
ನವದೆಹಲಿ, ಜೂನ್ 10: ಅಮೆರಿಕದ ಲಾಸ್ ಏಂಜಲಿಸ್ನಲ್ಲಿ ತೀವ್ರ ಹಿಂಸಾಚಾರ ಮತ್ತು ಪ್ರತಿಭಟನೆಗಳು ಸಂಭವಿಸಿದವು. ವಲಸಿಗರನ್ನು ನಿರ್ಬಂಧಿಸುವ ಸರ್ಕಾರದ ಕ್ರಮದ ವಿರುದ್ಧ ನಡೆದ ಪ್ರತಿಭಟನೆ ಹಿಂಸಾರೂಪ ಪಡೆದಿತ್ತು. ಅದಾದ ಬೆನ್ನಲ್ಲೇ ಎಲ್ಲಾ ವಲಸಿಗ ಸಮುದಾಯಗಳನ್ನು ಒಂದೇ ತಕ್ಕಡಿಯಲ್ಲಿ ಇಡುವ ಪ್ರಯತ್ನ ನಡೆದಿದೆ. ಭಾರತೀಯ ಸಮುದಾಯದವರನ್ನೂ ಹಿಂಸಾಚಾರಿಗಳೆಂದು ಹೀಯ್ಯಾಳಿಸಲಾಗುತ್ತಿದೆ. ಇದನ್ನು ಅಲ್ಲಗಳೆಯುವ ಎಕ್ಸ್ ಪೋಸ್ಟ್ವೊಂದು ವೈರಲ್ ಆಗಿದೆ. ಭಾರತೀಯ ಸಮುದಾಯದವರು ದೊಂಬಿ ನಡೆಸಲ್ಲ, ಕೆಲಸ ಮಾಡುತ್ತಾರೆ ಎಂದು ಈ ಪೋಸ್ಟ್ ಹೇಳುತ್ತದೆ.
‘ಭಾರತೀಯರು ಅಮೆರಿಕಕ್ಕೆ ಬರುವದು ಕಷ್ಟಪಟ್ಟು ದುಡಿಯಲೇ ಹೊರತು ದೊಂಬಿ ನಡೆಸಲು ಅಲ್ಲ. ಕಾರು ಸುಡುವುದು, ಮಳಿಗೆ ದೋಚುವುದು, ನಗರ ಹಾಳು ಮಾಡುವುದು ಈ ಕೆಲಸಗಳನ್ನು ಯಾವ ಭಾರತೀಯರೂ ಮಾಡುವುದಿಲ್ಲ. ಪ್ಯಾಲೆಸ್ಟೀನ್, ಸೊಮಾಲಿಯಾ, ಪಾಕಿಸ್ತಾನ ಮತ್ತಿತರ ಮುಸ್ಲಿಂ ದೇಶಗಳಿಂದ ಬಂದ ಆ್ಯಕ್ಟಿವಿಸ್ಟ್ಗಳು ಹಾಗು ಕೆಲ ಮೆಕ್ಸಿಕನ್ನರು ಹಿಂದಾಚಾರ, ದೊಂಬಿ, ಗಲಾಟೆಗಳಲ್ಲಿ ತೊಡಗುತ್ತಾರೆ’ ಎಂದು ಡೊನಾಲ್ಡೋ ಟ್ರಂಪೋ ಅಪ್ಡೇಟ್ ಎನ್ನುವ ಎಕ್ಸ್ ಅಕೌಂಟ್ನಿಂದ ಪೋಸ್ಟ್ ಮಾಡಲಾಗಿದೆ.
