
ನವದೆಹಲಿ, ಡಿಸೆಂಬರ್ 16: ಕೆಲ ದೇಶಗಳಲ್ಲಿ ವಾರಕ್ಕೆ ನಾಲ್ಕು ದಿನ ಕೆಲಸ, ಮೂರು ದಿನ ರಜೆಯ ವ್ಯವಸ್ಥೆ ಇದೆ. ಭಾರತದಲ್ಲೂ ಇದೀಗ ಇಂಥ ಅವಕಾಶ ನೀಡಲಾಗುತ್ತಿದೆ. ಸರ್ಕಾರ ಜಾರಿಗೆ ತರುತ್ತಿರುವ ಹೊಸ ಕಾರ್ಮಿಕ ಸಂಹಿತೆಯಲ್ಲಿ (Labour Code) ಕಾರ್ಮಿಕರಿಗೆ (Employees) ಸುಲಭವಾಗಿರುವ ಕಾನೂನುಗಳನ್ನು ರೂಪಿಸಲಾಗಿದೆ. ಕೆಲಸ ಮಾಡುವ ಅವಧಿ ವಿಚಾರದಲ್ಲಿ ಪೂರ್ಣ ಫ್ಲೆಕ್ಸಿಬಿಲಿಟಿ ಕೊಡಲಾಗಿದೆ.
ಹೊಸ ಲೇಬರ್ ಕೋಡ್ ಪ್ರಕಾರ ವಾರದಲ್ಲಿ ಒಬ್ಬ ಕಾರ್ಮಿಕನಿಂದ 48 ಗಂಟೆವರೆಗೆ ಮಾತ್ರ ಕೆಲಸ ಮಾಡಿಸಬೇಕು. ದಿನದ ವರ್ಕಿಂಗ್ ಅವರ್ಗೆ ಮಿತಿ ಹಾಕಿಲ್ಲ. ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಈ ಬಗ್ಗೆ ಸ್ಪಷ್ಟನೆ ನೀಡಿದೆ. ಅಂದರೆ, ಕಾರ್ಮಿಕರು ದಿನದಲ್ಲಿ ಎಷ್ಟು ಹೊತ್ತು ಬೇಕಾದರೂ ಕೆಲಸ ಮಾಡಬಹದು. ವಾರದಲ್ಲಿ 48 ಗಂಟೆ ಕೆಲಸದ ಮಿತಿ ಮಾತ್ರ ಇರುತ್ತದೆ.
ಲೇಬರ್ ಕೋಡ್ನಲ್ಲಿ ಕಾರ್ಮಿಕರಿಗೆ ಫ್ಲೆಕ್ಸಿಬಿಲಿಟಿ ಇರಲಿದೆ. ದಿನಕ್ಕೆ 12 ಗಂಟೆಯಂತೆ ನಾಲ್ಕು ದಿನ ಕೆಲಸ ಮಾಡಿದರೆ ಒಟ್ಟು ಕೆಲಸದ ಅವಧಿ 48 ಗಂಟೆ ಆಗುತ್ತದೆ. ಉಳಿದ ಮೂರು ದಿನ ಪೇಯ್ಡ್ ಹಾಲಿಡೇ ಪಡೆಯಬಹುದು. ಮೂರು ದಿನ ವೀಕಾಫ್ ಸಿಕ್ಕಂತಾಗುತ್ತದೆ.
ಇದನ್ನೂ ಓದಿ: ಸತ್ತ ಆರ್ಥಿಕತೆ ಎಂದಿದ್ದ ಟ್ರಂಪ್ಗೆ ತಕ್ಕ ಉತ್ತರ; ನವೆಂಬರ್ನಲ್ಲಿ ಅಮೆರಿಕಕ್ಕೆ ಭಾರತದ ರಫ್ತು ಭರ್ಜರಿ ಏರಿಕೆ
ಊರಿಗೆ ಹೋಗುವವರು, ವೀಕೆಂಡ್ ಎಂಜಾಯ್ ಮಾಡುವವರಿಗೆ ಇದು ಒಳ್ಳೆಯ ಅವಕಾಶ ಮಾಡಿಕೊಡುತ್ತದೆ.
