AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫುಯೆಲ್ ಚಾರ್ಜ್ ಹೆಚ್ಚಿಸಿದ ಇಂಡಿಗೋ; ವಿಮಾನ ಪ್ರಯಾಣ ದರವೂ ಏರಿಕೆ

ವಿಮಾನ ಇಂಧನ (ATF) ಬೆಲೆ ಏರಿಕೆಯಾದ ಹಿನ್ನೆಲೆಯಲ್ಲಿ ಇಂಡಿಗೋ (IndiGo) ಸಂಸ್ಥೆ ತನ್ನ ಪ್ರಯಾಣಿಕರಿಗೆ ಇಂಧನ ಶುಲ್ಕ ದರ ಹೆಚ್ಚಿಸಿದೆ. 350 ರೂವರೆಗೆ ಶುಲ್ಕ ಏರಿಕೆ ಆಗಿದೆ. ಹೊಸ ಪರಿಷ್ಕೃತ ದರ ಅಕ್ಟೋಬರ್ 6 ರಿಂದ ಜಾರಿಗೆ ಬರುತ್ತದೆ. ಟಿಕೆಟ್ ಮೇಲೆ ಈ ಫುಯೆಲ್ ಚಾರ್ಜ್ 375 ರೂನಿಂದ 1,300 ರೂವರೆಗೆ ಇರಲಿದೆ. ಇದರಿಂದ ವಿಮಾನ ಪ್ರಯಾಣಿಕರಿಗೆ ಟಿಕೆಟ್ ದರವೂ ಹೆಚ್ಚಳವಾಗುತ್ತದೆ.

ಫುಯೆಲ್ ಚಾರ್ಜ್ ಹೆಚ್ಚಿಸಿದ ಇಂಡಿಗೋ; ವಿಮಾನ ಪ್ರಯಾಣ ದರವೂ ಏರಿಕೆ
ಇಂಡಿಗೋ ವಿಮಾನImage Credit source: Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 05, 2026 | 2:34 PM

Share

ನವದೆಹಲಿ, ಅಕ್ಟೋಬರ್ 5: ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆಯಾದ ಇಂಡಿಗೋ (IndiGo), ವಿಮಾನ ಇಂಧನದ (ATF) ಬೆಲೆ ತೀವ್ರವಾಗಿ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ದೇಶೀಯ ಹಾಗೂ ಅಂತರರಾಷ್ಟ್ರೀಯ (International) ವಿಮಾನ ಪ್ರಯಾಣಿಕರ ಮೇಲಿನ ಇಂಧನ ಶುಲ್ಕವನ್ನು (Fuel Surcharge) ಹೆಚ್ಚಿಸುವುದಾಗಿ ಪ್ರಕಟಿಸಿದೆ. 2026ರ ಅಕ್ಟೋಬರ್ 6 ರ ಮಧ್ಯರಾತ್ರಿಯಿಂದ ಮಾಡುವ ಎಲ್ಲಾ ಹೊಸ ಬುಕಿಂಗ್‌ಗಳಿಗೆ ಈ ನೂತನ ದರಗಳು ಅನ್ವಯವಾಗಲಿದ್ದು, ಪ್ರಯಾಣಿಕರ ಟಿಕೆಟ್ ದರದಲ್ಲಿ ಏರಿಕೆಯಾಗಲಿದೆ.

ಪ್ರಯಾಣದ ದೂರಕ್ಕೆ ಅನುಗುಣವಾಗಿ ದೇಶೀಯ ವಿಮಾನ ಟಿಕೆಟ್‌ಗಳ ಮೇಲಿನ ಇಂಧನ ಸರ್ಚಾರ್ಜ್ ಅನ್ನು ₹100 ರಿಂದ ₹350 ರವರೆಗೆ ಹೆಚ್ಚಿಸಲಾಗಿದೆ. ಇಂಧನ ಶುಲ್ಕ ಈಗ ₹375 ರಿಂದ ₹1,300 ವರೆಗೂ ಇರಲಿದೆ. ಅಂತಾರಾಷ್ಟ್ರೀಯ ಫ್ಲೈಟ್​ಗಳ ಟಿಕೆಟ್​ಗಳಿಗೆ ಇಂಧನ ಶುಲ್ಕವನ್ನು ₹1,000 ನಿಂದ ₹10,000 ವರೆಗೆ ಹೆಚ್ಚಿಸಲಾಗಿದೆ.