ಇದನ್ನೂ ಓದಿ: ಚೀನಾದ ಸಾಲದ ಕುಣಿಕೆಗೆ ಸಿಕ್ಕಿರೋದು ಪಾಕಿಸ್ತಾನ, ಶ್ರೀಲಂಕಾ ಮಾತ್ರವಲ್ಲ, ಇಲ್ಲಿದೆ ಟಾಪ್-10 ಪಟ್ಟಿ
ಈ ಪೋಸ್ಟ್ 11 ಲಕ್ಷ ವೀಕ್ಷಣೆ ಪಡೆದಿದೆ. ಸಾವಿರಕ್ಕೂ ಹೆಚ್ಚು ಜನರು ಪ್ರತಿಕ್ರಿಯಿಸಿದ್ದಾರೆ. ಬಹಳ ಜನರು ಈ ಪೋಸ್ಟ್ಗೆ ಬೆಂಬಲ ನೀಡಿದ್ದಾರೆ. ಭಾರತೀಯ ಸಮುದಾಯದವರು ಶ್ರಮ ಜೀವಿಗಳೆನ್ನುವ ಅಭಿಪ್ರಾಯಕ್ಕೆ ಹೆಚ್ಚಿನ ಜನರು ಸಹಮತ ವ್ಯಕ್ತಪಡಿಸಿದ್ದಾರೆ.
‘ಹೊರ ದೇಶಗಳಲ್ಲಿರುವ ಬಹುತೇಕ ಭಾರತೀಯರು ಪರಿಶ್ರಮದಿಂದ ಕೆಲಸ ಮಾಡಲು, ತಮ್ಮ ಕುಟುಂಬಕ್ಕೆ ಬೆಂಬಲ ನೀಡಲು, ಶಾಂತಿಯಿಂದ ಜೀವನ ನಡೆಸಲು ಆದ್ಯತೆ ಕೊಡುತ್ತಾರೆ. ಇನೊಬ್ಬರಿಗೆ ತೊಂದರೆ ಕೊಡಬಾರದು, ಇನ್ನೊಬ್ಬರಿಂದ ತೊಂದರೆಗೆ ಸಿಲುಕಬಾರದು ಎನ್ನುವ ಮೌಲ್ಯಗಳೊಂದಿಗೆ ತಾವು ಬೆಳೆದಿದ್ದೇವೆ ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ.
2023ರ ಅಂಕಿ ಅಂಶದ ಪ್ರಕಾರ, ಅಮೆರಿಕದಲ್ಲಿರುವ ಭಾರತೀಯ ಸಮುದಾಯದವರ ಸಂಖ್ಯೆ 52 ಲಕ್ಷ ಇದೆ. ಈಗ ಇನ್ನೂ ಹೆಚ್ಚಿರಬಹುದು. ಅಮೆರಿಕದಲ್ಲಿರುವ ಅತಿಹೆಚ್ಚು ಏಷ್ಯನ್ ಮೂಲದವರಲ್ಲಿ ಚೀನಾ ಬಿಟ್ಟರೆ ಭಾರತದವರೇ ಹೆಚ್ಚು. ಅಮೆರಿಕ ಜನಸಂಖ್ಯೆಯ ಶೇ. 1.5ರಷ್ಟಿದ್ದರೂ ಅಮೆರಿಕದ ಆದಾಯ ತೆರಿಗೆಯಲ್ಲಿ ಶೇ. 5-6ರಷ್ಟನ್ನು ಭಾರತೀಯರೇ ಪಾವತಿಸುತ್ತಾರೆ.
ಇದನ್ನೂ ಓದಿ: ಡಿಶ್, ಕೇಬಲ್ ಟಿವಿ ಉದ್ಯಮದ ಸಂಕಷ್ಟ: ಕೆಲಸ ಕಳೆದುಕೊಂಡ 5.77 ಲಕ್ಷ ಮಂದಿ
ಅಮೆರಿಕದ ಶೇ. 60ರಷ್ಟು ಹೋಟೆಲ್ಗಳನ್ನು ಭಾರತೀಯರು ನಡೆಸುತ್ತಾರೆ. ಅಮೆರಿಕದ 16 ಫಾರ್ಚೂನ್-500 ಕಂಪನಿಗಳಿಗೆ ಭಾರತೀಯರು ಸಿಇಒಗಳಾಗಿದ್ದಾರೆ. ಓದಲು ಬರುವ ವಿದೇಶೀ ವಿದ್ಯಾರ್ಥಿಗಳಲ್ಲಿ ಶೇ. 25ರಷ್ಟು ಭಾರತೀಯರೇ ಇದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