ಭಾರತದ ಸ್ಟಾರ್ಟಪ್​ಗಳಿಗೆ ಈ ವಾರ ಫಂಡಿಂಗ್ ಸುಗ್ಗಿ; ಶೇ. 226ರಷ್ಟು ಫಂಡಿಂಗ್ ಹೆಚ್ಚಳ

Indian startups gets 226pc more funding this week: ಈ ವಾರ ನವೆಂಬರ್ 18ರಿಂದ 23ರವರೆಗೆ ಭಾರತೀಯ ಸ್ಟಾರ್ಟಪ್​ಗಳಿಗೆ 596 ಮಿಲಿಯನ್ ಡಾಲರ್ ಮೊತ್ತದ ಫಂಡಿಂಗ್ ಸಿಕ್ಕಿದೆ. ಕಳೆದ ವಾರಕ್ಕೆ ಹೋಲಿಸಿದರೆ ಫಂಡಿಂಗ್ ಶೇ. 226ರಷ್ಟು ಹೆಚ್ಚಿರುವುದು ಗಮನಾರ್ಹ. ಬೆಂಗಳೂರು ಮೂಲದ ಸ್ಟಾರ್ಟಪ್​ಗಳಿಗೆ ಅತಿಹೆಚ್ಚು ಹಣಕಾಸು ನೆರವು ಒದಗಿ ಬಂದಿದೆ. ಈ ವಾರದ ಫಂಡಿಂಗ್​ನಲ್ಲಿ ಝೆಪ್ಟೋಗೆ ಸಿಂಹಪಾಲು ಇದೆ.

ಭಾರತದ ಸ್ಟಾರ್ಟಪ್​ಗಳಿಗೆ ಈ ವಾರ ಫಂಡಿಂಗ್ ಸುಗ್ಗಿ; ಶೇ. 226ರಷ್ಟು ಫಂಡಿಂಗ್ ಹೆಚ್ಚಳ
ಸ್ಟಾರ್ಟಪ್

Updated on: Nov 24, 2024 | 12:05 PM

ನವದೆಹಲಿ, ನವೆಂಬರ್ 24: ಭಾರತದ ಸ್ಟಾರ್ಟಪ್​ಗಳಿಗೆ ಈ ವಾರ ಉತ್ತಮ ಮೊತ್ತದ ಹೂಡಿಕೆಗಳು ಸಿಕ್ಕಿವೆ. ಕಳೆದ ವಾರಕ್ಕೆ ಹೋಲಿಸಿದರೆ ಭಾರತೀಯ ಸ್ಟಾರ್ಟಪ್​ಗಳು ಈ ವಾರ ಶೇ. 226ರಷ್ಟು ಹೆಚ್ಚು ಫಂಡಿಂಗ್ ಪಡೆಯುವಲ್ಲಿ ಸಫಲವಾಗಿವೆ. ವರದಿ ಪ್ರಕಾರ ಕಳೆದ ವಾರ ಭಾರತೀಯ ಸ್ಟಾರ್ಟಪ್​ಗಳಿಗೆ 19 ಡೀಲ್​ಗಳು ಸಿಕ್ಕಿದ್ದವು. ಒಟ್ಟು 182.62 ಮಿಲಿಯನ್ ಡಾಲರ್​ನಷ್ಟು ಫಂಡಿಂಗ್ ದೊರಕಿತ್ತು. ಈ ವಾರ ಸಿಕ್ಕಿರುವ ಫಂಡಿಂಗ್ ಮೊತ್ತ 596 ಮಿಲಿಯನ್ ಡಾಲರ್. ಅಂದರೆ ಸುಮಾರು 5,000 ಕೋಟಿ ರೂಗೂ ಅಧಿಕ ಬಂಡವಾಳವನ್ನು ಸಂಗ್ರಹಿಸಲು ಸ್ಟಾರ್ಟಪ್​ಗಳು ಯಶಸ್ವಿಯಾಗಿವೆ.

ನವೆಂಬರ್ 18ರಿಂದ ಹಿಡಿದು ನ. 23ರವರೆಗೆ 23ಕ್ಕೂ ಹೆಚ್ಚು ಸ್ಟಾರ್ಟಪ್​ಗಳು ಹೂಡಿಕೆಗಳನ್ನು ಪಡೆಯುವಲ್ಲಿ ಸಫಲವಾಗಿವೆ. ಇದರಲ್ಲಿ ಆರಂಭಿಕ ಹಂತದ ಒಪ್ಪಂದಗಳ ಸಂಖ್ಯೆ 15 ಇದ್ದರೆ, ಮುಂದುವರಿದ ಭಾಗವಾಗಿ 6 ಒಪ್ಪಂದಗಳು ಒಳಗೊಂಡಿವೆ.

