AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಳೆದ ವರ್ಷ ಭಾರತದಿಂದ 860 ಬಿಲಿಯನ್ ಡಾಲರ್ ರಫ್ತು; ಇದು ಹೊಸ ದಾಖಲೆ

India's cumulative exports reach 860 billion USD: 2025-26ರಲ್ಲಿ ಭಾರತದ ಸರಕು ಮತ್ತು ಸೇವೆಗಳ ಒಟ್ಟು ರಫ್ತು 860 ಬಿಲಿಯನ್ ಡಾಲರ್​​ನಷ್ಟಿದೆ. ಇದು ವಾಣಿಜ್ಯ ಸಚಿವಾಲಯ ಬಿಡುಗಡೆ ಮಾಡಿದ ದತ್ತಾಂಶದಿಂದ ತಿಳಿಬಂದಿದೆ. ಹಿಂದಿನ ಹಣಕಾಸು ವರ್ಷದಕ್ಕೆ ಹೋಲಿಸಿದರೆ ಒಟ್ಟೂ ರಫ್ತಿನಲ್ಲಿ ಶೇ. 4.22 ಹೆಚ್ಚಳ ಆಗಿದೆ. ಇದು ಈವರೆಗಿನ ಹೊಸ ದಾಖಲೆ ಎನಿಸಿದೆ.

ಕಳೆದ ವರ್ಷ ಭಾರತದಿಂದ 860 ಬಿಲಿಯನ್ ಡಾಲರ್ ರಫ್ತು; ಇದು ಹೊಸ ದಾಖಲೆ
ರಫ್ತುImage Credit source: Shutterstock
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 15, 2026 | 5:46 PM

Share

ನವದೆಹಲಿ, ಏಪ್ರಿಲ್ 15: ಕಳೆದ ಹಣಕಾಸು ವರ್ಷದಲ್ಲಿ (2025-26) ಭಾರತದ ಒಟ್ಟು ರಫ್ತು (cumulative exports) 860.09 ಬಿಲಿಯನ್ ಡಾಲರ್ ಆಗಿದೆ. ಹಿಂದಿನ ವರ್ಷವಾದ 2024-25ರಲ್ಲಿ 825.26 ಬಿಲಿಯನ್ ಡಾಲರ್ ರಫ್ತು ದಾಖಲಾಗಿತ್ತು. ಅದಕ್ಕೆ ಹೋಲಿಸಿದರೆ 2025-26ರಲ್ಲಿ ರಫ್ತು ಶೇ. 4.22ರಷ್ಟು ಹೆಚ್ಚಳ ಆಗಿದೆ. ಸ್ವತಂತ್ರ ಭಾರತದ ಇತಿಹಾಸದಲ್ಲೇ ಯಾವ ಹಣಕಾಸು ವರ್ಷದಲ್ಲೂ ದಾಖಲಾದ ಅತ್ಯಧಿಕ ರಫ್ತು ಪ್ರಮಾಣ ಇದಾಗಿದೆ. ಇದರಲ್ಲಿ ಸರಕು ಮತ್ತು ಸೇವೆ ಎರಡೂ ಒಳಗೊಂಡಿವೆ.

‘ಭಾರತದ ಒಟ್ಟಾರೆ ರಫ್ತು ಹೊಸ ದಾಖಲೆ ಮಟ್ಟಕ್ಕೆ ಏರಿದೆ. 2025-26ರ ಹಣಕಾಸು ವರ್ಷದಲ್ಲಿ ಒಟ್ಟೂ ಸರಕು ಮತ್ತು ಸೇವೆಗಳ ರಫ್ತು 860.09 ಬಿಲಿಯನ್ ಡಾಲರ್ ಇರಬಹುದು ಎಂದು ಅಂದಾಜಿಸಲಾಗಿದೆ. 2024-25ರಲ್ಲಿ 825.26 ಬಿಲಿಯನ್ ಡಾಲರ್ ರಫ್ತಾಗಿತ್ತು. ಶೇ. 4.22ರಷ್ಟು ರಫ್ತು ಏರಿಕೆ ಆಗಿದೆ. ಜಾಗತಿಕ ವ್ಯಾಪಾರದಲ್ಲಿ ಭಾರತದ ಉಪಸ್ಥಿತಿ ಮತ್ತಷ್ಟು ಬಲಗೊಂಡಿದೆ’ ಎಂದು ಕೇಂದ್ರ ವಾಣಿಜ್ಯ ಇಲಾಖೆ ಟ್ವೀಟ್ ಮಾಡಿದೆ.

