AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸತ್ತ ಆರ್ಥಿಕತೆ ಎಂದಿದ್ದ ಟ್ರಂಪ್​ಗೆ ತಕ್ಕ ಉತ್ತರ; ನವೆಂಬರ್​ನಲ್ಲಿ ಅಮೆರಿಕಕ್ಕೆ ಭಾರತದ ರಫ್ತು ಭರ್ಜರಿ ಏರಿಕೆ

India's great exports rise in November: 2025ರ ನವೆಂಬರ್ ತಿಂಗಳಲ್ಲಿ ಭಾರತದ ಸರಕುಗಳ ರಫ್ತು ಶೇ. 19.38ರಷ್ಟು ಏರಿಕೆ ಆಗಿ 38.13 ಬಿಲಿಯನ್ ಡಾಲರ್ ಮುಟ್ಟಿದೆ. ಅದೇ ವೇಳೆ, ಆಮದು ಕಡಿಮೆಗೊಂಡಿದೆ. ಪರಿಣಾಮವಾಗಿ ಟ್ರೇಡ್ ಡೆಫಿಸಿಟ್ 24.53 ಬಿಲಿಯನ್ ಡಾಲರ್​ಗೆ ತಗ್ಗಿದೆ. ಭಾರತವನ್ನು ಡೆಡ್ ಎಕನಾಮಿ ಎಂದು ಕರೆದಿದ್ದ ಡೊನಾಲ್ಡ್ ಟ್ರಂಪ್​ಗೆ ನವೆಂಬರ್ ತಿಂಗಳ ಡಾಟಾ ಉತ್ತರ ಕೊಟ್ಟಿದೆ. ಆ ದೇಶಕ್ಕೆ ಭಾರತದಿಂದ ರಫ್ತು ಏರಿಕೆ ಆಗಿದೆ.

ಸತ್ತ ಆರ್ಥಿಕತೆ ಎಂದಿದ್ದ ಟ್ರಂಪ್​ಗೆ ತಕ್ಕ ಉತ್ತರ; ನವೆಂಬರ್​ನಲ್ಲಿ ಅಮೆರಿಕಕ್ಕೆ ಭಾರತದ ರಫ್ತು ಭರ್ಜರಿ ಏರಿಕೆ
ವ್ಯಾಪಾರ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Dec 16, 2025 | 12:18 PM

Share

ನವದೆಹಲಿ, ಡಿಸೆಂಬರ್ 16: ಭಾರತದ ಆರ್ಥಿಕತೆ (Economy) ಮತ್ತು ಆಂತಾರಾಷ್ಟ್ರೀಯ ವ್ಯವಹಾರಗಳು ಉತ್ತಮವಾಗಿದೆ ಎನ್ನುವುದಕ್ಕೆ ನಿದರ್ಶನವೆಂಬಂತೆ ನವೆಂಬರ್ ತಿಂಗಳ ವ್ಯಾಪಾರ ದತ್ತಾಂಶ ಭರ್ಜರಿಯಾಗಿದೆ. ಅಕ್ಟೋಬರ್​ನಲ್ಲಿ ಶೇ. 11.8ರಷ್ಟು ಕುಸಿದಿದ್ದ ಸರಕುಗಳ ರಫ್ತು (India’s Merchandise Exports) ನವೆಂಬರ್ ತಿಂಗಳಲ್ಲಿ ಶೇ. 19.38ರಷ್ಟು ಏರಿ 38.13 ಬಿಲಿಯನ್ ಡಾಲರ್ ಆಗಿದೆ. ಇದು ಒಂದು ತಿಂಗಳಲ್ಲಿ ಭಾರತದಿಂದ ರಫ್ತಾದ ಸರಕುಗಳ ಮೌಲ್ಯ. 2022ರ ಜೂನ್ ನಂತರ ಯಾವುದೇ ತಿಂಗಳಲ್ಲಿ ಶೇಕಡವಾರು ಲೆಕ್ಕದಲ್ಲಿ ಭಾರತದ ರಫ್ತು ಕಂಡ ಅತಿಹೆಚ್ಚಳ ಇದಾಗಿದೆ. ಕಳೆದ 10 ವರ್ಷದಲ್ಲಿ ಯಾವುದೇ ನವೆಂಬರ್ ತಿಂಗಳಲ್ಲಿ ಭಾರತದ ರಫ್ತು 38 ಬಿಲಿಯನ್ ಡಾಲರ್ ದಾಟಿರಲಿಲ್ಲ ಎಂದು ಹೇಳಲಾಗುತ್ತಿದೆ.

