ಇನ್ನೊಂದು ವರ್ಷದಲ್ಲಿ ಎರಡು ಪಟ್ಟು ಹೆಚ್ಚಲಿದೆಯಂತೆ ಬಿಟ್​ಕಾಯಿನ್ ಮೌಲ್ಯ; 2,00,000 ಡಾಲರ್ ಬೆಲೆ ಪಡೆಯಲಿದೆ ಈ ಕ್ರಿಪ್ಟೋಕರೆನ್ಸಿ

Cryptocurrency mania continues: ಕ್ರಿಪ್ಟೋಕರೆನ್ಸಿಗಳ ಬೆಲೆ, ಅದರಲ್ಲೂ ಬಿಟ್​ಕಾಯಿನ್ ಬೆಲೆ ಇತ್ತೀಚಿನ ದಿನಗಳಿಂದ ಬಹಳ ವೇಗವಾಗಿ ಹೆಚ್ಚುತ್ತಿದೆ. ಟ್ರಂಪ್ ಅಧಿಕಾರದ ಗದ್ದುಗೆಗೆ ಕೂರುವವರೆಗೂ ಮಾತ್ರವಲ್ಲ, ಇನ್ನೂ ಹಲವು ವರ್ಷ ಈ ಏರಿಕೆಯ ವೇಗ ಹೀಗೇ ಮುಂದುವರಿಯಲಿದೆ. ವರದಿಗಳ ಪ್ರಕಾರ 1,00,000 ಡಾಲರ್ ಸಮೀಪ ಇರುವ ಬಿಟ್​ಕಾಯಿನ್ ಬೆಲೆ 2030-33ರೊಳಗೆ 10 ಲಕ್ಷ ಡಾಲರ್ ಆಗುವ ಸಾಧ್ಯತೆ ಇದೆ.

ಇನ್ನೊಂದು ವರ್ಷದಲ್ಲಿ ಎರಡು ಪಟ್ಟು ಹೆಚ್ಚಲಿದೆಯಂತೆ ಬಿಟ್​ಕಾಯಿನ್ ಮೌಲ್ಯ; 2,00,000 ಡಾಲರ್ ಬೆಲೆ ಪಡೆಯಲಿದೆ ಈ ಕ್ರಿಪ್ಟೋಕರೆನ್ಸಿ
ಹೂಡಿಕೆಯ ಸಾಂದರ್ಭಿಕ ಚಿತ್ರ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 24, 2024 | 12:30 PM

ನವದೆಹಲಿ, ನವೆಂಬರ್ 24: ಅಮೆರಿಕನ್ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಗೆದ್ದ ಬಳಿಕ ಕ್ರಿಪ್ಟೋಕರೆನ್ಸಿಗಳಿಗೆ ಇನ್ನಿಲ್ಲದ ಬೇಡಿಕೆ ಬಂದಿದೆ. ಮಂದಗತಿಯಲ್ಲಿ ಏರಿಕೆ ಆಗುತ್ತಿದ್ದ ಕ್ರಿಪ್ಟೋಗಳ ಬೆಲೆಯ ಹೆಚ್ಚಳ ವೇಗ ಸಖತ್ತಾಗಿ ಏರಿದೆ. ವಿಶ್ವದ ಅತಿದೊಡ್ಡ ಕ್ರಿಪ್ಟೋಕರೆನ್ಸಿಯಾದ ಬಿಟ್​ಕಾಯಿನ್ ಅಂತೂ ವಿಶ್ವದ ಅಗ್ರಮಾನ್ಯ ಸಂಪತ್ತುಗಳ ಪೈಕಿ ಒಂದೆನಿಸಿದೆ. ಇವತ್ತು ಒಂದು ಬಿಟ್​ಕಾಯಿನ್ ಬೆಲೆ 98,191.82 ಡಾಲರ್ ಇದೆ. ನಿನ್ನೆ ಶನಿವಾರ ಒಂದು ಹಂತದಲ್ಲಿ ಅದರ ಬೆಲೆ 99,916 ಡಾಲರ್​ವರೆಗೂ ಹೋಗಿತ್ತು. ಒಂದು ಲಕ್ಷ ಡಾಲರ್ ಮೈಲಿಗಲ್ಲು ಇನ್ನೇನು ಮುಟ್ಟೇಬಿಟ್ಟಿತು ಎನಿಸಿತ್ತು. ಸೋಮವಾರದ ಟ್ರೇಡಿಂಗ್​ನಲ್ಲಿ ಆ ಮೈಲಿಗಲ್ಲು ಮುಟ್ಟುವುದು ನಿಶ್ಚಿತ.

