ಉಚಿತವಾಗಿ ಆಧಾರ್ ಅಪ್​ಡೇಟ್ ಮಾಡಲು ಡಿಸೆಂಬರ್​ನಲ್ಲಿ ಗಡುವು; ಅದಾದ ಬಳಿಕ ಮುಂದೆ ಹೇಗೆ? ಇಲ್ಲಿದೆ ವಿವರ

Free Aadhaar update period: ಹತ್ತು ವರ್ಷಗಳಿಗೂ ಹಿಂದೆ ಆಧಾರ್ ಕಾರ್ಡ್ ಮಾಡಿಸಿರುವವರು ಒಮ್ಮೆಯಾದರೂ ಅಪ್​ಡೇಟ್ ಮಾಡಬೇಕು. ಇದು ಆಧಾರ್​ನಲ್ಲಿರುವ ಮಾಹಿತಿ ಅಪ್​ಟುಡೇಟ್ ಆಗಿರಲು ಯುಐಡಿಎಐ ತೆಗೆದುಕೊಂಡಿರುವ ಕ್ರಮ. ಆನ್​ಲೈನ್​ನಲ್ಲಿ ಆಧಾರ್​ನ ಡೆಮಾಗ್ರಾಫಿಕ್ ಮಾಹಿತಿಯನ್ನು ಅಪ್​ಡೇಟ್ ಮಾಡಬಹುದು. ಉಚಿತವಾಗಿ ಮಾಡಲು ಡಿಸೆಂಬರ್ 14ರವರೆಗೆ ಕಾಲಾವಕಾಶ ಇದೆ.

ಉಚಿತವಾಗಿ ಆಧಾರ್ ಅಪ್​ಡೇಟ್ ಮಾಡಲು ಡಿಸೆಂಬರ್​ನಲ್ಲಿ ಗಡುವು; ಅದಾದ ಬಳಿಕ ಮುಂದೆ ಹೇಗೆ? ಇಲ್ಲಿದೆ ವಿವರ
ಆಧಾರ್ ಕೇಂದ್ರ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 24, 2024 | 10:59 AM

ಆಧಾರ್ ಕಾರ್ಡ್​ನಲ್ಲಿರುವ ನಿಮ್ಮ ಹೆಸರು ಇತ್ಯಾದಿ ವಿವರ ಬಹಳ ಮುಖ್ಯ. ಹಲವರ ಆಧಾರ್ ಕಾರ್ಡ್​ನಲ್ಲಿ ಹೆಸರಿನಲ್ಲಿ ತಪ್ಪುಗಳಾಗಿರಬಹುದು. ಅಕ್ಷರದೋಷ ಆಗಿರಬಹುದು. ವಿಳಾಸ ಬದಲಾಗಿರಬಹುದು. ಆಧಾರ್​ನಲ್ಲಿ ಇವುಗಳ ಮಾಹಿತಿ ಸರಿಯಾಗಿ ಇದ್ದರೆ ಅನುಕೂಲವಾಗುತ್ತದೆ. ಹೆಸರು, ಜನ್ಮದಿನಾಂಕ, ವಿಳಾಸ ಇತ್ಯಾದಿ ಡೆಮೋಗ್ರಾಫಿಕ್ ಮಾಹಿತಿಯನ್ನು ಆನ್​ಲೈನ್​ನಲ್ಲಿ ಪರಿಷ್ಕರಿಸಲು ಸಾಧ್ಯವಿದೆ. ಸದ್ಯಕ್ಕೆ ಯಾವುದೇ ಶುಲ್ಕ ಇಲ್ಲದೇ ಆನ್​ಲೈನ್​ನಲ್ಲಿ ಅಪ್​ಡೇಟ್ ಮಾಡಬಹುದು. ಈ ಉಚಿತ ಸೇವೆ ಡಿಸೆಂಬರ್ 14ರವರೆಗೂ ಇದೆ.

ಗಡುವು ಮುಗಿದ ಬಳಿಕ ಆಧಾರ್ ಅಪ್​ಡೇಟ್ ಮಾಡಬಹುದಾ?

