
ನವದೆಹಲಿ, ನವೆಂಬರ್ 15: ಅಕ್ಟೋಬರ್ ತಿಂಗಳಲ್ಲಿ ಭಾರತದ ಒಟ್ಟು ರಫ್ತು (ಸರಕು ಹಾಗೂ ಸೇವೆಗಳು ಸೇರಿದಂತೆ) ಶೇ. 29.9ರಷ್ಟು ಹೆಚ್ಚಳಗೊಂಡಿದೆ. ಏರಿಕೆಯಲ್ಲಿ ಹೊಸ ಮೈಲಿಗಲ್ಲು ಸಾಧಿಸಿದೆ. ಈ ದಾಖಲೆಯ ಏರಿಕೆಯೊಂದಿಗೆ ಭಾರತದ ಅಕ್ಟೋಬರ್ ತಿಂಗಳ ಒಟ್ಟು ರಫ್ತು 89.99 ಬಿಲಿಯನ್ ಡಾಲರ್ ಮುಟ್ಟಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಇದು 69.27 ಬಿಲಿಯನ್ ಡಾಲರ್ ಇತ್ತು.
ಇದರಲ್ಲಿ ಸರಕು ರಫ್ತು (Merchandise exports) ಸುಮಾರು 49.47 ಬಿಲಿಯನ್ ಡಾಲರ್ ಹಾಗೂ ಸೇವಾ ರಫ್ತು (Services exports) ಸುಮಾರು 40.51 ಬಿಲಿಯನ್ ಡಾಲರ್ ತಲುಪಿದೆ.
ರಫ್ತಿನಲ್ಲಿ ಉಂಟಾದ ಈ ಗಮನಾರ್ಹ ಏರಿಕೆಯಿಂದಾಗಿ ಭಾರತದ ಒಟ್ಟು ವ್ಯಾಪಾರ ಕೊರತೆಯು (Trade Deficit Narrows) ಇಳಿಕೆಯಾಗಿದ್ದು, ಅಕ್ಟೋಬರ್‌ನಲ್ಲಿ ಟ್ರೇಡ್ ಡೆಫಿಸಿಟ್ 20.09 ಬಿಲಿಯನ್ ಡಾಲರ್ಗೆ ತಗ್ಗಿದೆ. ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಇದು 25.15 ಬಿಲಿಯನ್ ಡಾಲರ್ ಇತ್ತು.
ಇದನ್ನೂ ಓದಿ: ಆಗಸದಿಂದ ವೇಗವಾಗಿ ಬಂದ ಸ್ಟಾರ್ಶಿಪ್ ರಾಕೆಟ್ ಅನ್ನು ಹಿಡಿದು ಹೊಸ ಇತಿಹಾಸ ಸೃಷ್ಟಿಸಿದ ಸ್ಪೇಸ್ಎಕ್ಸ್
ಒಂದೆಡೆ ಭಾರತದ ಒಟ್ಟು ರಫ್ತು 89.99 ಬಿಲಿಯನ್ ಡಾಲರ್ ಇದ್ದರೆ, ಒಟ್ಟು ಆಮದು 94.42 ಬಿಲಿಯನ್ ಡಾಲರ್ನಿಂದ 110.07 ಬಿಲಿಯನ್ ಡಾಲರ್ಗೆ ಏರಿದೆ. ಇದರಿಂದಾಗಿ ಆಮದು ಮತ್ತು ರಫ್ತು ನಡುವಿನ ಅಂತರವಾಗಿರುವ ಟ್ರೇಡ್ ಡೆಫಿಸಿಟ್ 20.09 ಬಿಲಿಯನ್ ಡಾಲರ್ ಆಗಿದೆ.
ಭಾರತದ ಸರ್ವಿಸ್ ಸೆಕ್ಟರ್ನಿಂದ ಅಕ್ಟೋಬರ್‌ನಲ್ಲಿ 40.51 ಬಿಲಿಯನ್ ಡಾಲರ್ನಷ್ಟು ರಫ್ತಾಗಿದೆ. ಇನ್ನು, ಆಮದು ಪ್ರಮಾಣ 20.72 ಬಿಲಿಯನ್ ಡಾಲರ್ ಇದೆ. ಈ ಸೆಕ್ಟರ್ನಲ್ಲಿ ಆಮದಿಗಿಂತ ಎರಡು ಪಟ್ಟು ರಫ್ತು ಕಂಡಿದೆ ಭಾರತ.
ಇದನ್ನೂ ಓದಿ: ಚೆಕ್‌ನಲ್ಲಿ ಅಮೌಂಟ್ ಪಕ್ಕ ಓನ್ಲಿ ಎಂದು ಬರೆಯುವುದರ ಹಿಂದಿದೆ ಈ ಕಾರಣ
ಭಾರತದ ಒಟ್ಟು 50 ಪ್ರಮುಖ ರಫ್ತು ಗಮ್ಯಸ್ಥಾನಗಳಲ್ಲಿ (Export destinations) 43 ದೇಶಗಳಲ್ಲಿ ಸಕಾರಾತ್ಮಕ ಬೆಳವಣಿಗೆ ದಾಖಲಾಗಿದ್ದು, ಜಾಗತಿಕ ಆರ್ಥಿಕ ಅನಿಶ್ಚಿತತೆಗಳ ನಡುವೆಯೂ ಭಾರತೀಯ ಉದ್ಯಮಗಳು ಬಲವಾದ ಸಾಧನೆ ತೋರಿವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