Infosys: ವಾರಕ್ಕೆ ಮೂರು ದಿನ ಆಫೀಸ್​ಗೆ ಬಂದು ಕೆಲಸ ಮಾಡಬೇಕು: ಇನ್ಫೋಸಿಸ್ ಉದ್ಯೋಗಿಗಳಿಗೆ ಕಡ್ಡಾಯ

|

Updated on: Dec 12, 2023 | 5:24 PM

Mandatory Work from Office: ಒಂದು ವಾರದಲ್ಲಿ ಕನಿಷ್ಠ 3 ದಿನವಾದರೂ ಕಚೇರಿಗೆ ಬಂದು ಕೆಲಸ ಮಾಡುವುದು ಕಡ್ಡಾಯ ಎಂದು ಇನ್ಫೋಸಿಸ್ ಉದ್ಯೋಗಿಗಳಿಗೆ ನಿರ್ದೇಶನ ನೀಡಲಾಗಿದೆ. ಕೋವಿಡ್ ಬಂದ ಬಳಿಕ ಮೂರು ವರ್ಷ ಕಾಲ ವರ್ಕ್ ಫ್ರಂ ಹೋಮ್ ಅವಕಾಶ ಕೊಡಲಾಗಿದೆ. ಈಗ ಕಚೇರಿಗೆ ಬಂದು ಕೆಲಸ ಮಾಡಿ ಎಂದು ತಿಳಿಸಲಾಗಿದೆ. ಕೋವಿಡ್​ಗೆ ಮುಂಚೆ ಇನ್ಫೋಸಿಸ್​ನ ಕೆಲ ಉದ್ಯೋಗಿಗಳು ಒಂದು ತಿಂಗಳಲ್ಲಿ 9 ದಿನ ಮನೆಯಿಂದ ಕೆಲಸ ಮಾಡಲು ಅವಕಾಶ ಇತ್ತು. ಮುಂದೆ ಈ ಪದ್ಧತಿ ಮತ್ತೆ ಬರಬಹುದು.

Infosys: ವಾರಕ್ಕೆ ಮೂರು ದಿನ ಆಫೀಸ್​ಗೆ ಬಂದು ಕೆಲಸ ಮಾಡಬೇಕು: ಇನ್ಫೋಸಿಸ್ ಉದ್ಯೋಗಿಗಳಿಗೆ ಕಡ್ಡಾಯ
ಇನ್ಫೋಸಿಸ್
Follow us on

ಬೆಂಗಳೂರು, ಡಿಸೆಂಬರ್ 12: ಐಟಿ ದಿಗ್ಗಜ ಇನ್ಫೋಸಿಸ್ ಸಂಸ್ಥೆ (Infosys Technologies) ತನ್ನ ಉದ್ಯೋಗಿಗಳನ್ನು ಕಚೇರಿಗೆ ಕರೆಸಲು ಕಠಿಣ ಹೆಜ್ಜೆ ಇಡಲು ನಿರ್ಧರಿಸಿದೆ. ವಾರಕ್ಕೆ ಕನಿಷ್ಠ ಮೂರು ದಿನ ಕಚೇರಿಗೆ ಬಂದು ಕೆಲಸ ಮಾಡುವಂತೆ ಉದ್ಯೋಗಿಗಳಿಗೆ ಸೂಚನೆ ನೀಡಿದೆ. ಇನ್ಫೋಸಿಸ್​ನ ಬಹಳಷ್ಟು ಉದ್ಯೋಗಿಗಳು ಇನ್ನೂ ಕೂಡ ವರ್ಕ್ ಫ್ರಂ ಹೋಮ್ ಸವಲತ್ತು ಬಿಟ್ಟು ಕಚೇರಿಗೆ ಬರಲು ಒಪ್ಪಿಲ್ಲ. ಇವರನ್ನು ಕಚೇರಿಗೆ ಬರುವಂತೆ ಮ್ಯಾನೇಜರುಗಳು ಮಾಡಿರುವ ಬಹಳಷ್ಟು ಪ್ರಯತ್ನಗಳು ವರ್ಕೌಟ್ ಆಗಿಲ್ಲ. ಈ ನಿಟ್ಟಿನಲ್ಲಿ ಆರಂಭಿಕ ಕ್ರಮವಾಗಿ ವಾರಕ್ಕೆ ಮೂರು ದಿನ ವರ್ಕ್ ಫ್ರಂ ಆಫೀಸ್ ಮಾಡುವಂತೆ ಉದ್ಯೋಗಿಗಳಿಗೆ ಕಡ್ಡಾಯಪಡಿಸಿದೆ.