ಕಾರ್ಮಿಕ ಸಚಿವಾಲಯದ ಸ್ಪಷ್ಟನೆ ಇದು
The Labour Codes do not extend weekly working hours. Flexibility allows 12-hour shifts for up to 4 days a week, with total hours capped at 48 and overtime paid at double the wage rate.#ShramevJayate pic.twitter.com/2o7oEXA3Km
— Ministry of Labour & Employment, GoI (@LabourMinistry) December 15, 2025
ನೀವು ದಿನಕ್ಕೆ 8 ತಾಸು ಮಾತ್ರವೇ ಕೆಲಸ ಮಾಡಬಲ್ಲಿರಾದರೆ ವಾರದಲ್ಲಿ ಆರು ದಿನ ಕೆಲಸ ಮಾಡಬೇಕಾಗುತ್ತದೆ. ಒಂದು ದಿನ ಮಾತ್ರ ವೀಕಾಫ್ ಸಿಗುತ್ತದೆ. ದಿನಕ್ಕೆ 10 ಗಂಟೆ ಕೆಲಸ ಮಾಡಿದರೆ ವಾರದಲ್ಲಿ ಎರಡು ದಿನ ವೀಕಾಫ್ ಪಡೆಯಬಹುದು. ಒಬ್ಬ ಕಾರ್ಮಿಕ ತನ್ನ ವೀಕೆಂಡ್ ಅಗತ್ಯಗಳಿಗೆ ತಕ್ಕಂತೆ ಕೆಲಸದ ಅವಧಿಯನ್ನು ನಿರ್ಧರಿಸಿಕೊಳ್ಳಲು ಅವಕಾಶ ಸಿಗಬಹುದು.
ಒಂದು ವೇಳೆ ಕಂಪನಿಗಳು ಕಾರ್ಮಿಕರಿಂದ ಹೆಚ್ಚು ಹೊತ್ತು ಕೆಲಸ ಮಾಡಿಸಿಕೊಳ್ಳುವ ಅನಿವಾರ್ಯತೆ ಇದ್ದಲ್ಲಿ ಆಗ ಓಟಿ ನೀಡಬೇಕು. ಎರಡು ಪಟ್ಟು ಹೆಚ್ಚು ವೇತನ ಕೊಡಬೇಕು ಎಂದು ಹೊಸ ಕಾರ್ಮಿಕ ಸಂಹಿತೆಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ.
ಇದನ್ನೂ ಓದಿ: 2025ರಲ್ಲಿ 44,000 ಹೊಸ ಸ್ಟಾರ್ಟಪ್ಗಳು; ಮಾನ್ಯ ಪಡೆದ ನವೋದ್ದಿಮೆಗಳ ಸಂಖ್ಯೆ ಎರಡು ಲಕ್ಷಕ್ಕೂ ಅಧಿಕ
ಗಮನಿಸಬೇಕಾದ ಆಂಶಗಳೆಂದರೆ, ಹೊಸ ಲೇಬರ್ ಕೋಡ್ನಲ್ಲಿ ವಾರಕ್ಕೆ 48 ಗಂಟೆಗಳ ಕೆಲಸದ ಮಿತಿ ಎಂದು ಸ್ಪಷ್ಟಪಡಿಸಲಾಗಿದೆ. ಹಾಗೆಯೇ, ದಿನಕ್ಕೆ 12 ಗಂಟೆಗಳವರೆಗೂ ಕೆಲಸ ಮಾಡಿಸುವ ಅವಕಾಶವನ್ನು ಕಂಪನಿಗಳಿಗೆ ನೀಡಲಾಗಿದೆ. ಇಲ್ಲಿ ದಿನಕ್ಕೆ 12 ಗಂಟೆ ಕೆಲಸ ಮಾಡಿಸಿ 3 ದಿನ ವೀಕಾಫ್ ಕೊಡುವುದು, ಅಥವಾ ದಿನಕ್ಕೆ 8 ಗಂಟೆ ಕೆಲಸ ಮಾಡಿಸಿ ಒಂದು ದಿನ ವೀಕಾಫ್ ಕೊಡುವುದು ಇದನ್ನು ಉದ್ಯೋಗಿಗಳೊಂದಿಗೆ ಸಮಾಲೋಚಿಸಿ ಕಂಪನಿ ನಿರ್ಧರಿಸಬಹುದು. ಉದ್ಯೋಗಿಗಳು ಸ್ವತಂತ್ರವಾಗಿ ಈ ನಿರ್ಧಾರ ತೆಗೆದುಕೊಳ್ಳಲು ಆಗುವುದಿಲ್ಲ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