ಅದೇ ವೇಳೆ, ಭಾರತದ ಆಮದು ತಗ್ಗಿದೆ. ಶೇ. 1.88ರಷ್ಟು ಕಡಿಮೆಗೊಂಡು 62.66 ಬಿಲಿಯನ್ ಡಾಲರ್ ಮುಟ್ಟಿದೆ. ಇದರೊಂದಿಗೆ ಟ್ರೇಡ್ ಡೆಫಿಸಿಟ್ ಅಥವಾ ರಫ್ತು ಮತ್ತು ಆಮದು ನಡುವಿನ ಅಂತರ (trade deficit) 24.53 ಬಿಲಿಯನ್ ಡಾಲರ್​ಗೆ ಇಳಿದಿದೆ. ಇದು ಕಳೆದ ಐದು ತಿಂಗಳಲ್ಲೇ ಕಂಡ ಅತ್ಯಂತ ಕಡಿಮೆ ಟ್ರೇಡ್ ಡೆಫಿಸಿಟ್ ಎನಿಸಿದೆ. ನವೆಂಬರ್​ನಲ್ಲಿ ಕಡಿಮೆಗೊಂಡಿರುವ ಆಮದಿನಲ್ಲಿ ಚಿನ್ನದ ಪಾತ್ರ ಹೆಚ್ಚಿದೆ. ಭಾರತ ಚಿನ್ನದ ಆಮದನ್ನು ಕಡಿಮೆಗೊಳಿಸಿದ್ದರಿಂದ ಒಟ್ಟಾರೆ ಆಮದು ತಗ್ಗಲು ಸಾಧ್ಯವಾಗಿದೆ.

ಭಾರತವನ್ನು ಡೆಡ್ ಎಕನಾಮಿ ಎಂದು ಹಂಗಿಸಿದ್ದ ಟ್ರಂಪ್​ಗೆ ತಕ್ಕ ಉತ್ತರ

ಕೆಲ ತಿಂಗಳ ಹಿಂದೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತವನ್ನು ಡೆಡ್ ಎಕನಾಮಿ (ಸತ್ತ ಆರ್ಥಿಕತೆ) ಎಂದು ಕುಚೋದ್ಯ ಮಾಡಿದ್ದರು. ಆದರೆ, ಅಮೆರಿಕ ಶೇ 50ರಷ್ಟು ಟ್ಯಾರಿಫ್ ಹಾಕಿದ್ದರೂ ನವೆಂಬರ್ ತಿಂಗಳಲ್ಲಿ ಆ ದೇಶಕ್ಕೆ ಭಾರತದ ರಫ್ತಿನಲ್ಲಿ ಶೇ. 22ರಷ್ಟು ಏರಿದೆ.

ಇದನ್ನೂ ಓದಿ: 2025ರಲ್ಲಿ 44,000 ಹೊಸ ಸ್ಟಾರ್ಟಪ್​ಗಳು; ಮಾನ್ಯ ಪಡೆದ ನವೋದ್ದಿಮೆಗಳ ಸಂಖ್ಯೆ ಎರಡು ಲಕ್ಷಕ್ಕೂ ಅಧಿಕ