ಇನ್ಫೋಸಿಸ್​ನ ವಿವಿಧ ವಿಭಾಗಗಳ ಮುಖ್ಯಸ್ಥರು ಉದ್ಯೋಗಿಗಳಿಗೆ ವಾರಕ್ಕೆ ಮೂರು ದಿನ ಕಚೇರಿಗೆ ಬಂದು ಕೆಲಸ ಮಾಡುವಂತೆ ಸೂಚಿಸಿ ಇಮೇಲ್ ಕಳುಹಿಸಿದ್ದಾರೆ. ಕೋವಿಡ್ ಬಳಿಕ ಮೂರು ವರ್ಷ ಕಾಲ ಮನೆಯಲ್ಲಿ ಕೆಲಸ ಮಾಡಲು ಅವಕಾಶ ನೀಡಲಾಗಿದೆ. ಅದು ಸಾಕಷ್ಟಾಗಿದೆ. ಈಗ ಮೂರು ದಿನ ವರ್ಕ್ ಫ್ರಂ ಆಫೀಸ್ ಬಹಳ ಶೀಘ್ರದಲ್ಲೇ ಕಡ್ಡಾಯವಾಗಲಿದೆ ಎಂದು ಇಮೇಲ್​ನಲ್ಲಿ ತಿಳಿಸಲಾಗಿದೆ ಎಂದು ಎಕನಾಮಿಕ್ ಟೈಮ್ಸ್ ಪತ್ರಿಕೆಯ ವರದಿಯಲ್ಲಿ ಹೇಳಲಾಗಿದೆ.

ಇದನ್ನೂ ಓದಿ: ಐಫೋನ್​ಗಳಿಗೆ ಭಾರತದಲ್ಲೇ ಗೊರಿಲ್ಲಾ ಗ್ಲಾಸ್ ಉತ್ಪಾದನೆ; ಅಮೆರಿಕದ ಕಾರ್ನಿಂಗ್​ನಿಂದ ಫ್ಯಾಕ್ಟರಿ ಸ್ಥಾಪನೆ

ವೈದ್ಯಕೀಯ ಕಾರಣ ಹೊರತುಪಡಿಸಿ ಉದ್ಯೋಗಿಗಳು ವಾರಕ್ಕೆ ಮೂರು ದಿನ ಕಚೇರಿಗೆ ಬಂದು ಕೆಲಸ ಮಾಡುವುದು ಕಡ್ಡಾಯ ಮಾಡಲಾಗಿದೆ.

ಇತ್ತೀಚೆಗಷ್ಟೇ ಇನ್ಫೋಸಿಸ್​ನಲ್ಲಿ ಕೆಳಗಿನ ಹಂತದ ಉದ್ಯೋಗಿಗಳು ಒಂದು ತಿಂಗಳಲ್ಲಿ ಕನಿಷ್ಠ 10 ದಿನ ಕಚೇರಿಗೆ ಬಂದು ಕೆಲಸ ಮಾಡಬೇಕೆಂದು ನಿರ್ದೆಶನ ನೀಡಲಾಗಿತ್ತು. ಅದೇ ರೀತಿ ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಂ ಬಿಟ್ಟು ಕಚೇರಿಗೆ ಬರುವಂತೆ ಸಾಕಷ್ಟು ಬಾರಿ ಕೇಳಲಾಗಿತ್ತು.

ಕೋವಿಡ್​ಗೆ ಮುನ್ನವೂ ಕೆಲ ಇನ್ಫೋಸಿಸ್ ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಮ್​ಗೆ ಸೀಮಿತ ಸ್ವಾತಂತ್ರ್ಯ ಇತ್ತು. ಒಂದು ತಿಂಗಳಲ್ಲಿ 9 ದಿನ ಕಾಲ ಮನೆಯಿಂದ ಕೆಲಸ ಮಾಡಬಹುದಿತ್ತು. ಮುಂದಿನ ದಿನಗಳಲ್ಲಿ ಇದೇ ಪದ್ಧತಿ ಚಾಲನೆಗೆ ಬರಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