10 ವರ್ಷಗಳಿಂದ ಆಧಾರ್ ಅಪ್​ಡೇಟ್ ಮಾಡದೇ ಇರುವವರು, ಡೆಮಾಗ್ರಾಫಿಕ್ ಮಾಹಿತಿಯನ್ನು ಪರಿಷ್ಕರಿಸಬೇಕೆಂದು ಯುಐಡಿಎಐ ವಿನಂತಿಸಿದೆ. ಜನರ ಬಯೋಮೆಟ್ರಿಕ್ ಮತ್ತು ಡೆಮಾಗ್ರಾಫಿಕ್ ಮಾಹಿತಿ ಅಪ್​ಟುಡೇಟ್ ಆಗಿರಲಿ ಎಂಬ ಕಾರಣಕ್ಕೆ ಈ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಹೀಗಾಗಿ, ಕಳೆದ ಕೆಲ ತಿಂಗಳುಗಳಿಂದಲೂ ಆನ್​ಲೈನ್​ನಲ್ಲಿ ಆಧಾರ್ ಮಾಹಿತಿ ಪರಿಷ್ಕರಣೆಗೆ ಗಡುವು ವಿಸ್ತರಣೆ ಮಾಡುತ್ತಲೇ ಬರಲಾಗಿದೆ. ಈಗ ಡಿಸೆಂಬರ್ 14ರವರೆಗೂ ಕಾಲಾವಕಾಶ ವಿಸ್ತರಿಸಲಾಗಿದೆ.

ಇದನ್ನೂ ಓದಿ: ಬ್ರಿಟನ್ ಸೂಪರ್ ಪವರ್ ಆಗಿದ್ದ ಟೆಕ್ನಾಲಜಿಯಿಂದಲಾ? ಸೂಪರ್ ಪವರ್ ಆದ್ದರಿಂದ ತಂತ್ರಜ್ಞಾನ ಪಡೆಯಿತಾ?: ಪೂರ್ಣೇಂದು ಪ್ರಶ್ನೆ

2024ರ ಡಿಸೆಂಬರ್ 14ರ ಬಳಿಕವೂ ಆಧಾರ್ ಅಪ್​ಡೇಟ್ ಮಾಡಬಹುದು. ಆದರೆ, ಉಚಿತ ಇರುವುದಿಲ್ಲ. ಆನ್​ಲೈನ್​ನಲ್ಲಿ ಅಪ್​ಡೇಟ್ ಮಾಡಲೂ ನೀವು ಶುಲ್ಕ ತೆರಬೇಕಾಗುತ್ತದೆ. ಶುಲ್ಕ ಹೆಚ್ಚೇನೂ ಇರುವುದಿಲ್ಲ. ಸುಮಾರು 50 ರೂ ಆಸುಪಾಸಿನ ಶುಲ್ಕ ವಿಧಿಸಲಾಗುತ್ತದೆ.

ಆಧಾರ್ ಕೇಂದ್ರಕ್ಕೆ ಹೋಗಿಯೂ ಡೆಮಾಗ್ರಾಫಿಕ್ ಮಾಹಿತಿಯನ್ನು ಪರಿಷ್ಕರಿಸಬಹುದು. ಅಲ್ಲಿಯೂ ಒಂದು ಮಾಹಿತಿ ಬದಲಾವಣೆಗೆ 50 ರೂ ಶುಲ್ಕ ಪಡೆಯುತ್ತಾರೆ.

ಇದನ್ನೂ ಓದಿ: ಬ್ಯಾಂಕ್​ನಿಂದ ಕ್ಯಾಷ್ ಪಡೆದರೆ ತೆರಿಗೆ ಕಡಿತ ಆಗುತ್ತೆ… ನೀವು ತಿಳಿದಿರಲೇಬೇಕಾದ ನಿಯಮಗಳಿವು…

ಸಂಬಂಧಿತ ದಾಖಲೆಗಳ ಸ್ಕ್ಯಾನ್ಡ್ ಕಾಪಿ ಸಿದ್ಧವಿರಲಿ…

ಯುಐಡಿಎಐನ ಮೈ ಆಧಾರ್ ಪೋರ್ಟಲ್​ಗೆ ಹೋಗಿ ಮಾಹಿತಿ ಅಪ್​ಡೇಟ್ ಮಾಡಬಹುದು. ವಿಳಾಸ ಬದಲಿಸಿದ್ದರೆ ಹೊಸ ದಾಖಲೆಯ ಸ್ಕ್ಯಾನ್ಡ್ ಕಾಪಿ ಸಿದ್ಧವಿರಲಿ. ಹೆಸರು ಬದಲಾವಣೆ ಇದ್ದರೆ ಅದರ ಪ್ರೂಫ್ ದಾಖಲೆಯೂ ಜೊತೆಯಲ್ಲಿರಲಿ. ನೀವು ಪೋರ್ಟಲ್​ಗೆ ಲಾಗಿನ್ ಆಗಿ ಈ ಮಾಹಿತಿಯನ್ನು ಅಪ್​ಡೇಟ್ ಮಾಡಿ, ಸಂಬಂಧಿತ ದಾಖಲೆಗಳ ಸ್ಕ್ಯಾನ್ಡ್ ಕಾಪಿಯನ್ನೂ ಲಗತ್ತಿಸಬೇಕಾಗುತ್ತದೆ. ಆಗ ಆಧಾರ್ ಅಪ್​ಡೇಟ್ ಆಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