ಇದಕ್ಕಿಂತ ಅಚ್ಚರಿಯ ಸುದ್ದಿಯೊಂದಿದೆ. ಮುಂಬರುವ ವರ್ಷಗಳಲ್ಲಿ ಬಿಟ್​ಕಾಯಿನ್ ಹಾಗೂ ಇತರ ಕ್ರಿಪ್ಟೋಕರೆನ್ಸಿಗಳ ಮೌಲ್ಯ ಬಹಳ ವೇಗವಾಗಿ ಹೆಚ್ಚಲಿದೆಯಂತೆ. ಬರ್ನ್​ಸ್ಟೀನ್ ಎನ್ನುವ ಗ್ಲೋಬಲ್ ಇನ್ವೆಸ್ಟ್​ಮೆಂಟ್ ಸಂಸ್ಥೆಯ ಪ್ರಕಾರ 2025ರಲ್ಲಿ ಒಂದು ಬಿಟ್​ಕಾಯಿನ್ ಬೆಲೆ 2,00,000 ಡಾಲರ್ ತಲುಪಬಹುದು. 2029ರಲ್ಲಿ ಅದರ ಬೆಲೆ ಬರೋಬ್ಬರಿ 5,00,000 ಡಾಲರ್ ಆಗಬಹುದು. ಅಷ್ಟೇ ಅಲ್ಲ, 2033ರಲ್ಲಿ 10 ಲಕ್ಷ ಡಾಲರ್ ಆಗಬಹುದು. ಅಂದರೆ ಇನ್ನು, 9 ವರ್ಷದಲ್ಲಿ ಬಿಟ್​ಕಾಯಿನ್ ಬೆಲೆ ಕನಿಷ್ಠ 10 ಪಟ್ಟಾದರೂ ಹೆಚ್ಚಲಿದೆ.

ಇದನ್ನೂ ಓದಿ: ಭಾರತದ ಸ್ಟಾರ್ಟಪ್​ಗಳಿಗೆ ಈ ವಾರ ಫಂಡಿಂಗ್ ಸುಗ್ಗಿ; ಶೇ. 226ರಷ್ಟು ಫಂಡಿಂಗ್ ಹೆಚ್ಚಳ

2033ರಲ್ಲಿ ಒಂದು ಬಿಟ್​ಕಾಯಿನ್ ಅನ್ನು ಹೊಂದಲು ನೀವು ಎಂಟು ಕೋಟಿಗೂ ಅಧಿಕ ರುಪಾಯಿ ತೆರಬೇಕಾಗಬಹುದು. ಆರ್ಕ್ ಇನ್ವೆಸ್ಟ್ ಎನ್ನುವ ಸಂಸ್ಥೆಯ ಸಿಇಒ ಕ್ಯಾಥೀ ವುಡ್ ಪ್ರಕಾರ ಬಿಟ್​​ಕಾಯಿನ್ 10 ಲಕ್ಷ ಡಾಲರ್ ಮೌಲ್ಯವನ್ನು 2030ರಲ್ಲೇ ಮುಟ್ಟಬಹುದಂತೆ.

ಬಿಟ್​ಕಾಯಿನ್​ಗೆ ಈ ಪರಿ ಕ್ರೇಜ್ ಹುಟ್ಟುತ್ತಿರುವುದ್ಯಾಕೆ?

