ಭಾರತದ ಮಾರುಕಟ್ಟೆಯಿಂದ ಹೊರಹೋಗಲಿರುವ ಒಮಿಡ್ಯಾರ್ ನೆಟ್ವರ್ಕ್; ಏನು ಕಾರಣ?

Omidyar Network to Exit Indian Market: ಇಂಪ್ಯಾಕ್ಟ್ ಇನ್ವೆಸ್ಟಿಂಗ್ ಸಂಸ್ಥೆ ಒಮಿಡ್ಯಾರ್ ನೆಟ್ವರ್ಕ್ 14 ವರ್ಷ ಭಾರತದ ಮಾರುಕಟ್ಟೆಯಲ್ಲಿ ಪ್ರಭಾವ ತೋರಿ ಈಗ ಪೂರ್ಣ ಹೊರಹೋಗಲು ನಿರ್ಧರಿಸಿದೆ. 2010ರಲ್ಲಿ ಒಮಿಡ್ಯಾರ್ ನೆಟ್ವರ್ಕ್ ತನ್ನ ಡುಯಲ್ ಚೆಕ್​ಬುಕ್ ಇನ್ವೆಸ್ಟಿಂಗ್ ಮಾಡಲ್​ನಲ್ಲಿ ಭಾರತದಲ್ಲಿ ಹೂಡಿಕೆ ಆರಂಭಿಸಿತ್ತು. ಇಂಪ್ಯಾಕ್ಟ್ ಸೆಕ್ಟರ್​ನಲ್ಲಿ ಈಗ ಸಾಕಷ್ಟು ಹೂಡಿಕೆಗಳು ಬರುತ್ತಿವೆ. ಈ ಕ್ಷೇತ್ರಕ್ಕೆ ಪುಷ್ಟಿ ತರುವ ತಮ್ಮ ಗುರಿ ಈಡೇರಿದೆ ಎಂದು ಓಮಿಡ್ಯಾರ್ ಹೇಳಿಕೊಂಡಿದೆ.

ಭಾರತದ ಮಾರುಕಟ್ಟೆಯಿಂದ ಹೊರಹೋಗಲಿರುವ ಒಮಿಡ್ಯಾರ್ ನೆಟ್ವರ್ಕ್; ಏನು ಕಾರಣ?
ಹೂಡಿಕೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Dec 12, 2023 | 2:21 PM

ನವದೆಹಲಿ, ಡಿಸೆಂಬರ್ 12: ವಿಶೇಷ ಹೂಡಿಕೆ ಸಂಸ್ಥೆ ಒಮಿಡ್ಯಾರ್ ನೆಟ್ವರ್ಕ್ ಇಂಡಿಯಾ (Odidyar Network India) ಭಾರತದ ಮಾರುಕಟ್ಟೆಯಿಂದ ಹೊರಬೀಳಲು ನಿರ್ಧರಿಸಿದೆ. 2024ರ ಅಂತ್ಯದೊಳಗೆ ಭಾರತದಿಂದ ಹೂಡಿಕೆಗಳನ್ನು ಸಂಪೂರ್ಣ ಹೊರತೆಗೆಯಲಿದೆ. ಈ ವಿಚಾರವನ್ನು ಒಮಿಡ್ಯಾರ್ ಗ್ರೂಪ್ ತನ್ನ ಬ್ಲಾಗ್ ಪೋಸ್ಟ್​ವೊಂದರಲ್ಲಿ ಬರೆದುಕೊಂಡಿದೆ. ಇದರೊಂದಿಗೆ ಭಾರತದಲ್ಲಿ ಒಮಿಡ್ಯಾರ್ ನೆಟ್ವರ್ಕ್​ನ 14 ವರ್ಷಗಳ ಕಾರ್ಯಾಚರಣೆ ಅಂತ್ಯಗೊಂಡಂತಾಗುತ್ತದೆ. ದಶಕಕ್ಕೂ ಹೆಚ್ಚು ಕಾಲ ಭಾರತದಲ್ಲಿ ಸಾಕಷ್ಟು ಪರಿವರ್ತನೆಗೆ ಅನುವು ಮಾಡುವಂತಹ ಹೂಡಿಕೆಗಳನ್ನು ಮಾಡಿದ್ದೇವೆ ಎಂದು ಒಮಿಡ್ಯಾರ್ ಸಂಸ್ಥೆ ತೃಪ್ತಿ ವ್ಯಕ್ತಪಡಿಸಿದೆ.

