿನ ಲಿಂಕ್ನಲ್ಲಿ ಪಡೆಯಬಹುದು: enquiry.indianrail.gov.in/mntes
ಪ್ರಸ್ತುತ ಐಆರ್‌ಸಿಟಿಸಿ ವೆಬ್‌ಸೈಟ್ ದಿನಕ್ಕೆ ಸರಾಸರಿ 14.5 ಲಕ್ಷ ಟಿಕೆಟ್‌ಗಳನ್ನು ನಿರ್ವಹಿಸುತ್ತಿದ್ದು, ಈ ಹೊಸ ನವೀಕರಣದಿಂದಾಗಿ ಕೋಟ್ಯಂತರ ಪ್ರಯಾಣಿಕರ ಸಮಯ ಉಳಿತಾಯವಾಗಲಿದೆ. ಇದರೊಂದಿಗೆ ರೈಲ್ವೆ ಇಲಾಖೆಯು ತನ್ನ ದಶಕಗಳಷ್ಟು ಹಳೆಯದಾದ ‘ಪ್ಯಾಸೆಂಜರ್ ರಿಸರ್ವೇಶನ್ ಇಂಜಿನ್’ ಅನ್ನು ಸಹ ನವೀಕರಿಸುತ್ತಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 12:52 pm, Thu, 16 July 26