ಇದನ್ನೂ ಓದಿ: ಹಾರ್ಮುಜ್ ನಂತರ ಮಲಕ್ಕಾ ಜಲಸಂಧಿ ಮೇಲೆ ಅಮೆರಿಕ ಕಣ್ಣು; ಭಾರತದ ಬಗಲಿನಲ್ಲೇ ದೊಡ್ಡ ಅಪಾಯದ ಬೀಸುಗತ್ತಿ

2025-26ರಲ್ಲಿ ಭಾರತದ ಸರಕು ರಫ್ತು (Mercantile exports) 441.78 ಬಿಲಿಯನ್ ಡಾಲರ್ ಇದೆ. ಹಿಂದಿನ ವರ್ಷದಲ್ಲಿ ಅದು 437.70 ಬಿಲಿಯನ್ ಡಾಲರ್​ನಷ್ಟು ಇತ್ತು. ಸರಕುಗಳ ರಫ್ತು ಶೇ. 0.93ರಷ್ಟು ಹೆಚ್ಚಿದೆ. ಭಾರತ ರಫ್ತು ಮಾಡಿರುವ ಸರಕುಗಳಲ್ಲಿ ಪ್ರಮುಖವಾದುದು ಪೆಟ್ರೋಲಿಯ ಉತ್ಪನ್ನಗಳು, ಎಂಜಿನಿಯರಿಂಗ್ ಸರಕುಗಳು, ಕಲ್ಲಿದ್ದಲು, ಖನಿಜ, ಇತರ ಅದಿರುಗಳು, ಸಂಸ್ಕರಿತಿ ಖನಿಜಗಳು, ಕರಕುಶಲ ವಸ್ತುಗಳು ಇತ್ಯಾದಿ ಸೇರಿವೆ.

ಮಾರ್ಚ್​ನಲ್ಲಿ ಸರಕುಗಳ ವ್ಯಾಪಾರ ಅಂತರ ಕಡಿಮೆ

ಮಾರ್ಚ್ ತಿಂಗಳಲ್ಲಿ ಭಾರತದ ಸರಕು ವ್ಯಾಪಾರ ಅಂತರ, ಅಂದರೆ ಟ್ರೇಡ್ ಡೆಫಿಸಿಟ್ 20.98 ಬಿಲಿಯನ್ ಡಾಲರ್​ಗೆ ಇಳಿದಿದೆ. ಫೆಬ್ರುವರಿಯಲ್ಲಿ 36.61 ಬಿಲಿಯನ್ ಡಾಲರ್​ಗಳಷ್ಟಿದ್ದ ಸರಕುಗಳ ರಫ್ತು ಮಾರ್ಚ್​ನಲ್ಲಿ 38.92 ಬಿಲಿಯನ್ ಡಾಲರ್​ಗೆ ಏರಿದೆ. ಸರಕುಗಳ ಆಮದು 63.71 ಬಿಲಿಯನ್ ಡಾಲರ್​ನಿಂದ 59.9 ಬಿಲಿಯನ್ ಡಾಲರ್​ಗೆ ತಗ್ಗಿದೆ.

ಇದನ್ನೂ ಓದಿ: ಜಾಗತಿಕ ಬಿಕ್ಕಟ್ಟುಗಳ ನಡುವೆಯೂ ಭಾರತದ ಉತ್ತಮ ಆರ್ಥಿಕ ಬೆಳವಣಿಗೆ ಸಾಧ್ಯತೆ: ಐಎಂಎಫ್ ಅಂದಾಜು

ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ನಡುವೆಯೂ ಮಾರ್ಚ್ ತಿಂಗಳಲ್ಲಿ ಭಾರತ ಉತ್ತಮ ವಹಿವಾಟುಗಳನ್ನು ನಡೆಸಿರುವುದು ಗಮನಾರ್ಹ ಸಂಗತಿ. ಆದರೆ, ಬಿಕ್ಕಟ್ಟು ಹೀಗೆಯೇ ಮುಂದುವರಿದರೆ ಮುಂಬರುವ ದಿನಗಳಲ್ಲಿ 2025-26ರ ಮಟ್ಟದ ವ್ಯಾಪಾರವನ್ನು ನಿರೀಕ್ಷಿಸಲು ಕಷ್ಟವಾಗಬಹುದು ಎನ್ನಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