ಒಮಿಡ್ಯಾರ್ ನೆಟ್ವರ್ಕ್​ನ ಭಾಗವಾಗಿರುವ ಓಮಿಡ್ಯಾರ್ ನೆಟ್ವರ್ಕ್ ಇಂಡಿಯಾ ಸಂಸ್ಥೆ ಡುಯಲ್ ಚೆಕ್​ಬುಕ್ ಹೂಡಿಕೆ ವಿಧಾನವನ್ನು (dual cheque book investing model) ಅನುಸರಿಸುತ್ತದೆ. ಡುಯಲ್ ಚೆಕ್​ಬುಕ್ ಮಾಡೆಲ್ ಅಂದರೆ, ಎರಡು ಮಾದರಿಯ ಹೂಡಿಕೆಗಳನ್ನು ಅನುಸರಿಸುವುದು. ಒಂದು ರೀತಿಯಲ್ಲಿ, ಸಿನಿಮಾ ನಿರ್ಮಾಣ ಸಂಸ್ಥೆಯೊಂದು ಕಮರ್ಷಿಯಲ್ ಮತ್ತು ಆರ್ಟ್ ಈ ಎರಡೂ ಮಾದರಿಯ ಸಿನಿಮಾ ಪ್ರೊಡ್ಯೂಸ್ ಮಾಡುವಂತಹ ರೀತಿಯದ್ದು. ಡುಯಲ್ ಚೆಕ್​ಬುಕ್ ಇನ್ವೆಸ್ಟ್​ಮೆಂಟ್ ಮಾಡಲ್​ನಲ್ಲಿ ಮೊದಲನೆಯದು ಎಲ್ಲಾ ಹೂಡಿಕೆ ಸಂಸ್ಥೆಗಳು ಕೈಗೊಳ್ಳುವ ಸಹಜ ಹೂಡಿಕೆ. ಇಲ್ಲಿ ಇಂಪ್ಯಾಕ್ಟ್ ಸೆಕ್ಟರ್​ಗಳೆನಿಸಿದ ಸಾಮಾಜಿಕ ಮತ್ತು ಪರಿಸರ ಕ್ಷೇತ್ರದ ಸಂಸ್ಥೆಗಳಿಗೆ ಬಂಡವಾಳ ಕೊಡುವುದು. ಎರಡನೆಯದು, ನಾನ್ ಪ್ರಾಫಿಟ್ ಸಂಸ್ಥೆಗಳಿಗೆ (non profit organization) ಬಂಡವಾಳ ಕೊಡುವುದು. ಈ ಎರಡನೆಯದು ಸಾಮಾಜಿಕವಾಗಿ ಪರಿವರ್ತನೆ ಮಾಡುವಂಥದ್ದು.

ಇದನ್ನೂ ಓದಿ: ಐಫೋನ್​ಗಳಿಗೆ ಭಾರತದಲ್ಲೇ ಗೊರಿಲ್ಲಾ ಗ್ಲಾಸ್ ಉತ್ಪಾದನೆ; ಅಮೆರಿಕದ ಕಾರ್ನಿಂಗ್​ನಿಂದ ಫ್ಯಾಕ್ಟರಿ ಸ್ಥಾಪನೆ

ಭಾರತದ ಮಾರುಕಟ್ಟೆಯಿಂದ ಒಮಿಡ್ಯಾರ್ ನಿರ್ಗಮಿಸುತ್ತಿರುವುದು ಯಾಕೆ?

ಒಮಿಡ್ಯಾರ್ ನೆಟ್ವರ್ಕ್ ಸಂಸ್ಥೆ ಇಂಪ್ಯಾಕ್ಟ್ ಸೆಕ್ಟರ್​ಗಳಲ್ಲಿ ಹೂಡಿಕೆ ಮಾಡುತ್ತದೆ. ಸಾಮಾಜಿಕ ಮತ್ತು ಪರಿಸರ ವಲಯಗಳನ್ನು ಇಂಪ್ಯಾಕ್ಟ್ ಸೆಕ್ಟರ್ ಎಂದು ಪರಿಗಣಿಸಲಾಗುತ್ತದೆ. ಈ ವಲಯದ ಬೆಳವಣಿಗೆಗೆ ಪೂರಕವಾಗಿ ಸಹಾಯ ಮಾಡುವಂತಹ ಉದ್ಯಮಗಳಿಗೆ ಬಂಡವಾಳ ಹಾಕುವುದಕ್ಕೆ ಇಂಪ್ಯಾಕ್ಟ್ ಇನ್ವೆಸ್ಟಿಂಗ್ ಎನ್ನುವುದು.

ಭಾರತದಲ್ಲಿ ಈ ರೀತಿಯ ಇಂಪ್ಯಾಕ್ಟ್ ಇನ್ವೆಸ್ಟಿಂಗ್ ಕಾರ್ಯಕ್ಕೆ ಸಾಕಷ್ಟು ಹೂಡಿಕೆ ಸಂಸ್ಥೆಗಳು ಕೈಜೋಡಿಸಿವೆ. ಇಂಪ್ಯಾಕ್ಟ್ ಸೆಕ್ಟರ್​ಗಳಿಗೆ ಸಾಕಷ್ಟು ಬಂಡವಾಳ ಬರುತ್ತಿದೆ. ಈ ವಲಯಕ್ಕೆ ಪುಷ್ಟಿ ಕೊಡಬೇಕೆನ್ನುವ ತಮ್ಮ ಪ್ರಾಥಮಿಕ ಗುರಿ ಈಡೇರಿದೆ ಎಂದು ಒಮಿಡ್ಯಾರ್ ನೆಟ್ವರ್ಕ್ ಹೇಳಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