ದತ್ತಾಂಶದ ಪ್ರಕಾರ 2024ರ ನವೆಂಬರ್​ನಲ್ಲಿ ಅಮೆರಿಕಕ್ಕೆ ಭಾರತದಿಂದ ಆದ ರಫ್ತು 5.70 ಬಿಲಿಯನ್ ಡಾಲರ್ ಇತ್ತು. ಈ ನವೆಂಬರ್​ನಲ್ಲಿ ಅದು 6.98 ಬಿಲಿಯನ್ ಡಾಲರ್​ಗೆ ಏರಿದೆ. ಅಕ್ಟೋಬರ್​ನಲ್ಲಿ ಇಳಿಕೆ ಕಂಡಿದ್ದ ರಫ್ತು ಈಗ ತಿರುಗಿ ಎದ್ದಿದೆ. ಅಮೆರಿಕದ 50 ಪರ್ಸೆಂಟ್ ಟ್ಯಾರಿಫ್ ನಡುವೆಯೂ ಭಾರತದ ರಫ್ತು ಉತ್ತಮಗೊಂಡಿರುವುದು ಜಿಡಿಪಿ ಬೆಳವಣಿಗೆಗೆ ಪುಷ್ಟಿಕೊಡುವ ನಿರೀಕ್ಷೆ ಇದೆ.

ಚೀನಾಗೂ ಭಾರತದಿಂದ ರಫ್ತು ಹೆಚ್ಚಳ

ಭಾರತದ ರಫ್ತು ಅಮೆರಿಕಕ್ಕೆ ಮಾತ್ರವಲ್ಲ, ಹಲವು ದೇಶಗಳಿಗೂ ಹೆಚ್ಚಿದೆ. ಶೇಕಡಾವಾರ ಲೆಕ್ಕದಲ್ಲಿ ಸ್ಪೇನ್ ದೇಶಕ್ಕೆ ಭಾರತದ ರಫ್ತು ನವೆಂಬರ್​ನಲ್ಲಿ ಬರೋಬ್ಬರಿ 181.2ರಷ್ಟು ಏರಿದೆ. ಚೀನಾಗೆ ಶೇ. 90ರಷ್ಟು ರಫ್ತು ಹೆಚ್ಚಿಸಿದೆ ಭಾರತ. ಹಾಂಕಾಂಗ್, ಅಮೆರಿಕ ಹಾಗೂ ಯುಎಇ ದೇಶಗಳಿಗೂ ಭಾರತದ ರಫ್ತಿನಲ್ಲಿ ಗಮನಾರ್ಹ ಹೆಚ್ಚಳವಾಗಿದೆ.

ನವೆಂಬರ್​ನಲ್ಲಿ ಭಾರತದ ಸರಕುಗಳ ರಫ್ತಿನಲ್ಲಿ ಹೆಚ್ಚಳ

  • ಸ್ಪೇನ್: ಶೇ. 181.2
  • ಚೀನಾ: ಶೇ 90
  • ಹಾಂಕಾಂಗ್: ಶೇ. 35.5
  • ಅಮೆರಿಕ: ಶೇ. 22.6
  • ಯುಎಇ: ಶೇ 13.2

ಇದನ್ನೂ ಓದಿ: ವಿಐಗೆ ಸರ್ಕಾರದಿಂದ ನೆರವಿನ ಹಸ್ತ?; ಎಜಿಆರ್ ಬಾಕಿ ಪಾವತಿಯಲ್ಲಿ ಹಲವು ರಿಯಾಯಿತಿ?

ರಫ್ತು ಮೌಲ್ಯದಲ್ಲಿ ಭಾರತಕ್ಕೆ ಅಮೆರಿಕವೇ ಅತಿದೊಡ್ಡ ಮಾರುಕಟ್ಟೆಯಾಗಿದೆ. ನವೆಂಬರ್​ನಲ್ಲಿ ಅಮೆರಿಕಕ್ಕೆ ಭಾರತದಿಂದ ಶೇ. 6.98 ಬಿಲಿಯನ್ ಡಾಲರ್ ಮೌಲ್ಯದ ಸರಕುಗಳ ರಫ್ತಾಗಿದೆ. ಈ ಟಾಪ್-3ನಲ್ಲಿ 2 ಮತ್ತು 3ನೇ ಸ್ಥಾನ ಯುಎಇ ಮತ್ತು ಚೀನಾ ಇವೆ. ಭಾರತದಿಂದ ಯುಎಇಗೆ ಶೇ. 3.4 ಹಾಗೂ ಚೀನಾಗೆ ಶೇ 2.2 ಬಿಲಿಯನ್ ಡಾಲರ್ ರಫ್ತಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