ಹಿಂದೆಲ್ಲಾ ಕ್ರಿಪ್ರೋಕರೆನ್ಸಿಗಳ ಬಗ್ಗೆ ಅನುಮಾನದ ದೃಷ್ಟಿಕೋನ ಹೊಂದಿದ್ದ ಡೊನಾಲ್ಡ್ ಟ್ರಂಪ್ ಕಳೆದ ಒಂದೆರಡು ವರ್ಷದಿಂದ ಅಭಿಪ್ರಾಯ ಬದಲಿಸಿಕೊಂಡಿದ್ದಾರೆ. ಕ್ರಿಪ್ಟೋಕರೆನ್ಸಿಗಳ ಬಗ್ಗೆ ಅವರು ಹೆಚ್ಚು ಒಲವು ಬೆಳೆಸಿಕೊಂಡಿದ್ದಾರೆ. ಈಗ ಅವರು ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಕ್ರಿಪ್ಟೋ ಜಗತ್ತಿನ ಉತ್ಸಾಹ ಹೆಚ್ಚಿಸಿದೆ. ಕ್ರಿಪ್ಟೋದ ಪ್ರಬಲ ಸಮರ್ಥಕ ಮತ್ತು ಪ್ರಚಾರಕರೆನಿಸಿರುವ ಇಲಾನ್ ಮಸ್ಕ್ ಅವರೂ ಸರ್ಕಾರದ ಭಾಗವಾಗಿರುವುದು ಉತ್ಸಾಹ ಇಮ್ಮಡಿಗೊಳ್ಳುವಂತೆ ಮಾಡಿದೆ.

ಇದನ್ನೂ ಓದಿ: ಬ್ಯಾಂಕ್​ನಿಂದ ಕ್ಯಾಷ್ ಪಡೆದರೆ ತೆರಿಗೆ ಕಡಿತ ಆಗುತ್ತೆ… ನೀವು ತಿಳಿದಿರಲೇಬೇಕಾದ ನಿಯಮಗಳಿವು…

ಈ ಮೇಲಿನ ಒಂದು ಕಾರಣವಾದರೆ, ಮತ್ತೊಂದು ಕಾರಣವು ಬಿಟ್​ಕಾಯಿನ್ ಬೆಲೆ ಜಾರಿಗೆ ಬರಲಿರುವುದು. ಪೆನ್​ಸಿಲ್ವೇನಿಯಾದ ಬಿಟ್​ಕಾಯಿನ್ ಸ್ಟ್ರಾಟಿಜಿಕ್ ರಿಸರ್ವ್ ಕಾಯ್ದೆ, ಬಿಟ್​ಕಾಯಿನ್ ಬಿಲ್ ಅನ್ನು ಜಾರಿಗೊಳಿಸುವ ಸಾಧ್ಯತೆ ಇದೆ. ಇದೇನಾದರೂ ಆದಲ್ಲಿ ಡಾಲರ್ ಹಾಗೂ ಚಿನ್ನವನ್ನು ಮೀಸಲು ಸಂಪತ್ತಾಗಿ ಇಟ್ಟುಕೊಳ್ಳುವಂತೆ ಬಿಟ್​ಕಾಯಿನ್ ಅನ್ನೂ ಸರ್ಕಾರ ಶೇಖರಿಸಿಕೊಳ್ಳಬಹುದು. ಹೀಗಾಗಿ, ಬಿಟ್​ಕಾಯಿನ್​ಗೆ ಇನ್ನಿಲ್ಲದ ಬೇಡಿಕೆ ಇದೆ. ಇತರ ಕ್ರಿಪ್ಟೋಕರೆನ್ಸಿಗಳಿಗಿಂತ ಬಿಟ್​ಕಾಯಿನ್​ನ ಬೆಲೆ ಹೆಚ್ಚು ವೇಗದಲ್ಲಿ ಹೆಚ್ಚುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