
ನವದೆಹಲಿ, ಜುಲೈ 13: ವಂದೇ ಭಾರತ್ ರೈಲುಗಳಿಗಿಂತಲೂ ಎರಡು ಮೂರು ಪಟ್ಟು ಹೆಚ್ಚು ವೇಗವಾಗಿ ಚಲಿಸಬಲ್ಲ ಬುಲೆಟ್ ರೈಲು ಭಾರತದಲ್ಲಿ ಸಂಚರಿಸುವ ಕಾಲ ಸಮೀಪಿಸುತ್ತಿದೆ. ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ನೀಡಿರುವ ಮಾಹಿತಿ ಪ್ರಕಾರ ಮುಂದಿನ ಸ್ವಾತಂತ್ರ್ಯೋತ್ಸವದಂದು ಭಾರತದಲ್ಲಿ ಮೊದಲ ಬುಲೆಟ್ ರೈಲು ಸಂಚಾರ (Bullet Train) ಆರಂಭವಾಗಬಹುದು. ಅಂದರೆ, 2027ರ ಆಗಸ್ಟ್ 15ರಂದು ಮುಂಬೈ ಮತ್ತು ಅಹ್ಮದಾಬಾದ್ ನಡುವೆ ಹೈ ಸ್ಪೀಡ್ ರೈಲು ಕಾರ್ಯಾಚರಣೆ (High-speed rail project) ಹಂತ ಹಂತವಾಗಿ ಶುರುವಾಗಬಹುದು.
ಮುಂಬೈ-ಅಹ್ಮದಾಬಾದ್ ನಡುವಿನ 508 ಕಿಮೀ ಹೈಸ್ಪೀಡ್ ಕಾರಿಡಾರ್ನಲ್ಲಿ ಮೊದಲಿಗೆ ಸೂರತ್-ಬಿಲಿಮೋರಾ ಮಾರ್ಗ ಮೊದಲಿಗೆ ಸಿದ್ಧವಾಗಲಿದೆ. 2027ರ ಆಗಸ್ಟ್ 15ರಂದು ಇಲ್ಲಿ ಸಂಚಾರ ಶುರುವಾಗಲಿದೆ. ಬಳಿಕ ವಾಪಿ-ಸೂರತ್, ವಾಪಿ-ಅಹ್ಮದಾಬಾದ್, ಅಹ್ಮದಾಬಾದ್-ಠಾಣೆ ಮಾರ್ಗಗಳನ್ನು ಹಂತ ಹಂತವಾಗಿ ಸಂಚಾರಕ್ಕೆ ಸಿದ್ಧಪಡಿಸಲಾಗುತ್ತದೆ. ಈ ಮೂಲಕ ಮುಂಬೈ-ಅಹಮದಾಬಾದ್ ಪೂರ್ಣಗೊಳ್ಳುತ್ತದೆ. ಇದು 2029ರ ವೇಳೆ ಆಗುವ ನಿರೀಕ್ಷೆ ಇದೆ. ಈ ಹೈಸ್ಪೀಡ್ ಬುಲೆಟ್ ರೈಲು 320 ಕಿಮೀ ವೇಗದಲ್ಲಿ ಚಲಿಸಬಲ್ಲುದು. ಮುಂಬೈ ಮತ್ತು ಅಹ್ಮದಾಬಾದ್ ನಡುವಿನ 508 ಕಿಮೀ ದೂರವನ್ನು ಈ ರೈಲು ಕೇವಲ 2 ಗಂಟೆಯಲ್ಲಿ ಕ್ರಮಿಸಬಲ್ಲುದು.
ಇದನ್ನೂ ಓದಿ: ಹೈಸ್ಪೀಡ್ ಯುಗಕ್ಕೆ ಭಾರತ ಸಜ್ಜು: 2027 ಆಗಸ್ಟ್ 15 ರಿಂದ ದೇಶದ ಮೊದಲ ಬುಲೆಟ್ ರೈಲು ಸಂಚಾರ ಆರಂಭ
ಭಾರತದಲ್ಲಿ ಪ್ರಸ್ತುತ ಹೈಸ್ಪೀಡ್ ರೈಲು (High-Speed Rail – HSR) ಯೋಜನೆಗಳನ್ನು ದೇಶದ ವಿವಿಧ ವಲಯಗಳಲ್ಲಿ ಆರ್ಥಿಕ ಮತ್ತು ಪ್ರವಾಸೋದ್ಯಮ ಪ್ರಗತಿಗಾಗಿ ಯೋಜಿಸಲಾಗಿದೆ. ಸದ್ಯ ಜಾರಿ ಹಂತದಲ್ಲಿರುವುದು ಮುಂಬೈ-ಅಹ್ಮದಾಬಾದ್ ಕಾರಿಡಾರ್. ಇದರ ಶೇ. 80 ಕಾಮಗಾರಿ ಮುಗಿದಿದೆ. ಜಪಾನ್ನ ಶಿಂಕೆನ್ಸೆನ್ ತಂತ್ರಜ್ಞಾನದ ನೆರವಿನೊಂದಿಗೆ ಈ ಕಾರಿಡಾರ್ ನಿರ್ಮಿಸಲಾಗುತ್ತಿದೆ.
ಇತ್ತೀಚಿನ ಕೇಂದ್ರ ಬಜೆಟ್‌ಗಳಲ್ಲಿ ಸರ್ಕಾರವು ದೇಶಾದ್ಯಂತ ಹೊಸ ಕಾರಿಡಾರ್‌ಗಳಿಗೆ ಅನುಮೋದನೆ ನೀಡಿದ್ದು, ಇವುಗಳ ವಿವರವಾದ ಯೋಜನಾ ವರದಿ (DPR – Detailed Project Report) ಸಿದ್ಧತೆ ಅಥವಾ ಅಂತಿಮ ಪರಿಶೀಲನೆಯ ವಿವಿಧ ಹಂತಗಳಲ್ಲಿವೆ. ಇದರಲ್ಲಿ ಬೆಂಗಳೂರಿನ ಎರಡು ಬುಲೆಟ್ ರೈಲು ಯೋಜನೆಗಳು ಸೇರಿವೆ.
ಇದನ್ನೂ ಓದಿ: ರಕ್ಷಣಾ ನೀತಿಯಲ್ಲಿ ದೊಡ್ಡ ಬದಲಾವಣೆ; ಕ್ಷಿಪಣಿ ತಯಾರಿಕೆಗೆ ಖಾಸಗಿಯವರಿಗೂ ಸಿಗಲಿದೆ ಅವಕಾಶ
ಈ ಕೆಳಗಿನ ಮಾರ್ಗಗಳನ್ನು ರೈಲ್ವೆಯ ದೀರ್ಘಾವಧಿ ರಾಷ್ಟ್ರೀಯ ರೈಲು ಯೋಜನೆ (National Rail Plan) ಅಡಿಯಲ್ಲಿ ಪ್ರಸ್ತಾಪಿಸಲಾಗಿದ್ದು, ಇವುಗಳು ಪ್ರಾಥಮಿಕ ಹಂತದಲ್ಲಿವೆ:
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 8:39 am, Mon, 13 July 26