ಇದನ್ನೂ ಓದಿ: ಈ ವಾರ ಜಿಎಸ್​ಟಿ ಕೌನ್ಸಿಲ್ ಸಭೆ; ಸಣ್ಣ ಇ-ಕಾಮರ್ಸ್ ವರ್ತಕರಿಗೆ ನಿರಾಳ ತರುವ ಕ್ರಮಗಳಿಗೆ ನಿರೀಕ್ಷೆ

ಇಂಡಿಗೋ ದೇಶೀಯ ಫ್ಲೈಟ್​ಗಳಿಗೆ ಪರಿಷ್ಕೃತ ಇಂಧನ ಶುಲ್ಕಗಳು

  • 500 ಕಿಮೀವರೆಗೆ: ₹375
  • 501ರಿಂದ 1,000 ಕಿಮೀವರೆಗೆ: ₹600
  • 1,001ರಿಂದ 1,500 ಕಿಮೀವರೆಗೆ: ₹900
  • 1,501ರಿಂದ 2,000 ಕಿಮೀವರೆಗೆ: ₹1,150
  • 2,000 ಕಿಮೀ ಮೇಲ್ಪಟ್ಟ ದೂರ: ₹1,3000

ಇದನ್ನೂ ಓದಿ: ಇಂದು ಆರ್​ಬಿಐ ಎಂಪಿಸಿ ಸಭೆ ಆರಂಭ; ರೆಪೋದರವನ್ನು ಶೇ. 5.50ಕ್ಕೆ ಏರಿಸುವ ನಿರೀಕ್ಷೆ; ಬಡ್ಡಿದರ ಹೆಚ್ಚಿದರೆ ಆಗುವ ಪರಿಣಾಮಗಳಿವು

ದರ ಏರಿಕೆಗೆ ಪ್ರಮುಖ ಕಾರಣ

ಮಧ್ಯಪ್ರಾಚ್ಯದಲ್ಲಿ ಎದುರಾಗಿರುವ ಜಾಗತಿಕ ರಾಜಕೀಯ ಉದ್ವಿಗ್ನತೆಯಿಂದಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಮತ್ತು ವಿಮಾನ ಇಂಧನ (ATF) ದರದಲ್ಲಿ ಶೇ. 13 ರಿಂದ ಶೇ. 14 ರಷ್ಟು ತೀವ್ರ ಏರಿಕೆಯಾಗಿದೆ. ವಿಮಾನಯಾನ ಸಂಸ್ಥೆಗಳ ಕಾರ್ಯಾಚರಣಾ ವೆಚ್ಚದಲ್ಲಿ (Operating Costs) ಶೇ. 40 ಕ್ಕೂ ಹೆಚ್ಚು ಭಾಗ ಇಂಧನಕ್ಕೇ ವೆಚ್ಚವಾಗುವುದರಿಂದ, ಈ ವೆಚ್ಚದ ಹೊರೆಯನ್ನು ಸರಿದೂಗಿಸಲು ಸಂಸ್ಥೆ ನಿರ್ಧರಿಸಿದೆ.

ಹಬ್ಬದ ಋತು (Festive Season) ಆರಂಭವಾಗುತ್ತಿರುವ ಸಮಯದಲ್ಲೇ ಇಂಡಿಗೋ ಸಂಸ್ಥೆಯು ಇಂಧನ ಸರ್ಚಾರ್ಜ್ ಹೆಚ್ಚಿಸಿರುವುದು ವಿಮಾನ ಪ್ರಯಾಣಿಕರ ಜೇಬಿಗೆ ಹೆಚ್ಚುವರಿ ಹೊರೆಯಾಗಿ ಪರಿಣಮಿಸಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More