ಇದನ್ನೂ ಓದಿ: ಉಚಿತವಾಗಿ ಆಧಾರ್ ಅಪ್​ಡೇಟ್ ಮಾಡಲು ಡಿಸೆಂಬರ್​ನಲ್ಲಿ ಗಡುವು; ಅದಾದ ಬಳಿಕ ಮುಂದೆ ಹೇಗೆ? ಇಲ್ಲಿದೆ ವಿವರ

ಕ್ವಿಕ್ ಕಾಮರ್ಸ್ ಕಂಪನಿಯಾದ ಜೆಪ್ಟೋವೊಂದೇ 350 ಮಿಲಿಯನ್ ಡಾಲರ್ ಫಂಡಿಂಗ್ ಪಡೆದಿದೆ. ಮೋತಿಲಾಲ್ ಓಸ್ವಾಲ್ ಅವರ ಖಾಸಗಿ ನಿಧಿಯಿಂದ ಹಣಕಾಸು ನೆರವು ಸಿಕ್ಕಿದೆ. ಕಳೆದ 5 ತಿಂಗಳಿಂದ ಝೆಪ್ಟೋ ಸಂಸ್ಥೆ ಪಡೆದಿರುವ ಒಟ್ಟು ಹೂಡಿಕೆ 1.3 ಬಿಲಿಯನ್ ಡಾಲರ್​ನಷ್ಟಾಗಿದೆ.

ಇನ್ನು, ಈ ವಾರ ಅತಿಹೆಚ್ಚು ಫಂಡಿಂಗ್ ಪಡೆದ ಕಂಪನಿಗಳಲ್ಲಿ ಎರಡನೇ ಸ್ಥಾನವು ಹೆಲ್ತ್​ಕಾರ್ಟ್​ಗೆ ಹೋಗುತ್ತದೆ. ಕ್ರಿಸ್​ಕ್ಯಾಪಿಟಲ್ ಮತ್ತು ಮೋತಿಲಾಲ್ ಓಸ್ವಾಲ್ ಆಲ್ಟರ್ನೇಟಿವ್ಸ್ ಸಂಸ್ಥೆಗಳು ಹೆಲ್ತ್​ಕಾರ್ಟ್​ಗೆ ಈ ವಾರ 153 ಮಿಲಿಯನ್ ಡಾಲರ್ ಫಂಡಿಂಗ್ ಮಾಡಿವೆ.

ಇನ್ಷೂರೆನ್ಸ್ ತಂತ್ರಜ್ಞಾನ ಪ್ಲಾಟ್​ಫಾರ್ಮ್ ಆಗಿರುವ ಝಾಪ್ಪರ್ ಸಂಸ್ಥೆ 25 ಮಿಲಿಯನ್ ಡಾಲರ್ ಫಂಡಿಂಗ್ ಪಡೆದಿದೆ. ಡೈರಿ ಸೆಕ್ಟರ್​ನಲ್ಲಿರುವ ದೂಧ್​ವಾಲೆ ಫಾರ್ಮ್ಸ್ ಎನ್ನುವ ಸಂಸ್ಥೆ 3 ಮಿಲಿಯನ್ ಫಂಡಿಂಗ್ ಪಡೆದಿದೆ.

ಇದನ್ನೂ ಓದಿ: ಸರ್ಕಾರಿ ನೌಕರರಿಗೆ ಸುಗ್ಗಿ; ಕನಿಷ್ಠ ಮೂಲವೇತನ 51,000 ರೂ ದಾಟಲಿದೆಯಾ? ಇಲ್ಲಿದೆ ಮಾಹಿತಿ

ಈ ವಾರ ಭಾರತೀಯ ಸ್ಟಾರ್ಟಪ್​ಗಳು ಮಾಡಿಕೊಂಡಿರುವ ಡೀಲ್​ಗಳಲ್ಲಿ ಸಿಂಹಪಾಲು ಬೆಂಗಳೂರಿನ ಸ್ಟಾರ್ಟಪ್​ಗಳಿಗೇ ಸಿಕ್ಕಿದೆ. 15 ಡೀಲ್​ಗಳಲ್ಲಿ ಹತ್ತು ಬೆಂಗಳೂರಿನ ಕಂಪನಿಗಳಿಂದ ಆಗಿವೆ. ದೆಹಲಿ, ಹೈದರಾಬಾದ್, ಚೆನ್ನೈ, ಮುಂಬೈ ಮತ್ತು ಪುಣೆಯ ಒಂದೊಂದು ಸ್ಟಾರ್ಟಪ್​ಗಳಿಗೆ ತಲಾ ಒಂದು ಡೀಲ್ ಸಿಕ್ಕಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us